ನೀವು ಪ್ರಯತ್ನಿಸಬೇಕಾದ ಮೂರು, ಔಟ್ ಆಫ್ ದಿ ಬಾಕ್ಸ್ ಹೋಮ್ವರ್ಕ್ ಐಡಿಯಾಗಳು

 

ಪಾಠಗಳನ್ನು ಯೋಜಿಸುವುದರ ನಡುವೆಯೇ, ಬೇರೆ ಬೇರೆ ತರಗತಿಗಳಿಗೆ ಒಂದೇ ಸಮನೇ ಬೋಧಿಸುತ್ತಾ, ಅನೇಕಾನೇಕ ಪರೀಕ್ಷೆಗಳನ್ನು ನಿರ್ವಹಿಸುವುದು ಮುಂತಾಗಿ ಶಿಕ್ಷಕರ ಪಾಲಿಗೆ ಮಾಡಬೇಕಾದ ಬಹಳಷ್ಟು ಕೆಲಸಗಳಿರುತ್ತವೆ. ಹೋಮ್ವರ್ಕ್ ನೀಡುವ ವಿಷಯಕ್ಕೆ ಬಂದಾಗ, ಪಠ್ಯಪುಸ್ತಕದಲ್ಲಿನ ಅಧ್ಯಾಯದ ಕೊನೆಯಲ್ಲಿನ ಪ್ರಶ್ನೆಗಳನ್ನು ವಹಿಸಿ ಒಂದು ವರ್ಕ್ ಶೀಟ್ ನೀಡುವುದು ಒಂದು ಸಾಮಾನ್ಯ ಕ್ರಮವಾಗಿದೆ. ಹೊಸದಾಗಿ ಕಲಿಸಿದ ಮಾಹಿತಿಯನ್ನು ಹೀರಿಕೊಂಡು, ವಿಷಯದ ಬಗ್ಗೆ ಇನ್ನಷ್ಟು ಆಳವಾದ ಜ್ಞಾನವನ್ನು ಪಡೆದುಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವುದು ಕಲಿಕೆಯ ಉದ್ದೇಶವಾಗಿರುತ್ತದೆ. ಈ ಆಳವಾದ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಸಾಮಾನ್ಯಕ್ಕಿಂತ ಸ್ವಲ್ಪ ಬೇರೆಯದ್ದೇ ತರಹದ ಹೋಮ್ವರ್ಕ್ ಬೇಕಾಗುತ್ತದೆ. ತರಗತಿಯಲ್ಲಿ ನೀವು ಬಳಸಬಹುದಾದ ಮೂರು ವಿಶಿಷ್ಟವಾದ ವಿಚಾರಗಳನ್ನು ಇಲ್ಲಿ ನೀಡಲಾಗಿದೆ:

1. ಇದು ಒಗಟು ಬಿಡಿಸುವ ಸಮಯ

ವೈಜ್ಞಾನಿಕ ಪದಗಳಾಗಿರಬಹುದು, ಸಮಾನಾರ್ಥಕ ಪದಗಳಾಗಿರಬಹುದು ಮತ್ತು ಐತಿಹಾಸಿಕ ವ್ಯಕ್ತಿಗಳೂ ಆಗಿರಬಹುದು, ಕಲಿಸಿದ ಹೊಸ ಪದಗಳನ್ನು ವಿದ್ಯಾರ್ಥಿಗಳು ಗ್ರಹಿಸಿಕೊಂಡು, ಇನ್ನೂ ಹೆಚ್ಚು ವಿಷಯಗಳನ್ನು ಕಂಡುಕೊಳ್ಳಲು ಸಾಕಷ್ಟು ಕುತೂಹಲವನ್ನು ಉಳಿಸಿಕೊಂಡಿರುವವರೆಗೆ ಅವರು ತಿಳಿದುಕೊಂಡಿರಬೇಕಾದ ಪದಗಳೊಂದಿಗೆ ಅವರನ್ನು ಚಿರಪರಿಚಿತರನ್ನಾಗಿಸಲು Discovery Education’s custom puzzle maker ನ ವೈಶಿಷ್ಟ್ಯತೆಯೊಂದಿಗೆ ನಿಮ್ಮ ವಿದ್ಯಾರ್ಥಿಗಳ ಸಂಪನ್ಮೂಲಪೂರ್ಣ ಮತ್ತು ಸ್ಪರ್ಧಾತ್ಮಕ ಪಾರ್ಶ್ವವನ್ನು ಹೊರತನ್ನಿ.

