ಹೊಸ ಪದಗಳನ್ನು ಕಲಿಯಲು ಪಿಸಿ ನಿಮಗೆ ನೆರವಾಗುವ ಮೂರು ಮಾರ್ಗಗಳು

 
ನಮ್ಮ ಸುತ್ತಲೂ ಶಬ್ದಗಳೇ ತುಂಬಿವೆ. ಅವುಗಳು, ನಮ್ಮ ಸಂಭಾಷಣೆಗಳು, ಶಾಲೆಯಲ್ಲಿ ನೀವು ಅಧ್ಯಯನ ಮಾಡುವ ವಿಷಯಗಳು ಮತ್ತು ಟಿವಿ ಶೋಗಳು, ಕ್ರಿಕೆಟ್ ಪಂದ್ಯಗಳು ಮತ್ತು ಇನ್ನೂ ಮುಂತಾಗಿ ನೀವು ಆನಂದಿಸುವ ಪ್ರತಿಯೊಂದೂ ವಿಷಯಗಳ ನಿರ್ಮಾಣ ಘಟಕಗಳಾಗಿವೆ. ಹಾಗಾಗಿ, ಹೊಸ ಪದಗಳನ್ನು ಕಲಿಯುವುದನ್ನು ನೀವು ಹೇಗೆ ಮುಂದುವರೆಸುತ್ತೀರಿ?
 
1) ಓದಿ, ಓದಿ ಮತ್ತು ಓದಿ!
 
ವಯಸ್ಕರನ್ನೂ ಒಳಗೊಂಡಂತೆ ಪ್ರತಿಯೊಂದು ವಯೋಮಾನದವರಿಗಾಗಿ ಅತ್ಯಂತ ಹೆಚ್ಚು ಪ್ರಯತ್ನಿಸಿ, ಪರೀಕ್ಷಿಸಲ್ಪಟ್ಟ ಸಲಹೆಯಾದ ದಿನನಿತ್ಯದ ಓದು, ಶಬ್ಧ ಭಂಡಾರವನ್ನು ಸುಧಾರಿಸುವುದಾಗಿ ಸಾಬೀತುಪಡಿಸಲ್ಪಟ್ಟಿದೆ ಏಕೆಂದರೆ ಇದರಿಂದಾಗಿ ನೀವು ಹೊಸ ಶಬ್ಧಗಳಿಗೆ ತೆರೆದುಕೊಳ್ಳುತ್ತೀರಿ ಹಾಗೂ ಭಾಷಾ ಸನ್ನಿವೇಶವನ್ನು ಅರ್ಥೈಸಿಕೊಳ್ಳುತ್ತೀರಿ. ದೀರ್ಘಾವಧಿಯಲ್ಲಿ ನೀವು ಓದುವುದಕ್ಕೆ ಅಂಟಿಕೊಳ್ಳುವಂತೆ ವಾಸ್ತವದಲ್ಲಿ ನೀವು ಏನನ್ನು ಆನಂದಿಸುತ್ತೀರೋ ಅದನ್ನೇ ಓದುವುದು ಇಲ್ಲಿ ಅನುಸರಿಸಬೇಕಾದ ತಂತ್ರವಾಗಿದೆ. ನಿಮ್ಮ ಶಾಲೆಯ ಗ್ರಂಥಾಲಯಕ್ಕೆ ಹೋಗಿ, ಕಾಲ್ಪನಿಕ ಸಾಹಿತ್ಯ ಹಾಗೂ ವಾಸ್ತವಿಕ ಸಾಹಿತ್ಯ ಎರಡೂ ಆಯ್ಕೆಗಳಿಗೆ ಉತ್ತಮವಾದ ಹಾಗೂ ಯಾವುದೇ ಪುಸ್ತಕವನ್ನು ಓದಿ. ದೀರ್ಘಕಾಲಿಕ ಓದುಗಳು ನಿಮ್ಮನ್ನು ಬಹಳ ಕಾಲದವರೆಗೆ ಹಿಡಿದಿರಿಸಿಕೊಳ್ಳದಿದ್ದಲ್ಲಿ, Flipboard [1] ಹಾಗೂ In Shorts [2] ಗಳಂಥ ನ್ಯೂಸ್ ಅಗ್ರೆಗೆಟರ್ ವೆಬ್ಸೈಟ್ಗಳಿಗೆ ಸಬ್ಸ್ಕ್ರೈಬ್ ಮಾಡಿ, ಇವುಗಳು ಲೇಖನಗಳನ್ನು ನಿಮ್ಮ ಇಷ್ಟದ ಪ್ರಕಾರ ಕಸ್ಟಮೈಜ್ ಮಾಡುತ್ತವೆ.
 
