ನೀವು ಫಾಲೋ ಮಾಡಬೇಕಿರುವ ಮೂವರು ಯೂಟ್ಯೂಬರ್ ಮಕ್ಕಳು

 

“ಯೂಟ್ಯೂಬ್ ನಲ್ಲಿರುವ ಸಂತೋಷದ ಸಂಗತಿ ಎಂದರೆ ನಿಮ್ಮ ಉತ್ಕಟೇಚ್ಛೆಯ ಯಾವುದರ ಬಗ್ಗೆಯೇ ಆಗಲಿ ಕಂಟೆಂಟ್ ಅನ್ನು ನೀವು ರಚಿಸಬಹುದು.”

- ಅನಾಮಿಕ

 

ನಿಮಗೆ ಯೂಟ್ಯೂಬ್ ಎಂದರೆ ಇಷ್ಟ, ಅಲ್ಲವೇ? ಸಂಗೀತವನ್ನು ಆಲಿಸಲು, ಮೋಜಿನ ಕೆಲವು ಪ್ರ್ಯಾಂಕ್ ವಿಡಿಯೋಗಳನ್ನು ವೀಕ್ಷಿಸಲು ಹಾಗೂ ಅಭ್ಯಾಸ ಮಾಡಿ, ಅಸೈನ್ ಮೆಂಟ್ ಗಳನ್ನು ಪೂರ್ಣಗೊಳಿಸಲೂ ಸಹ, ಯೂಟ್ಯೂಬ್ ನೀವು ಭೇಟಿ ನೀಡುವ ಸ್ಥಳವಾಗಿರುತ್ತದೆ.

 

ಮನೆಯಲ್ಲಿರುವ ಪಿಸಿಯೊಂದರ ಬಲದೊಂದಿಗೆ ಲಕ್ಷಾಂತರ ಜನರನ್ನು ಸ್ಫೂರ್ತಿಗೊಳಿಸುತ್ತಾ, ಕ್ಯಾಮರಾದ ಹಿಂದಿರುವ ವ್ಯಕ್ತಿ ಈ ಎಲ್ಲ ಪ್ರಯತ್ನವನ್ನೂ ಮಾಡುತ್ತಾನೆ. ಕ್ರಿಯೆಯಾಗಿ ಪರಿವರ್ತಿಸಿದ ಒಂದು ಸರಳವಾದ ವಿಚಾರದೊಂದಿಗೆ ಓರ್ವ ಯೂಟ್ಯೂಬರ್ ತಮ್ಮ ಗುರುತನ್ನು ಉಳಿಸುತ್ತಾರೆ, ಅವುಗಳಲ್ಲಿ ಕೆಲವು ಸ್ಫೂರ್ತಿದಾಯಕವಾದವುಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ:

 

1. ಲರ್ನ್ ವಿಥ್ ಅಮರ್

ಭಾರತೀಯ ಮೂಲದ ಅಮರ್ ಥೊಗಿತಿ, ಓರ್ವ ಅತ್ಯಂತ ಚಿಕ್ಕ ವಯಸ್ಸಿನ ಹಾಗೂ ಅತ್ಯಂತ ಸುಪ್ರಸಿದ್ಧ ಯೂಟ್ಯೂಬರ್ ಗಳಲ್ಲಿ ಒಬ್ಬನಾಗಿದ್ದು, ಅಭ್ಯಾಸ ಮಾಡುತ್ತಿರುವುದಕ್ಕಿಂತ ಒಂದು ಸಂವಾದವನ್ನು ನಡೆಸುತ್ತಿರುವ ಭಾವನೆ ನಿಮ್ಮಲ್ಲಿ ಮೂಡುವಂತೆ ಮೋಜುಭರಿತ ಹಾಗೂ ಸಂಬಂಧಿಸಬಹುದಾದ ರೀತಿಯಲ್ಲಿ ಜ್ಯಾಗ್ರಫಿ ಲೆಸ್ಸನ್ ಗಳನ್ನು ನೀಡುತ್ತಾನೆ. ಅವನು ಕೇವಲ 10 ವರ್ಷದವನಾಗಿದ್ದಾಗ ತನ್ನ ಯೂಟ್ಯೂಬ್ ಚಾನಲ್ “ಲರ್ನ್ ವಿಥ್ ಅಮರ್” ಅನ್ನು 2016 ರಲ್ಲಿ ಪ್ರಾರಂಭಿಸಿದ್ದನು!

