ಸ್ಟೀಮ್ ಎಜುಕೇಶನ್ : ಒಬ್ಬ ಶಿಕ್ಷಕರು ತಿಳಿದುಕೊಂಡಿರಬೇಕಾದ ವಿಷಯಗಳು

 

ವಿಶ್ವದ ಭವಿಷ್ಯವು ನಿಮ್ಮ ತರಗತಿಯಲ್ಲಿದೆ. ಮತ್ತು ಭವಿಷ್ಯವು ಇಂದು ಇರುವುದಕ್ಕಿಂತಲೂ ಬಹಳಷ್ಟು ಹೈ-ಟೆಕ್ ಆಗಿರುತ್ತದೆ. “ಕೆಲಸಕ್ಕೆ ಸಿದ್ಧ” ರಾಗಿ ಇರುವುದು ನಿಮ್ಮ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಆರಂಭವಾಗುತ್ತದೆ ಎಂಬುದನ್ನು ಒಬ್ಬ ಶಿಕ್ಷಕರಾಗಿ ನಿರ್ಲಕ್ಷಿಸುವುದು ಕಷ್ಟವಾಗುತ್ತದೆ. ಸ್ಟೀಮ್ ಎಜುಕೇಶನ್ ಎಂಬ ವಿಷಯವು ಚಿತ್ರಣದಲ್ಲಿ ಬರುವುದು ಇಲ್ಲಿಯೇ.

ಸ್ಟೀಮ್ ಎಜುಕೇಶನ್ ಎಂದರೇನು?

ಸ್ಟೀಮ್ ಎಜುಕೇಶನ್ ಈ ಕೆಳಗಿನವುಗಳನ್ನು ಒಳಗೊಳ್ಳುತ್ತದೆ:
1) ಸೈನ್ಸ್
2) ಟೆಕ್ನಾಲಜಿ
3) ಇಂಜಿನೀಯರಿಂಗ್
4) ಆರ್ಟ್
5) ಮಾಥಮ್ಯಾಟಿಕ್ಸ್

ಇನ್ನೂವರೆಗೆ ಅಸ್ತಿತ್ವದಲ್ಲೇ ಇರದವುಗಳ ಜೊತೆಯಲ್ಲಿಯೇ ಈಗಿರುವ ಬಹಳಷ್ಟು ಭವಿತವ್ಯಗಳ ಮೂಲ ಅಡಿಪಾಯವನ್ನು ಈ ವಿಷಯಗಳೇ ರೂಪಿಸುತ್ತವೆ!

ಪ್ರತಿಯೊಂದು ವಿಷಯದ ಒಳಗಡೆ ಪ್ರಮುಖ ಪರಿಕಲ್ಪನೆಗಳ ಬಗೆಗಿನ ವಿದ್ಯಾರ್ಥಿಯ ತಿಳುವಳಿಕೆಯ ಮಟ್ಟವನ್ನು ಸುಧಾರಿಸುವುದು ಮತ್ತು ಪ್ರತಿಯೊಂದರ ನಡುವಿನ ಸಂಪರ್ಕಗಳನ್ನು ಕಂಡುಕೊಳ್ಳುವುದು ಇದೆಲ್ಲದರ ತಿರುಳು ಆಗಿರುತ್ತದೆ. ಸಂಶೋಧನೆಗಾಗಿ ಮತ್ತು ಪ್ರಾಯೋಗಿಕ, ಪ್ರಾಜೆಕ್ಟ್-ಆಧರಿತ ಅಸೈನ್ಮೆಂಟುಗಳಿಗಾಗಿ PC ಯನ್ನು ಬಳಸಲು ಅದು ನೆರವಾಗುತ್ತದೆ ಹಾಗೂ ಈ ಮೂಲಕ ಬಹು ಅವಶ್ಯಕವಾದ ನಿರ್ಣಾಯಕ ಆಲೋಚನಾ ಕೌಶಲ್ಯಗಳನ್ನು ಹರಿತಗೊಳಿಸಿಕೊಳ್ಳಲು ನೆರವಾಗುತ್ತದೆ.

ಸ್ಟೀಮ್ ಎಜುಕೇಶನ್ ಏಕೆ ಮಹತ್ವದ್ದಾಗಿದೆ?

ಸಮಸ್ಯೆಯೊಂದು ಎದುರಾದಾಗ ಒಬ್ಬ ವಿದ್ಯಾರ್ಥಿಯು ತನ್ನ ಸ್ವಂತ ಬಲದ ಮೇಲೆ ಆಲೋಚಿಸಲು ಸಮರ್ಥನಾಗಿರಬೇಕು. ಸ್ಟೀಮ್ ವಿಷಯಗಳು ವಿದ್ಯಾರ್ಥಿಗಳಿಗೆ ಒಂದು “ಅನ್ವೇಷಕ” ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಹಾಗೂ ನಿರ್ಣಾಯಕವಾಗಿ ಆಲೋಚಿಸುವುದರ ಮಹತ್ವವನ್ನು ಗ್ರಹಿಸುವ ಅವಕಾಶವನ್ನು ಒದಗಿಸುತ್ತವೆ.

ಸ್ಟೀಮ್ ಎಜುಕೇಶನ್ನ ಭವಿಷ್ಯ ಹೇಗಿದೆ?

