ಆನ್‌ಲೈನ್ ಕಲಿಕೆಗಾಗಿ ನಿಮ್ಮ 2021ರ ಹೊಸ ವರ್ಷದ ನಿರ್ಣಯದಲ್ಲಿ ಸೇರಿಸಬೇಕಾದ ವಿಷಯಗಳು

 

ಕಳೆದ ವರ್ಷದಲ್ಲಿ, ಇಡೀ ಪ್ರಪಂಚವು ಬದಲಾಗಿದೆ. ಇಂದು, ಕಂಪ್ಯೂಟರ್ ಪರದೆಯಿಂದ ಶಾಲಾ ಶಿಕ್ಷಣ ನಡೆಯುತ್ತಿದೆ. ಭವಿಷ್ಯದಲ್ಲಿ 2021 ಕ್ಕೆ ನಾವು ಪಿಸಿ ಕಲಿಕೆಯ ಬಗ್ಗೆ ಜವಾಬ್ದಾರಿಯುತ ನಿರ್ಣಯಗಳನ್ನು ಮಾಡಬೇಕು.

ಪಿಸಿ ಶಿಕ್ಷಣಕ್ಕಾಗಿ ನಿಮ್ಮ ಹೊಸ ವರ್ಷದ ನಿರ್ಣಯದಲ್ಲಿ ನೀವು ಸೇರಿಸಬೇಕಾದದ್ದು ಇಲ್ಲಿದೆ.

ಅಂತರ್ಜಾಲದ(ಇಂಟರ್ನೆಟ್) ಸುರಕ್ಷತೆಯನ್ನು ಕಾಪಾಡಿಕೊಳ್ಳಿ

ನಿಮ್ಮ ಹೆತ್ತವರ ಅನುಮತಿಯಿಲ್ಲದೆ ನೀವು ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಅಂತರ್ಜಾಲದಲ್ಲಿ ಇಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪಾಸ್ ವರ್ಡ್ ಅನ್ನು ನಿಮ್ಮ ಪೋಷಕರೊಂದಿಗಲ್ಲದೇ ಬೇರೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ನೀವು ಸಾರ್ವಜನಿಕ ಕಂಪ್ಯೂಟರ್ ಅನ್ನು ಬಳಸುವಾಗ, ನೀವು ಪ್ರವೇಶಿಸಿದ ಖಾತೆಗಳಿಂದ ನೀವು ಲಾಗ್ ಔಟ್ ಆಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ನಿಮ್ಮ ಪರದೆಯ ಸಮಯದ ಬಗ್ಗೆ ಎಚ್ಚರವಿರಲಿ

ನಿಮ್ಮ ಇಂಟರ್ನೆಟ್ ಸಮಯವನ್ನು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸುವಾಗ, ನೀವು ಆನ್ ಲೈನ್ ನಲ್ಲಿ ಕಳೆಯುವ ಸಮಯದ ಬಗ್ಗೆ ಜಾಗರೂಕರಾಗಿರಬೇಕು. ಆನ್ ಲೈನ್ ನಲ್ಲಿ ಗಂಟೆಗಟ್ಟಲೆ ಮಿತಿಯಿಲದಂತೆ ಕಾಲ ಕಳೆಯಬೇಡಿ.

ಆನ್ ಲೈನ್ ತರಗತಿಗಳ ಮೂಲಕ ಹೊಸ ಕೌಶಲ್ಯಗಳನ್ನು ಕಲಿಯಿರಿ

2021 ರಲ್ಲಿ, ಪಿಸಿ ಕಲಿಕೆಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಿ. ನಿಮ್ಮ ಆಸಕ್ತಿ ಮತ್ತು ಪ್ರತಿಭೆಗಳನ್ನು ಉತ್ತೇಜಿಸುವ, ನಿಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುವ, ಹೊಸ ಕೌಶಲ್ಯಗಳನ್ನು ಕಲಿಯಲು ಅವಕಾಶವೀಯುವ ತರಗತಿಗಳಿಗೆ ಸೇರಿಕೊಳ್ಳಿ ಮತ್ತು ನಿಮ್ಮ ಸಮಯದ ಮೇಲೆ ಪೂರ್ಣ ಹಿಡಿತವಿರಲಿ.

ಆನ್ ಲೈನ್ ನಲ್ಲಿ ಇತರರೊಂದಿಗೆ ಸೌಜನ್ಯದಿಂದ ವರ್ತಿಸಿ

ದ್ವೇಷದ ಮಾತು ಮತ್ತು ಕಳಪೆ ಟೀಕೆಗಳು ಈ ದಿನಗಳಲ್ಲಿ ಅಂತರ್ಜಾಲದಲ್ಲಿ ಪ್ರಾಬಲ್ಯ ತೋರುತ್ತಿರುವಂತೆ ಕಾಣುತ್ತಿದೆ. ದ್ವೇಷದಿಂದ ಕೂಡಿದ ಸಂವಾದದಲ್ಲಿ ಭಾಗವಹಿಸಬೇಡಿ ಮತ್ತು 2021 ಅನ್ನು ಎಲ್ಲರಿಗೂ ಸಕಾರಾತ್ಮಕ ವರ್ಷವನ್ನಾಗಿ ಮಾಡಿ. ಮೇಲ್ಮಟ್ಟದ ಮತ್ತು ಪ್ರೋತ್ಸಾಹಿಸುವ ಟ್ವೀಟ್ ಗಳು, ಪೋಸ್ಟ್ ಗಳು ಮತ್ತು ಕಾಮೆಂಟ್ ಗಳ ಮೂಲಕ ಇಂಟರ್ನೆಟ್ ಅನ್ನು ಸುರಕ್ಷಿತಗೊಳಿಸಿ.

ವರ್ಷದ ಉಳಿದ ದಿನಗಳಲ್ಲಿ ಈ ನಿರ್ಣಯಗಳಿಗೆ ಬದ್ಧರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಕಲಿಕೆಗಾಗಿ ಅಂತರ್ಜಾಲವನ್ನು ಜವಾಬ್ದಾರಿಯುತವಾಗಿ ಬಳಸಿ.