ಶಿಕ್ಷಕರ ಮನದಾಳದ ಮಾತು: ನನ್ನ PC ಇಲ್ಲದೇ ಕಲಿಸುವಿಕೆಯನ್ನು ನಾನು ಊಹಿಸಿಕೊಳ್ಳಲೂ ಆಗದು

 

ಜಾಸ್ಮಿನ್ ಸಿಧು:
ಪಂಜಾಬ್ ತಾಂತ್ರಿಕ ವಿಶ್ವವಿದ್ಯಾನಿಲಯದ ಪದವೀಧರರಾಗಿ, ಒಬ್ಬ ಐಟಿ ಇಂಜಿನೀಯರ್ ಆಗಿರುವ ಜಾಸ್ಮಿನ್ರವರು, ಪಂಜಾಬ್ನ ಅಗ್ರ ಶ್ರೇಯಾಂಕದ ಶಾಲೆಗಳಲ್ಲಿ ಒಂದಾಗಿರುವ ಮೊಹಾಲಿಯ ಓಕ್ರಿಜ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯವನ್ನು ಕಲಿಸುತ್ತಾರೆ. ಅವರ ತರಗತಿಗಳು ವಿಶೇಷವಾಗಿ, ಕ್ರಮವಾಗಿ ಐಬಿ, ಐಜಿಸಿಎಸ್ಇ ಮತ್ತು ಸಿಬಿಎಸ್ಇ ಮಂಡಳಿಗಳಲ್ಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಿ-ಪ್ರೋಗ್ರಾಮಿಂಗ್ ಮತ್ತು ಪ್ರೋಗ್ರಾಮಿಂಗ್ ಎರಡೂ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ.

1) ಕಲಿಸುವಿಕೆ ಕ್ಷೇತ್ರದೊಳಗೆ ನೀವು ಕಾಲಿಡುವಂತೆ ಯಾವ ವಿಷಯವು ನಿಮಗೆ ಸ್ಫೂರ್ತಿಯನ್ನು ಒದಗಿಸಿತು?
ಗ್ಯಾಜೆಟ್ಗಳ ಬಗೆಗಿನ ನನ್ನ ಉತ್ಕಟೇಚ್ಛೆಯು ಈ ವಿಷಯವನ್ನು ವೃತ್ತಿಪರವಾಗಿ ಕೈಗೊಳ್ಳಲು ನನ್ನನ್ನು ಪ್ರೇರೇಪಿಸಿತು, ಹಾಗಾಗಿ ನನ್ನ ಕರೀಯರ್ ಅನ್ನು ರೋಬೋಟಿಕ್ಸ್ ವಿಷಯವನ್ನು ಕಲಿಸುವುದರಿಂದ ನಾನು ಪ್ರಾರಂಭಿಸಿದೆ. ಅದು, ನನ್ನದೇ ಆದ ಗ್ಯಾಜೆಟ್ ಆದ ನನ್ನ ಮೊದಲ ಡೆಲ್ ಲ್ಯಾಪ್ಟಾಪ್ನಿಂದ ಪ್ರಾರಂಭವಾಯಿತು.

2) ಶಿಕ್ಷಣಕ್ಕಾಗಿ PC – ಇದರ ಬಗ್ಗೆ ನಿಮ್ಮ ನಿಲುವು ಏನು?
ಒಂದೇ ಸರ್ವರ್ನಲ್ಲಿ ಪ್ರತಿಯೊಂದು ವಿಷಯವೂ ಲಭ್ಯವಿದೆ ಹಾಗೂ ಇದು ಒಬ್ಬ ಶಿಕ್ಷಕರು ವೆಂಚರ್ ಮಾಡಬಹುದಾದ ಒಂದು ದೊಡ್ಡ ಉಪಕ್ರಮವಾಗಿದೆ. ನಾವು ಸಂಶೋಧಿಸಬೇಕಾದ ಅಥವಾ ಕಲಿಯಬೇಕಾದ ವಿಷಯಗಳು ಆನ್ಲೈನ್ನಲ್ಲಿ ಲಭ್ಯವಿರುತ್ತವೆ. ಅದನ್ನು ತಲುಪಲು ನಮಗೆ ಬೇಕಾಗುವುದು ಒಂದು PC ಮಾತ್ರ.

3) ನಿಮ್ಮ PC ಯನ್ನು ಕಲಿಸುವಿಕೆಗಾಗಿ ನೀವು ಹೇಗೆ ಬಳಸುತ್ತೀರಿ ಎಂಬುದನ್ನು ತಿಳಿಸಿ
ರೋಬೋಟಿಕ್ಸ್ ಮತ್ತು ಸೆನ್ಸರ್ಗಳ ಯೂಟ್ಯೂಬ್ ವಿಡಿಯೋಗಳು. ದೃಶ್ಯ ಮಾಧ್ಯಮವು ವ್ಯಕ್ತಿಯ ಸ್ಮರಣೆಯಲ್ಲಿ ಯಾವಾಗಲೂ ಅಳಿಸಲಾಗದ ಗುರುತನ್ನು ಉಳಿಸುತ್ತದೆ. ಹಾಗಾಗಿ, ನನ್ನ ಕಲಿಕೆಯಲ್ಲಿ ಚಿತ್ರಗಳು ಹಾಗೂ ವಿಡಿಯೋಗಳನ್ನು ಅಳವಡಿಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ.