ಈ ವಿಷಯಗಳನ್ನು ಅಥವಾ ಕನಿಷ್ಟ ಪಕ್ಷ, ವಿಷಯದ ಮೂಲ ಪರಿಕಲ್ಪನೆಗಳ ಭಾಗವನ್ನು ನಮ್ಮ ದೇಶದ ಎಲ್ಲಾ ಮಂಡಳಿಗಳಾದ್ಯಂತ ಚಿಕ್ಕ ವಯಸ್ಸಿನಿಂದಲೇ ಕಲಿಸಲಾಗುತ್ತದೆ. ಆದರೆ ನಾವು ಇಲ್ಲಿ ಒತ್ತು ನೀಡಬೇಕಾಗಿರುವುದು ಅದರ ತೀವ್ರತೆಯ ಬಗ್ಗೆ. ಅದು ಹೆಚ್ಚಿನ ಪಠ್ಯೇತರ ಚಟುವಟಿಕೆಗಳಾಗಿರಲಿ ಅಥವಾ ಬುದ್ಧಿಮತ್ತೆಗೆ ಬಹಳಷ್ಟು ಸವಾಲೊಡ್ಡುವ ಹೋಮ್ವರ್ಕ್ ಆಗಿರಲಿ ಅಥವಾ ಸ್ಟೀಮ್ನ ಧ್ಯೇಯಗಳ ಸುತ್ತ ಆಗಾಗ್ಗೆ ನಡೆಸುವ ಫೀಲ್ಡ್ ಟ್ರಿಪ್ಗಳಾಗಿರಲಿ – ನಿಮ್ಮ ವಿದ್ಯಾರ್ಥಿಗಳಿಗೆ ಚಿಕ್ಕ ಚಿಕ್ಕ ಹೆಜ್ಜೆಗಳು ದೀರ್ಘಕಾಲ ಜೊತೆಯಾಗಿರುತ್ತವೆ.

ಸ್ಟೀಮ್ ಎಜುಕೇಶನ್ ಅನ್ನು ನಿಗದಿತ ಆಧಾರದಲ್ಲಿ ನಿಮ್ಮ ತರಗತಿಯ ಭಾಗವಾಗಿಸಲು ನೀವು ಮಾಡಬೇಕಾದ ಐದು ವಿಷಯಗಳನ್ನು ಇಲ್ಲಿ ನೀಡಲಾಗಿದೆ:

1) ತಮಗೆ ಆಸಕ್ತಿಕರವಾಗಿರುವುದನ್ನೆಲ್ಲಾ ಅನ್ವೇಷಿಸುವುದಕ್ಕಾಗಿ ನಿಮ್ಮ ವಿದ್ಯಾರ್ಥಿಗಳಿಗೆ ಸ್ಥಳಾವಕಾಶವನ್ನು ಸೃಷ್ಟಿಸಲು ಶಾಲೆಯಲ್ಲಿ ಮೇಕರ್ಸ್ಪೇಸ್ ಅನ್ನು ಸೆಟ್ ಮಾಡಿ
2) ಹೆಚ್ಚಿನ ಪ್ರಮಾಣದಲ್ಲಿ ಪರಿಧಿಯಾಚೆಗೆ ಹೋಗುವ ಹೋಮ್ವರ್ಕ್ ಅಥವಾ ಫ್ಯಾನ್ಸಿ ಸಾಮಗ್ರಿಯ ಅವಶ್ಯಕತೆ ಇಲ್ಲದಿರುವ ಮೇಕರ್ಸ್ಪೇಸ್ ಪ್ರಾಜೆಕ್ಟ್ಗಳನ್ನು ವಹಿಸಿ
3) ನಿಮ್ಮ ವಿದ್ಯಾರ್ಥಿಗಳು ಶಾಲೆಯಲ್ಲಿ PC ಗೆ ಪ್ರವೇಶಾವಕಾಶವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ ಹಾಗೂ ತಮ್ಮ ಮಗುವಿನ ದೀರ್ಘಾವಧಿ ಪ್ರಯೋಜನಕ್ಕಾಗಿ ಮಗುವಿಗೆ PC ಯೊಂದನ್ನು ಹೊಂದಲು ಹಣ ಹೂಡಿಕೆ ಮಾಡುವಂತೆ ಪಾಲಕರನ್ನು ಪ್ರೋತ್ಸಾಹಿಸಿ
4) ವಿದ್ಯಾರ್ಥಿಗಳನ್ನು ಮಾತಾಡುವಂತೆ ಮಾಡುವ ಹಾಗೂ ಸ್ಟೀಮ್ ವಿಷಯಗಳ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕುವ ಚಟುವಟಿಕೆಗಳೊಂದಿಗೆ ತರಗತಿಗಳನ್ನು ಸಂವಾದದಿಂದ ಕೂಡಿರುವಂತೆ ಮಾಡಿ
5) ಗ್ರುಪ್ ವರ್ಕ್ಗಳೊಗೆ ಹೆಚ್ಚಿನ ಗಮನವನ್ನು ನೀಡಿ, ಏಕೆಂದರೆ ಚಿಕ್ಕ ಚಿಕ್ಕ ಸಂವಾದಗಳು ಮತ್ತು ಚರ್ಚೆಗಳು ವಿಷಯದೆಡೆಗೆ ಮಗುವಿನ ಆಸಕ್ತಿಯನ್ನು ಹೆಚ್ಚಿಸುತ್ತವೆ

ನಿಮ್ಮ ಶಿಕ್ಷಕ ವೃತ್ತಿ ಸಂತೋಷದಿಂದ ಕೂಡಿರಲಿ!