ಆನ್ಲೈನ್ ಮಿಥ್ಯೆಯನ್ನು ವಾಸ್ತವಾಂಶದಿಂದ ಪ್ರತ್ಯೇಕಿಸಲು ಮೂರು ಮಾರ್ಗಗಳು

 

ಕಾಲಿನ್ಸ್ ನಿಘಂಟಿನಿಂದ 2017 ನೇ ವರ್ಷದ ಪದ(ಗಳು) ಎಂದು ಅಧೀಕೃತವಾಗಿ ಹೆಸರಿಸಲ್ಪಟ್ಟ, “ಫೇಕ್ ನ್ಯೂಸ್ (ಸುಳ್ಳು ಸುದ್ದಿ)” ಎಂಬುದು ಅನಾವಶ್ಯಕ ಒತ್ತಡ, ಆತಂಕ ಮತ್ತು ಗೊಂದಲವನ್ನು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿರುವಂಥದ್ದಾಗಿದೆ. [1]

ಕೆಲವೊಮ್ಮೆ ಹಳೆ ಸುದ್ದಿಯನ್ನು ಮರುಹೊದಿಕೆಗೊಳಿಸಿ ಲೈವ್ ಬ್ರೇಕಿಂಗ್ ನ್ಯೂಸ್ ರೂಪದಲ್ಲಿ, ದಾರಿ ತಪ್ಪಿಸುವ ಚಿತ್ರಗಳು ಮತ್ತು ವಿಡಿಯೋಗಳು ಅಥವಾ ಅತಿರೇಕದ ಮತ್ತು ಅವಿಶ್ವಸನೀಯ ಲೇಖನ ಶೀರ್ಷಿಕೆಯನ್ನು ಸಾಮಾಜಿಕ ಮಾಧ್ಯಮ ಮತ್ತು ವ್ಹಾಟ್ಸ್ಆ್ಯಪ್ನಾದ್ಯಂತ ಶೇರ್ ಮಾಡಿಕೊಳ್ಳಲಾಗುತ್ತದೆ.

ಎರಡೂ ರೀತಿಯಲ್ಲಿಯೂ, ಸುಲಭವಾಗಿ ಪ್ರಭಾವಕ್ಕೊಳಗಾಗಬಹುದಾದ ಚಿಕ್ಕ ವಯಸ್ಸಿನ ಮಕ್ಕಳನ್ನು ಹೊಂದಿರುವ ಪೋಷಕರನ್ನು ವಿಶೇಷವಾಗಿ ಚಿಂತೆಗೀಡು ಮಾಡುತ್ತಾ, ಕಲ್ಪಿತ ವಿಷಯವನ್ನು ವಾಸ್ತವಾಂಶದಿಂದ ಪ್ರತ್ಯೇಕಿಸುವುದು ಕಷ್ಟಕರವಾಗುತ್ತದೆ.

ಫೇಕ್ ನ್ಯೂಸ್ನಲ್ಲಿರುವ ಮಿಥ್ಯಾಂಶವನ್ನು ಕಂಡುಕೊಳ್ಳುವುದಕ್ಕಾಗಿ, ಬಳಸಲು ಸಿದ್ಧವಿರುವ ಚೆಕ್ಲಿಸ್ಟ್ ಅನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ:

