ನೀವು ತಿಳಿದುಕೊಳ್ಳಬೇಕಾದ ತಾಂತ್ರಿಕತೆಯಲ್ಲಿ ಸಾಧನೆ ಮಾಡಿರುವ 3 ಭಾರತೀಯ ಯುವಕರು!

ಅದ್ಭುತವನ್ನು ಸಾಧಿಸಲು ಯಾವುದೇ ವಯೋ-ಮಿತಿ ಇಲ್ಲ. ತಂತ್ರಜ್ಞಾನ ವಿಭಾಗದಲ್ಲಿನ ಹಲವಾರು ಸಂಶೊಧನೆಗಳು ಅವರು ಯುವಕರಾಗಿರುವಾಗಲೇ ಅಥವಾ ಇನ್ನೂ ಹುಡುಗರಾಗಿರುವಾಗಲೇ ಮಾಡಿರುವುದನ್ನು ನೀವು ತಿಳಿದುಕೊಂಡಿರಬಹುದು! ಈ ಯುವ ಸಾಧಕರು ತಮ್ಮ ಸಂಶೋಧನೆಗಳಿಂದ ಮತ್ತು ಆವಿಷ್ಕಾರಗಳಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಅವರಲ್ಲಿ ಕೆಲವರ ಬಗ್ಗೆ ತಿಳಿದುಕೊಳ್ಳುವ ಸಮಯ ಇದಾಗಿದೆ!

1. ತೆನಿತ್ ಆದಿತ್ಯಾ – ಅದ್ವಿತೀಯ ಸಂಶೋಧಕ

ಹೊಂದಾಣಿಕೆಯಾಗಬಲ್ಲ ವಿದ್ಯುತ್ ಎಕ್ಸ್ ಟೆನ್ಶನ್ ಬೋರ್ಡ್ ಮತ್ತು ಬಾಳೆ ಎಲೆಯಿಂದ ತಡೆಯುವ ತಂತ್ರಜ್ಞಾನದ ಬಗ್ಗೆ ಎಂದಾದರೂ ಕೇಳಿರುವಿರಾ? ಟೆನಿತ್ ಈ ಸಂಶೋಧನೆಗಳ ಹಿಂದಿರುವ ಬಾಲಕನಾಗಿದ್ದಾನೆ! ಈತ ಈಗಾಗಲೇ 17 ಸಂಸೋಧನೆಗಳನ್ನು ತನ್ನ ಹೆಸರಿನಲ್ಲಿ ಮಾಡಿದ್ದಾನೆ. ಆತ 2013ರಲ್ಲಿ ರಾಷ್ಟ್ರಪತಿ ಭವನದಲ್ಲಿ ಮೆಂಟರ್ ಕೂಡ ಆಗಿದ್ದಾನೆ.

2. ಅಂಗದ್ ದರ್ಯಾನಿ – ಮುಂದಿನ ಎಲೋನ್ ಮಸ್ಕ್!

ಮುಂಬಯಿಯ ಅಂಗದ್ ದರ್ಯಾನಿ ಯುವಕನಾಗಿದ್ದು ಈತ  ಅಂಧರಿಗಾಗಿ ವರ್ಚುವಲ್ ಇ-ರೀಡರ್‌, ಸೌರ ಶಕ್ತಿಯಲ್ಲಿ ನಡೆಯುವ ಬೋಟ್, ಗ್ರಾಡಿನೋ ಎನ್ನುವ ಆಟೊಮೇಟೆಡ್ ಗಾರ್ಡನಿಂಗ್ ವ್ಯವಸ್ಥೆ ಮತ್ತು ಭಾರತದ ಅತ್ಯಂತ ಅಗ್ಗದ 3ಡಿ ಪ್ರಿಂಟರ್ ಆಗಿರುವ ಶಾರ್ಕ್‌ಬೋಟ್ ಸಂಶೋಧಿಸಲು ಓಪನ್-ಸೋರ್ಸ್ ಸಾಫ್ಟ್ ವೇರ್ ಸಿದ್ಧಪಡಿಸಿರುತ್ತಾನೆ. ಇವನು ಶಾಲೆಯನ್ನು ಕೂಡ ಬಿಡುತ್ತಾನೆ ಮತ್ತು ಮಕ್ಕಳಿಗಾಗಿ ಡಿಐವೈ ಕಿಟ್‌ಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವಂತಹ ತನ್ನದೇ ಆದ ಕಿಟ್ ಕಂಪನಿಯನ್ನು ಪ್ರಾರಂಭಿಸಿದನು.

3. ಆನಂದ್ ಗಂಗಾಧರನ್ ಮತ್ತು ಮೋಹಕ್ ಭಲ್ಲಾ – ಜೀನಿಯಸ್ ಜೋಡಿ

ಆನಂದ್ ಮತ್ತು ಮೋಹಕ್ ಇಬ್ಬರೂ ದೆಹಲಿಯ ಸ್ನೇಹಿತರಾಗಿದ್ದು, ಇವರು ಶೂ ಮೊಬೈಲ್ ಸಾಧನಗಳಿಗೆ ಪೋರ್ಟಬಲ್ ಚಾರ್ಜರ್ ಆಗಿಯೂ ಕೆಲಸ ಮಾಡುವಂತೆ ಸಂಶೋಧನೆಯನ್ನು ಮಾಡಿದ್ದಾರೆ. ಅವರು ಇದಕ್ಕೆ “ವಾಕಿ ಮೊಬಿ ಚರ್ಜರ್” ಎಂದು ಕರೆದಿದ್ದು, ಹೆಚ್ಚಿನ ಚಾರ್ಜರ್‌ಗಳು ಉತ್ಪಾದಿಸುವ 5 ವೋಲ್ಟ್ ಗಳಿಗೆ ಬದಲಾಗಿ ಇದು 6 ವೋಲ್ಟ್ ವಿದ್ಯುತ್ತನ್ನು ಉತ್ಪಾದನೆ ಮಾಡುತ್ತದೆ.

ಈ ಯುವ ಸಾಧಕರು ಹೊಸದನ್ನು ರಚಿಸಲು ಮತ್ತು ಆವಿಷ್ಕಾರ ಮಾಡಲು ತಂತ್ರಜ್ಞಾನವನ್ನು ಸರಿಯಾಗಿ ಬಳಕೆ ಮಾಡಿದ್ದಾರೆ. ತಂತ್ರಜ್ಞಾನದಿಂದ ನೀವು ಏನನ್ನು ಬೇಕಾದರೂ, ಯಾವ ವಯಸ್ಸಿನಲ್ಲಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರು ಜೀವಂತ ಸಾಕ್ಷಿಗಳಾಗಿದ್ದಾರೆ. ಇವೆಲ್ಲವುಗಳಿಂದ ಬಹಳಷ್ಟು ಪ್ರಮಾಣದಲ್ಲಿ ಪ್ರಭಾವಿತರಾಗುವ ಮೂಲಕ ಈ ಮೋಜಿನ ತಂತ್ರಜ್ಞಾನದ ಹವ್ಯಾಸಗಳನ್ನು ಪ್ರಯತ್ನಿಸುವ ಮೂಲಕ ತಂತ್ರಜ್ಞಾನದೊಂದಿಗೆ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡಲು ಪ್ರಾರಂಭಿಸಬಹುದು.

ಯಾವುದೇ ವಯಸ್ಸು ಸಣ್ಣದಲ್ಲ ಮತ್ತು ಯಾವುದೇ ಕನಸು ದೊಡ್ಡದಲ್ಲ. ಈಗಲೇ ಪ್ರಾರಂಭಿಸಿ!