ನೀವು ಸೇರಿಕೊಳ್ಳಬೇಕಾದ ಮೂರು ಶಾಲಾ-ನಂತರದ ಕ್ಲಬ್ಗಳು

 

ಒಂದು ನೈಜವಾದ ಶಾಲಾ ಸಲಹೆಗಾಗಿ ನಿಮ್ಮ ಹಿರಿಯ ಸಹಪಾಠಿಗಳನ್ನು ನೀವು ಕೇಳಿದಲ್ಲಿ, ಅವರ ಉತ್ತರವು, ‘ಅಧ್ಯಯನ ಮಾಡುವುದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮತ್ತು ಕನಿಷ್ಟ ಒಂದು ಪಠ್ಯೇತರ ಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸುವುದು’ ಎಂಬುದಕ್ಕೆ ಸನಿಹದಲ್ಲಿರುತ್ತದೆ. ನಿಮ್ಮ ಭಾಗವಹಿಸುವಿಕೆಯು ನಿಮ್ಮನ್ನು ಒಬ್ಬ ಸವ್ಯಸಾಚಿ ವಿದ್ಯಾರ್ಥಿಯನ್ನಾಗಿ ಮಾಡುವ ಮೂಲಕ ನಿಮ್ಮ ಕಾಲೇಜು ಪ್ರವೇಶದ ಅರ್ಜಿಗಳಿಗೆ ನೆರವಾಗುವುದಷ್ಟೇ ಅಲ್ಲದೇ, ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳಲು ಒಂದು ನಿಗದಿತ ಹೊರಗಂಡಿಯನ್ನು ನೀವು ಹೊಂದಿರುತ್ತೀರಿ - ಎರಡೂ ಕಡೆಗಳಿಂದಲೂ ಅತ್ಯುತ್ತಮವಾದದ್ದು, ಅಲ್ಲವೇ?

ನೀವು ಸೇರಿಕೊಳ್ಳಬೇಕಾದ ಅಥವಾ ನಿಮ್ಮ ಶಾಲೆಯಲ್ಲಿ ಅವುಗಳು ಈಗಾಗಲೇ ಇಲ್ಲದಿದ್ದಲ್ಲಿ, ನೀವು ಆರಂಭಿಸಬೇಕಾದ ಮೂರು ಶಾಲಾ-ನಂತರದ ಕ್ಲಬ್ಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ:

1) ಕೋಡಿಂಗ್: ಆನ್ಲೈನ್ನ ಪ್ರತಿಯೊಂದೂ ವಿಷಯದ ಅಡಿಪಾಯ

ಭಾರತದ ಹೊರಗಡೆ, 15 ವರ್ಷ ವಯಸ್ಸನ್ನು ತಲುಪುವದಕ್ಕೂ ಮೊದಲೇ ಮೂವರಲ್ಲಿ ಒಬ್ಬ ವಿದ್ಯಾರ್ಥಿಯು ಕೋಡಿಂಗ್ ವಿಷಯವನ್ನು ಕಲಿಯಲು ಆರಂಭಿಸಿದರೆ, ಭಾರತದಲ್ಲಿ, 10 ರಲ್ಲಿ ಕೇವಲ ಒಬ್ಬರು ಇದನ್ನು ಮಾಡುತ್ತಾರೆ. ಸ್ಕ್ರ್ಯಾಚ್, ಕೋಡ್ ಮತ್ತು ಕೋಡ್ಅಕ್ಯಾಡಮಿ ಗಳಂಥ ವೆಬ್ಸೈಟ್ಗಳ ನೆರವಿನೊಂದಿಗೆ ಬೇಸಿಕ್ಸ್ ಆಫ್ಟರ್-ಸ್ಕೂಲನ್ನು ಆಯ್ದುಕೊಳ್ಳುವ ಮೂಲಕ ನೀವು ಎಲ್ಲರಿಗಿಂತ ಮುಂದೆ ಇರಬಹುದು. ನಿಮ್ಮ ಸಮೂಹವು ಎಷ್ಟೇ ಚಿಕ್ಕದಿದ್ದರೂ ಪರವಾಗಿಲ್ಲ, ನಿಮಗೆ ಬೇಕಾಗುವುದು ಒಂದು PC ಹಾಗೂ ವೈಫೈ ಪ್ರವೇಶಾವಕಾಶ ಮಾತ್ರ ಮತ್ತು ನೀವು ಮುಂದುವರೆಯಲು ತಯಾರಾಗಿರುತ್ತೀರಿ!

2) ಕಲೆ: ವಿಶ್ವಕ್ಕೆ ನಿಮ್ಮ ಸೃಜನಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸುವುದು

