#BalanceForBetter ತಂತ್ರಜ್ಞಾನವು ನಿಮಗೆ ನೆರವಾಗುವ ಮೂರು ವಿಧಾನಗಳು!

 

 

ಕಂಪ್ಯೂಟರ್ ಗಳನ್ನು, ಮಾನವರ ಜೀವನಗಳನ್ನು ಉತ್ತಮಗೊಳಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, ವರ್ಷಗಳು ಉರುಳಿದಂತೆ, ತಂತ್ರಜ್ಞಾನದಲ್ಲಿನ ಸುಧಾರಣೆಗಳೊಂದಿಗೆ, #BalanceForBetter ನಮಗೆ ನೆರವಾಗುವ ಅದೇ ಕೆಲಸವನ್ನು ಅವುಗಳು ಮಾಡುತ್ತಿವೆ. ಇಂದಿನ ವೇಗದ-ಗತಿಯ ವಿಶ್ವದಲ್ಲಿ ಜೀವನವು ಮಹಿಳೆಯರಿಗೆ ಒಡ್ಡುವ ಹಲವಾರು ಸವಾಲುಗಳ ನಡುವೆ, ಪರ್ಸನಲ್ ಕಂಪ್ಯೂಟರ್ ಒಂದನ್ನು ಹೊಂದಿರುವುದು ತುಂಬಾ ಉಪಯುಕ್ತವಾಗಿರುತ್ತದೆ.

 

1. ಹೊಸ ಕೌಶಲ್ಯಗಳ ಕಲಿಕೆ

 

ಸಾಧನವೊಂದನ್ನು ನುಡಿಸುವುದನ್ನು ಕಲಿಯುವುದಾಗಿರಲಿ ಅಥವಾ ಹೊಸ ಭಾಷೆಯೊಂದನ್ನು ಕಲಿಯುವುದಾಗಿರಲಿ, ಅದರ ಮೇಲೆ ಪರಿಣತಿಯನ್ನು ಸಾಧಿಸಲು ಅಥವಾ ಸಂಪೂರ್ಣವಾಗಿ ಹೊಸದೊಂದನ್ನು ಕಲಿಯಲು ಮೊದಲೇ ಅಸ್ತಿತ್ವದಲ್ಲಿರುವ ನಿಮ್ಮ ಕೌಶಲ್ಯಗಳಿಗೆ ಹೊಳಪನ್ನು ನೀಡಲು ಪರ್ಸನಲ್ ಕಂಪ್ಯೂಟರ್ ಗಳು ಉಪಯುಕ್ತವಾಗಿರುತ್ತವೆ. ವೃತ್ತಿ ಹಾಗೂ ವಿರಾಮ ಇವುಗಳ ನಡುವೆ ವಿಭಜನೆ ಇಲ್ಲದಿರುವುದು ಇದರಲ್ಲಿನ ಅತ್ಯುತ್ತಮ ಭಾಗವಾಗಿದ್ದು, ನಿಮ್ಮ ಆಕಾಶಕ್ಕೆ ಮಿತಿ ಅಕ್ಷರಶಃ ಇಲ್ಲವಾಗುತ್ತದೆ!

 

2. ಕೆಲಸ + ಜೀವನಗಳ ಏಕೀಕರಣ

 

“ಸಮತೋಲನ ಸಾಧಿಸುವಿಕೆ”ಯ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆಯಾದರೂ ಅದರ ನಿಜವಾದ ಸಾಧನೆಯು ಏಕೀಕರಣದಲ್ಲಿ ಅಡಗಿರುತ್ತದೆ. ಕೆಲಸಕ್ಕಾಗಿ ಕಛೇರಿಗೆ ಪ್ರಯಾಣಿಸಬೇಕಾದ ಅವಶ್ಯಕತೆ ಇಲ್ಲದೇ, ತುರ್ತು ಇ-ಮೇಲ್ ಗಳಿಗೆ ನಿಮ್ಮ ಮನೆಯ ಅನುಕೂಲತೆಯಿಂದಲೇ ನೀವು ಉತ್ತರಿಸುವುದಾದರೆ ಎಷ್ಟು ಚೆನ್ನ, ಅಲ್ಲವೇ! ಅದು ಒಂದು ಉತ್ತಮ ಅನುಭವವಷ್ಟೇ ಅಲ್ಲದೇ, ಒತ್ತಡ-ಮುಕ್ತರಾಗಿರುವಿಕೆಗಾಗಿಯೂ ಸಹ ತುಂಬಾ ಅನುಕೂಲಕರ ವಾತಾವರಣವನ್ನು ಕಲ್ಪಿಸುತ್ತದೆ.

