ತಂತ್ರಜ್ಞಾನವು ಏಳು ವಿಧಾನಗಳಿಂದ ಶಿಕ್ಷಕರ ಬೋಧನಾ ತಂತ್ರಗಳನ್ನು ಸುಧಾರಣೆಗೊಳಿಸಿದೆ

ಕಲಿಕೆಯ ಜಾಗದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಬಗ್ಗೆ ಕಳೆದ ಎರಡು ವರ್ಷಗಳಲ್ಲಿ ಹೆಚ್ಚು ಸುಧಾರಣೆ ತರಲಾಗಿದೆ. ದೂರದ ಪರಿಸರದಲ್ಲಿ ಪರಿಣಾಮಕಾರಿ ಕಲಿಕೆಯನ್ನು ನೀಡಲು ಶಿಕ್ಷಕರು ಕೈಗೊಂಡ ಪ್ರಮುಖ ರೂಪಾಂತರಗಳು ಇವಾಗಿವೆ:

1. ಆನ್ ಲೈನ್ ಶೈಕ್ಷಣಿಕ ಸಂಪನ್ಮೂಲಗಳ ಬಳಕೆ: ಡಿಜಿಟಲ್ ಸಂಪನ್ಮೂಲಗಳಾಗಿ ಕಾರ್ಯನಿರ್ವಹಿಸುವ ಅಕಾಡೆಮಿಗಳು ಮತ್ತು ಪೋರ್ಟಲ್ ಗಳು ಶಿಕ್ಷಕರಿಗೆ ಉಪಲಬ್ಧವಿರುತ್ತವೆ. ಇವುಗಳಲ್ಲಿ ಕೆಲವು ಜನಪ್ರಿಯವಾದವುಗಳೆಂದರೆ ಸ್ಕೊಲಾಸ್ಟಿಕ್, ಬೈಜುಸ್ ಮತ್ತು ವೇದಾಂತು.

2. ಸಂಯೋಜಿತ ಕಲಿಕೆಯ ತಂತ್ರ: ಪೂರ್ವ-ದಾಖಲಿತ ಪಾಠಗಳು, ಸ್ಪೈಡರ್ ವೆಬ್ ಚರ್ಚೆಗಳು, ಚಿಂತನೆ-ಜೋಡಿಕೆ-ಹಂಚಿಕೆ (ಥಿಂಕ್-ಪೇರ್-ಶೇರ್) ಚಟುವಟಿಕೆಗಳು ಇತ್ಯಾದಿಗಳೊಂದಿಗೆ ಆನ್ ಲೈನ್ ಪರಿಕರಗಳ ಜೊತೆಗೆ ಸಮಕಾಲಿಕ ಮತ್ತು ಅಸಮಕಾಲಿಕ ತಂತ್ರಗಳನ್ನು ಬಳಸುವುದು.

3. ಆನ್ ಲೈನ್ ವೇದಿಕೆಗಳು: ಗೂಗಲ್ ಕ್ಲಾಸ್ ರೂಮ್ ನಂತಹ ವೇದಿಕೆಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಫೈಲ್ ಹಂಚಿಕೆಯನ್ನು ತಡೆರಹಿತವಾಗಿ ಒದಗಿಸುತ್ತವೆ ಮತ್ತು ಗೂಗಲ್ ಡಾಕ್ಸ್ ನಂತಹ ಇತರ ಸಾಧನಗಳು ಹೊಣೆಗಾರಿಕೆಯೊಂದಿಗೆ ಸಹಪಾಠಿಗಳಿಂದ-ಸಹಪಾಠಿಗಳಿಗೆ ಮಾಹಿತಿಯನ್ನು ಪ್ರೋತ್ಸಾಹಿಸುತ್ತವೆ.

