ಉರು ಹೊಡೆಯುವುದು ಸರಿಯಲ್ಲ – ಅದನ್ನು ಬಿಟ್ಟು ಬಿಡಲು ಮೂರು ಕಾರಣಗಳು

 

ಇವುಗಳಲ್ಲಿ ನೀವು ಯಾರಾಗಿದ್ದೀರಿ?

ಬಹುತೇಕವಾಗಿ ನೀವು, ಪರಿಕಲ್ಪನೆಗಳನ್ನು ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಂಡು, ಉರು ಹೊಡೆದು ಕಲಿಯುವವರಲ್ಲಿ ಹಾಗೂ ಕೊನೆಯ ಕ್ಷಣದಲ್ಲಿ ಏನಾದರೂ ಪವಾಡ ನಡೆದುಬಿಡಲಿ ಎಂದು ನಿರೀಕ್ಷಿಸುವವರಲ್ಲಿ ಒಬ್ಬರಾಗಿರುತ್ತೀರಿ. ಸರಳವಾಗಿ ಹೇಳಬೇಕೆಂದರೆ, ಉರು ಹೊಡೆದು ಕಲಿಯುವಿಕೆಯು ಅಧ್ಯಯನ ಸಾಮಗ್ರಿಯನ್ನು ಅನೇಕ ಬಾರಿ ಪುನರಾವರ್ತಿಸಿಕೊಳ್ಳುವ ಮೂಲಕ ಅದನ್ನು ಸ್ಮರಿಸಿಕೊಳ್ಳುವ ರೂಢಿಯಾಗಿದೆ. ಅದು ತನ್ನದೇ ಆದ ಅಲ್ಪಾವಧಿ ಅನುಕೂಲತೆಗಳನ್ನು ಹೊಂದಿದೆಯಾದರೂ, ನಿಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು, ನಿಮ್ಮಷ್ಟಕ್ಕೆ ನೀವೇ ಪುನರಾವರ್ತಿಸಿಕೊಳ್ಳುತ್ತಿರುವುದನ್ನು ನಿಜವಾಗಿಯೂ ಅರ್ಥ ಮಾಡಿಕೊಳ್ಳುವ ಶ್ರಮವನ್ನು ನೀವು ವಹಿಸಬೇಕಾಗುತ್ತದೆ.

ಉರು ಹೊಡೆದು ಕಲಿಯವುದನ್ನು ಬಿಟ್ಟು ಬಿಡುವುದಕ್ಕೆ ಮೂರು ಕಾರಣಗಳು:

1. ನೀವು ಕಲಿತಿರುವುದನ್ನು ನೀವು ಅರ್ಥ ಮಾಡಿಕೊಳ್ಳದೇ ಇದ್ದಲ್ಲಿ, ನೀವು ಅದನ್ನು ಮರೆತುಬಿಡುತ್ತೀರಿ

ನಿಮ್ಮ ಮೊದಲ ಹಂತದ ಹಾಗೂ ಅಂತಿಮ ಹಂತದ ಪರೀಕ್ಷೆಗಳಲ್ಲಿ ಅಗ್ರ ಶ್ರೇಯಾಂಕವನ್ನು ಹೊಂದಬೇಕೆಂದು ನೀವು ಬಯಸಿದಲ್ಲಿ, ಈ “ಉರು ಹೊಡೆಯುವಿಕೆಯ ಕುಣಿಕೆ” ಯಿಂದ ಹೊರಬರಲು ನೀವು ಓದುತ್ತಿರುವ ವಿಷಯವನ್ನು ನೀವು ಸಂಪೂರ್ಣವಾಗಿ ಗ್ರಹಿಸಬೇಕಿರುತ್ತದೆ.

2. ಉರು ಹೊಡೆಯುವಿಕೆಯೊಂದರಿಂದಲೇ ಕಲಿಯುವಾಗ ಅಧ್ಯಯನ ಮಾಡುವುದು ತುಂಬಾ “ಯಾಂತ್ರಿಕ” ವಾಗಿ ಬಿಡುತ್ತದೆ

“ಬಹುಪಾಲು ಭಾರತೀಯ ಯುವಕ-ಯುವತಿಯರು (ಅಂದಾಜು 80-85%) ಯಾವುದೇ ಕೆಲಸಕ್ಕಾಗಿ ಸೂಕ್ತವಾಗಿ ತರಬೇತುಗೊಳಿಸಲ್ಪಟ್ಟಿರುವುದಿಲ್ಲ. ಉರು ಹೊಡೆದು ಕಲಿಯುವಿಕೆಯ ಮೇಲೆ ಕೇಂದ್ರೀಕೃತವಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯು ನವ್ಯೋದ್ಯಮಿಗಳಾಗಲು ಉತ್ತಮವಾಗಿಲ್ಲ.”

- ನಾರಾಯಣ ಮೂರ್ತಿ, ಇನ್ಫೋಸಿಸ್ ಸಂಸ್ಥಾಪಕರು [1]

ಉರು ಹೊಡೆದು ಕಲಿಯುವಿಕೆಯು ನಿಮ್ಮ ಅಧ್ಯಯನ ಮಾದರಿಯನ್ನು ಹೆಚ್ಚು ಯಾಂತ್ರೀಕೃತಗೊಳಿಸುತ್ತದೆ, ಇದು ಅದರೆಡೆಗಿನ ನಿಮ್ಮ ಆಸಕ್ತಿಯನ್ನು ಕುಂದಿಸಬಲ್ಲದು. ಇದು ಎರಡು ಮಾರ್ಗಗಳಲ್ಲಿ ಮುಂದುವರೆಯಬಹುದು – ಒಂದೋ ನಿಮ್ಮ ಪರೀಕ್ಷೆಗಳಿಗಾಗಿ ಸಿದ್ಧತೆ ಮಾಡಿಕೊಳ್ಳುವುದನ್ನು ಕೊನೆಯ ಗಳಿಗೆಯವರೆಗೂ ನೀವು ಬಿಟ್ಟುಬಿಡುತ್ತೀರಿ, ಅಥವಾ ನೋಟ್ಸ್ ಮಾಡಿಕೊಳ್ಳುವಾಗ ಬೇಸರಿಸಿಕೊಳ್ಳುತ್ತೀರಿ. ಇದಕ್ಕೆ ಪರಿಹಾರೋಪಾಯವೆಂದರೆ ಸ್ವಲ್ಪ ಬದಲಾವಣೆಯನ್ನು ಸೇರ್ಪಡೆಗೊಳಿಸುವುದು!

ನಿಮ್ಮ ಅಧ್ಯಯನ ಮಾದರಿಯನ್ನು ಮಿಶ್ರಣ ಮಾಡಲು ಟೆಡ್ ಟಾಕ್ ವಿಡಿಯೋಗಳು ಮತ್ತು ಗೂಗಲ್ ಸ್ಕಾಲರ್ ಗಳನ್ನು ನೀವು ಪ್ರಯತ್ನಿಸಿ ನೋಡಬಹುದು.

3. ಪರಿಕಲ್ಪನೆಗಳನ್ನು ವಾಸ್ತವಿಕ ಜೀವನದೊಂದಿಗೆ ಸಂಪರ್ಕಿಸುವುದು ಕಠಿಣವಾಗುತ್ತದೆ

“ಮೂರು ವಿಧದ ರಕ್ತನಾಳಗಳೆಂದರೆ ಅಪಧಮನಿಗಳು, ಅಭಿಧಮನಿಗಳು ಮತ್ತು ಕ್ಯಾಟರ್ಪಿಲ್ಲರ್ಗಳು.”

ಸ್ಪಷ್ಟವಾಗಿ, ಇದನ್ನು ಬರೆದವರು ಇದರ ವಾಸ್ತವ ಅರ್ಥವನ್ನು ಅರಿತುಕೊಳ್ಳದೇ ಕ್ಯಾಪಿಲ್ಲರಿಗಳನ್ನು ಕ್ಯಾಟರ್ಪಿಲ್ಲರ್ಗಳೆಂದು ಗೊಂದಲ ಮಾಡಿಕೊಂಡಿದ್ದಾರೆ! ಇದಕ್ಕಾಗಿಯೇ ಪರೀಕ್ಷೆಯ ನಂತರವೂ ದೀರ್ಘಕಾಲದವರೆಗೆ ನೀವು ಕಲಿಯುತ್ತಿರುವುದನ್ನು ನೆನಪಿಟ್ಟುಕೊಳ್ಳಲು ಅದನ್ನು ತಿಳಿದುಕೊಳ್ಳುವುದು ನಿಮಗೆ ತುಂಬಾ ಪ್ರಮುಖವಾಗುತ್ತದೆ.

ರಕ್ತನಾಳಗಳ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಬಯಸುತ್ತೀರಾ? ಈ PC ಸಂಪನ್ಮೂಲವನ್ನು ಪರಿಶೀಲಿಸಿ : https://study.com/academy/lesson/blood-vessels-arteries-capillaries-more.html

ವಿಷಯ-ನಿರ್ದಿಷ್ಟ ವೆಬ್ಸೈಟ್ಗಳಷ್ಟೇ ಅಲ್ಲದೇ, ಅಧ್ಯಯನ ಪ್ರಕ್ರಿಯೆಯ ಪ್ರತಿಯೊಂದೂ ವಿಷಯದ ಬಗ್ಗೆ ನಿಮಗೆ ನೆರವಾಗಲು ಹಲವಾರು PC ಟೂಲ್ಗಳೂ ಸಹ ಲಭ್ಯವಿವೆ. ಪಠ್ಯಪುಸ್ತಕಗಳಲ್ಲಿ ನಮೂದಿಸಿರುವ ಪ್ರಯೋಗಗಳನ್ನು ವೀಕ್ಷಿಸುವುದರಿಂದ ಹಿಡಿದು ನಿಮ್ಮ ವಿಷಯ ಸಾಮಗ್ರಿಯಲ್ಲಿ ಪರಿಣತಿಯನ್ನು ಸಾಧಿಸುವಂತೆ ನಿಮ್ಮನ್ನು ಸಶಕ್ತಗೊಳಿಸುವ ರೀತಿಯಲ್ಲಿ ನಿಮ್ಮ ನೋಟ್ಸ್ಗಳನ್ನು ಸಕ್ಷಮವಾಗಿ ಆಯೋಜಿಸಿಕೊಳ್ಳುವವರೆಗೆ – ಒಂದು PC ಯೊಂದಿಗೆ, ಪರೀಕ್ಷೆಗಳಿಗಾಗಿ ಉರು ಹೊಡೆದು ಕಲಿಯುವುದನ್ನು ತಪ್ಪಿಸಬಹುದಾದ ಆಯ್ಕೆಯನ್ನು ನೀವು ಹೊಂದಿರುತ್ತೀರಿ.