ನಿಮ್ಮ ಮಗುವು ಅಭ್ಯಾಸ ಮಾಡಲು ಮೂರು ಪರಿಣಾಮಕಾರಿ ಮಾರ್ಗಗಳು

 

ತನ್ನದೇ ಆದ ರೀತಿಯಲ್ಲಿ ಅಭ್ಯಾಸ ಮಾಡುವುದರಲ್ಲಿ ಪ್ರತಿಯೊಂದು ಮಗುವು ಭಿನ್ನವಾಗಿರುತ್ತದೆ. ವಿಷಯವನ್ನು ಇಷ್ಟಪಡುವುದರಿಂದಾಗಿ ಕೆಲವು ಮಕ್ಕಳು ಪರಿಶ್ರಮ ವಹಿಸಿ ಅಭ್ಯಾಸ ಮಾಡಿದರೆ ಇನ್ನೂ ಕೆಲವರು ತಾವು ಮಾಡಬೇಕಾಗಿರುವುದಕ್ಕಾಗಿ ಮಾಡುತ್ತಾರೆ. ಒಬ್ಬ ಪಾಲಕರಾಗಿ ನೀವು ನಿಮ್ಮ ಮಗುವಿಗೆ ಅತ್ಯುತ್ತಮವಾಗಿರುವುದನ್ನು ಮಾತ್ರ ಬಯಸುತ್ತೀರಿ ಹಾಗೂ ಜೀವನಕ್ಕಾಗಿ ಕಲಿಕೆಯೊಂದಿಗೆ ಅವರು ಒಂದು ದೀರ್ಘಾವಧಿಯ, ಸಕಾರಾತ್ಮಕ ಬಾಂಧವ್ಯವನ್ನು ನಿರ್ಮಿಸಿಕೊಳ್ಳುವುದನ್ನು ಬಯಸುತ್ತೀರಿ.

ಪರೀಕ್ಷೆಗಳು ಶಾಶ್ವತವಾಗಿ-ಏರಿಕೆಯಾಗುತ್ತಿರುವ ಆತಂಕದ ವಿಷಯಗಳಾಗುತ್ತಿರುವಂತೆಯೇ, ಈ ಕೆಳಗಿನ ರುಜುವಾತಾದ ಮತ್ತು ಪರಿಣಾಮಕಾರಿ ಅಧ್ಯಯನ ವಿಧಾನಗಳೊಂದಿಗೆ, ಹೆಚ್ಚು ಆತ್ಮವಿಶ್ವಾಸದಿಂದಿರಲು ಹಾಗೂ ಆ ನಿರ್ಣಾಯಕ ದಿನಕ್ಕಾಗಿ ಸಜ್ಜಾಗಿರಲು ನಿಮ್ಮ ಮಗುವಿಗೆ ನೆರವಾಗಿ:

1) ಪ್ರ್ಯಾಕ್ಟೀಸ್ ಪರೀಕ್ಷೆ

ಇದು ಅಭ್ಯಾಸ ಮಾಡುವ ಅತಿ ಸಾಮಾನ್ಯ ಮಾರ್ಗವಾಗಿದ್ದು ನಿಮ್ಮ ಮಗುವಿಗೆ ಯಾವಾಗಲೂ ಅವಶ್ಯವಾಗಿ ಉಪಯೋಗಕ್ಕೆ ಬರುತ್ತದೆ. ಪ್ರಶ್ನೆಪತ್ರಿಕೆಗಳನ್ನು ಪುನರಾವರ್ತಿತವಾಗಿ ಬಿಡಿಸುವುದು ಮಾಹಿತಿಯನ್ನು ನೆನಪಿಟ್ಟುಕೊಳ್ಳುವಲ್ಲಿ ನೆರವಾಗುವಷ್ಟೇ ಪರಿಣಾಮಕಾರಿಯಾಗಿರುತ್ತದೆ ಹಾಗೂ ಪ್ರತಿ ಬಾರಿಯೂ ಹೆಚ್ಚು ಉತ್ತಮವಾಗಿ ಮಾಡಲು ನಿಮ್ಮ ಮಗುವಿಗೆ ಸ್ಫೂರ್ತಿಯನ್ನು ಒದಗಿಸುತ್ತದೆ. ಅಲ್ಲದೇ, ಮರು-ಕಲಿಕೆಗಾಗಿ ಅಧ್ಯಾಯಗಳನ್ನೂ ಸಹ ನಿಮ್ಮ ಮಗುವು ಗುರುತಿಸಬಲ್ಲದಾಗುತ್ತದೆ.

ಶಿಕ್ಷಕರು ಗೂಗಲ್ ಫಾರ್ಮ್ಗಳ ಮೂಲಕ ರಸಪ್ರಶ್ನೆಗಳನ್ನು ಒದಗಿಸಬಹುದು ಅಥವಾ ವಿದ್ಯಾರ್ಥಿಗಳು ತಮ್ಮ ಪ್ರ್ಯಾಕ್ಟೀಸ್ ಪರಿಕ್ಷೆಗಳನ್ನು ವಿಷಯ-ನಿರ್ದಿಷ್ಟ ವೆಬ್ಸೈಟ್ಗಳಿಂದ ಪಡೆದುಕೊಳ್ಳಬಹುದು.

