ಈ ವಿಶ್ವ ಬಾಕ್ಅಪ್ ದಿನದಂದು ನೀವು ಮಾಡಬೇಕಾದ ಮೂರು ಕೆಲಸಗಳು

 

ನಿಮ್ಮ ಪ್ರಾಂಶುಪಾಲರು ನಿಮ್ಮನ್ನು ಕೇಳಿದ್ದ ಪ್ರಮುಖ ವರದಿಯೊಂದನ್ನು ಸಿದ್ಧಪಡಿಸುವುದರಲ್ಲಿ ಸಂಪೂರ್ಣ ವಾರಾಂತ್ಯವನ್ನು ನೀವು ವ್ಯಯಿಸಿದ್ದೀರಿ. ಸೋಮವಾರ ಬೆಳಿಗ್ಗೆ ನೀವು ಮಾಡಬೇಕಾದ ಮೊದಲನೇ ಕೆಲಸವೆಂದರೆ ಅದನ್ನು ಇ-ಮೇಲ್ ಮಾಡುವುದು.

ಈಗ ಇದನ್ನು ಕಲ್ಪಿಸಿಕೊಳ್ಳಿ.

ನೀವು ಸೆಂಡ್ ಬಟನ್ ಒತ್ತಬೇಕೆನ್ನುವಷ್ಟರಲ್ಲಿ, ನಿಮ್ಮ PC ಸ್ಕ್ರೀನ್ ಫ್ರೀಝ್ ಆಗಿ, ಆ ಫೈಲ್ ಕಳೆದುಹೋಗುತ್ತದೆ – ನಿರಾಶಾದಾಯಕ, ಅಲ್ಲವೇ?

ಅದೃಷ್ಟಾವಶಾತ್, ಇದಕ್ಕೆ ಒಂದು ಪರಿಹಾರವಿದೆ.

ಎಲ್ಲ ಫೈಲ್ಗಳನ್ನು ಬ್ಯಾಕ್ಅಪ್ ಮಾಡುವುದು.

ಈ ವಿಶ್ವ ಬ್ಯಾಕ್ಅಪ್ ದಿನದಂದು ನೀವೇನು ಮಾಡಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ:

3-2-1 ಬ್ಯಾಕ್ಅಪ್ ತಂತ್ರ

ಈ 3-2-1 ಅಂದರೇನು ಎಂದು ಆಶ್ಚರ್ಯಪಡುತ್ತಿದ್ದೀರಾ? ಹಾಗೆಂದರೆ, ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ, ಎರಡೂ ತರಹದ ಡೇಟಾದ ಮೂರು ಪ್ರತಿಗಳನ್ನು ನೀವು ನಿರ್ವಹಿಸಬೇಕು ಎಂದು ಅರ್ಥ. ಒಂದು ನಿಮ್ಮ ಮನೆಯಲ್ಲಿರಬಹುದು ಮತ್ತು ಒಂದು ಶಾಲೆಯಲ್ಲಿರಬಹುದು. ಕೊನೆಯ ಬ್ಯಾಕ್ಅಪ್, ಕ್ಲೌಡ್ ಸ್ಟೋರೇಜ್ ಮೂಲಕ ನೀವು ಆನ್ಲೈನ್ನಲ್ಲಿ ನಿರ್ವಹಿಸುವಂಥದ್ದಾಗಿರುತ್ತದೆ. ಕಲಿಸಲು ನಿಮಗೆ ಬೇಕಾಗುವ ಎಲ್ಲ ಫೈಲ್ಗಳನ್ನು ಸೇವ್ ಮಾಡಲು ಮೈಕ್ರೊಸಾಫ್ಟ್ ವಿಂಡೋಸ್ ಬ್ಯಾಕ್ಅಪ್ಗಳಂಥ ಸಂಪನ್ಮೂಲಗಳು ಬಳಸಲು ಸುಲಭವಾದ ಹಾಗೂ ಪರಿಣಾಮಕಾರಿ ಸ್ಥಳಾವಕಾಶವಾಗಿವೆ.

