ಡಿಜಿಟಲ್ ಲರ್ನಿಂಗ್ ಡೇಯಂದು ಪ್ರತಿಯೊಬ್ಬ ಶಿಕ್ಷಕರು ಮಾಡಲೇಬೇಕಾದ ಮೂರು ವಿಷಯಗಳು

 

ಪ್ರತಿನಿತ್ಯ, ಬಹುಸಂಖ್ಯೆಯ ತರಗತಿಗಳನ್ನು ವ್ಯವಸ್ಥಿತಗೊಳಿಸುವುದಾಗಿರಲಿ, ಮಧ್ಯರಾತ್ರಿಯವರೆಗೆ ಪೇಪರ್ ಗಳನ್ನು ತಿದ್ದುವುದಾಗಿರಲಿ ಅಥವಾ ಕೇಳಿಸಿಕೊಳ್ಳುವುದೊಂದನ್ನು ಹೊರತುಪಡಿಸಿ ಪ್ರತಿಯೊಂದನ್ನೂ ಮಾಡಬಯಸುವ ವಿದ್ಯಾರ್ಥಿಗಳಿಂದ ಕೂಡಿದ ತರಗತಿಯನ್ನು ನಿಭಾಯಿಸುವುದಾಗಿರಲಿ, ಶಿಕ್ಷಕರ ಕೆಲಸ ಅಷ್ಟು ಸುಲಭದ್ದಾಗಿರುವುದಿಲ್ಲ. 2012 ರಿಂದ 22ನೇ ಫೆಬ್ರುವರಿಯಂದು ಆಚರಿಸಲ್ಪಡುವ ಡಿಜಿಟಲ್ ಲರ್ನಿಂಗ್ ಡೇ, ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೊಳಗಾಗಿರುವ ಕಲಿಕಾ ವಿಧಾನ – ಡಿಜಟಲ್ ಲರ್ನಿಂಗ್ ಅನ್ನು ಅತ್ಯಂತ ಹೆಚ್ಚಿನ ಮಟ್ಟಿಗೆ ಬಳಸಿಕೊಳ್ಳುವ ಎಲ್ಲ ಪರಿಶ್ರಮಿ ಶಿಕ್ಷಕರಿಗೆ ಸಮರ್ಪಿತವಾದ ದಿನವಾಗಿದೆ. [1] PC ಗೆ ಪ್ರವೇಶಾವಕಾಶವನ್ನು ಹೊಂದಿರುವುದು, ಅದರಲ್ಲಿ ಪರಿಣಿತರಾದ ಶಿಕ್ಷಕರಿಗೆ ಅವಕಾಶಗಳ ವಿಶ್ವದ ಬಾಗಿಲನ್ನೇ ತೆರೆಯಬಲ್ಲದು. ಡಿಜಿಟಲ್ ಲರ್ನಿಂಗ್ ಡೆಯಂದು ಪ್ರತಿಯೊಬ್ಬ ಶಿಕ್ಷಕರು ಮಾಡಲೇಬೇಕಾದ ಮೂರು ವಿಷಯಗಳನ್ನು ಇಲ್ಲಿ ನೀಡಲಾಗಿದೆ:

1) ಏನನ್ನಾದರೂ ಹೊಸದನ್ನು ಅನ್ವೇಷಿಸಿ

ತಮ್ಮ ತರಗತಿಯು ಪಾಠದಲ್ಲಿ ತೊಡಗಿಕೊಳ್ಳುವುದನ್ನು ಮತ್ತು ತಾವು ಒದಗಿಸುತ್ತಿರುವ ಮಾಹಿತಿಯನ್ನು ನಿಜವಾಗಿಯೂ ಹೀರಿಕೊಳ್ಳುವುದನ್ನು ಎಲ್ಲ ಶಿಕ್ಷಕರು ಬಯಸುತ್ತಾರೆ. ಈ ಡಿಜಿಟಲ್ ಲರ್ನಿಂಗ್ ಡೇಯಂದು ಎಂದಿನ ನಿತ್ಯಕ್ರಮವನ್ನು ಬದಿಗಿರಿಸಿ. ಅದು ವಿಡಿಯೋ ಆಗಿರಬಹುದು, ಹೊಸ ವೆಬ್ ಸೈಟ್ ಗಳು ಅಥವಾ ಗೇಮ್ ಸಹ ಆಗಿರಬಹುದು – ತರಗತಿಯ ಸಂದರ್ಭದಲ್ಲಿ ಏನನ್ನಾದರೂ ಹೊಸದನ್ನು ಪ್ರಯತ್ನಿಸುವುದು ನಿಮ್ಮ ವಿದ್ಯಾರ್ಥಿಗಳ ಅತ್ಯಂತ ನಿರಾಸಕ್ತ ಗುಂಪು ಸಹ ಇತ್ತಕಡೆಗೆ ಲಕ್ಷ್ಯ ನೀಡಿ ಗಮನಿಸುವಂತೆ ಮಾಡುತ್ತದೆ.

