ಕ್ಲೌಡ್ ಸ್ಟೋರೇಜ್ನಿಂದ ಶಿಕ್ಷಕರು ಪ್ರಯೋಜನ ಹೊಂದಬಹುದಾದ ಮೂರು ಮಾರ್ಗಗಳು

 

ಕ್ಲೌಡ್ ಸ್ಟೋರೇಜ್ ಎಂದರೇನು?

ಕ್ಲೌಡ್ ಸ್ಟೋರೇಜ್ ಎಂಬುದು ನಿಮ್ಮ ಮಹತ್ವದ ದತ್ತಾಂಶವನ್ನು ಸಂಗ್ರಹಿಸಿಡಲು ನೀವು ಬಳಸಬಹುದಾದ ಆನ್ಲೈನ್ ಸ್ಪೇಸ್ ಆಗಿದೆ. ಎಕ್ಸಟರ್ನಲ್ ಹಾರ್ಡ್ ಡ್ರೈವ್ಗಳು ಅಥವಾ ಯುಎಸ್ಬಿ ಫ್ಲ್ಯಾಶ್ ಡ್ರೈವ್ಗಳಂಥ ಫಿಜಿಕಲ್ ಸ್ಟೋರೇಜ್ ಡಿವೈಸ್ಗಳಲ್ಲಿ ನಿಮ್ಮ ಫೈಲ್ಗಳ ಬ್ಯಾಕ್ಅಪ್ ಅನ್ನು ಇರಿಸುವುದಲ್ಲದೇ, ನಿಮಗೆ ಅವಶ್ಯವಾಗಿರುವ ಪ್ರತಿಯೊಂದನ್ನೂ ದೂರದಲ್ಲಿ ಸ್ಟೋರ್ ಮಾಡುವ ಸುರಕ್ಷಿತ ಮಾರ್ಗವನ್ನು ಕ್ಲೌಡ್ ಸ್ಟೋರೇಜ್ ಒದಗಿಸುತ್ತದೆ. ಆನ್ಲೈನ್ ಸ್ಟೋರೇಜ್ ಸೊಲ್ಯುಷನ್ಗಳನ್ನು ಸಾಮಾನ್ಯವಾಗಿ ವರ್ಚುವಲ್ ಸರ್ವರ್ಗಳ ಒಂದು ದೊಡ್ಡದಾದ ನೆಟ್ವರ್ಕ್ ಅನ್ನು ಬಳಸಿಕೊಂಡು ಒದಗಿಸಲಾಗುತ್ತದೆ, ಈ ಸರ್ವರ್ಗಳು ಫೈಲ್ಗಳನ್ನು ನಿರ್ವಹಿಸುವುದಕ್ಕಾಗಿ ಮತ್ತು ನಿಮ್ಮ ವರ್ಚುವಲ್ ಸ್ಟೋರೇಜ್ ಸ್ಪೇಸ್ ಅನ್ನು ಆರ್ಗನೈಜ್ ಮಾಡುವ ಸಾಧನಗಳನ್ನು ಹೊಂದಿರುತ್ತವೆ.

ಕ್ಲೌಡ್ ಸ್ಟೋರೇಜ್ ಅನ್ನು ಬಳಸುತ್ತಾ, ಒಬ್ಬ ಶಿಕ್ಷಕನಾಗಿ ನಾನು ಹೇಗೆ ಪ್ರಯೋಜನವನ್ನು ಹೊಂದಬಹುದು?

1. ವಿದ್ಯಾರ್ಥಿಗಳಿಗೆ ಕಲಿಕಾ ಸಂಪನ್ಮೂಲಗಳಿಗಾಗಿ 24/7 ಪ್ರವೇಶಾವಕಾಶವನ್ನು ಒದಗಿಸಿ

ನೀವು ಆಯ್ಕೆ ಮಾಡುವ ಕ್ಲೌಡ್ ಸ್ಟೋರೇಜ್ ಪ್ರೊವೈಡರ್ ಯಾವುದೇ ಆಗಿರಲಿ, ಕಲಿಕಾ ಸಂಪನ್ಮೂಲಗಳನ್ನು (ಪಾಠದ ಸಾರಾಂಶಗಳು, ವೆಬ್ಸೈಟುಗಳು, ವಿಡಿಯೋಗಳು, ರಸಪ್ರಶ್ನೆಗಳು, ಆಟಗಳು, ಅಸೈನ್ಮೆಂಟುಗಳು ಮತ್ತು ಇನ್ನೂ ಹಲವಾರು) ನಿಮ್ಮ ವಿದ್ಯಾರ್ಥಿಗಳು ಎಲ್ಲಿಂದಲಾದರೂ ಆಗಲಿ, ಯಾವ ಸಮಯದಲ್ಲಾದರೂ ಆಗಲಿ ತಲುಪಬಲ್ಲವರಾಗುತ್ತಾರೆ. ಇದು ತರಗತಿಯಲ್ಲಿ ಕೇವಲ ನೋಟ್ಸ್ ತೆಗೆದುಕೊಳ್ಳುವುದಕ್ಕಿಂತ ವಾಸ್ತವಿಕವಾಗಿ ಉತ್ತಮವಾಗಿ ಆಲಿಸಲು ವಿದ್ಯಾರ್ಥಿಗಳನ್ನು ಅನುಮತಿಸುತ್ತದೆ.

2. ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸಿ

ಗ್ರುಪ್ ಪ್ರಾಜೆಕ್ಟ್ಗಳನ್ನು ಅವಲೋಕಿಸುವ ವಿಷಯಕ್ಕೆ ಬಂದಾಗ, ಯಾರು ಅತ್ಯಂತ ಹೆಚ್ಚಿನ ಮಟ್ಟದ ಕೊಡುಗೆಯನ್ನು ನೀಡಿದ್ದಾರೆ ಎಂಬುದನ್ನು ನೋಡಲು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯಗಳು ಹಾಗೂ ದೌರ್ಬಲ್ಯತೆಗಳನ್ನು ಗುರುತಿಸಲು ಕ್ಲೌಡ್ ಸ್ಟೋರೇಜ್ ನಿಮಗೆ ನೆರವಾಗುತ್ತದೆ. ಅದೇ ರೀತಿಯಾಗಿ, ಪ್ರಬಂಧಗಳು ಮತ್ತು ಪ್ರಸ್ತುತಿಗಳಂಥ ಪ್ರತ್ಯೇಕ ಅಸೈನ್ಮೆಂಟುಗಳಿಗೆ, ಅವಶ್ಯವಾದಾಗ ಹೆಚ್ಚುವರಿ PC ಸಂಪನ್ಮೂಲಗಳನ್ನು ವಿದ್ಯಾರ್ಥಿಗಳಿಗೆ ನೀವು ಒದಗಿಸಬಹುದು.

3. ಹೆಚ್ಚು ವೇಗದ ಪರೀಕ್ಷಾ ಫಲಿತಾಂಶಗಳು

ಪರೀಕ್ಷೆಗಳನ್ನು ಹೆಚ್ಚು ಪದೆ ಪದೆ ತೆಗೆದುಕೊಳ್ಳಬಹುದು ಹಾಗೂ ಫಲಿತಾಂಶಗಳನ್ನು ಹೆಚ್ಚು ವೇಗವಾಗಿ ಒದಗಿಸಬಹುದು (ವಾಸ್ತವದಲ್ಲಿ, ಅದನ್ನು ಅಟೊಮೇಟ್ ಮಾಡಿದ್ದಲ್ಲಿ, ತಕ್ಷಣ ಒದಗಿಸಬಹುದು), ಇದರಿಂದ ತಮ್ಮ ಸ್ಥಾನದ ಬಗ್ಗೆ ಹಾಗೂ ನಿಜವಾದ ಪರೀಕ್ಷೆಗೆ ಹಾಜರಾಗುವ ಮೊದಲು ಎಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಬಹುದು ಎಂಬುದನ್ನು ವಿದ್ಯಾರ್ಥಿಗಳು ನಿಖರವಾಗಿ ತಿಳಿದುಕೊಳ್ಳಬಹುದು! ಫಲಿತಾಂಶಗಳನ್ನು ಇಷ್ಟೊಂದು ವೇಗವಾಗಿ ನೋಡುವಿಕೆಯು ನಿಮ್ಮ ತರಗತಿಯ ಉತ್ಸಾಹವನ್ನು ಹೆಚ್ಚಿಸುತ್ತದೆ ಹಾಗೂ ಇನ್ನೂ ಹೆಚ್ಚು ಉತ್ತಮ ಕಾರ್ಯಪ್ರದರ್ಶನ ನೀಡಲು ಅವರನ್ನು ಪ್ರೋತ್ಸಾಹಿಸುತ್ತದೆ.

ನಾನು ಯಾವ ಕ್ಲೌಡ್ ಸ್ಟೋರೇಜ್ ಆಯ್ಕೆಯನ್ನು ಮಾಡಿಕೊಂಡರೆ ಉತ್ತಮ?

ಬೆಲೆ (ಬಹುಪಾಲು ಸರ್ವೀಸ್ಗಳು ಉಚಿತವಾಗಿ ಲಭ್ಯವಿವೆ), ಭದ್ರತೆ, ಪ್ರೈವಸಿ ಸೆಟಿಂಗ್ಗಳು ಮತ್ತು ಅದು ಬಳಸಲು ಎಷ್ಟು ಸುಲಭವಾಗಿದೆ ಎಂಬ ಅಂಶಗಳನ್ನು ನೀವು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಅದರ ಫಂಕ್ಷನಾಲಿಟಿಯಲ್ಲಿ ನಿಜವಾಗಿಯೂ ಪರಿಣಿತಿಯನ್ನು ಸಾಧಿಸಲು ಮತ್ತು ನಿಮ್ಮ ತರಗತಿ ಹಾಗೂ ವೃತ್ತಿಪರ ಬೆಳವಣಿಗೆ ಗುರಿಗಳ ಅವಶ್ಯಕತೆಗಳನ್ನು ಕಸ್ಟಮೈಜ್ ಮಾಡಲು ಸ್ವಲ್ಪ ಸಮಯ ವ್ಯಯಿಸಿರಿ.

ಅಮೇಝಾನ್ ಡ್ರೈವ್ ಮತ್ತು ಗೂಗಲ್ ಡ್ರೈವ್ಗಳಂಥ ಹಲವಾರು ಆಯ್ಕೆಗಳು ನಿಮಗೆ ಲಭ್ಯವಿದ್ದಾಗಲೂ, ನಿಮ್ಮದೇ ಆದ ವೈಕಿಸ್ಪೇಸಸ್ ಕ್ಲಾಸ್ರೂಮ್ ಅನ್ನು ಸೆಟ್ಅಪ್ ಮಾಡುವುದು ನಿಮ್ಮ ಬಹುತೇಕವಾಗಿ ಫ್ಲೆಕ್ಸಿಬಲ್ ಆದ ಆಯ್ಕೆಯಾಗಿರುತ್ತದೆ.