ಪ್ರಸ್ತುತ ಯೂಟ್ಯೂಬ್ ಸ್ಟ್ರೆಂಗ್ತ್ – 281,021

 

2. ಕೈರಾಸ್ಕೋಪ್ ಟಾಯ್ ರಿವ್ಯೂಸ್

ಕೈರಾಸ್ಕೋಪ್ ಟಾಯ್ ರಿವ್ಯೂಸ್ ಎಂಬುದು, 2016 ರಲ್ಲಿ ಕೈರಾ ಎಂಬ ಹೆಸರಿನ ಓರ್ವ ಏಳು ವರ್ಷದ ಬಾಲಕಿಯಿಂದ ಆರಂಭಿಸಲಾದ ಒಂದು ಜನಪ್ರಿಯವಾದ ಯೂಟ್ಯೂಬ್ ಚಾನಲ್ ಆಗಿದೆ. ಅವಳ ಚಾನಲ್ ಚಿಕ್ಕ ಕತೆಗಳು, ಸ್ಫೂರ್ತಿದಾಯಕ ತುಣುಕುಗಳು ಹಾಗೂ ಕೆಲವು ಮೋಜುಭರಿತ ಕೌಟುಂಬಿಕ ಕ್ಷಣಗಳೊಂದಿಗೆ ಆಟಿಕೆಗಳ ಪುನರಾವಲೋಕನವನ್ನು, ಮೂಲಭೂತವಾಗಿ ನಿಮಗಾಗಿ ಒಂದು “ಎಜುಟೇನ್ ಮೆಂಟ್” ಪ್ಯಾಕೇಜ್ ಅನ್ನು ಒಳಗೊಂಡಿರುತ್ತದೆ.

ಪ್ರಸ್ತುತ ಯೂಟ್ಯೂಬ್ ಸ್ಟ್ರೆಂಗ್ತ್ – 11,622

 

3. ಟೆಕ್ ರಿವ್ಯೂವರ್ ರೋನಿತ್ ಸಿಂಗ್

ರೋನಿತ್ ಸಿಂಗ್ ನ ವಯಸ್ಸು ಕೇವಲ 14 ವರ್ಷಗಳಾಗಿದ್ದು, ತನ್ನ ಚಾನಲ್ ಅನ್ನು 2015 ರಲ್ಲಿ ಪ್ರಾರಂಭಿಸಿದ, ಭಾರತೀಯ ಮೂಲದ ಅತ್ಯಂತ ಕಿರಿಯ ವಯಸ್ಸಿನ ಟೆಕ್ ಯೂಟ್ಯೂಬರ್ ಗಳಲ್ಲಿ ಓರ್ವನಾಗಿದ್ದಾನೆ. ತಾನು ಹೊಂದಿರುವ ಗ್ಯಾಜೆಟ್ ಗಳನ್ನು ಅವನು ಅನ್ ಬಾಕ್ಸ್ ಮಾಡಿ, ಅವುಗಳನ್ನು ರಿವ್ಯೂ ಮಾಡುತ್ತಾನೆ ಹಾಗೂ ಪ್ರತಿಯೊಬ್ಬರಿಗೂ ಎಲ್ಲ ಟೆಕ್ ವಿಷಯಗಳ ಮೇಲೆ ತನ್ನ ವಿಶಿಷ್ಟ ದೃಷ್ಟಿಕೋನವನ್ನು ಒದಗಿಸುತ್ತಾ, ಆ ಸಾಧನಗಳೊಂದಿಗೆ ಹ್ಯಾಂಡ್ಸ್-ಆನ್ ರಿವ್ಯೂ ವಿಡಿಯೋಗಳನ್ನು ಮಾಡುತ್ತಾನೆ, 
ಪ್ರಸ್ತುತ ಯೂಟ್ಯೂಬ್ ಸ್ಟ್ರೆಂಗ್ತ್ – 2637

ನಿಮ್ಮಂತೆಯೇ ಇರುವ ಈ ಮಕ್ಕಳ ಬಗೆಗಿನ ಕತೆಗಳನ್ನು ನೀವು ಈಗ ಓದಿರುವುದರಿಂದ, ಅದರಂತೆಯೇ ನೀವೂ ಸಹ ಏನನ್ನಾದರೂ ಮಾಡುವ ಉತ್ಸಾಹ ಹಾಗೂ ಸ್ಫೂರ್ತಿಯನ್ನು ನೀವು ಪಡೆದುಕೊಂಡಿದ್ದೀರಿ, ಅಲ್ಲವೇ?

ಗಮನಿಸಿ: ಯೂಟ್ಯೂಬ್ ಎಂಬುದು ಇಂಟರ್ನೆಟ್ ಎಂಬ ಹಿಮಗಡ್ಡೆಯ ತುದಿ ಮಾತ್ರ. ಪಿಸಿ ಎನ್ನುವುದು ಎಲ್ಲವನ್ನೂ ಒಂದರಲ್ಲಿಯೇ ಒಳಗೊಂಡ ನಿಮ್ಮ ನೆಚ್ಚಿನ ಆಟಿಕೆಯಾಗಬಹುದು, ನಿಮ್ಮ ಲೈಬ್ರರಿಯಾಗಬಹುದು ಮತ್ತು ಒನ್-ಕ್ಲಿಕ್ ಎಂಟರಟೇನರ್ ಆಗಬಹುದು, ಮನೆಯಲ್ಲಿ ಪಿಸಿಯೊಂದನ್ನು ಹೊಂದುವುದು, ಪ್ರೊಡಕ್ಟಿವ್ ಆಗಿರುವ ಹಾಗೂ ನಿಮ್ಮ ಗ್ರಂಥಾಲಯದಾಚೆಗಿನ ಜ್ಞಾನವನ್ನು ಪಡೆದುಕೊಳ್ಳುವ ಅವಕಾಶವನ್ನು ನಿಮಗೆ ನೀಡುತ್ತದೆ.