“ಪ್ರತಿಯೊಂದು ಮಗುವೂ ಒಂದು ಕಲಾವಿದನಾಗಿರುತ್ತದೆ, ನೀವು ಬೆಳೆದು ದೊಡ್ಡವರಾದಾಗಲೂ ಸಹ ಕಲಾವಿದರಾಗಿಯೇ ಉಳಿದುಕೊಳ್ಳುವುದೇ ಸಮಸ್ಯೆ” – ಪ್ಯಾಬ್ಲೊ ಪಿಕಾಸ್ಸೋ
ತೈಲ ವರ್ಣದ ಪೇಂಟಿಂಗ್ ಅಥವಾ ಕೈಗಳಿಂದ ಚಿತ್ರ ಬಿಡಿಸುವಿಕೆಯು ನಿಮ್ಮ ಅಭಿರುಚಿಯಾಗಿಲ್ಲದಿದ್ದಲ್ಲಿ, ಆರ್ಟ್ ಡಿಜಿಟಲಿ ಅಥವಾ ಆರ್ಟ್ ಕ್ಲಬ್ನಲ್ಲಿ ನಿಮ್ಮ ಆಸಕ್ತಿಯನ್ನು ಪ್ರಯತ್ನಿಸಿ ನೋಡಿ. ನಿಮ್ಮ PC ಇನ್ನೂ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಬಲ್ಲದಾಗಿರುತ್ತದೆ - ಸ್ಕೆಚ್, ಯೂಐಡ್ರಾ ಮತ್ತು ಪಿಕ್ಸಿಲಾರ್ಟ್ ಗಳು ನೀವು ಆರಂಭಿಸಬಹುದಾದ ಕೆಲವು ಡಿಜಿಟಲ್ ಪ್ಲ್ಯಾಟ್ಫಾರ್ಮ್ಗಳಾಗಿವೆ. ಆರ್ಟ್ ಕ್ಲಬ್ನ ಅತ್ಯುತ್ತಮ ವಿಷಯವೆಂದರೆ, ನೀವು ಮನೆಗೆ ಆರಾಮದಾಯಕತೆಯ ಭಾವದೊಂದಿಗೆ ಹಾಗೂ ಅದೇ ಸಮಯದಲ್ಲಿ ಸಾಧನೆಗೈದುದರ ಭಾವವನ್ನೂ ಅನುಭವಿಸುತ್ತಾ ಹೋಗಬಹುದು.

3) ಸಂಗೀತ: ಹೆಚ್ಚು ತಾಳ್ಮೆಯಿಂದ ಇರಲು ನಿಮ್ಮ ಮಿದುಳನ್ನು ತರಬೇತುಗೊಳಿಸಿ

ಅಧ್ಯಯನಕ್ಕೆ ಸಂಬಂಧಿಸಿದ ವಿಷಯವಾಗಿರಲಿ, ಕ್ರೀಡೆ, ನಿಮ್ಮ ಸಾಮಾಜಿಕ ಜೀವನ ಅಥವಾ ನಿಮ್ಮ ಮನೆಯೊಳಗಿನ ವಿಷಯಗಳಾಗಿರಲಿ - ತಾಳ್ಮೆಯಿಂದ ಇರುವುದು ನಿಮ್ಮ ಜೀವನದ ಎಲ್ಲ ವಿಷಯಗಳಲ್ಲಿಯೂ ನಿಮಗೆ ನೆರವಾಗುವಂಥ ಒಂದು ಸ್ಥಿತಿಯಾಗಿದೆ. ಹಾಡು ಬರೆಯುವುದಿರಲಿ, ಸಾಧನವೊಂದನ್ನು ನುಡಿಸುವುದಿರಲಿ ಅಥವಾ ಹಾಡುಗಾರಿಕೆಯಿರಲಿ - ಸಂಗೀತ ಪ್ರತಿಭೆಯೊಂದರಲ್ಲಿ ಪರಿಣತಿಯನ್ನು ಸಾಧಿಸುವ ಮೂಲಕ, ನಿಮ್ಮ ಕಲೆಯಲ್ಲಿ ಪರಿಣತಿಯನ್ನು ಸಾಧಿಸಲು ನೀವು ವ್ಯಯಿಸುವ ಗಂಟೆಗಳು ನೀವು ಆರಂಭದಲ್ಲಿದ್ದುದಕ್ಕಿಂತಲೂ ಹೆಚ್ಚು ತಾಳ್ಮೆಯುಳ್ಳ ವ್ಯಕ್ತಿಯನ್ನಾಗಿ ನಿಮ್ಮನ್ನು ರೂಪಿಸುತ್ತವೆ. ಯೂಟ್ಯೂಬ್ ಟ್ಯುಟೋರಿಯಲ್ಗಳನ್ನು ವೀಕ್ಷಿಸುವ ಮೂಲಕ ನಿಮ್ಮ ಆಯ್ಕೆಯ ಸಾಧನವೊಂದನ್ನು ನುಡಿಸಲು ನೀವು ಕಲಿಯಬಹುದು ಹಾಗೂ LMMS ಬಳಸಿಕೊಂಡು ನಿಮ್ಮ ಶಾಲಾ-ನಂತರದ ಕ್ಲಬ್ಬಿನಲ್ಲಿ ಸಂಗೀತವನ್ನು ಸೃಷ್ಟಿಸಲೂಬಹುದು.

ಈ ಚಟುವಟಿಕೆಗಳಲ್ಲೊಂದು ಅದೇ ನಿಮ್ಮ ಭವಿತವ್ಯವಾಗಬಹುದೇನೋ, ಯಾರಿಗೆ ಗೊತ್ತು?

ಗಮನಿಸಿ: ಇಲ್ಲಿಯವರೆಗಿನವುಗಳಲ್ಲಿನ ಅತ್ಯುತ್ತಮವಾದ ಶೈಕ್ಷಣಿಕ ವರ್ಷಕ್ಕಾಗಿ, ಮನೆ ಮತ್ತು ಶಾಲೆ ಎರಡೂ ಕಡೆಗಳಲ್ಲಿಯೂ ನಿಮ್ಮ PC ಯ ಅತ್ಯುತ್ತಮ ಉಪಯೋಗವನ್ನು ಪಡೆದುಕೊಳ್ಳಿ!