ನಿಮ್ಮ ವಿದ್ಯಾರ್ಥಿಗಳು ಇಷ್ಟಪಡುವ ಮೂರು ವರ್ಚ್ಯುವಲ್ ಫೀಲ್ಡ್ ಟ್ರಿಪ್ಗಳು

 

ಅವರಿಗೆ ಕಲಿಸಲಾಗುತ್ತಿರುವ ವಿಷಯವನ್ನು ಬಹುಪಾಲು ವಿದ್ಯಾರ್ಥಿಗಳು ಶ್ರದ್ಧೆವಹಿಸಿ ಆಲಿಸುತ್ತಿರುವ ಹಾಗೂ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿರುವಂಥ ಒಂದು ತೊಡಗಿಕೊಂಡಿರುವ ತರಗತಿಗಿಂತ ಹೆಚ್ಚಾಗಿ ಶಿಕ್ಷಕರಿಗೆ ಮತ್ತಾವ ವಿಷಯವೂ ತೃಪ್ತಿಯನ್ನು ನೀಡಲಾರದು. ವಾಸ್ತವದಲ್ಲಿ, ವಿಶೇಷವಾಗಿ, ಊಟದ ನಂತರದ ಅಥವಾ ಶಾಲೆಯ ಸುದೀರ್ಘ ದಿನವು ಕೊನೆಯಾಗುವ ಮುಂಚಿನ ಪಿರಿಯಡ್ನಲ್ಲಿ ನೀವು ಸಿಲುಕಿಕೊಂಡಲ್ಲಿ, ಆ ರೀತಿಯ ಪಾಠಗಳನ್ನು ನಿಲ್ಲಿಸುವುದು ಕಷ್ಟಕರವಾದ ಸಂಗತಿಯಾಗಿರುತ್ತದೆ.

ವರ್ಚ್ಯುವಲ್ ಫೀಲ್ಡ್ ಟ್ರಿಪ್ಗಳನ್ನು ಪ್ರವೇಶಿಸಿ.

ಒಂದು PC ಯೊಂದಿಗೆ, ಅವರು ಈ ಮೊದಲು ಎಂದಿಗೂ ಭೇಟಿ ನೀಡಿರದ ಸ್ಥಳವೊಂದನ್ನು ತರಗತಿಯಲ್ಲಿರುವ ಅನುಕೂಲತೆಯೊಂದಿಗೇ ನಿಮ್ಮ ವಿದ್ಯಾರ್ಥಿಗಳಿಗೆ ನೀವು ತೋರಿಸಬಹುದು. ಈ ಚಟುವಟಿಕೆಗಳು ನಿಮ್ಮ ತರಗತಿಗೆ ಚೈತನ್ಯವನ್ನು ತುಂಬುವುದು ಹಾಗೂ ಬಹಳಷ್ಟು ಪ್ರಶ್ನೆಗಳನ್ನು ಕೇಳುವಂತೆ ಮಾಡುವುದಷ್ಟೇ ಅಲ್ಲದೇ, ಚರ್ಚಿಸಿದ ಪರಿಕಲ್ಪನೆಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಅವರಿಗೆ ನೆರವಾಗುತ್ತವೆ. ಉರು ಹೊಡೆಯುವ ಮೂಲಕ ಅಧ್ಯಾಯದ ನಂತರ ಅಧ್ಯಾಯವನ್ನು ಕಲಿಯಬೇಕಾದ ಅವಶ್ಯಕತೆ ಇರುವುದಿಲ್ಲ!

ನೀವು ಆರಂಭಿಸಬಹುದಾದ ಮೂರು ಜನಪ್ರಿಯ ವರ್ಚ್ಯುವಲ್ ಫೀಲ್ಡ್ ಟ್ರಿಪ್ಗಳನ್ನು ಇಲ್ಲಿ ನೀಡಲಾಗಿದೆ – ನಿಮ್ಮ ಬಳಿ ಒಂದು PC ಇರುವಂತೆ ನೋಡಿಕೊಳ್ಳಿ.

1) ಡಿಸ್ಕವರಿ ಎಜ್ಯುಕೇಶನ್

ವಿಷಯ, ದರ್ಜೆ ಮತ್ತು ಧ್ಯೇಯಕ್ಕೆ ಅನುಗುಣವಾಗಿ ವಿಭಜಿಸಲಾದ – ಡಿಸ್ಕವರಿ ಎಜ್ಯುಕೇಶನ್ ನಿಮ್ಮ ವಿದ್ಯಾರ್ಥಿಗಳಿಗೆ ವಾರದ ಒಂದು ನೆಲೆವಸ್ತುವಾಗಬಲ್ಲದು. ಇದರಲ್ಲಿನ ಧ್ಯೇಯಗಳು ಇತ್ತೀಚಿನ ಹಾಗೂ ಅತ್ಯಂತ ಉನ್ನತ-ಮಟ್ಟದ ಫುಟೇಜ್ಗಳೊಂದಿಗೆ ಭೂಮಿ ಮತ್ತು ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ, ಇತಿಹಾಸ ಮತ್ತು ಇನ್ನೂ ಹಲವಾರು ವಿಷಯಗಳನ್ನು ಒಳಗೊಳ್ಳುತ್ತವೆ. ಉದಾಹರಣೆಗೆ, ವಾಸ್ತವಿಕ ಜಗತ್ತನ್ನು ನಿಮ್ಮ ತರಗತಿಯೊಳಗೆ ಕರೆತರುತ್ತಾ, ಪೋಲಾರ್ ಕರಡಿಯ ವಾರ್ಷಿಕ ವಲಸೆ ಹೋಗುವಿಕೆಯನ್ನು ಅತ್ಯಂತ ಸುಂದರವಾದ ಮತ್ತು ಅತ್ಯಾಕರ್ಷಕವಾದ ರೀತಿಯಲ್ಲಿ ತಂಡ್ರಾ ವರ್ಚ್ಯುವಲ್ ಎಕ್ಸ್ಪೀರಿಯನ್ಸ್ ತೋರಿಸುತ್ತದೆ.

