ಉದಯೋನ್ಮುಖ ಕಲಿಕಾರ್ಥಿಗಳ ಒಂದು ಗುಂಪನ್ನು ಅಭಿವೃದ್ಧಿಪಡಿಸಲು ಪರದೆಯ(ಸ್ಕ್ರೀನ್) ಮೂಲಕ ಶಿಕ್ಷಣದ ವ್ಯವಸ್ಥೆ

ಕಳೆದೆರಡು ವರ್ಷಗಳಲ್ಲಿ, ಎಲ್ಲಾ ಮಕ್ಕಳು ಆನ್ ಲೈನ್ ಕಲಿಕೆಯ ವೇದಿಕೆಗಳಿಗೆ ಹೊಂದಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗದಿಂದ ಪ್ರತಿಯೊಬ್ಬರನ್ನು ಸುರಕ್ಷಿತವಾಗಿರಿಸಲು ಇದು ನಮ್ಮ ಏಕೈಕ ಮಾರ್ಗವಾಗಿದ್ದರೂ, ಆನ್ ಲೈನ್ ಕಲಿಕೆಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಒಂದು ದೀರ್ಘ ಅಂತರವನ್ನು ಸೃಷ್ಟಿಸಿದೆ. ಇದು ಕಲಿಕೆಯ ಪ್ರಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ದೂರಸ್ಥ (ರಿಮೋಟ್) ಕಲಿಕೆಯ ದೂರವನ್ನು ಕಡಿಮೆಗೊಳಿಸಲು ಕೆಲವು ಸರಳ ಮಾರ್ಗಗಳು ಇಲ್ಲಿವೆ:

ಸಂವಾದಾತ್ಮಕ ಕಲಿಕೆ: ಎಲ್ಲರೂ ಮ್ಯೂಟ್ ಆಗಿರುವಾಗ ಮತ್ತು ಕ್ಯಾಮರಾಗಳು ಆಫ್ ಆಗಿರುವಾಗ ವಿದ್ಯಾರ್ಥಿಯು ಸುಲಭವಾಗಿ ವಿಚಲಿತನಾಗಬಹುದು. ತರಗತಿಯು ಫಲಪ್ರದವಾಗಲು ತರಗತಿಯುದ್ದಕ್ಕೂ ಮಕ್ಕಳ ಗಮನ ಬೇರೆಡೆ ಹರಿಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, ಆಡಿಯೋ ಮತ್ತು ವೀಡಿಯೊಗಳನ್ನು ಆನ್ ನಲ್ಲಿ ಇಟ್ಟುಕೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ.

ಮೋಜಿನ ಚಟುವಟಿಕೆಗಳು: ಸಹಪಾಠಿಗಳ ಅನುಪಸ್ಥಿತಿಯು ಕಲಿಕೆಯನ್ನು ನೀರಸಗೊಳಿಸುತ್ತದೆ. ದೈಹಿಕ ಉಪಸ್ಥಿತಿಯ ನಷ್ಟವನ್ನು ನಿಭಾಯಿಸಲು ಮೋಜಿನ ಚಟುವಟಿಕೆಗಳನ್ನು ಮಾಡಿ. ಉದಾಹರಣೆಗೆ, ವಿವಿಧ ಸಸ್ಯಗಳ ಬಗ್ಗೆ ಮಾತನಾಡುವಾಗ ಒಂದು ಉದ್ಯಾನದಲ್ಲಿ ಕಲಿಸುವುದು.

ಪರೀಕ್ಷೆಯನ್ನು ಮುಂದುವರಿಸಿ: ಸಣ್ಣ, ಅನಿರೀಕ್ಷಿತ  ಪರೀಕ್ಷೆಗಳು ಮಕ್ಕಳು ಪಾಠಗಳತ್ತ ಹೆಚ್ಚು ಗಮನ ಹರಿಸುವಂತೆ ಮಾಡುತ್ತದೆ. ವಾರಕ್ಕೊಮ್ಮೆ MCQ ಅಥವಾ ವಿವಿಧ ವಿಷಯಗಳ ಮೇಲೆ ಒಂದು ಸಣ್ಣ ನಿರೂಪಣೆಯನ್ನುಮಂಡಿಸುವುದು ಕಲಿಕೆಯನ್ನು ಸಂತೋಷದಾಯಕ ಮತ್ತು ಪರಿಣಾಮಕಾರಿಯಾಗಿಸುತ್ತದೆ. ಅಷ್ಟೇ ಅಲ್ಲದೆ, ಇದು ವಿದ್ಯಾರ್ಥಿಗಳಿಗೆ ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

ಶ್ಲಾಘನೆ ಮತ್ತು ಪ್ರತಿಫಲ: ಕಠಿಣ ಪರಿಶ್ರಮಕ್ಕಾಗಿ ಮೆಚ್ಚುಗೆ ಮತ್ತು ಪ್ರತಿಫಲಗಳು ಮಕ್ಕಳನ್ನು ಚೆನ್ನಾಗಿ ಕಲಿಯಲು ಪ್ರೇರೇಪಿಸುತ್ತವೆ. ಸಣ್ಣ ಪ್ರತಿಫಲಗಳು ದೀರ್ಘ ಕಾಲ ಪರಿಣಾಮಕಾರಿಯಾಗಿರುತ್ತವೆ ಮತ್ತು ಸರಿಯಾದ ಉತ್ತರಕ್ಕಾಗಿ ಮೆಚ್ಚುಗೆಯು ಅವರನ್ನು ಪಾಠದ ಕಡೆ ಗಮನ ಕೊಡುವಂತೆ ಮಾಡುತ್ತದೆ. ಇದು ಇತರ ವಿದ್ಯಾರ್ಥಿಗಳನ್ನು ಕೂಡಾ ಹೆಚ್ಚು ಪರಿಶ್ರಮದಿಂದ ಕಲಿಯಲು ಪ್ರೇರೇಪಿಸುತ್ತದೆ.

ಇವುಗಳ ಜೊತೆಗೆ, ಶಿಕ್ಷಕರು ಸಂವಾದಾತ್ಮಕ ಚಟುವಟಿಕೆಗಳ ಬಗ್ಗೆ ವಿಚಾರ ಮಾಡಲು ಗುಂಪುಗಳನ್ನು ರಚಿಸಬಹುದು, ಪ್ರಶ್ನೋತ್ತರ ಚಟುವಟಿಕೆಗಳನ್ನು ಕೈಗೊಳ್ಳಬಹುದು ಮತ್ತು ಆನ್ ಲೈನ್ ಕಲಿಕೆಯನ್ನು ವಿನೋದವಾಗಿಸಲು ಅತಿಥಿ ಶಿಕ್ಷಕರನ್ನು ಸಹ ಆಹ್ವಾನಿಸಬಹುದು.