2) ನಿಮ್ಮ PC ಯ ಬ್ರೌಸರ್ ನಲ್ಲಿ ಅತ್ಯುತ್ತಮ ಸಂಪನ್ಮೂಲಗಳನ್ನು ಬುಕ್ ಮಾರ್ಕ್ ಮಾಡಿ

ಬುಕ್ ಮಾರ್ಕ್ ಮಾಡುವ ಮೊದಲು, ನಿಮಗೆ ಉಪಯುಕ್ತವಾಗುವಂಥವುಗಳನ್ನು ನೀವು ಹುಡುಕಬೇಕು ಹಾಗೂ ಟೆಸ್ಟ್ ರನ್ ಮಾಡಬೇಕು, ನಿಮಗೆ ಸಮಯವಿದ್ದಲ್ಲಿ ಅಂಥ ಬಹಳಷ್ಟನ್ನು ಮಾಡಬಹುದು. ಟೆಸ್ಟ್ ರನ್ ಎಂಬುದು ನೀವು ತಪ್ಪದೇ ಮಾಡಲೇಬೇಕಾದ ವಿಷಯವಾಗಿದೆ. ತರಗತಿಯಲ್ಲಿ ವೆಬ್ ಸೈಟ್ ಅನ್ನು ನೀವು ಪ್ರಥಮ ಬಾರಿಗೆ ಓಪನ್ ಮಾಡಿ, ಅದು ”ನಿಮ್ಮ ದೇಶದಲ್ಲಿ ಲಭ್ಯವಿಲ್ಲ” ಎಂಬ ಸಂದೇಶವನ್ನು ಪ್ರದರ್ಶಿಸಿದಲ್ಲಿ, ನಿಮ್ಮ ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಕಲ್ಪಿಸಿಕೊಳ್ಳಿ!

3) ಮತ್ತೊಬ್ಬ ಶಿಕ್ಷಕರಿಗೆ ಕಲಿಸಿಕೊಡಿ

ಮತ್ತೊಬ್ಬ ಶಿಕ್ಷಕರಿಗೆ ಕಲಿಸಿಕೊಡುವ ಅತ್ಯಂತ ದೊಡ್ಡ ಅನುಕೂಲವೆಂದರೆ, ನಿಮ್ಮ ಆಟದಲ್ಲಿ ನಿರ್ವಿವಾದವಾಗಿ ನೀವೇ ಮುಂಚೂಣಿಯಲ್ಲಿರುತ್ತೀರಿ. ಏಕೆಂದರೆ ನಿಮ್ಮ ಶಿಷ್ಯರಿಗೆ ಅತ್ಯಂತ ಸೂಕ್ತ ಸಲಹೆಯನ್ನು ಒದಗಿಸಲು ನೀವು ಉತ್ತೇಜಿತರಾಗಿರುತ್ತೀರಿ. ಇದು, ಕಲಿಸಿಕೊಡುವಿಕೆಯನ್ನು ಹೊಸದನ್ನಾಗಿಸುತ್ತಾ ಅಥವಾ ನಿಮ್ಮ ಶಾಲೆ ಅಥವಾ ಪ್ರದೇಶದಲ್ಲಿ ಒಬ್ಬ ಕಿರಿಯ ಶಿಕ್ಷಕರನ್ನು ತಯಾರು ಮಾಡುತ್ತಾ, ನಿಮ್ಮ ವೃತ್ತಿಪರ ಬೆಳವಣಿಗೆಗಾಗಿ ಒಂದು ಮಹಾನ್ ಸ್ಫೂರ್ತಿಯನ್ನು ತಂದುಕೊಡುತ್ತದೆ.

ದಿನನಿತ್ಯದ ದಿನಸಿ ಖರೀದಿಯಿಂದ ಹಿಡಿದು ಬ್ಯಾಂಕಿಂಗ್ ವರೆಗೆ ಎಲ್ಲ ಕಡೆಗಳಲ್ಲಿಯೂ ತಂತ್ರಜ್ಞಾನದ ಬಳಕೆಯೊಂದಿಗೆ, ಶಾಲೆಗಳಲ್ಲಿಯೂ ಸಹ ಅದನ್ನು ಪರಿಣಾಮಕಾರಿಯಾಗಿ ಬಳಸುವುದು ಅವಶ್ಯಕವಾಗಿದೆ. ಕಂಪ್ಯೂಟರ್ ಬಳಕೆಯ ಪ್ರಯೋಜನಗಳು ಇಂದಿನ ವಿದ್ಯಾರ್ಥಿಗಳನ್ನು ನಾಳೆಗಾಗಿ ಸಿದ್ಧವಾಗಿರುವಂತೆ ಸನ್ನದ್ಧರಾಗಿಸುವ ಪರಿಧಿಯಾಚೆ ಹೋಗುತ್ತವೆ – ಶಿಕ್ಷಕರೂ ಸಹ ತಾವು ಮಾಡುವುದನ್ನು ಹೆಚ್ಚು ಉತ್ತಮವಾಗಿ ಮಾಡಿ, ದೀರ್ಘಾವಧಿಯಲ್ಲಿ ತಮ್ಮ ಭವಿತವ್ಯದ ಪಥವನ್ನು ರೂಪಾಂತರಗೊಳಿಸಬಹುದು. ಡಿಜಿಟಲ್ ಲರ್ನಿಂಗ್ ಡೇಯ ಶುಭಾಶಯಗಳು!