2018 ರಲ್ಲಿ ಪ್ರತಿಯೊಬ್ಬ ಡಿಜಿಟಲ್ ಪೋಷಕರು ಮಾಡಲೇಬೇಕಾದ ಮೂರು ವಿಷಯಗಳು

 

ಕೇವಲ ಒಂದು ತಲೆಮಾರಿನ ಮುಂಚೆ, ಕೆಲವೇ ಕೆಲವು ಆಯ್ದ ಜನರು ಕಂಪ್ಯೂಟರ್ ಬಳಸುತ್ತಿದ್ದರು. ಈಗ, ನಿಮ್ಮ ಫೋನ್ ಆಗಿರಬಹುದು, ಟ್ಯಾಬ್ಲೆಟ್ ಆಗಿರಬಹುದು ಅಥವಾ PC ಆಗಿರಬಹುದು - ಯಾವುದಾದರೂ ಒಂದು ತೆರನಾದ ಸ್ಕ್ರೀನ್ ಕಡೆಗೆ ನೋಡದೇ ಕಳೆಯದಿರುವ ದಿನವೇ ಇಲ್ಲ. ಅದಕ್ಕಾಗಿಯೇ ಪೋಷಕರು ಜಾಗರೂಕತೆಯಿಂದಿದ್ದು, ತಮ್ಮ ಮಕ್ಕಳನ್ನು ಭವಿಷ್ಯಕ್ಕಾಗಿ ತಯಾರು ಮಾಡುವುದರ ಕಡೆಗೆ ಸರಿಯಾದ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಅಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿದೆ.

2018 ರಲ್ಲಿ ಪ್ರತಿಯೊಬ್ಬ ಡಿಜಿಟಲ್ ಪೋಷಕರು ಮಾಡಲೇಬೇಕಾದ ಮೂರು ವಿಷಯಗಳನ್ನು ಇಲ್ಲಿ ನೀಡಲಾಗಿದೆ:

1) ವಿಷಯಗಳನ್ನು ಒಟ್ಟಾಗಿ ಕಂಡುಕೊಳ್ಳಿ

ಸಾಮಾಜಿಕ ಮಾಧ್ಯಮಗಳ ಬಗ್ಗೆ ಗೊಂದಲ ಉಂಟಾಗಿದೆಯೇ? ಅಥವಾ ನೀವು ಓದಬೇಕಾದ ಸುದ್ದಿಗಳನ್ನು ಶೋಧಿಸಬೇಕಿದೆಯೇ? ನಿಮ್ಮ ಮಗುವಿನೊಡನೆ ಬಾಂಧವ್ಯವನ್ನು ನಿರ್ಮಿಸಿಕೊಳ್ಳಲು ಹಾಗೂ ಅದೇ ಸಮಯದಲ್ಲಿ ಹೊಸ ವಿಷಯಗಳನ್ನು ಕಲಿಯುವುದು, ಕೆಲಸ ಮಾಡುವಿಕೆಗಳನ್ನು ಒಟ್ಟಾಗಿ ಅರ್ಥೈಸಿಕೊಳ್ಳುವುದರೆಡೆಗಿನ ಒಂದು ಒಳ್ಳೆಯ ಮಾರ್ಗವಾಗಿದೆ. ಈ ರೀತಿಯಾಗಿ, ನಿಮ್ಮ ಮಗು PC ಯ ಬಳಕೆಯನ್ನು ಒಂದು ಸಹಜವಾದ ಕೌಟುಂಬಿಕ ಚಟುವಟಿಕೆಯಾಗಿ ಒಪ್ಪಿಕೊಳ್ಳುತ್ತದೆ ಮತ್ತು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ನಿಮಗೆ ಪ್ರಶ್ನೆಗಳನ್ನು ಕೇಳಲು ಹಿಂಜರಿಯುವುದಿಲ್ಲ.

2) ಸಮಾಜದೊಡನೆ ಬೆರೆಯಿರಿ

PC ಯನ್ನು ಅತ್ಯುತ್ತಮವಾಗಿ ಬಳಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದರ ಸಾಲಿನಲ್ಲಿಯೇ, ಸಮಾಜದೊಡನೆ ಬೆರೆಯುವುದು ನೀವು ಮಾಡಬೇಕಾದ ವೃತ್ತಿಪರ ನಡೆಯಾಗಿರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿನ ತಮ್ಮ ಪ್ರತಿಯೊಂದು ನಡೆಯ ಮೇಲೆ ನೀವು ಕಣ್ಣಿಡುವುದನ್ನು ನಿಮ್ಮ ಮಕ್ಕಳು ಇಷ್ಟಪಡುವುದಿಲ್ಲ ಆದರೆ ಇತ್ತೀಚಿನ ಮೀಮ್ಗಳು, ವಿಡಿಯೋ ಕ್ಲಿಪ್ಗಳು, ಸೆಲಬ್ರಿಟಿ ನ್ಯೂಸ್ಗಳು, ಮೂವೀಗಳು ಮತ್ತು ಅವರ ಸ್ನೇಹಿತರ ಜೀವನಗಳ ಬಗೆಗಿನ ಸಂಭಾಷಣೆಯು ನಿಮಗೆ ಅವರನ್ನು ಮುಕ್ತಮನಸ್ಕರನ್ನಾಗಿಸುತ್ತದೆ.

3) ಅಪ್ಗ್ರೇಡ್ ಆಗಿ, ಅಪ್ಗ್ರೇಡ್ ಆಗಿ ಮತ್ತು ಅಪ್ಗ್ರೇಡ್ ಆಗಿ!

ನಿಮ್ಮ ಮಗು ಒಂದು ವಾರದವರೆಗೆ ಭೌತಶಾಸ್ತ್ರದ ಪ್ರಸ್ತುತಿಯ ಮೇಲೆ ಕೆಲಸ ಮಾಡಿದೆ ಹಾಗೂ ಇನ್ನೇನು ಸೇವ್ ಮಾಡಬೇಕು ಎನ್ನುವಷ್ಟರಲ್ಲಿ ನಿಮ್ಮ PC ಕ್ರ್ಯಾಶ್ ಆಗುತ್ತದೆ ಎಂದು ಕಲ್ಪಿಸಿಕೊಳ್ಳಿ.

ನಿಮ್ಮ ಮಗುವಿನ ಉತ್ಸಾಹಕ್ಕೆ ಭಂಗ ತಂದು, ಅದನ್ನು ಹತಾಶೆಗೆ ದೂಡಲು ಇದಕ್ಕಿಂತ ಬೇರೆ ಮತ್ತಿನ್ನೇನಾದರೂ ಇದೆಯೇ?

ಪರಿಹರಿಸಬಹುದಾದ ಇಂಥ ಸಮಸ್ಯೆಗಳನ್ನು ನಿರ್ವಹಿಸುವ ಅತ್ಯುತ್ತಮ ಮಾರ್ಗವೆಂದರೆ ಆಪರೇಟಿಂಗ್ ಸಿಸ್ಟಂ, PC ಮತ್ತು ಕಲಿಕಾ ಸಂಪನ್ಮೂಲಗಳನ್ನು ಅವಶ್ಯಕವಾದಂತೆಲ್ಲಾ ಅಪ್ಗ್ರೇಡ್ ಮಾಡುವುದು, ಏನಾದರಾಗಲಿ, ಉಪಚಾರಕ್ಕಿಂತ ತಡೆಗಟ್ಟುವಿಕೆಯೇ ಮೇಲು!

ನೀವು ತಡವಾಗಿ ಪ್ರಾರಂಭಿಸಿದರೆ, ನೀವು ತಡವಾಗಿಯೇ ಮುಗಿಸುವ ಸಾಧ್ಯತೆ ಹೆಚ್ಚು. ಕೊಳ್ಳಬೇಕಿರುವ PC ಯ ಪ್ರಕಾರವೇ ಆಗಿರಲಿ, ಇನ್ಸ್ಟಾಲ್ ಮಾಡಬೇಕಿರುವ ಸಾಫ್ಟ್ವೇರ್ ಆಗಿರಲಿ ಅಥವಾ ಅಧ್ಯಯನಕ್ಕಾಗಿನ ಸಂಪನ್ಮೂಲಗಳಾಗಿರಲಿ ನಿಮ್ಮ ಮಕ್ಕಳಿಗೆ ಯಾವುದು ಕೆಲಸ ಮಾಡುತ್ತದೆ, ಯಾವುದು ಮಾಡುವುದಿಲ್ಲ ಎಂಬುದರ ಚೆಕ್ಲಿಸ್ಟ್ ಅನ್ನು ಗಮನದಲ್ಲಿರಿಸಿಕೊಳ್ಳುವ ಮೂಲಕ PC ಯೊಂದಿಗಿನ ನಿಮ್ಮ ಪ್ರಯಾಣವನ್ನು ಉತ್ತಮವಾಗಿ ಆರಂಭಿಸಿ. ಶಿಕ್ಷಣಕ್ಕಾಗಿ PC ಜಗತ್ತಿನಲ್ಲಿ ಇತ್ತೀಚಿನ ವಿಷಯಗಳನ್ನು ನೀವು ತಿಳಿದುಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಇತರ ಪೋಷಕರನ್ನು ಕೇಳಿ, ಪೋಷಕರು-ಶಿಕ್ಷಕರ ಭೇಟಿಯ ಸಂದರ್ಭದಲ್ಲಿ ಶಿಕ್ಷಕರೊಂದಿಗೆ ಆಳವಾದ ಸಂಭಾಷಣೆ ಮಾಡಿ ಮತ್ತು ಆನ್ಲೈನ್ನಲ್ಲಿ ಹುಡುಕಾಟ ಮಾಡಿ.

ನಿಮ್ಮ ಡಿಜಿಟಲ್ ಪೇರೆಂಟಿಂಗ್ ಸಂತೋಷದಾಯಕವಾಗಿರಲಿ!