ಸ್ವತಂತ್ರ ಕಲಿಕೆದಾರರಾಗಲು ನಿಮ್ಮ ವಿದ್ಯಾರ್ಥಿಗಳಿಗೆ PC ನೆರವಾಗುವ ಮೂರು ಮಾರ್ಗಗಳು

 

ಮನೆಯಿಂದ ಶಾಲೆಗೆ, ಮತ್ತು ಮರಳಿ ಮನೆಗೆ ಪ್ರತಿನಿತ್ಯದ ಪ್ರಯಾಣ

ದಿನವಿಡೀ ನಡೆಯುವ ತರಗತಿಗಳು

ಪಠ್ಯೇತರ ಚಟುವಟಿಕೆಗಳು

ಟ್ಯೂಷನ್ಗಳು

ಗ್ರುಪ್ ಪ್ರಾಜೆಕ್ಟುಗಳು

ಹೋಮ್ವರ್ಕ್

ಮಧ್ಯದಲ್ಲಿ ಸ್ವಲ್ಪ ಆಟದ ಸಮಯ

ಮತ್ತು ನಂತರ ಕೊನೆಯದಾಗಿ ಸ್ವತಂತ್ರ ಅಧ್ಯಯನ

ಇದು ಶಾಲಾ ವಾರದಲ್ಲಿನ ನಿಮ್ಮ ಮಾದರಿ ವಿದ್ಯಾರ್ಥಿಯೊಬ್ಬರ ವೇಳಾಪಟ್ಟಿಯಾಗಿರುತ್ತದೆ...

ಸ್ವತಂತ್ರ ಅಧ್ಯಯನವು ಅತ್ಯಂತ ಪ್ರಮುಖವಾಗಿದ್ದಾಗಲೂ, ಸಾಮಾನ್ಯವಾಗಿ ಅತ್ಯಂತ ಕಡಿಮೆ ಪ್ರಮಾಣದ ಸಮಯವನ್ನು ನೀಡಲ್ಪಡುತ್ತದೆ ಎಂಬುದನ್ನು ಹೇಳಲೇಬೇಕಾಗಿಲ್ಲ, ದಿನವಿಡಿಯ ಚಟುವಟಿಕೆಗಳಿಂದಾಗಿ ಮಕ್ಕಳು ಬಳಲಿರುತ್ತಾರೆ ಹಾಗೂ ಇದನ್ನು ಕೊನೆಯ ಗಳಿಗೆಯ ಕೆಲಸವಾಗಿ ಉಳಿಸಿರುತ್ತಾರೆ.

ಹಾಗಾದರೆ, ನಿಮ್ಮ ವಿದ್ಯಾರ್ಥಿಗಳಿಗೆ ನೆರವಾಗಲು ನೀವು ಏನು ಮಾಡಬಹುದು?

1) ತಮಗೆ ಯಾವುದು ಆಸಕ್ತಿದಾಯಕವಾಗಿದೆ ಎಂಬುದನ್ನು ಕಂಡುಕೊಳ್ಳಲು ಅವರಿಗೇ ಬಿಡಿ

ತರಗತಿಯ ಕೊನೆಯಲ್ಲಿ, ನೀವು ಈಗಷ್ಟೇ ಕಲಿಸಿದುದರಲ್ಲಿ ಅವರಿಗೆ ಯಾವುದು ಅತ್ಯಂತ ಆಸಕ್ತಿಕರವಾಗಿತ್ತು ಎಂದು ನಿಮ್ಮ ವಿದ್ಯಾರ್ಥಿಗಳನ್ನು ಕೇಳಿ.
ಹೊಸದಾಗಿ ಕಂಡುಕೊಂಡ ಆಸಕ್ತಿಯನ್ನು ಇನ್ನೂ ಮುಂದಕ್ಕೆ ಬೆಳೆಸಲು ಆ ನಿರ್ದಿಷ್ಟ ವಿಷಯದ ಮೇಲಿನ ಸಂಶೋಧನೆಯನ್ನು ಹೋಮ್ವರ್ಕ್ ಆಗಿ ನೀಡಿ. ಇದು ಎಲ್ಲ ವಯೋಮಾನದವರಿಗೆ ಹಾಗೂ ವಿಷಯಗಳಿಗೆ ಕೆಲಸ ಮಾಡುತ್ತದೆ. ಇನ್ನೂ ಮುಂದುವರೆದು, ಆ ವಿಷಯದಲ್ಲಿ ಹೆಚ್ಚು ಆಳವಾದ ಜ್ಞಾನವನ್ನು ಪಡೆದುಕೊಂಡು ಮುಂದಿನ ಬಾರಿ ತರಗತಿಯಲ್ಲಿ ಅದನ್ನು ಪ್ರಸ್ತುತಪಡಿಸಲು ವೈಕಿಪೀಡಿಯಾ, ಕೋರಾ, ಮತ್ತು ಗೂಗಲ್ ಸ್ಕಾಲರ್ ಗಳ ಬಹುಪಾಲು ಉಪಯೋಗವನ್ನು ಪಡೆದುಕೊಳ್ಳುವಂತೆ ನಿಮ್ಮ ವಿದ್ಯಾರ್ಥಿಗಳನ್ನು ಉತ್ತೇಜಿಸಿ!

