ಮಕ್ಕಳು ಇಷ್ಟಪಡುವ ಮೂರು Makerspace ಯೋಜನೆಗಳು

 

Makerspace ಎನ್ನುವುದು ವಿದ್ಯಾರ್ಥಿಗಳು ವಿವಿಧ ಬಗೆಯ ಟೂಲ್‌ಗಳನ್ನು ಮತ್ತು ಮೆಟಿರಿಯಲ್‌ಗಳನ್ನು ರಚಿಸಲು, ಕಂಡುಹಿಡಿಯಲು, ಪರಿಶೋಧಿಸಲು, ವ್ಯಕ್ತಪಡಿಸಲು ಮತ್ತು ಸಂಶೋಧಿಸಲು ಅವಕಾಶ ಮಾಡಿಕೊಡುವ ಸ್ಥಳವಾಗಿದೆ. ಈ ಸ್ಥಳವು ಮಕ್ಕಳು ಶಾಲೆಯಲ್ಲಿ ಕಲಿತಿರುವಂತಹ ಥಿಯರಿಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ ಮಾತ್ರವಲ್ಲದೇ ಹೊಸ ವಿಷಯಗಳನ್ನು ಕೂಡ ಕಲಿಯುವಂತೆ ಮಾಡುತ್ತದೆ. ಒಬ್ಬ ಮಗುವಾಗಿ Makerspaceನಲ್ಲಿ ಸಿದ್ಧವಾಗಿರುವ ವಿಷಯವನ್ನು ಅನುಸರಿಸಬೇಡಿ ನಿಮಗೆ ಇದು ರಚನಾತ್ಮಕವಾದ ಕಲಿಕೆಯ ಅವಕಾಶವನ್ನು ಒದಗಿಸುತ್ತದೆ. [1]

ಈ ಮೂರು Makerspace ಯೋಜನೆಗಳು ನಿಮಗೆ ನಿಮ್ಮ ಮಗು Makerspaceಗೆ ಸೇರಿಸಿದಾಗ ಅದು ಏನನ್ನು ಕಲಿಯಲಿದೆ ಎನ್ನುವ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. ಈ ಯೋಜನೆಗಳು ಶೈಕ್ಷಣಿಕವಾಗಿರುವುದೇ ಅಲ್ಲದೇ ಇವು ಅತ್ಯಂತ ಮೋಜಿನಿಂದ ಕೂಡಿದವುಗಳಾಗಿರುತ್ತವೆ.

1. 4-ಚಕ್ರದ ಬಲೂನ್ ಕಾರು

ಈ ಯೋಜನೆಯು ಮಕ್ಕಳಿಗೆ ಮನರಂಜನಾತ್ಮಕವಾಗಿಯೂ ಮತ್ತು ಶೈಕ್ಷಣಿಕವಾಗಿಯೂ ಎರಡೂ ರೀತಿಯಲ್ಲಿ ಇರುತ್ತದೆ. ಭೌತಶಾಸ್ತ್ರದ ಪ್ರಮುಖ ಅಂಶಗಳಾದ ಚಲನೆ, ಬಲ, ವೇಗೋತ್ಕರ್ಷ ಮತ್ತು ವೇಗವನ್ನು ಪಠ್ಯಪುಸ್ತಕಗಳಲ್ಲಿ ಮಾತ್ರವೇ ಓದಿರುತ್ತಾರೆ ಇವುಗಳನ್ನು ಇಲ್ಲಿ ಬಲೂನ್‌ಗಳು, ಸ್ಟ್ರಾಗಳು, ಬಾಟಲಿಗಳು ಮತ್ತು ಟೇಪ್‌ಗಳಂತಹ ಸಾಮಾನ್ಯ ವಸ್ತುಗಳ ಮೂಲಕ ಜೀವನದ ಹತ್ತಿರಕ್ಕೆ ತರಲಾಗಿದೆ. ಇದಷ್ಟೇ ಅಲ್ಲ ಮಕ್ಕಳು ಈ ಯೋಜನೆಯನ್ನು ಮನೆಯಲ್ಲಿ ಇರುವ ಹಳೆಯ ಸಾಮಾನುಗಳನ್ನು ಬಳಸಿ ಮಾಡಬಹುದಾಗಿದೆ, ಇದು ಅವರಿಗೆ ತಮ್ಮ ನಿರ್ಧಾರಗಳ ಬಗ್ಗೆ ಪರಿಸರಕ್ಕೆ ಸಂಬಂಧಿಸಿದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

2. ಸಂಘಟನಕಾರನಾಗಿ ಲೆಗೋ (Lego)

ಲೆಗೋ(Lego) ಒಂದು ಮೋಜುಭರಿತ ಮತ್ತು ಆಕರ್ಷಣೀಯವಾದ Makerspace ವಿಷಯವಸ್ತುವಾಗಿದೆ ಇದನ್ನು ಸಾಕಷ್ಟು ಸಂಖ್ಯೆಯ ವಿಚಾರಗಳ ನಿರ್ಮಾಣದಲ್ಲಿ ಉಪಯೋಗಿಸಿಕೊಳ್ಳಬಹುದಾಗಿದೆ. ನಿಮ್ಮ ಮಗುವು ಸ್ಟೇಶನರಿ, ನಾಣ್ಯಗಳಿಗೆ, ಕಲ್ಲುಗಳಿಗೆ, ಚಾರ್ಜಿಂಗ್ ಕೇಬಲ್‌ಗಳಿಗೆ ಇತ್ಯಾದಿಗಳಿಗೆ ಆರ್ಗನೈಸರ್ ಆಗಿ ನಿರ್ಮಾಣ ಮಾಡಬಹುದಾಗಿದೆ. ವಿಭಿನ್ನ ಗಾತ್ರಗಳ ಸಮತಲ ತುಂಡುಗಳನ್ನು ಸಂಯೋಜಿಸಿ ಡ್ರಾವರ್‌ಗಳನ್ನು ರಚಿಸುವುದು ಮತ್ತು ಹಾಲೋ ಸ್ಪೇಸ್‌ಗಳನ್ನು ಸ್ಟೋರ್ ಮಾಡಲು ಬಳಸಲಾಗುತ್ತದೆ. ಇದು ಮಕ್ಕಳಿಗೆ ಆಕಾರಗಳು, ಆಯಾಮಗಳಂತಹ ರೇಖಾಗಣಿತದ ಪರಿಕಲ್ಪನೆಗಳ ಮೂಲ ತತ್ವಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ನಿಜ ಜೀವನದಲ್ಲಿ ಅವುಗಳನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ.

