ಶಿಕ್ಷಕರ ದಿನ 2019: ಡೆಲ್ಆರಂಭ್ ಚಾಲನೆಗೆ ಒಂದು ವಿಶೇಷ ದಿನ

 

ಡೆಲ್ ಆರಂಭ್ ಎನ್ನುವುದು ಪ್ಯಾನ್-ಇಂಡಿಯಾ ಪಿಸಿ ಫಾರ್ ಎಜುಕೇಶನ್&zwjನ ಉಪಕ್ರಮವಾಗಿದ್ದು, ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ಕಲಿಕೆಯನ್ನು ಹೆಚ್ಚಿಸಿಕೊಳ್ಳಲು ರೂಪಿಸಲಾಗಿದೆ. #ಡಿಜಿಟಲ್&zwjಇಂಡಿಯಾದಲ್ಲಿ ಪೋಷಕರು, ಶಿಕ್ಷಕರು ಮತ್ತು ಮಕ್ಕಳು ದೃಢವಾದ ಹೆಜ್ಜೆ ಇರಿಸಲು ಸಹಾಯ ಮಾಡುವ ಸಲುವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಒಬ್ಬ ವಿದ್ಯಾರ್ಥಿಯ ಕಲಿಕೆಯ ಗ್ರಾಫ್ ಅನ್ನು ಭವಿಷ್ಯ-ದ ರೀತಿಯಲ್ಲಿ ತಯಾರು ಮಾಡುವುದಕ್ಕಿಂತ ಮುಖ್ಯವಾದ ಕೆಲಸ ಒಬ್ಬ ಶಿಕ್ಷಕರಿಗೆ ಇರುವುದಿಲ್ಲ ಮತ್ತು ಅದು ತಮ್ಮನ್ನು ಭವಿಷ್ಯ-ದೆಡೆಗೆ ಸಜ್ಜಾಗಿಸಿಕೊಳ್ಳುವುದರಿಂದ ಬರುತ್ತದೆ - ಶಿಕ್ಷಣಕ್ಕಾಗಿ ಪಿಸಿಯನ್ನು ಪ್ರವೇಶಿಸುವ ಮೂಲಕ.

ಒಬ್ಬ ಶಿಕ್ಷಕ ಪಿಸಿಯಿಂದ ಸಜ್ಜಾದಾಗ ಆ ಶಿಕ್ಷಕ ತರಗತಿಯಲ್ಲಿ ಅಧ್ಬುತಗಳನ್ನು ಮಾಡಬಹುದು, 79590ರ ಕೆಲವು ಸಂಬಂಧಿತ ಮಾಹಿತಿಗಳು ಇಲ್ಲಿವೆ ಮತ್ತು ಡೆಲ್ ಆರಂಭ್&zwjನ ಪ್ರಮಾಣೀಕೃತ ಶಿಕ್ಷಕರನ್ನು ಪರಿಗಣಿಸಲಾಗುತ್ತದೆ.

1. ನಿಮ್ಮ ವೃತ್ತಿಯನ್ನು ಮೇಲ್ದರ್ಜೆಗೇರಿಸಲು ಪಿಸಿಗಳು ನಿಮಗೆ ಹೇಗೆ ನೆರವಾಗಿವೆ?

a.  ಭಾರತೀಯ ಶಿಕ್ಷಣ ವ್ಯವಸ್ಥೆಯು ಪಠ್ಯಪುಸ್ತಕಗಳನ್ನು ಬಳಸುವುದರಿಂದ ಮುಂದೆ ಸಾಗಿ ಸಾಫ್ಟ್ ಕಾಪಿ ನೋಟ್ಸ್&zwjಗಳನ್ನೂ ದಾಟಿ ಈಗ ಪಿಸಿಗಳಲ್ಲಿ ಪ್ರೆಸೆಂಟೇಷನ್ ಕೊಡುವಷ್ಟು ಮಾರ್ಪಾಟು ಹೊಂದಿದೆ. ಬದಲಾವಣೆಯು ಸಮುದ್ರದಷ್ಟು ವಿಸ್ತಾರವಿದ್ದು ಭಾರತವು ಅದರ ಕೇಂದ್ರ ಭಾಗದಲ್ಲಿದೆ!

2. ಜೆನ್ ವಿದ್ಯಾರ್ಥಿಯ ಶಿಕ್ಷಕರಾದವರಿಗೆ ಶಿಕ್ಷಣದಲ್ಲಿನ ಯಾವ ಜನಪ್ರಿಯ ಟ್ರೆಂಡ್&zwjಗಳ ಬಗ್ಗೆ ತಿಳಿದಿರಬೇಕು?

a.  ತರಗತಿಯ ನಂತರದ ಸಂವಹನ ಮತ್ತು ಪಿಸಿ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂಪೂರ್ಣ ಪಾಠಗಳನ್ನು ಹಂಚಿಕೊಳ್ಳುವುದು ಉನ್ನತ-ದರ್ಜೆಯ ಟ್ರೆಂಡ್ ಆಗಿರುತ್ತದೆ. ಸಂವಹನ, ಸಂವಹನ ಮತ್ತು ಹೆಚ್ಚಿನ ಸಂವಹನವೇ ಇದರ ಜೀವಾಳ.