ಆಗಾಗ್ಗೆ ಬ್ಯಾಕ್ಅಪ್ ತೆಗೆದುಕೊಳ್ಳುವ ವೇಳಾಪಟ್ಟಿಯನ್ನು ಮಾಡಿಕೊಳ್ಳಿ

ಇದು ವಿಶ್ವ ಬ್ಯಾಕ್ಅಪ್ ದಿನದಂದು ಮಾತ್ರವೇ ನಿಮ್ಮ ಡೇಟಾವನ್ನು ಸೇವ್ ಮಾಡುವ ವಿಚಾರವಲ್ಲ. ನಿಮಗೆ ಯಾವುದೂ ತಪ್ಪಿಹೋಗದಂತೆ ನಿಮ್ಮ ಸ್ಟೋರೇಜ್ನಲ್ಲಿರುವ ಪ್ರತಿಯೊಂದನ್ನೂ ನೀವು ನಿಗದಿತವಾಗಿ ಕಾಪಿ ಮಾಡಿಕೊಳ್ಳುವಂತೆ ನೋಡಿಕೊಳ್ಳಿ! ಅವಶ್ಯಕವಾದಲ್ಲಿ ಕ್ಯಾಲೆಂಡರ್ ರಿಮೈಂಡರ್ ಹಾಕಿಕೊಳ್ಳಿ ಅಥವಾ ನಿಗದಿಪಡಿಸಿದ ದಿನದಂದು ಸ್ಟಾಫ್ರೂಮಿನಲ್ಲಿನ ಇತರ ಶಿಕ್ಷಕರೊಂದಿಗೆ ಪ್ಲ್ಯಾನ್ ಮಾಡಿಕೊಳ್ಳಿ, ಏನಿಲ್ಲವೆಂದರೂ, ತಂಡದ ಪ್ರಯತ್ನವು ಯಾವಾಗಲೂ ಒಬ್ಬರ ಪರವಾಗಿ ಕೆಲಸ ಮಾಡುತ್ತದೆ.

ನಿಮ್ಮ ಬ್ಯಾಕ್ಅಪ್ಗಳನ್ನು ಮಾಲ್ವೇರ್ನಿಂದ ರಕ್ಷಿಸಿಕೊಳ್ಳಿ

ನಿಮ್ಮ ಮಹತ್ವದ ಫೈಲುಗಳನ್ನು ರಕ್ಸಿಸಿಕೊಳ್ಳಲು ನಿಮ್ಮ PC ಯ ನಿಗದಿತ ಬ್ಯಾಕ್ಅಪ್ ತೆಗೆದುಕೊಳ್ಳುವುದಷ್ಟೇ ಸಾಕಾಗುವುದಿಲ್ಲ. ಕೆಲವೊಮ್ಮೆ, ನಿಮ್ಮ ಬ್ಯಾಕ್ಅಪ್ ವೈರಸ್ಗಳು ಹಾಗೂ ಮಾಲ್ವೇರ್ಗಳ ದಾಳಿಗೊಳಗಾಗಬಹುದು ಹಾಗೂ ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಲು ಮತ್ತು ನೀವು ವೃತ್ತಿಪರವಾಗಿ ಬೆಳೆಯಲು ನೀವು ಪ್ರತಿದಿನ ಮಾಡಿದ ನಿಮ್ಮ ಎಲ್ಲ ಪ್ರಯತ್ನಗಳನ್ನು ವ್ಯರ್ಥಗೊಳಿಸುವುದರಲ್ಲಿ ಪರ್ಯವಸಾನಗೊಳ್ಳಬಹುದು. ಹಾಗಾಗಿ, ಆ್ಯಂಟಿವೈರಸ್ ಸಾಫ್ಟ್ವೇರ್ನಿಂದ ನಿಗದಿತವಾಗಿ ಸ್ಕ್ಯಾನ್ಗಳನ್ನು ಮಾಡುವ ಮೂಲಕ ನಿಮ್ಮ ಡೇಟಾವನ್ನು ರಕ್ಷಿಸಿಕೊಳ್ಳಿ.

ಒಬ್ಬ ಶಿಕ್ಷಕರಾಗಿರುವುದೆಂದರೆ ಬಹಳಷ್ಟು ತಾಳ್ಮೆ ಮತ್ತು ಸಿದ್ಧತೆಗಳನ್ನು ಬೇಡುವ ಕಠಿಣವಾದ ಕೆಲಸವಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ನೀವು ಕಲಿಸುವ ಪ್ರತಿ ತರಗತಿಯೊಂದಿಗೆ ತಾಳ್ಮೆಯು ವೃದ್ಧಿಯಾಗುವುದರೊಂದಿಗೇ, ತರಗತಿಗಳನ್ನು ತೆಗೆದುಕೊಳ್ಳುವುದಕ್ಕೂ ಮೊದಲು ಪಾಠಗಳಿಗಾಗಿ ತಯಾರಿ ನಡೆಸುವುದಕ್ಕೆ ಬಹಳಷ್ಟು ಶ್ರಮಪಡಬೇಕಾದ ಅಗತ್ಯತೆ ಇರುತ್ತದೆ. ನಿಮ್ಮ ವಿದ್ಯಾರ್ಥಿಗಳು ನಿಮ್ಮ ತರಗತಿಯಲ್ಲಿ ಆನಂದಿಸುವುದನ್ನು ಮತ್ತು ಕಲಿಯುವುದನ್ನು ಖಚಿತಪಡಿಸಿಕೊಳ್ಳುತ್ತಾ, ಪಠ್ಯ ಯೋಜನೆಗಳನ್ನು ತಯಾರಿಸಲು ನಿಮ್ಮ ವಿಶ್ವಾಸಾರ್ಹ ಸಾಧನವಾದ PC ಇಲ್ಲಿಯೇ ನಿಮಗೆ ಉಪಯೋಗಕ್ಕೆ ಬರುತ್ತದೆ – ವ್ಯತ್ಯಾಸವನ್ನು ನೋಡಲು ನೀವು ಅದನ್ನು ಪ್ರಯತ್ನಿಸಿ ನೋಡಬೇಕಾಗುತ್ತದೆ.