3. ವಿದ್ಯುತ್ ವಾಹಕ ಶುಭಾಷಯ ಪತ್ರಗಳು

ಪ್ರಾಯೋಗಿಕ ಅನುಭವವು ಶಾಲೆಯಲ್ಲಿ ಕಲಿಸಲಾದ ಭೌತಶಾಸ್ತ್ರದ ಪಾಠಗಳನ್ನು ಕಲಿಯಲು ಉತ್ತಮ ಸಂಯೋಜನೆ ಮತ್ತು ಸಂಬಂಧವನ್ನು ಕಲ್ಪಿಸುತ್ತದೆ. ವಿದ್ಯುತ್ ವಾಹಕ ಶುಭಾಷಯ ಪತ್ರವನ್ನು ರಚಿಸುವ ಮೂಲಕ ವಿದ್ಯಾರ್ಥಿಗಳು ವಿದ್ಯುತ್ ವಾಹಕತ್ವ, ವಿದ್ಯುತ್ ಘಟಕಗಳು ಮತ್ತು ವಿದ್ಯುತ್ ವೋಲ್ಟೇಜ್‌ನಂತಹ ಕಲಿಕೆ ಮತ್ತು ದೃಷ್ಯಾತ್ಮಕ ಥಿಯರಿಗಳನ್ನು ಪೋಷಕರ ಅಥವಾ ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಕಲಿಯಲು ಅವಕಾಶ ಮಾಡಿಕೊಡುತ್ತದೆ. ಈ ಯೋಜನೆಯು ಮಗುವಿಗೆ ವಿದ್ಯುತ್ ಪೂರೈಕೆಯನ್ನು ಅರ್ಥಮಾಡಿಸಲು ಸಹಾಯ ಮಾಡುತ್ತದೆ ಮತ್ತು ಇದರ ಜೊತೆಯಲ್ಲಿ ಸಾಮಾಜಿಕ ಸಮಾರಂಭಗಳಿಗೆ ಸಂಶೋಧನಾತ್ಮಕ ಅವಕಾಶವನ್ನು ಅವರಿಗೆ ಒದಗಿಸುತ್ತದೆ.

ಪ್ರತಿಯೊಂದು Makerspace ಯೋಜನೆಗಳು ನಿಮ್ಮ ಮಗುವಿಗೆ ಏನನ್ನಾದರೂ ಹೊಸತನವನ್ನು ಕಲಿಯಲು ಅವಕಾಶ ಮಾಡಿಕೊಡುತ್ತವೆ. ಇದು ಒಂದರ್ಥದಲ್ಲಿ ಸಾಧನೆಯೇ ಆಗಿರುತ್ತದೆ ಇದು ಯೋಜನೆಯನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತದೆ. ಮುಂದುವರೆದು ಹೇಳುವುದಾದರೆ, ಒಮ್ದು ಮಗುವು ಸಾಕಷ್ಟು ಆತ್ಮವಿಶ್ವಾಸವನ್ನು ಗಳಿಸಿಕೊಡುತ್ತದೆ ಮತ್ತು ಕಲಿಕೆಯನ್ನು ಮುಂದುವರೆಸಲು ಮುಂದಿನ ಯೋಜನೆಗೆ ಪ್ರೇರೇಪಣೆಯನ್ನು ಒದಗಿಸುತ್ತದೆ. Makerspacesಗಳು ಭವಿಷ್ಯದ ಗ್ರಂಥಾಲಯಗಳಾಗಿವೆ ಮತ್ತು ನಿಮ್ಮ ಮಗುವಿಗೆ ಕ್ರಿಯಾತ್ಮಕ ಮನೋಭಾವನೆಯ ಬೆಳವಣಿಗೆಯನ್ನು ಸೂಕ್ತವಾದ ಕೌಶಲ್ಯಗಳ ಮೂಲಕ ಒದಗಿಸುತ್ತದೆ ಇದರಿಂದ ಭವಿಷ್ಯದ ವಿಶ್ವವನ್ನು ತಾಂತ್ರಿಕತೆಯಲ್ಲಿ ಕೊಂಡೊಯ್ಯಲು ಯಶಸ್ಸನ್ನು ನಿಮ್ಮ ಮಗುವಿಗೆ ಒದಗಿಸಿ ಕೊಡುತ್ತದೆ.

ನಿಮ್ಮ ಮಗುವು Makerspace ಯೋಜನೆಯನ್ನು ಪ್ರಯತ್ನಿಸಿದೆಯೇ? #DellAarambh ಉಪಯೋಗಿಸಿ ನಮಗೆ Twitterನಲ್ಲಿ ಅವರ ರಚನಾತ್ಮಕ ವಿಚಾರವನ್ನು ಹಂಚಿಕೊಳ್ಳಿ