ಈ ಕಿರುಸೂಚನೆಗಳು ನಿಮ್ಮನ್ನು ಓರ್ವ ಪಿಸಿ ಸುರಕ್ಷತಾ ಪರಿಣತರನ್ನಾಗಿ ಮಾಡುತ್ತವೆ

 

ಸುರಕ್ಷತೆ ಮೊದಲು ಎಂದರೆ ಸುರಕ್ಷತೆ ಎಂದೆಂದಿಗೂ

- ಚಾರ್ಲ್ಸ್ ಎಮ್ . ಹೇಯ್ಸ್

 

ಟೆಕ್ ನಮ್ಮ ದೈನಂದಿನ ಜೀವನದ  ದೊಡ್ಡ  ಭಾಗವಾಗಿದೆ. ಅದು ಉಪಯುಕ್ತ, ಬೋಧಪ್ರದ ಮತ್ತು ಮೋದದಾಯಕವಾಗಿದೆ, ಆದರೆ  ಬ್ರೌಸ್ ಮಾಡುವ ಕಾಲದಲ್ಲಿ ಎಷ್ಟೇ  ಸುರಕ್ಷಿತ ಎಂದು ನೀವು ಭಾವಿಸಿದರೂ ಅದು ಅಪಾಯಕಾರಿ ಕೂಡ ಆಗಿರಬಹುದು.. ಉತ್ತಮ ಸುರಕ್ಷತಾ ಪದ್ಧತಿಗಳನ್ನು ಉಪಯೋಗಿಸುವ ಅಭ್ಯಾಸಗಳನ್ನು ಅಳವಡಿಸಿಕೊಂಡು ನೀವು  ನಿಮ್ಮನ್ನು ಮತ್ತು ನಿಮ್ಮ ಪ್ರೀತಿಯ ಪ್ರಿಯಜನರನ್ನು ರಕ್ಷಿಸಿಕೊಳ್ಳಬಹುದು

 

 ಪಾಸವರ್ಡ್ ಪರಿಪೂರ್ಣತೆ

 

ನಾವೆಲ್ಲ ಹ್ಯಾಕರ್ ಗಳ ಕುರಿತು ದಿಗಿಲುಗೊಳಿಸುವ ಲೇಖನಗಳನ್ನು ಓದಿದ್ದೇವೆ ಮತ್ತು ಅತಿಶಯೋಕ್ತಿಯ  ವಿಡಿಯೋಗಳನ್ನು ವೀಕ್ಷಿಸಿದ್ದೇವೆ ಹಾಗೂ ಇನ್ನೂ ಏನೇನೆಲ್ಲ ಕೇಳಿಲ್ಲ! .ನಿಶ್ಚಿತವಾಗಿಯೂ, ಇವುಗಳಲ್ಲಿ ಒಂದಿಷ್ಟು ವಿಪರೀತ ಉತ್ಪ್ರೇಕ್ಷೆ ಇರುವುದು ನಿಜವಾಗಿದ್ದರೂ ಕೂಡ, ನಂತರ ಪರಿತಪಿಸುವ ಬದಲಾಗಿ ಮೊದಲೇ ಎಚ್ಚರ ವಹಿಸಿ ಸುರಕ್ಷಿತರಾಗಿರುವುದು ಯಾವಾಗಲೂ ಉತ್ತಮ. ನೀವು ಮಾಡಬೇಕಾಗಿರುವುದು ಇಲ್ಲಿದೆ:

  • ಸುದೀರ್ಘವಾದ ಪಾಸ್ ವರ್ಡ್ ಗಳನ್ನು ಬಳಸಿರಿ - 8 ಅಥವಾ ಹೆಚ್ಚು ಅಕ್ಷರಗಳನ್ನು ಶಿಫಾರಸು ಮಾಡಲಾಗಿದೆ.
  • ಅಕ್ಷರಗಳ ಬಲವಾದ ಸಮ್ಮಿಶ್ರಣವನ್ನು ಉಪಯೋಗಿಸಿರಿ ಮತ್ತು ಎಂದಿಗೂ ಅನೇಕ ಸೈಟ್ ಗಳಲ್ಲಿ ಒಂದೇ ಪಾಸ್ ವರ್ಡ್ ಅನ್ನು ಬಳಸಬೇಡಿರಿ.
  • ನಿಮ್ಮ ಪಾಸ್ ವರ್ಡ್ ಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿರಿ ಮತ್ತು ಅವುಗಳನ್ನು ಬರೆದಿಡಬೇಡಿರಿ (ವಿಶೇಷವಾಗಿ ನಿಮ್ಮ ಮಾನಿಟರ್ ಗೆ ಲಗತ್ತಿಸಿದ ಪೋಸ್ಟ್ -ಇಟ್ ನೋಟ್ ನಲ್ಲಿ)
  • ನಿಯತಕಾಲಿಕವಾಗಿ ನಿಮ್ಮ ಪಾಸ್ ವರ್ಡ್ ಗಳನ್ನು ಅಪ್ ಡೇಟ್ ಮಾಡಿರಿ, ಕನಿಷ್ಠ ಪಕ್ಷ ಪ್ರತಿ 6 ತಿಂಗಳುಗಳಲ್ಲಿ ಒಂದು ಸಲ (90 ದಿನಗಳಾಗಿದ್ದರೆ ಹೆಚ್ಚು ಉತ್ತಮ).