2) ಅವಧಿಯಾದ್ಯಂತ ಹರಡಿಕೊಂಡಿರುವ ಪ್ರ್ಯಾಕ್ಟೀಸ್

ದೀರ್ಘ ಅವಧಿಯುದ್ದಕ್ಕೂ ವಿಷಯ ಸಾಮಗ್ರಿಯ ದೊಡ್ಡ ಭಾಗಗಳನ್ನು ಅಭ್ಯಸಿಸುವ ಬದಲಾಗಿ, ಅಧ್ಯಾಯಗಳನ್ನು ವಿಭಜಿಸಿ ಸಕಾಲಿಕ ವಿರಾಮಗಳನ್ನು ತೆಗೆದುಕೊಳ್ಳುವುದು ಹೆಚ್ಚು ಉಪಯುಕ್ತವಾಗಿರುತ್ತದೆ. ಈಗಷ್ಟೇ ಕಲಿತ ಹೊಸ ಮಾಹಿತಿಯನ್ನು ಹೀರಿಕೊಳ್ಳಲು ಮಿದುಳಿಗೆ ಸಮಯವನ್ನುಇದು ಒದಗಿಸುತ್ತದೆ. ಉದಾಹರಣೆಗೆ, ಭೂಗೋಳಶಾಸ್ತ್ರದ ಭಾಗವೊಂದನ್ನು ಒಂದೇ ಗುಕ್ಕಿನಲ್ಲಿ ಮುಗಿಸುವುದಕ್ಕಿಂತ, ಪ್ರತಿ ಒಂದು ಗಂಟೆಯ ನಂತರ ಮೋಜಿನಿಂದ ಕೂಡಿದ ಆದರೆ ಶಿಕ್ಷಣಾತ್ಮಕ ವಿರಾಮಗಳನ್ನು ಹೊಂದಿರುವ ದಿನವೊಂದರಲ್ಲಿ ಸಂಪೂರ್ಣಗೊಳಿಸಿದಾಗ ನಿಮ್ಮ ಮಗುವು ಹೆಚ್ಚು ಸಂತೋಷದಿಂದ ಇರುತ್ತದೆ. ವಿರಾಮಗಳು ಸ್ಫೂರ್ತಿದಾಯಕ ಟೆಡ್ ಟಾಕ್ಗಳಾಗಿರಬಹುದು ಅಥವಾ ಶೈಕ್ಷಣಿಕ ಸ್ಪೋರ್ಕಲ್ ಗೇಮ್ಗಳಾಗಿರಬಹುದು, ಅವುಗಳು ಅಧ್ಯಯನ ಸಾಮಗ್ರಿಗಿಂತ ಭಿನ್ನವಾಗಿರಬೇಕು ಅಷ್ಟೇ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಒಂದು ವೇಳಾಪಟ್ಟಿಯನ್ನು ತಯಾರಿಸಿ, ವಿರಾಮಗಳಿಗಾಗಿ ತೆಗೆದುಕೊಂಡ ಸಮಯ, ಅದು ಹದಿನೈದು-ನಿಮಿಷಗಳ ವಿರಾಮವಾಗಿದ್ದರೂ ಸಹ ಅದನ್ನು ಎಣಿಕೆ ಮಾಡುವುದು!

3) ವಿವರವಾದ ವಿಚಾರಣೆ

ವಿವರವಾದ ವಿಚಾರಣೆಯನ್ನು ಪ್ರತಿ ಸಿದ್ದಾಂತದ ಹಿಂದಿರುವ “ಏಕೆ” ಎಂಬುದನ್ನು ಕಂಡುಕೊಳ್ಳುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಲಾಗುತ್ತದೆ. ವಿಷಯದ ಆಳಕ್ಕೆ ನಿಜವಾಗಿಯೂ ಹೋಗಲು ಗೂಗಲ್ ಸ್ಕಾಲರ್ಗಳಂಥ PC-ಎನೇಬಲ್ಡ್ ಸಾಧನಗಳು ನಿಮ್ಮ ಮಗುವಿಗೆ ಆರಂಭಿಕ ಅಂಶಗಳಾಗಬಹುದು. “ಏಕೆ” ಎಂಬುದನ್ನು ಕಂಡುಕೊಳ್ಳುವ ಮೂಲಕ ತರಗತಿಯಲ್ಲಿ ಕಲಿಸಿದ ವಿಷಯ ಸಾಮಗ್ರಿಯನ್ನು ವಾಸ್ತವಿಕ ಜಗತ್ತಿನೊಂದಿಗೆ ಸಂಬಂಧಿಸಲು ನಿಮ್ಮ ಮಗು ಸಮರ್ಥವಾಗುತ್ತದೆ.

ಈ ವಿಧಾನವು ತಮ್ಮದೇ ಆದ ಗತಿಯಲ್ಲಿ ಕಲಿಯಲು ಮಕ್ಕಳಿಗೆ ನೆರವಾಗುವುದಷ್ಟೇ ಅಲ್ಲದೇ ಪರಿಕಲ್ಪನೆಗಳನ್ನು ಹೆಚ್ಚು ಉತ್ತಮವಾಗಿ ಮತ್ತು ಹೆಚ್ಚು ಕಾಲ ತಿಳಿದುಕೊಂಡಿರಲೂ ಸಹ ನೆರವಾಗುತ್ತದೆ.

ಚಿಂತಿಸಬೇಡಿ, ಒಂದು PC ಹಾಗೂ ನಿಮ್ಮ ಆಸರೆಯೊಂದಿಗೆ ನಿಮ್ಮ ಮಗುವು ಉರು ಹೊಡೆದು ಕಲಿಯುವುದಕ್ಕೆ ಪರ್ಯಾಯ ಮಾರ್ಗಗಳು ಇದ್ದೇ ಇವೆ.