4) ಒಂದು ಪರಿಪೂರ್ಣವಾದ ಪಠ್ಯ ಯೋಜನೆಯನ್ನು ಹಾಕಿಕೊಳ್ಳಲು ನಿಮಗೆ ಬೇಕಾಗುವ ಮೂರು ಅತ್ಯಾವಶ್ಯಕ ಸಂಗತಿಗಳು ಯಾವವು?
ನನ್ನ ಡೆಲ್ ಲ್ಯಾಪ್ಟಾಪ್, ಒಂದು ಆಸಕ್ತಿದಾಯಕ ವಿಷಯ ಮತ್ತು ಒಂದು ಅನ್ವೇಷಣಾಶೀಲ ಮನಸ್ಸು.

5) ತರಗತಿಯಲ್ಲಿ ಚೈತನ್ಯವನ್ನು ತುಂಬಲು ಒಬ್ಬ ಶಿಕ್ಷಕರು ಏನು ಮಾಡಬೇಕು?
ಪರಸ್ಪರ ಸಂವಹನ ಮಾಡುವ ಹಾಗೂ ಜೀಜ್ಞಾಸುಯುಕ್ತ ಪರಿಸರವನ್ನು ಹುಟ್ಟುಹಾಕಬೇಕು.

6) ಭಾರತದಲ್ಲಿ ಕಲಿಸುವಿಕೆ ವೃತ್ತಿಯ ಭವಿಷ್ಯ ಏನಿದೆ ಎಂದು ನಿಮಗೆ ಅನ್ನಿಸುತ್ತದೆ?
ಇದು, ವಿಶೇಷವಾಗಿ ನಮ್ಮ ದೇಶದಲ್ಲಿ, ಅತ್ಯಂತ ಪ್ರಾಚೀನವಾದ ಹಾಗೂ ಆದರಣೀಯವಾದ ವೃತ್ತಿಯಾಗಿದೆ. ಇದರಲ್ಲಿ ಇನ್ನೂ ಬಳಸಿಕೊಳ್ಳಬಹುದಾದ ಅನೇಕ ಮಾರ್ಗಗಳಿವೆ. ಆದಾಗ್ಯೂ, ಸ್ಮಾರ್ಟ್ ಕ್ಲಾಸ್ಗಳು ಖಂಡಿತವಾಗಿ ಭವಿಷ್ಯದ ಕಲಿಕಾ ಕಾರ್ಯಕ್ರಮದ ಭಾಗವಾಗಲಿವೆ.

7) ನಿಮ್ಮ ಕರೀಯರ್ನ ಬೆಳವಣಿಗೆಗಾಗಿ ನೀವು ಯಾವ ಹೆಜ್ಜೆಗಳನ್ನು ಇರಿಸುತ್ತಿದ್ದೀರಿ?
ಶಾಶ್ವತವಾಗಿ ಅಪ್ಗ್ರೇಡ್ ಆಗುತ್ತಿರುವ ತಂತ್ರಜ್ಞಾನದ ಬಗ್ಗೆ ನನ್ನನ್ನು ನಾನು ನಿರಂತರವಾಗಿ ಅಪ್ಡೇಟ್ ಮಾಡಿಕೊಳ್ಳುತ್ತೇನೆ.

8) ನೀವು ಕೆಲಸದ ಮೇಲೆ ಇಲ್ಲದಿರುವಾಗ ನಿಮ್ಮನ್ನು ನೀವು ಒತ್ತಡಮುಕ್ತವಾಗಿಸಿಕೊಳ್ಳಲು ನೀವು ಏನು ಮಾಡುತ್ತೀರಿ?
ನಾನು ಒಬ್ಬ ಲೈಫ್ಸ್ಟೈಲ್ ಬ್ಲಾಗರ್ ಆಗಿದ್ದು, ವಿಷಯಗಳನ್ನು ರಚಿಸುತ್ತಾ, ನನ್ನ ಬಹುಪಾಲು ಸಮಯವನ್ನು ಆನ್ಲೈನ್ನಲ್ಲಿ ಕಳೆಯುತ್ತೇನೆ.

9) ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಯು ನಿಮಗೆ ಕೇಳಿರಬಹುದಾದ ಅತ್ಯಂತ ತಮಾಷೆಯ ಪ್ರಶ್ನೆ ಯಾವುದು?
ನನ್ನ ಡೆಲ್ ಲ್ಯಾಪ್ಟಾಪ್ ಅನ್ನು ಮೊದಲ ಬಾರಿಗೆ ತರಗತಿಗೆ ತೆಗೆದುಕೊಂಡು ಹೋದಾಗ, ವಿದ್ಯಾರ್ಥಿಗಳಲ್ಲೊಬ್ಬ ಕೇಳಿದ: “ನೀವು ನಮಗೆ ಮೂವೀಗಳನ್ನು ತೋರಿಸಲಿದ್ದೀರಾ?” ನನ್ನ ಪರಿಕಲ್ಪನೆಗಳನ್ನು ವಿಡಿಯೋಗಳ ಮೂಲಕ ವಿವರಿಸಲು ಆರಂಭಿಸಿದಲ್ಲಿ, ಕಲಿಯುವಿಕೆಯು ನನ್ನ ವಿದ್ಯಾರ್ಥಿಗಳಿಗೆ ಎಷ್ಟೊಂದು ಉತ್ಸಾಹದಿಂದ ಕೂಡಿರಬಲ್ಲದು ಎಂಬುದನ್ನು ಆಗ ನಾನು ಅರಿತುಕೊಂಡೆ ಎಂದು ನನಗನಿಸುತ್ತದೆ.

10) ನಿಮ್ಮ ಕೌಶಲ್ಯಗಳನ್ನು ಅಪ್ಗ್ರೇಡ್ ಮಾಡಿಕೊಳ್ಳಲು ನೀವೇನು ಮಾಡುತ್ತಿರುವಿರಿ?
ವೈಜ್ಞಾನಿಕ ಬೆಳವಣಿಗೆಗಳಲ್ಲಿ ನಾನು ತೀವ್ರ ಆಸಕ್ತಿಯನ್ನು ವಹಿಸುತ್ತೇನೆ ಹಾಗೂ ಅವುಗಳನ್ನು ಕೂಲಂಕುಷವಾಗಿ ಅಭ್ಯಸಿಸುತ್ತೇನೆ.

11) ಭಾರತದಲ್ಲಿನ ವಿಕಸನಗೊಳ್ಳುತ್ತಿರುವ ವಿದ್ಯಾರ್ಥಿ ಅಗತ್ಯತೆಗಳನ್ನು ನೀವು ಹೇಗೆ ಉದ್ದೇಶಿಸುತ್ತಿದ್ದೀರಿ?
ಒಂದು ಸರಾಸರಿ ಭಾರತೀಯ ಮಗು ತುಂಬಾ ಚಾಣಾಕ್ಷ ಹಾಗೂ ಅನ್ವೇಷಣಾ ಪ್ರವೃತ್ತಿಯನ್ನು ಹೊಂದಿರುತ್ತದೆ. ಅವರ ಕೌಶಲ್ಯಗಳನ್ನು ಬೆಳೆಸಲು ಮತ್ತು ಸುಧಾರಿಸಲು ನೆರವಾಗುವುದು ಈ ಸಮಯದ ಅವಶ್ಯಕತೆಯಾಗಿದೆ. ಅಲ್ಲದೇ, ಅವರ ಹವ್ಯಾಸಗಳನ್ನು ಬೆಂಬಲಿಸುವುದು ಮತ್ತು ಅದನ್ನು ಭವಿತವ್ಯದ ಒಂದು ಸಂಭಾವ್ಯ ಅವಕಾಶವನ್ನಾಗಿ ಮಾಡಿಕೊಳ್ಳಲು ಅವರು ಅದನ್ನು ಹೆಚ್ಚಿನ ಮಟ್ಟಕ್ಕೆ ಹೇಗೆ ಬೆಳೆಸಿಕೊಳ್ಳಬಹುದು ಎಂಬುದರ ಮೇಲೆ ಮಾರ್ಗದರ್ಶನ ಮಾಡುವುದು.

12) ಡೆಲ್ ಉಪಕ್ರಮ, ಆರಂಭ್ – ಶಿಕ್ಷಣಕ್ಕಾಗಿ PC, ಇದರ ಬಗೆಗಿನ ನಿಮ್ಮ ನಿಲುವು ಏನು? ನೀವು ಅದರ ಭಾಗವಾಗಬಯಸುತ್ತೀರಾ?
ಅದು ಒಂದು ತುಂಬಾ ಉತ್ತಮವಾದ ಉಪಕ್ರಮವಾಗಿದ್ದು, ಅನೇಕರು ಅದರಿಂದ ಪ್ರಯೋಜನವನ್ನು ಪಡೆಯುತ್ತಾರೆ ಎಂದು ನನಗನಿಸುತ್ತದೆ. ಅದರ ಭಾಗವಾಗುವುದು ನನಗೆ ತುಂಬಾ ಸಂತಸದ ವಿಚಾರವಾಗಿರುತ್ತದೆ.