 

   ಸಂಶಯಾಸ್ಪದವಾಗಿ ಕಂಡರೆ , ಅದನ್ನುತೆರೆಯಬೇಡಿರಿ

 

ಗುರುತಿಸಬಹುದಾದ  ಆನ್ ಲೈನ್ ಸರ್ವೀಸ್ ನಿಂದ ಎಂದು  ಭಾಸವಾಗುತ್ತಿರುವ ಕೆಲವು ವೈಯಕ್ತಿಕ ವಿವರಗಳನ್ನು ದೃಢೀಕರಿಸಲು  ಲಾಗ್ ಇನ್ ಮಾಡಲು ನಿಮ್ಮನ್ನು ಕೇಳುತ್ತಿರುವ  ಇಮೇಲ್ ಗಳು ಯಾವಾಗಲೂ ನಕಲಿಯಾಗಿರುತ್ತವೆ.

ಈ ಇಮೇಲ್ ಗಳು ಸಾಮಾನ್ಯವಾಗಿ ನಿಮ್ಮ ಇಮೇಲ್ ಎಪ್ಲಿಕೇಶನ್ ನ ಸ್ಪ್ಯಾಮ್ ಫಿಲ್ಟರ್ ನಲ್ಲಿ  ಸಿಕ್ಕಿ ಬೀಳುತ್ತವೆ ಆದರೆ ಯಾವುದಾದರೊಂದು ನುಸುಳಿ ಬಂದರೆ ಮತ್ತು ನೀವು ಅದರ ಲಿಂಕ್ ಅನ್ನು ಕ್ಲಿಕ್ ಮಾಡಿದರೆ  ನೀವು ಸರಿಯಾದ ಸಾಫ್ಟ್ ವೇರ್ ಅನ್ನು ಹೊಂದಿರುವಷ್ಟು ಕಾಲ  ನಿಮ್ಮ  ವೆಬ್ ಬ್ರೌಸರ್ ಅದನ್ನು ಪತ್ತೆಹಚ್ಚಬೇಕು ಮತ್ತು ಅದು ನಿಮ್ಮನ್ನು ಕೊಂಡು ಹೋಗುವ ಸೈಟ್ ಅನ್ನು ಬ್ಲಾಕ್ ಮಾಡಬೇಕು.

 

  ಅದನ್ನು ಬ್ಯಾಕ್ ಅಪ್ ಮಾಡಿರಿ

 

ವಾಡಿಕೆಯ ಅನುಕ್ರಮದ ಬ್ಯಾಕ್ ಅಪ್ ಗಳ ವೇಳೆಗಳನ್ನು ನಿಗದಿಪಡಿಸುವಿಕೆಯು  ನಿಮ್ಮನ್ನು ಅನಿರೀಕ್ಷಿತವಾದವುಗಳಿಂದ ರಕ್ಷಿಸಬಹುದು.  ನೀವು ನಿಮ್ಮ ಡೇಟಾ ಬ್ಯಾಕ್ ಅಪ್ ಮಾಡದಿದ್ದರೆ ನಿಮ್ಮ ಸಂಪೂರ್ಣ ಜೀವಮಾನದ ಡೇಟಾ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ

ನಿಮ್ಮ ಡಿವೈಸ್ ಗಳ ಭೌತಿಕ  ಭದ್ರತೆಯು ಅವುಗಳ ತಾಂತ್ರಿಕ ಭದ್ರತೆಯಷ್ಟೇ ಮುಖ್ಯವಾಗಿರುತ್ತದೆ.

  • ನಿಮಗೆ ಯಾವುದೇ ಅವಧಿಯ ಕಾಲ ನಿಮ್ಮ ಪಿಸಿಯನ್ನು ಬಿಟ್ಟುಹೋಗುವ ಆವಶ್ಯಕತೆ ಇದ್ದರೆ- ಅದನ್ನು ಬೇರೆ ಯಾರೂ ಉಪಯೋಗಿಸದಂತೆ ಲಾಕ್ ಮಾಡಿರಿ.
  • ನೀವು ಸೆನ್ಸಿಟಿವ್ ಮಾಹಿತಿಯನ್ನು ಫ್ಲ್ಯಾಶ್ ಡ್ರೈವ್ ನಲ್ಲಿ ಅಥವಾ ಎಕ್ಸ್ ಟರ್ನಲ್ ಹಾರ್ಡ್ ಡ್ರೈವ್ ನಲ್ಲಿ ಇರಿಸುವುದಾದರೆ , ಅವುಗಳನ್ನು ಕೂಡ ಲಾಕ್ ಮಾಡುವುದನ್ನು ಖಾತ್ರಿಪಡಿಸಿರಿ.
  • ಡೆಸ್ಕ್ ಟಾಪ್ ಕಂಪ್ಯೂಟರ್ ಗಳಿಗಾಗಿ, ಉಪಯೋಗದಲ್ಲಿ ಇಲ್ಲದಿದ್ದಾಗ ಸಿಸ್ಟಮ್ ಅನ್ನು  ಶಟ್ -ಡೌನ್ ಮಾಡಿರಿ ಅಥವಾ ನಿಮ್ಮ ಸ್ಕ್ರೀನ್ ಅನ್ನು ಲಾಕ್ ಮಾಡಿರಿ.

 

ನೀವೀಗ ಇಂಟರ್ ನೆಟ್ ನಲ್ಲಿ ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿ ಇರಿಸಲು ಒಬ್ಬ ಪಿಸಿ ಸೇಫ್ಟಿ ಪ್ರೊ ಆಗಿಬಿಟ್ಟಿದ್ದೀರಿ- ಹ್ಯಾಪೀ ಡಿಜಿಟಲ್ ಪೇರೆಂಟಿಂಗ್ !