ಸರಿಯಾದ, ಕಂಠಪಾಠವಲ್ಲದ, ಕಲಿಕೆಯ ವಿಧಾನ


ಭಾರತೀಯ ಶಿಕ್ಷಣ ವ್ಯವಸ್ಥೆಯೊಳಗಿನ ವಿದ್ಯಾರ್ಥಿಗಳಿಗೆ ಉರು ಹೊಡೆಯುವ ಮೂಲಕ ಕಲಿಯುವ ಪದ್ಧತಿಯ ಪರಿಚಯವಿದೆ, ಪುನರಾವರ್ತನೆಯ ಆಧಾರದ ಮೇಲೆ ಕಂಠಪಾಠ ಮಾಡುವ ತಂತ್ರವು ವಿದ್ಯಾರ್ಥಿಗಳಿಗೆ ತಾವು ಓದಿದ್ದನ್ನು ನೆನಪಿಸಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆದರೂ, ಈ ರೀತಿಯ ಕಲಿಕೆಯು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಬದಲಾಗಿ ಕಂಠಪಾಠ ಮಾಡುವುದನ್ನು ಪ್ರೋತ್ಸಾಹಿಸುತ್ತದೆ.

ಕಾಡುವ ಸಮಸ್ಯೆ

ಭಾರತೀಯ ಶಿಕ್ಷಣ ವ್ಯವಸ್ಥೆಯೊಳಗಿನ ಪಠ್ಯಕ್ರಮವು ವ್ಯಾಖ್ಯಾನಗಳು, ಪರಿಕಲ್ಪನೆಗಳು, ಸೂತ್ರಗಳು ಮತ್ತು ತಥ್ಯಗಳನ್ನು ನೆನಪಿಟ್ಟುಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿದೆ, ಕೇವಲ 14% ಭಾರತೀಯ ತರಗತಿಗಳು ಪಠ್ಯಪುಸ್ತಕಗಳ ಹೊರತಾಗಿ ಬೋಧನಾ ಸಾಮಗ್ರಿಗಳನ್ನು ಬಳಸುತ್ತವೆ. ಇದು ಭವಿಷ್ಯದ ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ, ಅಧ್ಯಯನಗಳು ಭಾರತೀಯ ಪದವೀಧರ ಎಂಜಿನಿಯರ್ ಗಳಲ್ಲಿ 25% ಕ್ಕಿಂತ ಕಡಿಮೆ ಪದವೀಧರರು ಉದ್ಯೋಗಕ್ಕೆ ಅರ್ಹರಾಗಿದ್ದಾರೆಂದು ತೋರಿಸುತ್ತದೆ.1

ವಾಸ್ತವವೆಂದರೆ, ವಿದ್ಯಾರ್ಥಿಯು ಒಂದು ಪರಿಕಲ್ಪನೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ಅದನ್ನು ನೆನಪಿನಲ್ಲಿಟ್ಟುಕೊಳ್ಳದೆ ನಿಜ ಜೀವನದಲ್ಲಿ ಅನ್ವಯಿಸಲು ಸಾಧ್ಯವಾಗುತ್ತದೆ. ಇಂದಿನ ‘ಡಿಜಿಟಲ್ ಇಂಡಿಯನ್ಸ್’ ಗಾಗಿ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಂಕೀರ್ಣ ಸಮಸ್ಯೆ ಪರಿಹಾರವು ಮೂರು ಅತ್ಯಂತ ಅಪೇಕ್ಷಣೀಯ ಕೌಶಲ್ಯಗಳಾಗಿರುವುದರಿಂದ ಇದು ಅಂತಹ ಕಾರ್ಯಪಡೆಗೆ ಸಹಾಯ ಮಾಡುತ್ತದೆ.

ಪರಿಹಾರವೇನು?

ಕಂಠಪಾಠದಿಂದ ದೂರ ಸರಿಯುವುದು. ಈ ಪರಿಣಾಮಕ್ಕಾಗಿ, ನಾವು ಪ್ರತಿವರ್ಷ ಜೂನ್ 10 ರಂದು ಕಂಠಪಾಠ-ನಿಷೇಧ ದಿನವನ್ನು ಆಚರಿಸುತ್ತೇವೆ.