2) DIY ಪ್ರಾಜೆಕ್ಟುಗಳನ್ನು ಒಳಗೊಳ್ಳಿ

ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ಮತ್ತು ತರಗತಿಯಲ್ಲಿ ನಿಮ್ಮಿಂದ ಕಲಿಸಿದ ಪ್ರತಿಯೊಂದನ್ನೂ ವಾಸ್ತವ ಜೀವನಕ್ಕೆ ಸಂಪರ್ಕಿಸಲು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಹುದಾದ ಪ್ರಾಜೆಕ್ಟುಗಳ ವಿಶಾಲ ಶ್ರೇಣಿಯನ್ನು ಇನ್ಸ್ಟ್ರಕ್ಟೆಬಲ್ಸ್ ಒದಗಿಸುತ್ತದೆ. ಅದನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಲು, ಅವರು ಏನನ್ನು ಕಲಿಯುತ್ತಿದ್ದಾರೆ ಎಂಬುದರ ಜಾಡನ್ನು ನೀವು ಹಿಡಿಯಲು ಅನುವಾಗುವಂತೆ ನಿಮ್ಮ ವಿದ್ಯಾರ್ಥಿಗಳು ತಮ್ಮ ಕಲಿಕೆಗಳನ್ನು ಒಂದು ಪ್ರಬಂಧ, ಪ್ರಸ್ತುತಿ ಅಥವಾ ಒಂದು ಚಿಕ್ಕ ವಿಡಿಯೋ ರೂಪದಲ್ಲಿ ಹಂಚಿಕೊಳ್ಳುವಂತೆ ಮಾಡಿ. ಸ್ವತಂತ್ರ ಅಧ್ಯಯನ ಮತ್ತು ಹೋಮ್ವರ್ಕ್ಗಳು ಅಂತರ್-ಸಂಪರ್ಕಿತವಾಗಿರುವುದನ್ನು ನೀವು ಗಮನಿಸಿರಬಹುದು. ಹೋಮ್ವರ್ಕ್ ಪರಿಮಿತಿಯಿಂದಾಚೆ ಇದ್ದಷ್ಟೂ ಮತ್ತು ತೊಡಗಿಸಿಕೊಳ್ಳುವಂತೆ ಇದ್ದಷ್ಟೂ, ನಿಮ್ಮ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯನ್ನು ತಳೆಯುತ್ತಾರೆ ಮತ್ತು ವಿಷಯವನ್ನು ಹೆಚ್ಚು ಇಷ್ಟಪಡುತ್ತಾರೆ!

3) ಮೈಂಡ್ ಮ್ಯಾಪಿಂಗ್ ಅನ್ನು ಉತ್ತೇಜಿಸಿ

ಮೈಂಡ್ ಮ್ಯಾಪಿಂಗ್ ಪ್ರಕ್ರಿಯೆಯು ಒಂದು ಮೂಲ ಸಿದ್ಧಾಂತ ಅಥವಾ ವಿಚಾರದೊಂದಿಗೆ ಆರಂಭಗೊಳ್ಳುತ್ತದೆ, ಹಾಗೂ ಬೇರೆ ಬೇರೆ ಕಲ್ಪನೆಗಳು ಮತ್ತು ವಿಚಾರಗಳಿಗೆ ಹರಡುತ್ತದೆ. ಈ ಅಧ್ಯಯನ ವಿಧಾನವು, ಅವರು ಮನೆಯನ್ನು ತಲುಪಿದ ನಂತರ ತರಗತಿಯಲ್ಲಿ ಅವರಿಗೆ ಕಲಿಸಿದ ಸಂಕೀರ್ಣ ಮಾಹಿತಿಯನ್ನು ಅರ್ಥ ಮಾಡಿಕೊಂಡು, ಗ್ರಹಿಸಲು ನಿಮ್ಮ ವಿದ್ಯಾರ್ಥಿಗಳನ್ನು ಸಶಕ್ತಗೊಳಿಸುತ್ತದೆ. ಬಳಸಲು ಸುಲಭವಾದ ಡಿಜಿಟಲ್ ಮೈಂಡ್ ಮ್ಯಾಪ್ಗಳನ್ನು ರಚಿಸಲು, ಮನೆಯಲ್ಲಿ ಮೈಂಡ್ಮಿಸ್ಟರ್ ಮತ್ತು ಮೈಂಡ್ಮ್ಯಾಪಲ್ ಗಳೊಂದಿಗೆ ಪ್ರಯೋಗ ಮಾಡಿ, ತಮ್ಮ ಮ್ಯಾಪ್ಗಳನ್ನು ಶಾಲೆಯಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವಂತೆ ನಿಮ್ಮ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ. ನಿಮ್ಮ ವಿದ್ಯಾರ್ಥಿಗಳನ್ನು ನಿಜವಾಗಿಯೂ ಸನ್ನದ್ಧರಾಗುವಂತೆ ಮಾಡಲು ಸಂಪೂರ್ಣ ಚಟುವಟಿಕೆಯನ್ನು ಒಂದು ಸ್ಪರ್ಧೆಯನ್ನಾಗಿಯೂ ಸಹ ನೀವು ಪರಿವರ್ತಿಸಬಹುದು.

ಅಧ್ಯಾಯದ ನಂತರ ಅಧ್ಯಾಯವನ್ನು ಉರು ಹೊಡೆದು ಕಲಿಯುವುದು ನಮ್ಮ ಕಲಿಕಾ ಸಂಸ್ಕೃತಿಯ ಭಾಗವಾಗಿಬಿಟ್ಟಿದೆ, ನಾವಿದನ್ನು ಒಟ್ಟಾಗಿ ಕಾಲಾಂತರದಲ್ಲಿ ಬದಲಾಯಿಸಬಹುದು.