ಈ ಬಾರಿಯ ಶಿಕ್ಷಕರ ದಿನದಂದು, ಒಂದು ಪಿಸಿಯೊಂದಿಗೆ ನಿಮ್ಮ ಕಲಿಸುವಿಕೆಯನ್ನು ವೃದ್ಧಿಸಿಕೊಳ್ಳಿ

 

 

ಪಿಸಿ ಎಂಬುದು ಕಲಿಯುವ ಒಂದು ಸಾಧನವಾಗಿದೆ.
ಪಿಸಿ ಎಂಬುದು ಸಂಶೋಧನೆ ಮಾಡುವ ಒಂದು ಸಾಧನವಾಗಿದೆ.
ಪಿಸಿ ಎಂಬುದು ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳುವ ಒಂದು ಸಾಧನವಾಗಿದೆ.
ಪಿಸಿ ಎಂಬುದು ಹಲವಾರು ವಿಷಯಗಳ ಕಣಜವಾಗಿದೆ.
ನಿಮಗಾಗಿ.
ಹೌದು, ನೀವೇ – ಶಿಕ್ಷಕರಿಗಾಗಿಯೇ.

ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ:

ಪಿಸಿಯು ನಿಮ್ಮ ಎಲ್ಲಾ ಕಲಿಕಾ ಸಂಪನ್ಮೂಲಗಳನ್ನು ಒಗ್ಗೂಡಿಸುತ್ತದೆ

ಪಿಸಿಯೊಂದರ ನೆರವಿನೊಂದಿಗೆ, ನಿಮ್ಮ ಬೆರಳ ತುದಿಯಲ್ಲಿಯೇ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಮಿತಿ ಎಂಬುದೇ ಇಲ್ಲ. ನಿಮಗೆ ಬೇಕಾಗಿರುವ ಮಾಹಿತಿಯನ್ನು ಸರಿಯಾದ ಸ್ಥಳದಲ್ಲಿ ಹುಡುಕಬೇಕಿರುವುದಷ್ಟೇ ನೀವು ಮಾಡಬೇಕಿರುವ ಕೆಲಸವಾಗಿರುತ್ತದೆ. ನಿಮ್ಮ ಮುಂದಿನ ತರಗತಿಯಲ್ಲಿ ಕಲಿಸಬೇಕಿರುವ ವಿಷಯದ ಬಗ್ಗೆ ಸಂಶೋಧಿಸುವುದರಿಂದ ಹಿಡಿದು ವಿಡಿಯೋಗಳನ್ನು ಬಳಸಿಕೊಂಡು ನಿಮ್ಮ ವಿದ್ಯಾರ್ಥಿಗಳಿಗಾಗಿ ಅಧ್ಯಾಯವೊಂದನ್ನು ಇಂಟರಾಕ್ಟಿವ್ ಮಾಡಲು ಪ್ರಯತ್ನಿಸುವುದರವರೆಗೆ ಪಿಸಿಯು ಈ ಎಲ್ಲವನ್ನೂ ಒಗ್ಗೂಡಿಸುತ್ತದೆ.

ಪಿಸಿಯು ಇತ್ತೀಚಿನ ಎಲ್ಲ ಕಲಿಕಾ ಸಾಧನಗಳನ್ನು ಒಗ್ಗೂಡಿಸುತ್ತದೆ

ನಿಮ್ಮ ತರಗತಿಯನ್ನು ತಂಡ್ರಾ ಪ್ರದೇಶಕ್ಕೆ ಕರೆದೊಯ್ಯಬಯಸುತ್ತೀರಾ?
ಇದಕ್ಕೆ ನಿಮ್ಮ ಉತ್ತರ ವರ್ಚ್ಯುವಲ್ ಫೀಲ್ಡ್ ಟ್ರಿಪ್ ಗಳಾಗಿರುತ್ತದೆ.

ಅಸೈನ್ಮೆಂಟ್ಗಳು, ಪರೀಕ್ಷೆಗಳು, ಪ್ರಶ್ನೆ ಪತ್ರಿಕೆಗಳು – ಪ್ರತಿಯೊಂದನ್ನೂ ನಿಮ್ಮ ತರಗತಿಯು ಒಂದು ಸ್ಥಳದಲ್ಲಿ ಇಟ್ಟುಕೊಳ್ಳುವುದನ್ನು ನೀವು ಬಯಸುತ್ತೀರಾ?
ಇದಕ್ಕೆ ಪರಿಹಾರೋಪಾಯವು ಕ್ಲೌಡ್ ಸ್ಟೋರೇಜ್ ಆಗಿರುತ್ತದೆ.