4. ಡಿಜಿಟಲ್ ಪರಿಕರಗಳು: ನಿಯರ್ ಪಾಡ್ ಕೊಲಬರೇಟ್&zwjನಂತಹ ಸಹಕಾರಿ/ಕೊಲಾಬರೇಟಿವ್ ಬೋರ್ಡ್ ಗಳು ವಿದ್ಯಾರ್ಥಿಗಳಿಗೆ ಒಂದು ವಿಷಯದ ಕುರಿತು ಆಲೋಚನೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತವೆ, ಆಗ ಶಿಕ್ಷಕರು ಚರ್ಚಾ ಬೋರ್ಡ್ ಗೆ ಏನನ್ನು ಸೇರಿಸಬೇಕು ಅಥವಾ ಸೇರಿಸಬಾರದು ಎಂಬುದನ್ನು ಅನುಮೋದಿಸುವುದನ್ನು ಮತ್ತು ಚರ್ಚೆಯಲ್ಲಿ ಯಾರು ಭಾಗವಹಿಸುತ್ತಿದ್ದಾರೆ ಎಂದು ಬರೆದಿಟ್ಟುಕೊಳ್ಳುವುದನ್ನು ಮಾಡಬಹುದು.

5. ಪುಸ್ತಕಗಳಿಗೆ ಪರ್ಯಾಯ : ಕಾಗದ ಆಧಾರಿತ ಸಂಪನ್ಮೂಲಗಳಿಗೆ ಪರ್ಯಾಯಗಳಾದ ಇ-ವರ್ಕ್ ಶೀಟ್ ಗಳು, ಇ-ವೇಳಾಪಟ್ಟಿಗಳು ಇತ್ಯಾದಿಗಳ ಬಳಕೆಗೆ ಉತ್ತೇಜನ ನೀಡುತ್ತದೆ, ಇದು ಒಂದು ರೀತಿಯಲ್ಲಿ, ಸೀಮಿತ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಕ್ಕಳಿಗೆ ಗಂಭೀರ ಅರಿವು ಮೂಡಿಸುತ್ತದೆ. ಇದು ಪಿಸಿ ಕಲಿಕೆಗೆ ಗಮನ ಕೊಡುವಂತೆ ಮಾಡುತ್ತದೆ

6. ಪ್ರಪಂಚದ ಬಗ್ಗೆ ಕಲಿಕೆ: ಪಠ್ಯಕ್ರಮದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಪ್ರಚಲಿತ ವಿದ್ಯಮಾನಗಳ ಸೇರ್ಪಡೆ ಮತ್ತು ಅಂತರ್ಜಾಲದ ಬಗ್ಗೆ ಮತ್ತು ವೆಬ್ ಅನ್ನು ಸುರಕ್ಷಿತವಾಗಿ ಬ್ರೌಸ್ ಮಾಡುವುದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು.

7. ಸುಸಜ್ಜಿತ ಕಲಿಕೆ: ಶಿಕ್ಷಕರು ತಮ್ಮನ್ನು ಉತ್ತಮಪಡಿಸಿಕೊಳ್ಳಲು ನಿರಂತರ ಪ್ರತಿಕ್ರಿಯೆ ನೀಡಿಕೆ ಹೊಂದಿದ ಸಮಗ್ರ ಕಲಿಕೆಯ ವಾತಾವರಣ ಇರುತ್ತದೆ ಮತ್ತು ಇದು ಆಸಕ್ತಿಯುಳ್ಳ ಎಲ್ಲಾ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಹೊಸ ಮತ್ತು ಸುಧಾರಿತ ಕಲಿಕೆಯ ವಿಧಾನಗಳ ಕಡೆಗೆ ಬಹಳಷ್ಟು ಅವಕಾಶಗಳು ಮತ್ತು ಮುಕ್ತ ಮನಸ್ಸಿನೊಂದಿಗೆ, ಶಿಕ್ಷಕರೇ ಈಗ ಶಿಕ್ಷಣತಜ್ಞರಾಗಿದ್ದಾರೆ. ಹೆಚ್ಚಿನ ಕಲಿಕೆಯ ಸಾಧ್ಯತೆಗಳೊಂದಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಡೆಲ್ ಪಿಸಿ ಸಾಕ್ಷರತೆಯನ್ನು ಪ್ರೋತ್ಸಾಹಿಸುತ್ತದೆ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.