ಉರು ಹೊಡೆದು ಕಲಿಯುವಿಕೆ Vs. PC-ಯಿಂದ ಸಶಕ್ತಗೊಳಿಸಲ್ಪಟ್ಟ ಕಲಿಯುವಿಕೆ

 

ಉರು ಹೊಡೆದು ಕಲಿಯುವಿಕೆ ಎಂದರೇನು?

ಉರು ಹೊಡೆದು ಕಲಿಯುವಿಕೆ ಎಂದರೆ ಪುನರಾವರ್ತಿಸುವ ಮೂಲಕ ಮಾಹಿತಿಯನ್ನು ಸ್ಮರಿಸಿಕೊಳ್ಳುವಿಕೆ. ವರ್ಣಮಾಲೆ, ಸಂಖ್ಯೆಗಳು ಮತ್ತು ಗುಣಾಕಾರದ ಕೋಷ್ಠಕಗಳು ಉರು ಹೊಡೆದು ಕಲಿಯುವಿಕೆಯ ಉದಾಹರಣೆಗಳಾಗಿವೆ. ವಿಷಯ ಸಾಮಗ್ರಿಯ ಆಳವಾದ ಕಲಿಕೆಗಾಗಿ ಒಂದು ಅಡಿಪಾಯವನ್ನು ನಿರ್ಮಿಸಲು, ವಿಶೇಷವಾಗಿ, ನಿಮ್ಮ ಮಗುವು ಪ್ರಾಥಮಿಕ ಶಾಲಾ ಹಂತದಲ್ಲಿ ಇರುವಾಗ ಇದು ತುಂಬಾ ಉತ್ತಮವಾಗಿರುತ್ತದೆ.

PC-ಯಿಂದ ಸಶಕ್ತಗೊಳಿಸಲ್ಪಟ್ಟ ಕಲಿಯುವಿಕೆ

ಶಾಲೆಗಳಲ್ಲಿ ಕಲಿಸುವಿಕೆಯ ಸಾಪೇಕ್ಷವಾಗಿ ಹೊಸ ವಿಧಾನವಾಗಿರುವ PC-ಯಿಂದ ಸಶಕ್ತಗೊಳಿಸಲ್ಪಟ್ಟ ಕಲಿಯುವಿಕೆಯು, ಕಲಿಕೆಯ ಒಂದು ಇಂಟರಾಕ್ಟಿವ್ ಆದ ಮತ್ತು ತುಂಬಾ ಸಂವೇದನಾಶೀಲವಾದ ಮಾರ್ಗವಾಗಿದ್ದು, ಅಭ್ಯಸಿಸುವಾಗ ವಿದ್ಯಾರ್ಥಿಗಳು ಹಾಗಾಗಿ ತುಂಬಾ ಜಾಗರೂಕರಾಗಿ ಇರುತ್ತಾರೆ. ದೀರ್ಘಾವಧಿ ಸ್ಮರಣೆಯ ಉದ್ದೇಶದೊಂದಿಗೆ ಅದರ ಬಗ್ಗೆ ಕೇವಲ ಮೇಲ್ಮೈ ಮಟ್ಟದಲ್ಲಿ ಓದುವುದರ ಬದಲಾಗಿ ತರಗತಿಯಲ್ಲಿ ಕಲಿಸಲಾದ ಸಿದ್ದಾಂತವನ್ನು ತಿಳಿದುಕೊಳ್ಳುವುದರ ಮೇಲೆ ಇದರಲ್ಲಿ ಗಮನವು ಕೇಂದ್ರೀಕರಿಸಲ್ಪಟ್ಟಿರುತ್ತದೆ. ವರ್ಚ್ಯುವಲ್ ಫೀಲ್ಡ್ ಟ್ರಿಪ್ಗಳು, ರಸಪ್ರಶ್ನೆಗಳು, ವಿಡಿಯೋಗಳು, ಪ್ರೆಸೆಂಟೇಶನ್ಗಳು ಮತ್ತು ಇಂತಹ ಇನ್ನೂ ಹಲವಾರು, ಕೆಲವು ಉದಾಹರಣೆಗಳಾಗಿವೆ.

ನಿಮ್ಮ ಮಗುವಿನ ಯೋಗಕ್ಷೇಮಕ್ಕಾಗಿ ಸರಿಯಾದ ಕಲಿಕಾ ವಿಧಾನವನ್ನು ಆಯ್ಕೆ ಮಾಡಲು ನಿಮಗೆ ನೆರವಾಗುವ ಒಂದು ತುಲನಾತ್ಮಕ ಮಾರ್ಗದರ್ಶಿಯನ್ನು ಇಲ್ಲಿ ನೀಡಲಾಗಿದೆ:

 

ಹಾಗಾದರೆ, ನಿಮ್ಮ ಮಗುವಿಗೆ ಯಾವುದು ಹೆಚ್ಚು ಉತ್ತಮವಾಗಿದೆ?

ಉರು ಹೊಡೆದು ಕಲಿಯುವಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗದು ಎಂಬುದು ಸ್ಪಷ್ಟವಿದ್ದೇ ಇದೆ – ಅದು ನಮ್ಮ ಶಿಕ್ಷಣ ವ್ಯವಸ್ಥೆಯೊಳಗೆ ಹಾಸು ಹೊಕ್ಕಾಗಿ ಒಳಗೊಂಡಿದೆ. ನೀವು ಮಾಡಬಹುದಾದದ್ದೇನೆಂದರೆ, ನಿಮ್ಮ ಮಗುವಿನ ದೈನಂದಿನ ಅಭ್ಯಾಸ ನಿತ್ಯಕ್ರಮದಲ್ಲಿ PC-ಯಿಂದ ಸಶಕ್ತಗೊಳಿಸಲ್ಪಟ್ಟ ಕಲಿಯುವಿಕೆಯ ಅಂಶಗಳನ್ನು ಸೇರಿಸುವುದು, ಇದು ದೀರ್ಘಾವಧಿಯಲ್ಲಿ ಮತ್ತು ನಿರಂತರ ಆಧಾರದಲ್ಲಿ ಅದರ ಪ್ರಯೋಜನಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ.