ಕಲಿಸುವ ವೃತ್ತಿಯ ಭವಿಷ್ಯವು ಪ್ರಕಾಶಮಾನವಾಗಿರುವುದಾಗಿ ನನಗೆ ತೋರುತ್ತದೆ

 

ಹಾರ್ವರ್ಡ್ ಬಿಜಿನೆಸ್ ಸ್ಕೂಲಿನ MBA ಪದವೀಧರರಾಗಿರುವ ವಿಭಾ ಕಾಗ್ಝಿರವರು, 2018 ರ ಮಹಿಳಾ ಆರ್ಥಿಕ ವೇದಿಕೆಯಲ್ಲಿ “ಶ್ರೇಷ್ಠ ಮಹಿಳೆ” ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ವಿಭಾರವರು ReachIvy ಇದರ ಸಂಸ್ಥಾಪಕರಾಗಿದ್ದಾರೆ.

1) “PC ಫಾರ್ ಎಜುಕೇಶನ್” ಬಗ್ಗೆ ನಿಮ್ಮ ಅಭಿಪ್ರಾಯವೇನು?

ಶಿಕ್ಷಣ ಎಂಬುದು ಸಾಮಾಜಿಕ ಸಮಾನತೆಯ ಅಂತಿಮ ಹಂತದ ಹರಿಕಾರವಾಗಿದೆ ಮತ್ತು ತಂತ್ರಜ್ಞಾನವೆಂಬುದು ಸೂಕ್ತವಾದ ವೇಗವರ್ಧಕವಾಗಿದೆ ಎಂಬುದು ನನ್ನ ವಿಶ್ವಾಸ. ಸಾಂಪ್ರದಾಯಿಕ ಪಠ್ಯಪುಸ್ತಕವೊಂದು ಅಂದಾಜು 200-500 ಪುಟಗಳಷ್ಟು ಮಾಹಿತಿಯನ್ನು ಒಳಗೊಳ್ಳುವಂತೆಯೇ, ಒಂದೇ ಒಂದು PC ಯು ಲಕ್ಷಗಟ್ಟಲೇ ಪುಸ್ತಕಗಳ (ಅಥವಾ ಬಹುಶಃ ಇನ್ನೂ ಹೆಚ್ಚು!) ಜ್ಞಾನವನ್ನು ಹಿಡಿದಿಟ್ಟುಕೊಳ್ಳುತ್ತದೆ ಹಾಗೂ ಸಂಪೂರ್ಣವಾಗಿ ಹೊಸದಾದ ವಿಶ್ವವೊಂದಕ್ಕೆ ‘ಕಿಟಕಿ’ ಯನ್ನು ಒದಗಿಸುತ್ತದೆ. 1-ಬಾರಿಯ ಸೀಮಿತ ಹೂಡಿಕೆಯೊಂದಿಗೆ ಇದು ಕಲಿಕೆ ಹಾಗೂ ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತದೆ.

“ಶಿಕ್ಷಣಕ್ಕಾಗಿ ಬಳಸಲ್ಪಡುವ PC-ಗಳು ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲ್ಪಟ್ಟಲ್ಲಿ, ಉತ್ತಮ ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಮೈಲುಗಟ್ಟಲೇ ಪ್ರಯಾಣಿಸಬೇಕಾದ ಅವಶ್ಯಕತೆಯನ್ನು ನಿವಾರಿಸುತ್ತವೆ ಹಾಗೂ ಪರಿಣಾಮವಾಗಿ ವಿದ್ಯಾರ್ಥಿಗಳ ಮನೆಗಳು/ಶಾಲೆಗಳಲ್ಲಿ ಉತ್ತಮ ದರ್ಜೆಯನ್ನೂ ಹಾಗೂ ಶಿಕ್ಷಕರನ್ನು ಒದಗಿಸುತ್ತವೆ.”

2) ಉರು ಹೊಡೆದು ಕಲಿಯುವಿಕೆ – ಇದರ ಬಗ್ಗೆ ನಾವೇನು ಮಾಡಬಹುದು?

“ನಾನು ಕೇಳಿಸಿಕೊಂಡಿದ್ದನ್ನು ಮರೆಯುತ್ತೇನೆ, ನಾನು ನೋಡಿದ್ದನ್ನು ನೆನಪಿಟ್ಟುಕೊಳ್ಳುತ್ತೇನೆ, ನಾನು ಮಾಡಿದ್ದನ್ನು ಅರ್ಥ ಮಾಡಿಕೊಳ್ಳುತ್ತೇನೆ” ಎಂದು ಚೀನಾ ದೇಶದ ಪ್ರಾಚೀನ ತತ್ವಜ್ಞಾನಿ ಕನ್ಫ್ಯೂಶಿಯಸ್ ಹೇಳಿದ್ದಾನೆ.

ಉರು ಹೊಡೆದು ಕಲಿಯುವಿಕೆ ವ್ಯವಸ್ಥೆಗೆ ಬದಲಾವಣೆ ಏಕೆ ಅಗತ್ಯವಾಗಿದೆ ಎಂಬುದನ್ನು ಇದು ವಿವರಿಸುತ್ತದೆ. ನಾವು ಶಾಲೆಯಲ್ಲಿ ಕಲಿತ ಪೈಥಾಗೊರಸ್ನ ಪ್ರಮೇಯವನ್ನು ನಮ್ಮಲ್ಲಿ ಎಷ್ಟು ಜನರು ವಾಸ್ತವವಾಗಿ ನೆನಪಿಟ್ಟುಕೊಂಡಿದ್ದೇವೆ? ಕೆಲವೇ ಜನರು ಮಾತ್ರ!

“ತಾನು ಕಲಿಯುತ್ತಿರುವುದನ್ನು ಮಗುವು ಅನುಭವಿಸುತ್ತದೆ, ನೋಡುತ್ತದೆ ಮತ್ತು ಮಾಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅನುಭವದ ಮೂಲಕದ ಕಲಿಕೆ, ಸಿದ್ದಾಂತದ ಅನ್ವಕತೆ, ತರಗತಿಯ ಭಾಗವಹಿಸುವಿಕೆ, ಫೀಲ್ಡ್ ಪ್ರಾಜೆಕ್ಟ್ಗಳು ಮತ್ತು ಪರೀಕ್ಷೇತರ ಸಂಬಂಧೀ ಇತರ ಚಟುವಟಿಕೆಗಳಿಗೆ ಶಿಕ್ಷಣ ಸಂಸ್ಥೆಗಳು ಹೆಚ್ಚು ಒತ್ತನ್ನು ನೀಡಬೇಕು.”

ವಿಷಯಗಳು ಒಂದೇ ರಾತ್ರಿಯಲ್ಲಿ ಬದಲಾಗಿಬಿಡುವುದಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳಬೇಕಿದ್ದಾಗಲೂ, ಸರಿಯಾದ ಕ್ರಮಗಳನ್ನು ನಾವು ತೆಗೆದುಕೊಳ್ಳಬೇಕಿರುತ್ತದೆ.

3) ಕಲಿಕೆಯೊಂದಿಗೆ ಒಬ್ಬ ವಿದ್ಯಾರ್ಥಿಯ ಬಾಂಧವ್ಯವನ್ನು ಶಿಕ್ಷಕರು ಹೇಗೆ ಸುಧಾರಿಸಬಹುದು?

“ವಿದ್ಯಾರ್ಥಿಯೊಂದಿಗಿನ ಬಾಂಧವ್ಯವನ್ನು ಸುಧಾರಿಸಲು, ಏಕಮುಖ ಮಾರ್ಗದ ಜ್ಞಾನ ವರ್ಗಾವಣೆಯನ್ನು ಮಾಡುವ ಬದಲು, ತರಗತಿಯ ಅನುಭವವನ್ನು ದ್ವಿಮಾರ್ಗದ ಸಂವಹನ ಅಧಿವೇಶನವನ್ನಾಗಿ ಶಿಕ್ಷಕರು ಪರಿವರ್ತಿಸಬೇಕು.”

ಒಂದು ವಿಷಯವನ್ನು ಶಿಕ್ಷಕರು ಆಸಕ್ತಿಕರವನ್ನಾಗಿ ಮಾಡಬೇಕು. ಒಂದು ವಿಷಯವನ್ನು ನಮಗೆ ಕಲಿಸಿದ ಶಿಕ್ಷಕರು ಆ ವಿಷಯವನ್ನು ಆಸಕ್ತಿಕರವನ್ನಾಗಿಸಿದ್ದರಿಂದಾಗಿಯೇ ನಮಗೆಲ್ಲರಿಗೂ ಇಷ್ಟವಾಗಿದ್ದ ಒಂದು ವಿಷಯವಿರುತ್ತದೆ. ಅಂಕಗಳನ್ನು ಕೇವಲ ಸಂಖ್ಯೆಗಳನ್ನಾಗಿ ಮಾತ್ರ ನೋಡಬೇಕು, ಹಾಗೂ ಗಮನವು ಮಗುವಿನ ಕೌಶಲ್ಯಗಳ ಸಮಗ್ರ ಬೆಳವಣಿಗೆಯ ಕಡೆಗೆ ಕೇಂದ್ರೀಕೃತವಾಗಿರಬೇಕು. ಕೊನೆಯದಾಗಿ, ಶಿಕ್ಷಕರು ತಮ್ಮ ನೆಚ್ಚಿನ ವಿದ್ಯಾರ್ಥಿಗಳು ಎಂಬುದಾಗಿ ಯಾರನ್ನೂ ಆಯ್ಕೆ ಮಾಡದೇ, ತಮ್ಮ ಗಮನ ಮತ್ತು ಕಾಳಜಿಯನ್ನು ಪಕ್ಷಪಾತರಹಿತವಾಗಿ ಒದಗಿಸುತ್ತಾ, ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಸಮನಾಗಿ ಕಾಣಬೇಕು.

