ಸಂಕೇತೀಕರಿಸುವುದು ಹೇಗೆ ಎಂಬುದನ್ನು ಕಲಿಯಲು ನಿಮಗೆ ನೆರವಾಗುವ ಮೂರು ವೆಬ್ಸೈಟ್ಗಳು

“ನಾನು ಒಬ್ಬ ಫ್ರೆಂಚ್ ವಿದ್ಯಾರ್ಥಿಯಾಗಿದ್ದು, 10 ವರ್ಷ ವಯಸ್ಸಿನವನಾಗಿದ್ದಲ್ಲಿ, ಇಂಗ್ಲೀಷ್ ಅನ್ನು ಕಲಿಯುವುದಕ್ಕಿಂತ ಸಂಕೇತೀಕರಿಸುವುದನ್ನು ಕಲಿಯುವುದು ಹೆಚ್ಚು ಪ್ರಮುಖವಾಗುತ್ತಿತ್ತು ಎಂದು ನನಗೆ ಅನಿಸುತ್ತದೆ. ಜನರಿಗೆ ಇಂಗ್ಲೀಷ್ ಕಲಿಯದಿರಲು ನಾನು ಹೇಳುತ್ತಿಲ್ಲ – ಇದು ಜಗತ್ತಿನಲ್ಲಿ 7 ಶತಕೋಟಿ ಜನರಿಗೆ ನಿಮ್ಮನ್ನು ನೀವು ಅಭಿವ್ಯಕ್ತಗೊಳಿಸಲು ನೀವು ಬಳಸಬಹುದಾದ ಭಾಷೆಯಾಗಿದೆ. ಕೋಡಿಂಗ್ ಎಂಬುದು ವಿಶ್ವದಲ್ಲಿನ ಪ್ರತಿಯೊಂದು ಸಾರ್ವಜನಿಕ ಶಾಲೆಯಲ್ಲಿಯೂ ಅಗತ್ಯವಾಗಿರುವ ವಿಷಯವಾಗಿದೆ ಎಂದು ನನಗೆ ಅನಿಸುತ್ತದೆ,“ – ಟಿಮ ಕುಕ್, ಆ್ಯಪಲ್ ಇಂಕ್ನ ಸಿಇಓ. [1]

ಕೋಡರ್ ಎಂದರೆ ಒಂದು ರೋಬೋಟ್ ಅಲ್ಲ. ಅಥವಾ ಸೈಬಾರ್ಗ್ ಅಥವಾ ದೂರದಿಂದ “ಕೃತಕವಾಗಿರುವ” ಯಾವುದೋ ಒಂದು ವಸ್ತು ಅಲ್ಲ. ಅವನು ಅಥವಾ ಅವಳು ಬಹುತೇಕವಾಗಿ ಸ್ಪಷ್ಟ ಯೋಚನಾಲಹರಿಯನ್ನು ಹೊಂದಿದ್ದು, ವಿಶ್ವವು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಸಂಕೇತಗಳನ್ನು ಬರೆಯುವ ಸಾಮರ್ಥ್ಯವನ್ನು ಹೊಂದಿರುವ ನಿಮ್ಮ ಪಕ್ಕದಲ್ಲಿಯೇ ಕುಳಿತಿರುವ ವ್ಯಕ್ತಿಯಾಗಿರಬಹುದು, ನಿಮ್ಮ ಅತ್ಯುತ್ತಮ ಸ್ನೇಹಿತನಾಗಿರಬಹುದು ಅಥವಾ ಒಬ್ಬ ನಿಮ್ಮ ನೆರೆಮನೆಯ ವ್ಯಕ್ತಿಯೂ ಆಗಿರಬಹುದು. ನೀವು ಇದನ್ನು ಹೇಗೆ ಆರಂಭಿಸಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ:

ಮೂಲಭೂತ ವಿಷಯಗಳೊಂದಿಗೆ ಪ್ರಾರಂಭಿಸಿ

45 ಶತಕೋಟಿಗೂ ಹೆಚ್ಚು ಕಲಿಕೆದಾರರನ್ನು ಹೊಂದಿರುವ Codecademy ಎಂಬುದು ಅದರ ಬಳಸಲು ಸರಳವಾದ ಇಂಟರ್ಫೇಸ್ ಮತ್ತು ಪ್ರತಿ ಹಂತದಲ್ಲಿನ ಮಾರ್ಗದರ್ಶಿತ್ವದಿಂದಾಗಿ ಕೋಡಿಂಗ್ ಅನ್ನು ಕಲಿಯುವ ಜನಪ್ರಿಯ ಮೂಲವಾಗಿದೆ. ಇದರ ಪ್ರತಿಯೊಂದು ಕೋರ್ಸ್, ಮುಂದಿನ ಒಂದು ದೊಡ್ಡ ಆ್ಯಪ್ ಅನ್ನು ಮಾಡಲು ಮಾತ್ರ ಕಲಿಯುವುದಕ್ಕಿಂತ ಇತರ ವಿಷಯಗಳಿಗೂ ಸಹ ನಿಮ್ಮ ಕಲಿಕೆಯನ್ನು ವಿಸ್ತರಿಸಿಕೊಳ್ಳಲು ನಿಮಗೆ ನೆರವಾಗುತ್ತಾ, ಬೇರೆ ರೀತಿಯಲ್ಲಿ ಆಲೋಚಿಸುವುದು ಮತ್ತು ಕಲಿಯುವುದರ ಕಡೆಗೆ ನಿಮ್ಮ ಬುದ್ದಿಯನ್ನು ತರಬೇತುಗೊಳಿಸುವುದರ ಬಗ್ಗೆ ಇದೆ.

