ಆವಶ್ಯಕ ಡಿಜಿಟಲ್ ಪೇರೆಂಟಿಂಗ್ ತಾಳೆಪಟ್ಟಿ

 

ಪೇರೆಂಟಿಂಗ್ .

ಅದೊಂದು ಕೆಲಸ ಎನ್ನುವುದಾದರೆ- ಅದು ಪೂರ್ಣಾವಧಿಯ, 24/7 ಪಾತ್ರದ ಕೆಲಸವಾಗಿದೆ.

ನಿಮ್ಮ ಜವಾಬ್ದಾರಿಗಳು ಬಹಳಷ್ಟು "ಟೆಕ್ " ಅನ್ನು ಒಳಗೊಂಡಿರುತ್ತವೆ, ಅದನ್ನು ನೀವು ಬಯಸಿರಲಿ ಅಥವಾ ಇಲ್ಲದಿರಲಿ...

ಈಗ ನಿಮ್ಮ ಮುಂದಿರುವ ದೊಡ್ಡ ಪ್ರಶ್ನೆ ಎಂದರೆ, ಒಬ್ಬ ಡಿಜಿಟಲ್ ಪೇರೆಂಟಿಂಗ್ ಪರಿಣತರಾಗುವ ಕುರಿತು ಹೇಗೆ ಮುಂದುವರಿಯುತ್ತೀರಿ?

 

1. ಅದು ನಿಮ್ಮೊಂದಿಗೆ ಪ್ರಾರಂಭವಾಗುತ್ತದೆ.

ನಿಮಗೆ ಏನಾದರೂ ಅರ್ಥವಾಗದಿದ್ದರೆ- ಸಂಶೋಧಿಸಿರಿ. ತಿಳಿದುಕೊಳ್ಳುವ ಸಲುವಾಗಿ ಇತರ ಹೆತ್ತವರು, ನಿಮ್ಮ ಮಗುವಿನ ಶಿಕ್ಷಕರು, ಸಹೋದ್ಯೋಗಿಗಳು, ನೆರೆಯವರು ಮತ್ತು ನಿಮ್ಮ ನೆಟ್ ವರ್ಕ್ ನಲ್ಲಿರುವ ಪ್ರತಿಯೊಬ್ಬರೊಂದಿಗೆ ಮಾತನಾಡಿರಿ. ಮುಂದೆ ನೀವು ಮಾಡಬೇಕಾಗಿರುವುದೆಂದರೆ ಯಾವಾಗಲೂ ನಿಮ್ಮ ಮಗುವಿಗೆ ನೋಡಲು ಅನುವು ಮಾಡುವ ಮೊದಲು ನೀವೇ ಪಿಸಿ ಮೂಲವನ್ನು ಪರಿಶೀಲಿಸುವುದಾಗಿದೆ.

 

2. ನೀವೇ ನಿಮ್ಮಪುಟಾಣಿಯ ಮಾದರಿ ವ್ಯಕ್ತಿ

ನೀವು ಅವರ ಮೊದಲ ಸುಪರ್ ಹೀರೋ. ನೀವು ಏನನ್ನೇ ಮಾಡಿದರೂ ಅದು ಮಗುವಿನ ಪಾಲಿಗೆ ಅನುಸರಿಸಲು ಒಂದು ಉದಾಹರಣೆಯಾಗಿರುತ್ತದೆ. ನೀವು ಸ್ಕ್ರೀನನ್ನು ನೆಟ್ಟ ದೃಷ್ಟಿಯಿಂದ ನೋಡುತ್ತಿರುವಾಗ ಮಗುವನ್ನು ಉಪೇಕ್ಷಿಸಿದರೆ ಅಥವಾ ನೆಟ್ ನ ಮೇಲೆ ತೀರಾ ಹೆಚ್ಚು ಸಮಯವನ್ನು ಕಳೆದರೆ - ಹಾಗೆ ಮಾಡುವುದು ಸರಿ ಎಂದು ನಿಮ್ಮ ಮಗು ಯೋಚಿಸುತ್ತದೆ. ಹಾಗೆಯೇ, ನೀವು ಸರಿಯಾದ ಸಮತೋಲನ ಉಳಿಸಿಕೊಳ್ಳುವುದನ್ನು ಮತ್ತು ಸರಿಯಾದ ಭಂಗಿಯನ್ನು ಕಾಪಾಡಿಕೊಂಡಿರುವುದನ್ನು ನಿಮ್ಮ ಮಗು ನೋಡಿದರೆ, ಅದು ನಿಮ್ಮ ನಡೆಯನ್ನು ಅನುಸರಿಸುತ್ತದೆ.

 

3. ಹೆತ್ತವರ ನಿಯಂತ್ರಣಗಳಿರುವುದು ಸಹಾಯ ಮಾಡುವ ಸಲುವಾಗಿ.