2) ನೀವು ಆಟವಾಡುತ್ತಲೇ ಕಲಿಯಬಹುದು
 
ನಿಮಗೆ ಸವಾಲನ್ನು ಸ್ವೀಕರಿಸುವುದು ಇಷ್ಟವಾಗುತ್ತದೆಯೇ? The Problem Site [3], EceEnglish [4] ಮತ್ತು Free Rice [5] ಗಳಿಂದ ನಿಮ್ಮನ್ನು ನಿಜವಾಗಿಯೂ ಉತ್ತೇಜಿಸುವ ಆಟವನ್ನು ಆಯ್ದುಕೊಳ್ಳಿ. ಶಾಲೆಯಲ್ಲಿ ವಿರಾಮದ ಸಮಯದಲ್ಲಿ ಮತ್ತು ಶಾಲೆಯ ನಂತರ ಅಥವಾ ರಜಾದಿನಗಳಂದು ಮನೆಯಲ್ಲಿ, ನಿಮ್ಮ ಪಿಸಿಯಲ್ಲಿ ನೀವು ಒಂದು ಗ್ರುಪ್ನಲ್ಲಿ ಆಟವಾಡಬಹುದು. ಇದರಲ್ಲಿ ನಿಮಗೆ *ಬೇಸರವಾಗುವಂಥ* ಹಾಗೂ ನಡುವೆ ಬಿಟ್ಟು ಬಿಡುವಂಥ ಅವಕಾಶವೇ ಇಲ್ಲದಿರುವುದು ಇದರ ಅತ್ಯುತ್ತಮ ಭಾಗವಾಗಿದೆ. ನಿಮ್ಮ ಪ್ರೇರೇಪಣೆ ಏನೇ ಇರಲಿ, ಅದು ನಿಮ್ಮದೇ ಅಥವಾ ನಿಮ್ಮ ಅತ್ಯುತ್ತಮ ಸ್ನೇಹಿತನ ಅತ್ಯುತ್ತಮ ಸ್ಕೋರನ್ನು ಮೀರುವುದಾಗಿರಬಹುದು &ndash ಒಂದು ದಿನಕ್ಕೆ ಒಂದೇ ಆಟವೂ ಸಹ ಒಂದು ಅಥವಾ ಎರಡು ಶಬ್ದಗಳನ್ನು ನೀವು ಗ್ರಹಿಸಲು ನೆರವಾಗುತ್ತದೆ. ವ್ಯತ್ಯಾಸವನ್ನು ಕಾಣಲು ಸ್ವತಃ ಆಟವಾಡಿರಿ!
 
3) ಒಂದು ದಿನಕ್ಕೆ ಒಂದು ಶಬ್ಧ ಸವಾಲನ್ನು ನಿಗದಿಪಡಿಸಿ
 
ನಿಮ್ಮದೇ ಆದ ಆಟವನ್ನು ತಯಾರಿಸುವ ವಿಚಾರ ನಿಮಗೆ ಇಷ್ಟವಾಗುತ್ತಿದ್ದಲ್ಲಿ, ಒಂದು ದಿನಕ್ಕೆ ಒಂದು ಶಬ್ಧ ಸವಾಲನ್ನು ನಿಗದಿಪಡಿಸಿ. Word Think [4] ನ ನೆರವಿನೊಂದಿಗೆ ನೀವು ನಿಮ್ಮ ಸಹಪಾಠಿಗಳು, ಸ್ನೇಹಿತರು, ಮನೆಪಾಠದ ಗುಂಪು ಅಥವಾ ನಿಮ್ಮ ಕುಟುಂಬದವರ ಮಧ್ಯದಲ್ಲಿಯೂ ಸಹ ಇದನ್ನು ಮಾಡಬಹುದು. ಗುಂಪಿನಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ:
 
1) ಒಬ್ಬ ಮಾಡರೇಟರ್ ಅಂದರೆ, ವೆಬ್ಸೈಟಿನಿಂದ ಶಬ್ದ ಮತ್ತು ಅದರ ಅರ್ಥವನ್ನು ಕಂಡುಕೊಳ್ಳಲು ಒಬ್ಬ ವ್ಯಕ್ತಿಯನ್ನು ನಿಯೋಜಿಸಿ
2) ಗುಂಪಿನ ಎಲ್ಲ ಸದಸ್ಯರನ್ನು ಶಬ್ದದ ಅರ್ಥವನ್ನು ಬರೆಯುವಂತೆ ಮಾಡಿ
3) ಉತ್ತರವನ್ನು ಮಾಡರೇಟರ್ ಪರಿಶೀಲಿಸಿ ಸರಿಯಾದುದಕ್ಕೆ ಅಂಕವನ್ನು ನೀಡಬೇಕು

ಕೊನೆಯಲ್ಲಿ ಅದನ್ನು ತಾಳೆ ಮಾಡಿ, ಜಯಶಾಲಿಗಳು ತಮಗೆ ಏನು ಬೇಕು ಎಂಬುದನ್ನು ನಿರ್ಧರಿಸಲಿ!

#DellAarambh ಬಳಸಿಕೊಂಡು ಟ್ವೀಟ್ ಮಾಡಿ ಮತ್ತು ಇಂದು ನಿಮ್ಮ ಮಗು ಯಾವ ಹೊಸ ಶಬ್ದವನ್ನು ಕಲಿತುಕೊಂಡಿದೆ ಎಂಬುದನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