3. ವಿಧ್ಯಾರ್ಥಿಯ ಕಲಿಕಾ ಗ್ರಾಫ್&zwjನ್ನು ಮಾಪನ ಮಾಡಲು ತಂತ್ರಜ್ಞಾನವು ಹೇಗೆ ನೆರವು ನೀಡಿತು?

a. ಪಿಸಿಗಳು ಶಿಕ್ಷಕರಿಗೆ ತ್ವರಿತ ಫಲಿತಾಂಶಗಳನ್ನು ಒದಗಿಸಿವೆ, ವಿದ್ಯಾರ್ಥಿಗಳ ಬಗ್ಗೆ ನೈಜ-ಪ್ರಸ್ತುತ ಡ್ಯಾಟಾ ಲಭ್ಯವಾಗುವುದರಿಂದ, ಅದು ಅಂತಿಮವಾಗಿ ಶಿಕ್ಷಕರಿಗೆ ವಿದ್ಯಾರ್ಥಿಗಳ ಅಗತ್ಯಗಳಿಗೆ ಸ್ಪಂದಿಸಲು ನೆರವು ನೀಡಿ ಪಾಠವನ್ನು ಉತ್ತಮವಾಗಿ ಯೋಜಿಸುವಂತೆ ಮಾಡುತ್ತದೆ, ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳು ವೃದ್ಧಿಸುತ್ತವೆ. ಹೆಚ್ಚು ದೈಹಿಕ ಒತ್ತಡವಿಲ್ಲದೆ ಅವರ ಕಲಿಕೆಯನ್ನು ಮೌಲ್ಯಮಾಪನ ಮಾಡಿಕೊಳ್ಳಲು ಶಾಲೆಗಳಲ್ಲಿ ಲಭ್ಯವಿರುವ ಕಂಪ್ಯೂಟರ್ ಲ್ಯಾಬ್ ಗಳು ಮತ್ತು ಇಂಟರ್ನೆಟ್ ಲಭ್ಯತೆಯು ಸಹಾಯ ಮಾಡುತ್ತದೆ. ನಿಧಾನವಾಗಿ, ಭಾರತದಲ್ಲಿ ಡಿಜಿಟಲ್ ಮಾರ್ಕಿಂಗ್ ಸಾಮಾನ್ಯವಾಗಲಿದೆ.

4. ಕಾಲಾಂತರದಲ್ಲಿ ಕಲಿಕೆಯು ಹೇಗೆ ರೂಪಾಂತರಗೊಂಡಿತು?

a.  ಭಾರತದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯವನ್ನು ಅರಗಿಸಿಕೊಳ್ಳುವ ವಿಧಾನವನ್ನು ಪರಿವರ್ತಿಸಲು ತಂತ್ರಜ್ಞಾನವು ವೇಗವಾಗಿ ಸಾಗಿಬಂದಿದೆ. ಇಂಟರ್ನೆಟ್-ಅಳವಡಿಕೆಯುಳ್ಳ ಪಿಸಿಗಳ ಮೂಲಕ, ಎಲ್ಲಾ ಬೋಧನಾ / ಕಲಿಕಾ ವಿಧಾನಗಳನ್ನು ಶಾಶ್ವತವಾಗಿ ಬದಲಿಸುವ ಇದು ಈ ಕಾಲಮಾನದ ಅಗತ್ಯವಾಗಿದೆ.

ಸಕಾರಾತ್ಮಕ ಡಿಜಿಟಲ್ ಹೆಜ್ಜೆಗುರುತನ್ನು ರಚಿಸಲು ಸುವ್ಯವಸ್ಥಿತ ತರಗತಿಗಳ ಅವಶ್ಯಕತೆಯನ್ನು ಶಿಕ್ಷಣತಜ್ಞರು ಅರಿತುಕೊಂಡಿದ್ದಾರೆ. ಒಂದು ಸಮಯದಲ್ಲಿ ಒಂದು ಪಿಸಿಯಂತೆ ಪಿಸಿ-ಬೋಧನಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಮೂಲಕ ಈ # ಶಿಕ್ಷಕರ ದಿನದಂದು ಅವರ ವಿಶೇಷ ಸೇವೆಗಳನ್ನು ಗುರುತಿಸುತ್ತಾ ನಾವು ಅವರನ್ನು ಗೌರವಿಸೋಣ!