ನಿಮಗೆ ಚೆನ್ನಾಗಿ ಕಲಿಯಲು ತಂತ್ರಜ್ಞಾನವು ಈ ರೀತಿ ಸಹಾಯ ಮಾಡುತ್ತದೆ

 

ನಾಳಿನ ಮಕ್ಕಳಾದ ನೀವು ಉತ್ತಮವಾಗಿ ಮತ್ತು ಹೆಚ್ಚು ವೈಯಕ್ತಿಕ ರೀತಿಯಲ್ಲಿ ಕಲಿಯಲು ತಂತ್ರಜ್ಞಾನವನ್ನು ನಿಮ್ಮ ಅನುಕೂಲಕ್ಕೆ ಬಳಸುತ್ತಿದ್ದೀರಿ. ನಿಮ್ಮ ಕಲಿಕೆಯಲ್ಲಿ ಗರಿಷ್ಠ  ಉಪಯೋಗವನ್ನು ಪಡೆಯಲು ತಂತ್ರಜ್ಞಾನವು ನಿಮಗೆ ಸಹಾಯ ಮಾಡುವ ಆರು ವಿಧಾನಗಳು ಇಲ್ಲಿವೆ.

 

  1. ನಿಮ್ಮ ವೇಗದಲ್ಲಿ ನೀವು ಕಲಿಯಬಹುದು

ತಂತ್ರಜ್ಞಾನ-ಚಾಲಿತ ಶಿಕ್ಷಣಕ್ಕೆ ಧನ್ಯವಾದಗಳು, ನಿಮ್ಮ ಸಹಪಾಠಿಗಳು ಕಲಿಯುವ ವೇಗದೊಂದಿಗೆ ನೀವು ಕೂಡಾ ಹೆಜ್ಜೆ ಹಾಕಬೇಕೆಂದಿಲ್ಲ. ಇ-ಕಲಿಕೆಯಿಂದಾಗಿ, ನಿಮಗೆ ಆರಾಮವೆನ್ನಿಸುವಂತಹ ವೇಗದಲ್ಲಿ ನೀವು ಕಲಿಯಬಹುದು.

 

  1. ನೀವು ವಿನೋದವಾಗಿ ಕಲಿಯಬಹುದು.

ನೀವು ಸಾಮಾನ್ಯವಾಗಿ ಗ್ರಹಿಸಲು ಸಾಧ್ಯವಾಗದ ಒಂದು ಪಠ್ಯವಿಷಯ ಇರಬಹುದು. ವರ್ಚುವಲ್ ಕಲಿಕೆಯನ್ನು ಬಳಸುವ ಮೂಲಕ, ಆ ವಿಷಯವನ್ನು ಆಸಕ್ತಿದಾಯಕ ಮತ್ತು ಆಕರ್ಷಕವಾಗಿ ಮಾಡಲು ಆ ವಿಷಯದ ಬಗ್ಗೆ ಮೋಜಿನ ಚರ್ಚೆಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಬಹುದು.

 

  1. ನಿಮ್ಮ ಶಿಕ್ಷಣದಲ್ಲಿ ನಿಮ್ಮ ಪೋಷಕರು ಹೆಚ್ಚು        ತೊಡಗಿಸಿಕೊಳ್ಳಬಹುದು

ತಂತ್ರಜ್ಞಾನಕ್ಕೆ ಧನ್ಯವಾದಗಳು, ನಿಮ್ಮ ಕಲಿಕೆಯ ಪ್ರಕ್ರಿಯೆಯಲ್ಲಿ ನಿಮ್ಮ ಪೋಷಕರಿಗೆ ಹೆಚ್ಚಿನ ಮಾಹಿತಿ ಸಿಗಬಹುದು ಮತ್ತು ಅವರು ಹೆಚ್ಚು ಭಾಗಿಯಾಗಬಹುದು. ವರ್ಚುವಲ್ ಕಲಿಕೆಯ ಸಮಯದಲ್ಲಿ ಅನುಮಾನಗಳನ್ನು ನಿವಾರಿಸುವಂತೆ ಮತ್ತು ಪರಿಕಲ್ಪನೆಗಳನ್ನು ಅರ್ಥಮಾಡಿಸುವಂತೆ ನೀವು ಅವರನ್ನು ಕೇಳಬಹುದು.

 

  1. ನೀವು ಪ್ರತಿ ಯೋಜನೆಯೊಂದಿಗೆ ಕಲಿಯಬಹುದು

ಒಂದು ಯೋಜನೆಯನ್ನು ಕಲಿಯುವಾಗ ಅಥವಾ ಮಾಡುವಾಗ ನಿಮಗೆ ಸಂದೇಹವಿದ್ದರೆ, ಆನ್ ಲೈನ್ ನಲ್ಲಿ ಉತ್ತರಗಳನ್ನು ಹುಡುಕುವ ಮೂಲಕ ತಂತ್ರಜ್ಞಾನದ ಸಹಾಯದಿಂದ ನೀವು ಅದನ್ನು ಪರಿಹರಿಸಬಹುದು

 

  1. ನಿಮಗೆ ಶಿಕ್ಷಣಕ್ಕೆ ಸುಲಭ ಪ್ರವೇಶ

ಇ-ಕಲಿಕೆಗೆ ನೋಟ್ ಬುಕ್ ಗಳಂತಹ ಸಾಮಗ್ರಿಗಳು ಅಗತ್ಯವಿಲ್ಲ ಏಕೆಂದರೆ ಆನ್ ಲೈನ್ ನಲ್ಲಿ ಅನೇಕ ಉಚಿತ ಆಯ್ಕೆಗಳು ಲಭ್ಯವಿವೆ. ಇದು ನಿಮ್ಮ ಕಲಿಕೆಯನ್ನು ಹೆಚ್ಚು ಮಿತವ್ಯಯಕಾರಿಯಾಗಿ ಮಾಡುತ್ತದೆ.

 

  1. ನೀವು ಅನೇಕ ಸಂಪನ್ಮೂಲಗಳ ಮೂಲಕ ಕಲಿಯಬಹುದು

ನೀವು ಇನ್ನು ಮುಂದೆ ಪುಸ್ತಕಗಳು ಮತ್ತು ಪಠ್ಯಪುಸ್ತಕಗಳ ಮೂಲಕ ಮಾತ್ರ ಕಲಿಯಬೇಕಾಗಿಲ್ಲ. ನೀವಿರುವ ಸ್ಥಳ ಅಥವಾ ಬಜೆಟ್ ಗೆ ಹೊರತಾಗಿ ವಿವಿಧ ಉಚಿತ ಸಂಪನ್ಮೂಲಗಳು ಲಭ್ಯವಿವೆ, ಇದು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು, ಅನುಮಾನಗಳನ್ನು ಪರಿಹರಿಸಲು ಮತ್ತು ಕಲಿಯುವುದನ್ನು ಮುಂದುವರಿಸಲು ಸಹಾಯ ಮಾಡುತ್ತದೆ.

 

ಆನ್ ಲೈನ್ ನಲ್ಲಿ ಕಲಿಯುವುದರ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ, ಇದರಿಂದ ನೀವು ಚೆನ್ನಾಗಿ ಮತ್ತು ನಿಮಗೆ ಬೇಕಾದ ರೀತಿಯಲ್ಲಿ ಅಧ್ಯಯನ ಮಾಡಬಹುದು.