ಇಂದಿನ ತಂತ್ರಜ್ಞಾನ-ಚಾಲಿತ ಜಗತ್ತಿನಲ್ಲಿ, ಪಿಸಿ ಶಿಕ್ಷಣದ ಮೂಲಕ ಸರಿಯಾದ ಕಲಿಕೆಯ ವಿಧಾನವನ್ನು ಕಲಿಸಲು ಸಾಧ್ಯವಿದೆ. ಇದನ್ನು ಇವುಗಳ ಮೂಲಕ ಮಾಡಬಹುದು:

 • ಇ-ಬುಕ್ಸ್
  ಈಗಿರುವ ಪಠ್ಯಪುಸ್ತಕಗಳು ಮತ್ತು ಟಿಪ್ಪಣಿಗಳ ಗಾತ್ರವು ವಿದ್ಯಾರ್ಥಿಗಳನ್ನು ಹೆದರಿಸಬಹುದು, ಅದಕ್ಕಾಗಿಯೇ ಸಣ್ಣ, ಸಂಕ್ಷಿಪ್ತ ಮತ್ತು ಸಂವಾದಾತ್ಮಕ ಇ-ಪುಸ್ತಕಗಳು ಮತ್ತು ಪಿಡಿಎಫ್ ಗಳನ್ನು ಒದಗಿಸುವುದು ಅವಶ್ಯವಾಗಿದೆ.

 • ಸಂವಾದಾತ್ಮಕ ಮಾಧ್ಯಮ
  ಆಡಿಯೋ, ವಿಡಿಯೋ ಮತ್ತು ಆನಿಮೇಷನ್ ಗಳು ವಿದ್ಯಾರ್ಥಿಗಳ ಗಮನವನ್ನು ಸೆಳೆಯುತ್ತವೆ ಮತ್ತು ಉಳಿಸಿಕೊಳ್ಳುತ್ತವೆ, ಒಂದು ಪರಿಕಲ್ಪನೆಯು ಅವರೊಂದಿಗೆ ಹೆಚ್ಚು ಕಾಲ ಉಳಿಯುತ್ತದೆ ಎಂಬುದನ್ನು ಇದು ಖಚಿತಪಡಿಸುತ್ತದೆ.

 • ಯೋಜನೆಗಳು ಮತ್ತು ಮಂಡನೆಗಳು
  ವೈಯಕ್ತಿಕ ಮಂಡನೆಗಳು ವಿದ್ಯಾರ್ಥಿಗಳಿಗೆ ತಮ್ಮ ಸಂವಹನ ಕೌಶಲ್ಯವನ್ನು ಸುಧಾರಿಸುವುದರ ಜೊತೆಗೆ ಅವರು ಯಾವ ಮಟ್ಟಕ್ಕೆ ಪರಿಕಲ್ಪನೆಯನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.

 • ಒಬ್ಬರಿಂದ ಇನ್ನೊಬ್ಬರಿಗೆ ಪಾಠ
  ಗೂಗಲ್ ಡಾಕ್ಯುಮೆಂಟ್ ಗಳು ಮತ್ತು ವರ್ಚುವಲ್ ಚರ್ಚೆಗಳಂತಹ ಆನ್ ಲೈನ್ ಪರಿಕರಗಳ ಮೂಲಕ, ವಿದ್ಯಾರ್ಥಿಗಳು ಸಹಯೋಗ ಮಾಡಬಹುದು, ಹೊಸದನ್ನು ಸೃಷ್ಟಿಸಬಹುದು ಮತ್ತು ಪರಸ್ಪರ ಕಲಿಯಬಹುದು.

 • ಅನುಮಾನ ತೆರವುಗೊಳಿಸುವ ಅವಧಿಗಳು
  ರಸಪ್ರಶ್ನೆಗಳು ಮತ್ತು ಮರುಮಾಹಿತಿ ನಮೂನೆಗಳ ಮೂಲಕ, ಪರಿಕಲ್ಪನೆಯ ಬಗ್ಗೆ ವಿದ್ಯಾರ್ಥಿ ಎಷ್ಟು ತಿಳಿದುಕೊಂಡಿದ್ದಾನೆಂದು ಅಳೆಯಬಹುದು ಮತ್ತು ಅನುಮಾನಗಳನ್ನು ನಿವಾರಿಸಬಹುದು

 • ಅತಿಥಿ ಉಪನ್ಯಾಸಕರು
  ಆನ್ ಲೈನ್ ಕಲಿಕೆಗೆ ಯಾವುದೇ ದೈಹಿಕ ನಿರ್ಬಂಧಗಳಿಲ್ಲ, ವಿಶ್ವದ ವಿವಿಧ ಭಾಗಗಳ ಅತಿಥಿ ಉಪನ್ಯಾಸಕರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕಲಿಸಲು ಅನುವು ಮಾಡಿಕೊಡುತ್ತದೆ.


ನಮ್ಮ ಆನ್ ಲೈನ್ ಕಲಿಕೆಯ ವೆಬಿನಾರ್ ಗಳ ಮೂಲಕ ನೀವು ಇಂದು ಈ ಕಲಿಕೆಯನ್ನು ಆಕರ್ಷಕವಾದ ಮತ್ತು ಸಂವಾದಾತ್ಮಕ ಕಲಿಕೆಗೆ ಬದಲಾಯಿಸಬಹುದು.