 

2) ಗೂಗಲ್ ಅರ್ಥ್

ವಿಶ್ವಾದ್ಯಂತದ ದೂರದ ಪ್ರದೇಶಗಳನ್ನು ನಿಮ್ಮ ವಿದ್ಯಾರ್ಥಿಗಳಿಗೆ ತೋರಿಸಲು ಹಾಗೂ ಆಂತರಿಕವಾಗಿ ನಿರ್ಮಿತವಾಗಿರುವ ಪಠ್ಯ ಯೋಜನೆಗಳ ಗರಿಷ್ಠ ಸದುಪಯೋಗವನ್ನು ಪಡೆದುಕೊಳ್ಳಲು ಶಿಕ್ಷಕರೊಬ್ಬರ ಸ್ವರ್ಗವಾಗಿರುವ ಗೂಗಲ್ ಅರ್ಥ್ ಅನ್ನು ಬಳಸಿ. ಸಂಪೂರ್ಣ ಜಗತ್ತು ಅಕ್ಷರಶಃ ನಿಮ್ಮ PC ಯ ಬ್ರೌಜರ್ನಲ್ಲಿ ಕಾಣಸಿಗುತ್ತದೆ. ಗ್ವಾಟೆಮಾಲಾದ ಆಂಟಿಗ್ವಾದಲ್ಲಿನ ಫ್ಲವರ್ ಮೊಸಾಯಿಕ್ಗಳಿಂದ ಹಿಡಿದು ಇಟಲಿಯ ಫ್ಲಾರೆನ್ಸ್ನ ಫೈರ್ವರ್ಕ್ಗಳವರೆಗೆ, ವಿಶ್ವದಾದ್ಯಂತ ನಿಮ್ಮ ವಿದ್ಯಾರ್ಥಿಗಳು ಏನನ್ನೇ ನೋಡಬಯಸಿದರೂ ಅದನ್ನು ಅನ್ವೇಷಿಸಿ.

 

3) ಝೂಮ್ ಅರ್ಥ್

ಝೂಮ್ ಅರ್ಥ್ ನ ಗ್ಲೋಬಲ್ ಲೈವ್ ಸ್ಯಾಟಲೈಟ್ ಫೀಡ್ನೊಂದಿಗೆ ನಿಮ್ಮ ವಿದ್ಯಾರ್ಥಿಗಳು ಜಗತ್ತನ್ನು ಅಕ್ಷರಶಃ ಮೇಲಿನಿಂದ ನೋಡಬಹುದು. ಸ್ಥಳೀಯ ಇತಿಹಾಸ, ನಗರ-ನಿರ್ದಿಷ್ಟ ಹವಾಮಾನ ಅಥವಾ ಒಟ್ಟಾರೆಯಾಗಿ ಸಮಾಜಕ್ಕೆ ಸನ್ನಿವೇಶವನ್ನು ತರಲು ಇದರಲ್ಲಿನ “ಲೊಕೇಟ್ ಮಿ” ಎಂಬ ಫೀಚರ್ ಅನ್ನು ನೀವು ಬಳಸಿಕೊಳ್ಳಬಹುದು. ತರಗತಿಯು ತನ್ನದೇ ಆದ ಗತಿಯಲ್ಲಿ ಅನ್ವೇಷಿಸಿ, ಪರಸ್ಪರರ ಕಲಿಕೆಗಳನ್ನು ಹಂಚಿಕೊಳ್ಳಲು ಕೊನೆಯಲ್ಲಿ ಸಮೂಹ ಚರ್ಚೆಗಳನ್ನು ಮಾಡಲಿ.

ಮೊದಲಿಗೆ, ಇದು ಪಠ್ಯಕ್ರಮದಿಂದ ಹೊರಗೆ ಹೋಗುತ್ತಿದೆ ಎಂದು ನಿಮಗೆ ಅನ್ನಿಸಬಹುದು, ಆದರೆ ಸರಿಯಾದ ಪಠ್ಯ ಯೋಜಿಸುವಿಕೆಯೊಂದಿಗೆ ನಿಮ್ಮ ವಿದ್ಯಾರ್ಥಿಗಳು ಇನ್ನೂ ಹೆಚ್ಚು ವಿಷಯಗಳನ್ನು ಕಲಿಯಲು ಕಾತರರಾಗುತ್ತಾರೆ!