ಪ್ರಬಂಧವೊಂದಕ್ಕಾಗಿ ನಿಮ್ಮ ತರಗತಿಯಲ್ಲಿ ಸ್ಫೂರ್ತಿಯನ್ನು ತುಂಬಿಸಬಯಸುತ್ತೀರಾ?
ಅದನ್ನು ಮಾಡುವ ಮಾರ್ಗಗಳಲ್ಲೊಂದು ಟೆಡ್ ವಿಡಿಯೋಗಳಾಗಿರುತ್ತವೆ.

ಇವುಗಳು ಕೇವಲ ಮೂರು ಉದಾಹರಣೆಗಳಷ್ಟೇ, ನಿಮ್ಮ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಲು ಬೇಕಾಗುವ ಎಲ್ಲ ಸಾಮಗ್ರಿಯನ್ನೂ ಪಿಸಿಯೊಂದರೊಂದಿಗೆ ನೀವು ಹೊಂದಿರುತ್ತೀರಿ.

ಪಿಸಿಯು ವಿಶ್ವದ ಶಿಕ್ಷಕ ಸಮುದಾಯವನ್ನು ಒಗ್ಗೂಡಿಸುತ್ತದೆ

ಪಿಸಿಯೊಂದರ ಅತ್ಯುತ್ತಮ ಸಂಗತಿ ಎಂದರೆ, ವಿಶ್ವದ ಯಾರೊಂದಿಗೇ ಆಗಲಿ ಸುಲಭವಾಗಿ ಸಂಪರ್ಕಿತರಾಗಲು ನಿಮಗೆ ಅದು ನೆರವಾಗುತ್ತದೆ. ಜಗತ್ತಿನಾದ್ಯಂತದ ಬೇರೆ ಬೇರೆ ಸಮುದಾಯಗಳ ದೃಷ್ಟಿಕೋನವನ್ನು ತಿಳಿದುಕೊಳ್ಳುವುದು ಒಬ್ಬ ಶಿಕ್ಷಕರಾಗಿ ನಿಮಗೆ ಯಾವಾಗಲೂ ಪ್ರಮುಖವಾಗಿರುತ್ತದೆ ಹಾಗೂ ಮೈಕ್ರೊಸಾಫ್ಟ್ ಎಜುಕೇಟರ್ ಕಮ್ಯೂನಿಟಿಗಳಂಥ ಡಿಜಿಟಲ್ ಸಮುದಾಯಗಳೊಂದಿಗೆ ನೀವು ಮುನ್ನುಗ್ಗಬಹುದು.

ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿ ನೀಡಿ: https://www.dellaarambh.com/post/three-discussion-forums-every-teacher-should-be-part-of

ಇದೆಲ್ಲವನ್ನೂ ಸಾರಾಂಶೀಕರಿಸುತ್ತಾ, ಒಬ್ಬ ಮಹಾನ್ ಶಿಕ್ಷಕರ ಕೈಗಳಲ್ಲಿ ತಂತ್ರಜ್ಞಾನವು ಸಮಾಜವನ್ನು ಹೇಗೆ ರೂಪಾಂತರಿಸಬಲ್ಲದು ಎಂಬುದನ್ನು ಪ್ರಾಂಶುಪಾಲರಾದ ಶ್ರೀಮತಿ ಗೌರಿಯವರ ಮಾತುಗಳಲ್ಲಿಯೇ ಕೇಳಿ. ಹೆಚ್ಚು ನಾವೀನ್ಯಪೂರ್ಣ ಮಾರ್ಗಗಳಲ್ಲಿ ಕಲಿಯುವ ಹಾಗೂ ಕಲಿಸುವ ಅವರ ಶಿಕ್ಷಕರ ಆತ್ಮವಿಶ್ವಾಸವನ್ನು ಒಂದು ಆರಂಭ್ ಅಧಿವೇಶನವು ಹೇಗೆ ವರ್ಧಿಸಿತು ಎಂಬುದರ ಬಗ್ಗೆಯೂ ಸಹ ಅವರು ಇದರಲ್ಲಿ ಹೇಳುತ್ತಾರೆ.