ನಿಮ್ಮ ಮಕ್ಕಳಿಗೆ ಯೂಟ್ಯೂಬ್ ಅನ್ನು ನೀವು ಈ ರೀತಿಯಾಗಿ ಸುರಕ್ಷಿತಗೊಳಿಸಬಹುದು

 

ತಮ್ಮ ಮಕ್ಕಳಿಗೆ ಯೂಟ್ಯೂಬ್ ಸರಿಯಾದುದಲ್ಲ ಎಂದು ಭಾವಿಸುವ ಸಾವಿರಾರು ಪೋಷಕರಲ್ಲಿ ನೀವೂ ಸಹ ಒಬ್ಬರಾಗಿದ್ದೀರಾ?

ಈ ತಪ್ಪು ಕಲ್ಪನೆಯನ್ನು ಬದಲಾಯಿಸಿ, ಯೂಟ್ಯೂಬ್ ನಲ್ಲಿ ಉಚಿತವಾಗಿ ಲಭ್ಯವಿರುವ ಅದ್ಭುತ ಶೈಕ್ಷಣಿಕ ಸಂಪನ್ಮೂಲಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವ ಬಗ್ಗೆ ತಿಳಿಯಲು ಮುಂದೆ ಓದಿ.

1) ಲಭ್ಯವಿರುವ ಸುರಕ್ಷತಾ ಸೆಟಿಂಗ್ ಗಳ ಬಹುಪಾಲು ಪ್ರಯೋಜನವನ್ನು ಪಡೆದುಕೊಳ್ಳಿ

ಈ ವಿಡಿಯೋ ಸ್ಟ್ರೀಮಿಂಗ್ ದೈತ್ಯನ ಡೀಫಾಲ್ಟ್ ಸೆಟಿಂಗ್ ದೊಡ್ಡವರಿಗಾಗಿ ಇದೆ. ಹಾಗಾಗಿ, ನಿಮ್ಮ ಮಕ್ಕಳಿಗೆ ಅದನ್ನು ಸೂಕ್ತವಾಗಿಸಲು ಈ ಸರಳ ಹಂತಗಳನ್ನು ಅನುಸರಿಸಿ, ಇವುಗಳನ್ನು ಬದಲಾಯಿಸಲು ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯ ಸಾಕಾಗುತ್ತದೆ:

  • ನಿಮ್ಮ ಮಗುವಿನ ಪರದೆಯ ಮೇಲೆ ಅನಪೇಕ್ಷಿತ ವಿಡಿಯೋಗಳು ಪಾಪ್ ಅಪ್ ಆಗದಂತೆ, ವಿಡಿಯೋಗಳನ್ನು ವೀಕ್ಷಿಸುವಾಗ “ಅಪ್ ನೆಕ್ಸ್ಟ್” ಫೀಚರ್ ಅನ್ನು ಡಿಸೇಬಲ್ ಮಾಡಿ
  • ಬಳಕೆದಾರರು ಮತ್ತು ಇತರ ಮೂಲಗಳಿಂದ ಫ್ಲ್ಯಾಗ್ ಮಾಡಲ್ಪಟ್ಟ, ಇನ್ ಅಪ್ರಾಪ್ರಿಯೇಟ್ ಕಂಟೆಂಟ್ ಅನ್ನು ಒಳಗೊಂಡಿರಬಹುದಾದ ವಿಡಿಯೋಗಳನ್ನು ಹೈಡ್ ಮಾಡಲು ರಿಸ್ಟ್ರಿಕ್ಟೆಡ್ ಮೋಡ್ ಅನ್ನು “ಆನ್” ಆಗಿ ಇರಿಸಿ  

2) ಫಿಲ್ಟರ್ ಗಳನ್ನು ಫೈನ್-ಟ್ಯೂನ್ ಮಾಡಿ

ನಿಮ್ಮ ಮಗುವು ಕೇವಲ ಶೈಕ್ಷಣಿಕ ಸಾಮಗ್ರಿಯನ್ನು ಮಾತ್ರ ವೀಕ್ಷಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮತ್ತೊಂದು ಅತ್ಯುತ್ತಮ ಮಾರ್ಗವೆಂದರೆ ಫಿಲ್ಟರ್ ಗಳನ್ನು ಆಪ್ಟಿಮೈಜ್ ಮಾಡುವುದು. ನಿಮ್ಮ ಹುಡುಕಾಟಕ್ಕೆ ಅತ್ಯಂತ ಸೂಕ್ತವಾಗಿರುವ ಫಲಿತಾಂಶಗಳನ್ನು ಪ್ರದರ್ಶಿಸುವ ಮೂಲಕ ಈ ಪ್ರಕ್ರಿಯೆಯು ಸಮಯವನ್ನೂ ಸಹ ಉಳಿಸುತ್ತದೆ. ನೀವು ಅದನ್ನು ಹೀಗೆ ಮಾಡಬಹುದು: 