ನೀವು ಒಬ್ಬ ವೃತ್ತಿಪರರಾಗುವವರೆಗೂ ಆಡುತ್ತಲೇ ಇರಿ

ಹೊಸದೇನನ್ನೋ ಕಲಿಯುವುದು ಉತ್ಸಾಹಭರಿತವಾಗಿರುವಷ್ಟೇ ಪ್ರಮಾಣದಲ್ಲಿ ಭಯ ಹುಟ್ಟಿಸುವಂಥದ್ದೂ ಆಗಿರುತ್ತದೆ. ಕೋಡಿಂಗ್ನಲ್ಲಿ ಅನ್ವೇಷಿಸುವುದು ಬಹಳಷ್ಟಿರುವುದರಿಂದ ಇದಕ್ಕೆ ಕೋಡಿಂಗ್ ಸಹ ಹೊರತೇನಲ್ಲ. ಅದು ನಿಮಗೆ ಸಾಧ್ಯವಾಗುತ್ತದೆಯೇ ಎಂಬುದನ್ನು ನೋಡಲು ಮತ್ತು ಅವರ ಆಟಗಳನ್ನು ಆಟವಾಡುತ್ತಾ ಬಹಳಷ್ಟು ಮೋಜನ್ನು ಅನುಭವಿಸುತ್ತಲೇ ಪ್ರ್ಯಾಕ್ಟೀಸ್ ಮಾಡಲು Code ನ ವಿಶ್ವ-ವಿಖ್ಯಾತ “Hour of Code" ಗಾಗಿ ಒಂದು ಗಂಟೆಯನ್ನು ಮೀಸಲಿರಿಸುವ ಮೂಲಕ ನೀವು ಆರಂಭಿಸಬಹುದು. ಶ್ರೇಷ್ಠವಾದ ಮೈನ್ಕ್ರಾಫ್ಟ್ನಿಂದ ಹಿಡಿದು ನಿಮ್ಮದೇ ಆಟವನ್ನು ತಯಾರಿಸುವವರೆಗೆ ಪ್ರತಿಯೊಬ್ಬರಿಗೂ ಅದರಲ್ಲಿ ಏನಾದರೂ ಇದ್ದೇ ಇರುತ್ತದೆ.

ನಿಮ್ಮದೇ ಆದ ಸೃಷ್ಟಿಯನ್ನು ಕೋಡ್ ಮಾಡಿ

ನಿಮ್ಮದೇ ಆದ ಮೂಲ ಕಥೆಗಳು, ಆಟಗಳು, ಎನಿಮೇಶನ್ಗಳು ಮುಂತಾದವುಗಳಿಗೆ ಜೀವ ತುಂಬಲು ಎಂಐಟಿ ಮೀಡಿಯಾ ಲ್ಯಾಬ್ ವೆಂಚರ್ ಆಗಿರುವ ಸ್ಕ್ರ್ಯಾಚ್, ನೀವು ಭೇಟಿ ನೀಡಬೇಕಿರುವ ವೆಬ್ಸೈಟ್ ಆಗಿದೆ. ಸೂಕ್ತ ಪ್ರಮಾಣದ ಕಮಾಂಡ್ಗಳನ್ನು ಬಳಸಿಕೊಳ್ಳುವ ಮೂಲಕ, ಹೆಚ್ಚು ಮುಂದುವರೆದ ಭಾಷೆಗಳ ಮೂಲಭೂತ ವಿಷಯಗಳನ್ನು ಕಲಿಯುತ್ತಲೇ ನೀವು ಏನನ್ನಾದರೂ ಸೃಷ್ಟಿಸಬಹುದು. ಅಲ್ಲದೇ, ಆನ್ಲೈನಿನಲ್ಲಿ ಕೋಡರ್ಗಳ ಒಂದು ಸಂಪೂರ್ಣ ಸಮುದಾಯವೇ ಇದ್ದು, ಪ್ರಾಯೋಗಿಕ ಸಲಹೆಗಳು ಮತ್ತು ಪ್ರಾಜೆಕ್ಟ್ಗಳ ಮೇಲೆ ಫೀಡ್ಬ್ಯಾಕ್ ಅನ್ನೂ ಸಹ ಒದಗಿಸುತ್ತದೆ.

ಕೋಡ್ ಮಾಡುವುದನ್ನು ಯಾರೇ ಆಗಲಿ ಕಲಿಯಬಹುದು, ಇದಕ್ಕಾಗಿ ನಿಮಗೆ ಬೇಕಾಗಿರುವುದು ಒಂದು PC ಮಾತ್ರ ಆಗಿರುತ್ತದೆ. ಮೂಲಭೂತ ವಿಷಯಗಳನ್ನು ನೀವು ಕೆಲವೇ ಗಂಟೆಗಳಲ್ಲಿ ಕಲಿತುಕೊಳ್ಳಬಹುದು ಹಾಗೂ ಕೆಲವು ವಾರಗಳಲ್ಲಿಯೇ ಬಿಗಿನರ್ ವೆಬ್ಸೈಟ್ಗಳು ಮತ್ತು ಆ್ಯಪ್ಗಳನ್ನು ನಿರ್ಮಿಸಲು ಸಮರ್ಥರಾಗುತ್ತೀರಿ. ತಾಂತ್ರಿಕ ಜಗತ್ತಿನಲ್ಲಿ ಮುಂದಿನ ಯುವ ಸಾಧಕರಾಗುವ ನಿಮ್ಮ ಮಾರ್ಗದಲ್ಲಿ ನೀವು ಸಾಗಬಹುದು.