1) ಲೇಖಕನು ಪಕ್ಷಪಾತಿಯಾಗಿದ್ದಾನೆ

ಒಂದು ನಿರ್ದಿಷ್ಟ ಸಂಸ್ಥೆ ಅಥವಾ ವ್ಯಕ್ತಿಯೆಡೆಗಿನ ಪೂರ್ವಾಗ್ರಹಿಕೆಯು ಲೇಖಕನ ದೃಷ್ಟಿಕೋನವು ಸಮತೋಲಿತವಾಗಿಲ್ಲ ಎಂಬುದನ್ನು ಸೂಚಿಸುವ ದೊಡ್ಡ ಲಕ್ಷಣವಾಗಿರುತ್ತದೆ. ಪ್ರತಿಯೊಂದೂ ದೃಷ್ಟಿಕೋನಕ್ಕೆ ನ್ಯಾಯಬದ್ಧವಾದ ಅವಕಾಶವನ್ನು ನೀಡದೇ, ಒಂದು ನಿರ್ದಿಷ್ಟ ಭಾಗಶಃ ಅಭಿಪ್ರಾಯವು ಇತರವುಗಳಿಗಿಂತ ಬಹಳ ಹೆಚ್ಚಿನ ಗಮನವನ್ನು ಪಡೆದುಕೊಳ್ಳುತ್ತದೆ. ನಿರ್ದಿಷ್ಟವಾಗಿ ಬರೆಯಲ್ಪಟ್ಟಿರುವ ವಿಷಯದ ಬಗೆಗಿನ ಪಕ್ಷಪಾತವನ್ನು ಬೆಂಬಲಿಸಲು ಚಿತ್ರಗಳು ಅಥವಾ ವಿಡಿಯೋಗಳು ಇದ್ದಲ್ಲಿ, ಒಬ್ಬ ವ್ಯಕ್ತಿಯ ಅಭಿಪ್ರಾಯವನ್ನು ಇದು ಸುಲಭವಾಗಿ ಬದಲಾಯಿಸಬಲ್ಲದಾಗಿರುತ್ತದೆ.

2) ಅತಿ-ನಾಟಕೀಕರಣದ ಅಂಶ

ಕಪ್ಪು ಹಣದ ಜಾಡು ಹಿಡಿಯಲು ಹೊಸ ಕರೆನ್ಸಿ ನೋಟುಗಳಲ್ಲಿ ಚಿಪ್ನ ಅಳವಡಿಕೆ
- ಇದು ಒಂದು ಸುಳ್ಳು ಸುದ್ದಿ ಎಂದು ಆರ್ಬಿಐ ಖಚಿತಪಡಿಸಿದೆ. [2]

ರಾಷ್ಟ್ರಪತಿ ಕೋವಿಂದ್ರವರು ಒಂದೇ ಗಂಟೆಯಲ್ಲಿ 3 ದಶಲಕ್ಷ ಫಾಲೋವರ್ಗಳನ್ನು ಗಳಿಸಿಕೊಂಡಿದ್ದಾರೆ
- ಪ್ರತಿಯೊಬ್ಬ ಭಾರತೀಯ ರಾಷ್ಟ್ರಪತಿಗಳೂ ಅದೇ ಅಧೀಕೃತ ಟ್ವಿಟರ್ ಖಾತೆಯನ್ನು ಬಳಸುತ್ತಾರೆ. ರಾಷ್ಟ್ರಪತಿ ಕೋವಿಂದ್ರವರು ಮಾಜಿ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿರವರ ಫಾಲೋವರ್ಗಳನ್ನು ಪಡೆದುಕೊಂಡಿದ್ದರು. [3]

2030 ರಲ್ಲಿ ಮಂಗಳ ಗ್ರಹಕ್ಕೆ ಹೋಗಲು ನಾಸಾದಿಂದ ಹರಿಯಾಣದ ಜಸ್ಲೀನ್ ಕೌರ್ರವರು ಆಯ್ಕೆ ಮಾಡಲ್ಪಟ್ಟಿದ್ದಾರೆ
ಪಿಹೆಚ್ಡಿ ವಿದ್ಯಾರ್ಥಿ ಮತ್ತು ಸಂಶೋಧಕರಾಗಿರುವ ಅವರು ತಾವು ಇನ್ನೂ ಒಬ್ಬ “ಆಕಾಂಕ್ಷಿ ಗಗನಯಾತ್ರಿ” ಎಂದು ಸ್ಪಷ್ಟಪಡಿಸಿದರು. [4]