  • ತುಂಬಾ ನೇರವಾದ ಪದಕ್ಕಾಗಿ ಹುಡುಕಾಟ ಮಾಡಿ, ಉದಾಹರಣೆಗೆ “ಪ್ಲ್ಯಾಂಟ್ ಲೈಫ್ ಸೈಕಲ್”
  • ನಿಮ್ಮ ಹುಡುಕಾಟವನ್ನು ಅಪ್ ಲೋಡ್ ದಿನಾಂಕ, ಪ್ರಕಾರ, ಅವಧಿ ಹಾಗೂ ಫೀಚರ್ ಗಳ ಪ್ರಕಾರ ಫಿಲ್ಟರ್ ಮಾಡಿ
  • ಫಲಿತಾಂಶಗಳನ್ನು ಸೂಕ್ತತೆ, ವಿಡಿಯೋ ಕಂಟೆಂಟ್ ಅಥವಾ ಬಳಕೆದಾರರ ರೇಟಿಂಗ್ ಗೆ ಅನುಗುಣವಾಗಿ ವಿಂಗಡಿಸಿ

3) ಸಬ್ ಸ್ಕ್ರೈಬ್ ಮಾಡಿ

ಪೋಷಕ ವೃತ್ತಗಳಲ್ಲಿನ ಒಂದು ಉತ್ತಮ ರಹಸ್ಯವೆಂದರೆ, ಸಬ್ ಸ್ಕ್ರೈಬ್ ಮಾಡುವಿಕೆಯು ನಿಮ್ಮ ಮಗುವು ನಿಮ್ಮಿಂದ ಮೊದಲೇ ಸ್ಕ್ರೀನ್ ಮಾಡಲಾದ ಹಾಗೂ ಸರಿಯಾದ ವಿಷಯವನ್ನು ಬಳಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ, ವಿಫಲವಾಗುವ ಸಾಧ್ಯತೆ ಇಲ್ಲದ ಒಂದು ಸುರಕ್ಷಿತವಾದ ವಿಧಾನವಾಗಿದೆ ಎಂಬುದು. ಆ ಚಾನಲ್ಲಿನ ಆ ವಿಡಿಯೋಗಳನ್ನು ನೀವು ಮೊದಲೇ ವೀಕ್ಷಿಸಿರುವುದರಿಂದ, ಅವರು ನೋಡಬಾರದುದೇನನ್ನೋ ನೋಡಿಬಿಡುವ ಆತಂಕ ನಿಮ್ಮಲ್ಲಿ ಇಲ್ಲವಾಗುತ್ತದೆ. ಇದರಲ್ಲಿನ ಅತ್ಯುತ್ತಮ ಭಾಗವೆಂದರೆ, ಯೂಟ್ಯೂಬ್ ಬಹಳಷ್ಟು ಶಾಸನಗಳಿಂದ (ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ) ಹಾಗೂ ಗೂಗಲ್ ನ (ಮಾತೃ ಸಂಸ್ಥೆ) ಕಟ್ಟುನಿಟ್ಟಿನ ಆಂತರಿಕ ನಿಯಂತ್ರಕದಿಂದ ನಿಯಂತ್ರಿಸಲ್ಪಡುತ್ತದೆ ಹಾಗೂ ಯಾವುದೇ ಚಾನಲ್ ಅದರ ನಿಯಮಗಳನ್ನು ಉಲ್ಲಂಘಿಸದಿರುವುದನ್ನು ಖಚಿತಪಡಿಸುತ್ತದೆ.  

  • ಯೂಟ್ಯೂಬ್ ನಲ್ಲಿ ನೀವು ಸಬ್ ಸ್ಕ್ರೈಬ್ ಮಾಡಬಹುದಾದ ಚಾನಲ್ ಗಳ ಸಂಖ್ಯೆಗೆ ಮಿತಿ ಇಲ್ಲ, ಹಾಗಾಗಿ, ನಿರಾತಂಕವಾಗಿ ಮುಂದುವರೆದು, ಪ್ರತಿ ವಿಷಯದ ಮೇಲಿನ ಹಲವಾರು ಚಾನಲ್ ಗಳನ್ನು ಸಬ್ ಸ್ಕ್ರೈಬ್ ಮಾಡಿ
  • ನಿಮ್ಮ ಮಗುವು ವಿರಾಮವನ್ನು ತೆಗೆದುಕೊಳ್ಳಬಯಸುವ ಸಮಯಕ್ಕಾಗಿ ಕುಟುಂಬ-ಸ್ನೇಹಿ ಸಂಗೀತ ಮತ್ತು ಮನರಂಜನೆಯ ಪ್ಲೇಲಿಸ್ಟ್ ಅನ್ನು ಸೃಷ್ಟಿಸಿ

ಡಿಜಿಟಲ್ ಪೇರೆಂಟಿಂಗ್ ವಿಷಯಕ್ಕೆ ಬಂದಾಗ, ಪ್ರತಿಯೊಂದು ಚಿಕ್ಕ ವಿಷಯವೂ ನೆರವಾಗುತ್ತದೆ – ಮಕ್ಕಳು ಯೂಟ್ಯೂಬ್ ಅನ್ನು ಶಾಲೆಗಾಗಿ ಅದರ ಅತ್ಯುತ್ತಮ ಪ್ರಯೋಜನವನ್ನು ಪಡೆದುಕೊಳ್ಳಲು ಅನುವಾಗುವಂತೆ ನಿಮ್ಮ ಪೋಷಕ ವೃತ್ತದಲ್ಲಿ ಈ ಮಾಹಿತಿಯನ್ನು ಪಸರಿಸುವುದನ್ನು ಮರೆಯಬೇಡಿ.