ನಿಮ್ಮ ಪರ್ಸನಲ್ ಕಂಪ್ಯೂಟರ್ ಅನ್ನು ಕ್ಲೀನ್ ಮಾಡುವಾಗ ನೀವು ಮಾಡಬಾರದ ಮೂರು ತಪ್ಪುಗಳು

ಇದರ ಬಗ್ಗೆ ಯೋಚಿಸಿ. ಪರ್ಸನಲ್ ಕಂಪ್ಯೂಟರ್ ಒಂದನ್ನು ನೀವು ಮನೆಯಲ್ಲಿ ಪ್ರತಿದಿನ ಅಥವಾ ಶಾಲೆಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬಳಸುತ್ತೀರಿ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಪರ್ಸನಲ್ ಕಂಪ್ಯೂಟರ್ ಒಂದನ್ನು ಹೊಂದಿದ್ದು, ಶಾಲೆಯಲ್ಲಿಯೂ ಸಹ ಒಂದು ಪರ್ಸನಲ್ ಕಂಪ್ಯೂಟರ್ ಬಳಸಿ ಅಭ್ಯಾಸ ಮಾಡುತ್ತೀರಿ. ವರ್ಷಾನುಗಟ್ಟಲೇ ಸಮಯಾವಧಿಯಿಂದ ಜಮಾವಣೆಯಾಗಿರುವ ಎಲ್ಲ ಅನವಶ್ಯಕ ಕೊಳೆ ಮತ್ತು ಧೂಳಿನ ಬಗ್ಗೆ ಈಗ ಯೋಚಿಸಿ... 

ಅದನ್ನು ಕ್ಲೀನ್ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ?

ನಿಮ್ಮ ಪರ್ಸನಲ್ ಕಂಪ್ಯೂಟರ್ ಅನ್ನು ಕ್ಲೀನ್ ಮಾಡುವಾಗ, ನೀವು ಮಾಡಬಾರದ ಮೂರು ತಪ್ಪುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ:

 

1. ಸಾಕಷ್ಟು ಪ್ರಮಾಣದಲ್ಲಿ ಡಿಲೀಟ್ ಮಾಡದಿರುವುದು

ನಿಮ್ಮ ಇ-ಮೇಲ್ ಗಳೊಂದಿಗೆ ಪ್ರಾರಂಭಿಸಿ. ಅನ್ ಸಬ್ ಸ್ಕ್ರೈಬ್ ಬಟನ್ ಅನ್ನು ಧಾರಾಳವಾಗಿ ಒತ್ತಿ, ಜಂಕ್ ಅನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಿ. ನಂತರ, ನಿಮ್ಮ ಬ್ರೌಜರ್ ನಲ್ಲಿ ಈಗಾಗಲೇ ಸೇವ್ ಮಾಡಿರುವ ಬುಕ್ ಮಾರ್ಕ್ ಗಳನ್ನು ವೀಕ್ಷಿಸಿ, ನಿಮಗೆ ನಿಜವಾಗಿಯೂ ಬೇಕಾಗುವಂಥವುಗಳನ್ನು ಮಾತ್ರ ಉಳಿಸಿಕೊಳ್ಳಿ. ಕೊನೆಯದಾಗಿ, ಪ್ರತಿಯೊಂದು ಪ್ರತ್ಯೇಕ ಫೋಲ್ಡರ್ ಅನ್ನೂ ಪರಿಶೀಲಿಸಿ, ಯಾವುದೆಲ್ಲವೂ ನಕಲು ಪ್ರತಿ ಇದೆಯೋ ಅದನ್ನು, ಇನ್ನು ಮುಂದೆ ಸಂಬಂಧಪಡದಿರುವುದನ್ನು ಅಥವಾ ಈಗ ನಿಮಗೆ ಅನುಪಯುಕ್ತವಾಗಿರುವುದೆಲ್ಲವನ್ನೂ ಅಳಿಸಿ ಹಾಕಿ. ಇದೆಲ್ಲವನ್ನೂ ಮಾಡಿದ ನಂತರ ರಿಸೈಕಲ್ ಬಿನ್ ಅನ್ನೂ ಸಹ ಖಾಲಿ ಮಾಡುವುದನ್ನು ಮರೆಯಬೇಡಿ.