ನಿಮ್ಮ ಮಗುವಿಗೆ ಪಿಸಿಯಲ್ಲಿ ಒಂದು ಪ್ರತ್ಯೇಕವಾದ ಯೂಸರ್ ಪ್ರೊಫೈಲ್ ಅನ್ನು ಅಣಿಗೊಳಿಸುವುದರಿಂದ ಪ್ರಾರಂಭಿಸಿರಿ ಮತ್ತು ಆ ಮೇಲೆ ನಿಧಾನವಾಗಿ ಪ್ರತಿಯೊಂದು ವೆಬ್ ಸೈಟ್ ಅನ್ನು ನ್ಯಾವಿಗೇಟ್ ಮಾಡಿರಿ. ಗೂಗಲ್ ಮತ್ತು ಯು ಟ್ಯೂಬ್ ಗಳು ಪ್ರಮುಖವಾದವುಗಳು, ಆ ನಿಯಂತ್ರಣಗಳನ್ನು ಅಣಿಗೊಳಿಸಿದ ನಂತರ ನೀವು ನಿಶ್ಚಿಂತೆಯಿಂದ ನಿರಾಳವಾಗಿರಬಹುದು.

 

4. ನಿಯಮಗಳನ್ನು ಮತ್ತೊಮ್ಮೆ ಉತ್ತಮಗೊಳಿಸಿರಿ

ನಿಯಂತ್ರಣದಲ್ಲಿರಲು ಯಾರು ಬಯಸದೆ ಇರುವುದಿಲ್ಲ? ನೀವು ನಿಮ್ಮ ಮಗುವಿಗೆ ತನ್ನದೇ ಆದ ನಿಯಮಗಳನ್ನು ಮಾಡಿಕೊಳ್ಳಲು ಅನುವು ಮಾಡಿದರೆ -ಅವುಗಳನ್ನು ಮುರಿಯುವ ಪ್ರಶ್ನೆಯೇ ಇರುವುದಿಲ್ಲ. ಜೊತೆಯಲ್ಲಿ ಕುಳಿತುಕೊಳ್ಳಿರಿ ಮತ್ತು ಅವುಗಳನ್ನು ಬರೆದಿಡಿರಿ. ನೀವು ನಿಮ್ಮ ತರ್ಕವನ್ನು ಸರಿಯಾಗಿ ವಿವರಿಸಿದ ನಂತರ ಬಲವಾದ ಪಾಸ್ ವರ್ಡ್ ಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು, ಬುಕ್ ಮಾರ್ಕ್ ಮಾಡಲ್ಪಟ್ಟ ವೆಬ್ ಸೈಟ್ ಗಳನ್ನು ಮಾತ್ರ ಬಳಸಿಕೊಳ್ಳುವುದು ಮತ್ತು ಪಿಸಿಯನ್ನು ಒಂದು ದಿನದಲ್ಲಿ ಒಂದು ಅಥವಾ ಎರಡು ಗಂಟೆಗಳಿಗಿಂತ ಹೆಚ್ಚು ಉಪಯೋಗಿಸದಿರುವುದು ಮುಂತಾದ ಮೂಲ ನಿಯಮಗಳನ್ನು ನಿಮ್ಮ ಮಗು ಸ್ವಾಗತಿಸುತ್ತದೆ.

 

5. ಸಂಘಜೀವಿಯಾಗಿರುವುದು ಉತ್ತಮ

ನಿಜಕ್ಕೂ , ಅದು ಬಹಳ ಉತ್ತಮ !

ಆದರೆ ಇದೇ ನೀವು ಎಚ್ಚರಿಕೆಯಿಂದ ಗಮನಿಸಬೇಕಾಗಿರುವ ಜಾಗವಾಗಿದೆ.. ನಿಮ್ಮ ಮಗು ಯಾವುದೇ ಗುಟ್ಟಿನ ಅಕೌಂಟ್ ಗಳನ್ನು ಹೊಂದಿರದಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಇದಕ್ಕೆ ಪ್ರತಿಯಾಗಿ, ನೀವು ನಿಮ್ಮ ಮಗುವಿಗೆ ಅದರದೇ ಆದ ಸ್ವಂತ ಸ್ಥಳಾವಕಾಶವನ್ನು ನೀಡುವ ಅಗತ್ಯವಿರುತ್ತದೆ- ಅವರ ವಿಷಯಗಳನ್ನು ಅತಿವಿಶ್ಲೇಷಣೆ ಮಾಡುವುದನ್ನು ಮತ್ತು ಪೋಸ್ಟ್ ಗಳ ಮೇಲೆ ಟೀಕೆ ಮಾಡುವುದನ್ನು ತಪ್ಪಿಸಿರಿ.

ಮತ್ತು ನಿಮ್ಮ ಪುಟಾಣಿ ಪರಸ್ಪರ ಒಬ್ಬರು ಇನ್ನೊಬ್ಬರಿಂದ ಕಲಿಯಬೇಕು. ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿರಿ ಮತ್ತು ನಿಮ್ಮೊಂದಿಗೆ ನೇರವಾಗಿ ವಿಚಾರ ವಿನಿಮಯ ಮಾಡಲು ನಿಮ್ಮ ಪುಟಾಣಿಗಳನ್ನು ಪ್ರೋತ್ಸಾಹಿಸಿರಿ. ಅಂತಿಮವಾಗಿ ಇದು ತಂತ್ರಜ್ನಾನದ ಸಹಾಯದಿಂದ ಅಭಿವೃದ್ಧಿ ಹೊಂದುವುದು ಮತ್ತು ಈ ಹಾದಿಯುದ್ದಕ್ಕೂ ಜೊತೆಗೂಡಿ ವಿನೋದದ ಆನಂದವನ್ನು ಹೊಂದುವ ಕುರಿತಾಗಿದೆ!