 

3. ಪ್ರತಿಯೊಂದನ್ನೂ ಹೊಂದಿಸುವುದಕ್ಕೆ ಸಂಬಂಧಿಸಿದ ವಿಚಾರ

 

ನಮ್ಮ ಹೆಗಲಿನ ಮೇಲಿನ ದೈನಂದಿನ ಕಾರ್ಯಭಾರ ಹಾಗೂ ನಮ್ಮನ್ನು ಆವರಿಸಿರುವ ಗೌಜು ಗದ್ದಲದ ನಡುವೆ, ಹಲವಾರು ಕಾರ್ಯಗಳನ್ನು ಆಯೋಜಿಸಿಕೊಳ್ಳುವಲ್ಲಿ ಪರ್ಸನಲ್ ಕಂಪ್ಯೂಟರ್ ತುಂಬಾ ಉಪಯುಕ್ತವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ, ಮಾಡಬೇಕಾದ ಕೆಲಸಗಳ ಪಟ್ಟಿಯೊಂದನ್ನು ಪರ್ಸನಲ್ ಕಂಪ್ಯೂಟರ್ ನಲ್ಲಿ ನಾವು ತಯಾರಿಸಿಕೊಂಡು, ಆ ಕಾರ್ಯಗಳನ್ನು ಸಕಾಲಿಕವಾಗಿ ಜಾರಿಗೊಳಿಸುವಲ್ಲಿ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದನ್ನು ನಾವು ಖಚಿತಪಡಿಸಿಕೊಳ್ಳಬಹುದು. ಮನೆಯಲ್ಲಿ, ಮನೆಯ ಅಂದಗೊಳಿಸುವಿಕೆಯನ್ನು ಯೋಜಿಸುವುದರಿಂದ ಹಿಡಿದು ನಿಮ್ಮ ರಜಾದಿನಗಳಿಗಾಗಿ ಬಜೆಟ್ ಅನ್ನು ಹೊಂದಿಸುವವರೆಗೆ, ನೀವು ಆಯ್ಕೆ ಮಾಡುವ ಪ್ರತಿಯೊಂದರಲ್ಲಿಯೂ ಪರ್ಸನಲ್ ಕಂಪ್ಯೂಟರ್ ಗಳು ನಿಮಗೆ ನೆರವಾಗುತ್ತವೆ.


ಪರ್ಸನಲ್ ಕಂಪ್ಯೂಟರ್ ಒಂದು ನಿಮ್ಮ ಬಳಿ ಇರುವಾಗ, ಅದು ಶಾರ್ಟ್ ಕೋರ್ಸ್ ಆಗಿರಲಿ ಅಥವಾ ನಿಮ್ಮದೇ ಆದ ಬಿಜಿನೆಸ್ ಅಥವಾ ನಿಮ್ಮ ಕೆಲಸಕ್ಕೆ ಸಂಬಂಧಿಸಿದುದಾಗಿರಲಿ, ಪ್ರತಿಯೊಂದನ್ನು ಮಾಡಲು ನೀವು ಸಶಕ್ತರಾಗಿರುತ್ತೀರಿ ಹಾಗೂ ನೀವು ಅನುಸರಿಸಬಯಸುವ ಪ್ರತಿಯೊಂದೂ ನಿಮ್ಮ ನಿಯಂತ್ರಣದಲ್ಲಿರುತ್ತದೆ. ಉತ್ತಮತೆಗಾಗಿ ಸಂತುಲನಗೊಳಿಸಲು ಮೊದಲ ಹೆಜ್ಜೆಯನ್ನು ಇರಿಸಲು ನೀವು ಸಿದ್ಧರಾಗುವುದಷ್ಟೇ ನೀವು ಮಾಡಬೇಕಾದ ಕೆಲಸವಾಗಿರುತ್ತದೆ