 

2. ಸಾಕಷ್ಟು ಪ್ರಮಾಣದಲ್ಲಿ ವ್ಯವಸ್ಥಿತವಾಗಿ ಇರಿಸದಿರುವುದು

ನಾವೆಲ್ಲರೂ - ಬೇರೆ ಬೇರೆ ಮಟ್ಟಿಗೆ ವ್ಯವಸ್ಥಿತವಾಗಿ ಇರುತ್ತೇವೆ. ನಮ್ಮಲ್ಲಿ ಕೆಲವರು ಎಲ್ಲ ಡೇಟಾ ಅನ್ನು ಡೌನ್ ಲೋಡ್ಸ್ ಫೋಲ್ಡರ್ ನಲ್ಲಿಯೇ ಇರಿಸಿಕೊಂಡರೆ, ಮತ್ತೆ ಕೆಲವರು ವಿಷಯ, ಅಸೈನ್ ಮೆಂಟ್ ಗಳು ಮುಂತಾದವುಗಳಿಗೆ ಅನುಗುಣವಾಗಿ ಫೋಲ್ಡರ್ ಗಳನ್ನು ಹೆಸರಿಸುತ್ತೇವೆ. ಇನ್ನೂ ಕೆಲವರು ವ್ಯವಸ್ಥಿತವಾಗಿ ಇರುವಿಕೆಯನ್ನು ಮಾಡಲು ಆರಂಭಿಸಿ, ದೈನಂದಿನ ಕಾರ್ಯಗಳಲ್ಲಿ ಸಿಲುಕಿಕೊಂಡು ಅದನ್ನು ಅರ್ಧಕ್ಕೇ ಬಿಟ್ಟು ಬಿಡುತ್ತೇವೆ. ಫೈಲ್ ಗಳು ಡುಪ್ಲಿಕೇಟ್ ಆಗದಂತೆ ಹಾಗೂ ನಿಮಗೆ ಬೇಕಾಗುವುದನ್ನು ವೇಗವಾಗಿ ಪಡೆದುಕೊಳ್ಳಲು ಸಾಧ್ಯವಾಗುವಂತೆ ಸರಳವಾದ, ಆದಾಗ್ಯೂ ಪರಿಣಾಮಕಾರಿಯಾದ ಪರಿಹಾರೋಪಾಯವನ್ನು ಸೃಷ್ಟಿಸುವುದು ಇದಕ್ಕೆ ಇರುವ ಪರಿಹಾರೋಪಾಯವಾಗಿರುತ್ತದೆ. ನಿಮ್ಮ ಡೌನ್ ಲೋಡ್ ಗಳನ್ನು “ಆಸ್ಕ್ ವ್ಹೇರ್ ಟು ಸೇವ್ ಈಚ್ ಫೈಲ್ ಬಿಫೋರ್ ಡೌನ್ ಲೋಡಿಂಗ್ (ಡೌನ್ ಲೋಡ್ ಮಾಡುವ ಮೊದಲು ಪ್ರತಿಯೊಂದು ಫೈಲ್ ಅನ್ನು ಎಲ್ಲಿ ಸೇವ್ ಮಾಡುವುದು ಎಂದು ಕೇಳಿ)” ಇದಕ್ಕೆ ಸೆಟ್ ಮಾಡುವುದು ಇದಕ್ಕೆ ಸಂಬಂಧಿಸಿದ ಅತ್ಯುತ್ತಮ ಸಲಹೆಯಾಗಿರುತ್ತದೆ.

 

 

3. ಡಿಫ್ರ್ಯಾಗ್ ಮಾಡದಿರುವುದು

ನಿಮ್ಮ ಹಾರ್ಡ್ ಡ್ರೈವ್ ನಲ್ಲಿ ಸ್ಟೋರ್ ಮಾಡಲಾದ ಫೈಲ್ ಗಳು ಕಾಲಾಂತರದಲ್ಲಿ ಫ್ರ್ಯಾಗ್ಮೆಂಟ್ ಗಳಾಗಿ ಸ್ಪ್ಲಿಟ್ ಆಗಿ, ಸ್ಪೇಸ್ ಅನ್ನು ಆವರಿಸಿಕೊಳ್ಳುತ್ತವೆ ಹಾಗೂ ನಿಮ್ಮ ಪರ್ಸನಲ್ ಕಂಪ್ಯೂಟರ್ ಅನ್ನು ನಿಧಾನಗೊಳಿಸುತ್ತವೆ. ವಿಂಡೋಸ್ ಡಿಸ್ಕ್ ಫ್ರ್ಯಾಗ್ಮೆಂಟರ್ ಮೂಲಕ ಡಿಫ್ರ್ಯಾಗ್ ಮಾಡುವಿಕೆಯು ನಿಮ್ಮ ಪರ್ಸನಲ್ ಕಂಪ್ಯೂಟರ್ ಅನ್ನು ಅಕ್ಷರಶಃ ಒಳಗಿನಿಂದ ಕ್ಲೀನ್ ಮಾಡುವ ಅದ್ಭುತವಾದ ವಿಧಾನವಾಗಿರುತ್ತದೆ. ನಿಮ್ಮ ಡೇಟಾದ ಬ್ಯಾಕ್ಅಪ್ ತೆಗೆದುಕೊಳ್ಳುವುದು, ಕಂಟ್ರೋಲ್ ಪ್ಯಾನೆಲ್ ನಲ್ಲಿ ಡಿಫ್ರ್ಯಾಗ್ ಪ್ರೋಗ್ರಾಮ್ ಓಪನ್ ಮಾಡುವುದು ಹಾಗೂ ಡಿಫ್ರ್ಯಾಗ್ ಬಟನ್ ಒತ್ತುವುದು ಇಷ್ಟೇ ನೀವು ಮಾಡಬೇಕಾದ ಕೆಲಸವಾಗಿರುತ್ತದೆ. ನಿಮ್ಮ ಬಳಿ ಇರುವ ಡೇಟಾದ ಪ್ರಮಾಣದ ಮೇಲೆ ಆಧರಿತವಾಗಿ ಕೆಲವು ನಿಮಿಷಗಳಿಂದ ಹಿಡಿದು ಕೆಲವು ಗಂಟೆಗಳಷ್ಟು ಸಮಯವನ್ನು ಅದು ತೆಗೆದುಕೊಳ್ಳಬಹುದು.

 

ಕೊನೆಯದಾಗಿ ಹಾಗೂ ಅಷ್ಟೇ ಪ್ರಮುಖವಾಗಿ, ಒಂದು ವಿಶ್ವಾಸಾರ್ಹ ಸ್ಕ್ರೀನ್ ಕ್ಲೀನರ್ ಸೊಲ್ಯೂಷನ್ ಹಾಗೂ ನಿಮ್ಮ ಕೀಬೋರ್ಡ್ ನಿಂದ ಧೂಳನ್ನು ತೆಗೆಯುವುದಕ್ಕಾಗಿ ಬ್ರಶ್ ಅಥವಾ ಸ್ಟಿಕ್ಕಿ ನೋಟ್ ಬಳಸಿಕೊಂಡು ನಿಮ್ಮ ಪರ್ಸನಲ್ ಕಂಪ್ಯೂಟರ್ ಅನ್ನು ಫಿಜಿಕಲಿ ಕ್ಲೀನ್ ಮಾಡಿ. ಇದು ನಿಮ್ಮ ಪರ್ಸನಲ್ ಕಂಪ್ಯೂಟರ್ ಅನ್ನು ಕ್ಲೀನ್ ಆಗಿ ಮತ್ತು ನಿಮಗೆ ಬೇಕಾದಷ್ಟು ಪರಿಣಾಮಕಾರಿಯಾಗಿ ಇರಿಸುತ್ತದೆ.

ಹ್ಯಾಪಿ ಕ್ಲೀನಿಂಗ್!