ಉತ್ಪ್ರೇಕ್ಷೆ ಅಥವಾ ಅತಿಯಾಗಿದೆ ಎಂದು ಅನಿಸುವ ಯಾವುದೇ ವಿಷಯವು ಸುಳ್ಳು ಸುದ್ದಿಯಾಗಿರಬಹುದಾಗಿದೆ. ಒಂದು ಅಥವಾ ಎರಡು ವಾಕ್ಯಗಳು ಸರಿಯಾಗಿರುತ್ತವೆ ಆದರೆ ಸಂಪೂರ್ಣ ಲೇಖನದಲ್ಲಿ ದೊಡ್ಡದೊಡ್ಡ, ಪರಿಶೀಲಿಸಿಲ್ಲದ ದಾವೆಗಳು ಪ್ರಧಾನವಾಗಿದ್ದಲ್ಲಿ, ಅದು ಒಂದು ಗಮನಾರ್ಹವಾದ ಕೆಂಪು ಬಾವುಟವನ್ನು ಹೊಂದಿರುತ್ತದೆ.

3. ಅದು ಕೇವಲ ಒಂದೇ ಮೂಲವನ್ನು ಹೊಂದಿದೆ

ಆನ್ಲೈನಿನಲ್ಲಿ ಅದೇ ರೀತಿಯ ಕಥಾವಸ್ತು ನಿಮಗೆ ಕಾಣಿಸದಿದ್ದಲ್ಲಿ ಅಥವಾ ಲೇಖನವು ಮಾಹಿತಿಯನ್ನು ಪರಿಶೀಲಿಸುವ ಬೇರೆ ಬೇರೆ ಮೂಲಗಳನ್ನು ಹೊಂದಿಲ್ಲದಿದ್ದಲ್ಲಿ, ಅದು ಸುಳ್ಳು ಸುದ್ದಿಯಾಗಿರಬಹುದಾಗಿದೆ. ಎಲ್ಲ ಪ್ರಮುಖ ಪ್ರಕಟಣೆಗಳೂ ಅದರ ಬಗ್ಗೆ ಮಾತನಾಡುತ್ತಿಲ್ಲದಿದ್ದಲ್ಲಿ, ಅದು ಒಂದು ಭಾಗಶಃ ಸುದ್ದಿಯಾಗಿರುವುದಷ್ಟೇ ಅಲ್ಲದೇ, ಜನಾಭಿಪ್ರಾಯವನ್ನು ಬದಲಿಸಲು ಒಬ್ಬ ವ್ಯಕ್ತಿ ಅಥವಾ ಸಮೂಹವು ಎಚ್ಚರಿಕೆಯಿಂದ ಹೆಣೆದ ತಂತ್ರವಾಗಿರಬಹುದಾದ ಸಾಧ್ಯತೆ ಇರುತ್ತದೆ.

ಪೇರೆಂಟಿಂಗ್ ಎಂಬುದು ತುಂಬಾ ಕಠಿಣವಾಗಿದ್ದು, ಡಿಜಿಟಲ್ ಆಗಿ ಇರುವುದು ತನ್ನದೇ ಆದ ಸವಾಲುಗಳ ಸಮೂಹವನ್ನು ಹೊಂದಿರುತ್ತದೆ. ಆದಾಗ್ಯೂ, PC ಯ ಪ್ರವೇಶಾವಕಾಶದ ಲಭ್ಯತೆ ಮತ್ತು ಸೂಕ್ತವಾದ ತಾಂತ್ರಿಕ ಜ್ಞಾನದೊಂದಿಗೆ, ನೀವು ಡಿಜಿಟಲ್ ಪೇರೆಂಟ್ ಆಗಿರುವುದರ ದಾಳವನ್ನು ಉರುಳಿಸಬಹುದು. ನಿಮ್ಮ ಡಿಜಿಟಲ್ ಪೇರೆಂಟಿಂಗ್ ಸಂತೋಷದಾಯಕವಾಗಿರಲಿ!