2. ನಾನು ಅದೃಷ್ಟಶಾಲಿ ಎನಿಸುತ್ತಿದೆ

Google ನ ಸರ್ಚ್ ಇಂಜಿನ್ ರೀತಿಯಲ್ಲಿಯೇ, “I’m Feeling Lucky” ಎಂದು ಕರೆಯಲಾಗುವ ಒಂದು ವೈಶಿಷ್ಟ್ಯತೆಯನ್ನು Google Earth ಹೊಂದಿದೆ, ಒಂದು ಪ್ರಬಂಧ, ಪ್ರಸ್ತುತಿ ಅಥವಾ ಒಂದು ಸಂಪೂರ್ಣ ಪ್ರಾಜೆಕ್ಟ್ಗಾಗಿ ಹೊಸ ಸ್ಥಳಗಳ ಬಗ್ಗೆ ವಾಸ್ತವಾಂಶಗಳನ್ನು ಕಂಡುಕೊಳ್ಳಲು ವಿದ್ಯಾರ್ಥಿಗಳು ಇದನ್ನು ಬಳಸಬಹುದು. ಸಂಪೂರ್ಣ ಬ್ರೌಜಿಂಗ್ ಅನುಭವವು ಅದರಲ್ಲಿಯೇ ಮುಳುಗಿ ಹೋಗುವ ಸ್ವರೂಪದ್ದಾಗಿರುವುದರಿಂದ, ವಿದ್ಯಾರ್ಥಿಗಳು ಹೆಚ್ಚು ತೊಡಗಿಕೊಳ್ಳುವ ಭಾವನೆಯನ್ನು ಹೊಂದುತ್ತಾರೆ ಮತ್ತು ಆ ಪ್ರಕ್ರಿಯೆಯನ್ನು ಇನ್ನೂ ಹೆಚ್ಚು ಆನಂದಿಸಲು ತೊಡಗುತ್ತಾರೆ.

3. ಗಣಿತವನ್ನು ಒಂದು ಆಟವಾಗಿ ಪರಿವರ್ತಿಸಿ

ವಿದ್ಯಾರ್ಥಿಗಳಲ್ಲಿ ಎರಡು ವಿಧದವರಿರುತ್ತಾರೆ – ಗಣಿತವನ್ನು ಇಷ್ಟಪಡುವವರು ಮತ್ತು ಗಣಿತವನ್ನು ತಪ್ಪಿಸುವವರು. ತಾವು ಸಮಸ್ಯೆಗಳನ್ನು ಬಿಡಿಸುವುದನ್ನು ಪ್ರ್ಯಾಕ್ಟೀಸ್ ಮಾಡುತ್ತಿದ್ದೇವೆ ಎಂಬುದು ತಮ್ಮ ಅರಿವಿಗೇ ಬಾರದಂತೆಯೇ ವಿದ್ಯಾರ್ಥಿಗಳು ಪ್ರ್ಯಾಕ್ಟೀಸ್ ಮಾಡುವಂತೆ ಹೋಮ್ವರ್ಕ್ಗಾಗಿ ಇಂಟರಾಕ್ಟಿವ್ ಗೇಮ್ಗಳನ್ನು ನೀಡುವ ಮೂಲಕ ನೀವು ಇದನ್ನು ಒಂದು ಮೋಜಿನ ವಿಷಯವನ್ನಾಗಿ ಮಾಡಬಹುದು. ಹೆಚ್ಚು ಸ್ಕೋರ್ ಗಳಿಸುವ ಮತ್ತು ಒಂದು ನಿಗದಿತ ಸಮಯದಲ್ಲಿ ಸಮಸ್ಯೆಯನ್ನು ಬಿಡಿಸುವ ಇನ್ಸೆಂಟಿವ್, ಅವರು ಆಟವಾಡುವ ಪ್ರತಿ ಬಾರಿಯೂ ಮೊದಲಿಗಿಂತ ಹೆಚ್ಚು ಉತ್ತಮವಾಗಿ ಆಡಲು ವಿದ್ಯಾರ್ಥಿಗಳಿಗೆ ಒಂದು ಪ್ರೇರೇಪಣೆಯಾಗಿ ಕೆಲಸ ಮಾಡುತ್ತದೆ.

ಈ ವಿಚಾರಗಳು ಕೇವಲ ಆರಂಭಿಕ ಹಂತಗಳಾಗಿವೆ, ನಿಮ್ಮ ವಿದ್ಯಾರ್ಥಿಗಳು ತಮ್ಮ ಹೋಮ್ವರ್ಕ್ ಪ್ರಕ್ರಿಯೆಯನ್ನು ನಿಜವಾಗಿಯೂ ಆನಂದಿಸುವ ರೀತಿಯಲ್ಲಿ ಅವರಿಗಾಗಿ ನಿರ್ದಿಷ್ಟ ಕಲಿಕಾ ಉದ್ದೇಶಗಳು ಹಾಗೂ ವಿಷಯಗಳನ್ನು ಪೂರೈಸಲು ಪಿಸಿ ಮತ್ತು WikiSpaces Classroom ನೊಂದಿಗೆ ಹೆಚ್ಚು ವ್ಯಕ್ತಿಗತಗೊಳಿಸಿದ ವಿಚಾರಗಳೊಂದಿಗೆ ನೀವು ಹೊರಬರಬಹುದು.