4) ಒಬ್ಬ ಶಿಕ್ಷಕರು ಹೊಂದಿರಲೇಬೇಕಾದ ಮೂರು ಕೌಶಲ್ಯಗಳು ಯಾವವು?

1. ಪರಸ್ಪರ ಸಂವಹನ ನಡೆಸುವ ತರಗತಿ ಅಧಿವೇಶನವನ್ನು ನಿರ್ವಹಿಸುವ ಸಾಮರ್ಥ್ಯ ವಿಷಯದ ಮೇಲೆ ಪರಿಣಿತಿ ಮತ್ತು ಉತ್ತಮವಾಗಿ ಸಂವಹನ ಮಾಡುವ ಸಾಮರ್ಥ್ಯ.
2. ಪಠ್ಯಪುಸ್ತಕಗಳಲ್ಲಿದ್ದುಕ್ಕಿಂತ ಹೆಚ್ಚಿನದನ್ನು ಕಲಿಯುವ ಮತ್ತು ಕಲಿಸುವ ಆಸಕ್ತಿ ಜ್ಞಾನದ ಮಟ್ಟವನ್ನು ಮೇಲೇರಿಸಿಕೊಳ್ಳುವ ನಿರಂತರ ಪ್ರೇರಕ ಶಕ್ತಿ.
3. ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಮಗುವನ್ನು ಪ್ರೋತ್ಸಾಹಿಸುವ ಸಾಮರ್ಥ್ಯ ಬಲವಾದ ಅಂತರ್ವ್ಯಕ್ತಿತ್ವ ಕೌಶಲ್ಯಗಳು ಮತ್ತು ವಿದ್ಯಾರ್ಥಿಗಳ ಗೌರವಾದರ ಮತ್ತು ವಿಶ್ವಾಸವನ್ನು ಗಳಿಸಿಕೊಳ್ಳುವ ಸಾಮರ್ಥ್ಯ.

5) ನಮ್ಮ ಭವಿಷ್ಯ ಹೇಗಿದೆ?

ಈ ಹಿಂದೆ ನಡೆಯುತ್ತಿದ್ದ, ಪಠ್ಯಪುಸ್ತಕಗಳಲ್ಲಿದ್ದುದನ್ನು ಮಾತ್ರ ಶಿಕ್ಷಕರು ಕಲಿಸುತ್ತಿದ್ದಂತಲ್ಲದೇ, ಈಗಿನ ವ್ಯವಸ್ಥೆಯು ಶಿಕ್ಷಣದ ಪರಸ್ಪರ ಸಂವಹನದ ರೂಪದೆಡೆಗೆ ಬದಲಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ, ಎರಡೂ ವಲಯಗಳು ಅವಶ್ಯಕ ಹೂಡಿಕೆಗಳನ್ನು ಮಾಡುವಿಕೆಯ ಮೇಲೆ ಅವಲಂಬಿತವಾಗಿ - ಕಲಿಕಾ ವೃತ್ತಿಯ ಭವಿಷ್ಯವು ನನಗೆ ಉಜ್ವಲವಾಗಿ ತೋರುತ್ತದೆ.

6) ವಿಕಸನಗೊಳ್ಳುತ್ತಿರುವ ವಿದ್ಯಾರ್ಥಿ ಅಗತ್ಯತೆಗಳನ್ನು ನೀವು ಹೇಗೆ ಉದ್ದೇಶಿಸುತ್ತಿದ್ದೀರಿ?

ತಮ್ಮ ಮನಸ್ಸುಗಳನ್ನು ಗೊಂದಲಮುಕ್ತಗೊಳಿಸಿಕೊಂಡು, ತಮ್ಮ ವ್ಯಕ್ತಿತ್ವಕ್ಕೆ ಅತ್ಯುತ್ತಮವಾಗಿ ಹೊಂದುವ ಭವಿತವ್ಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ReachIvy.com ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತದೆ.