ಒಬ್ಬ ಸುಪರ್ ಪ್ರೊಡಕ್ಟಿವ್ ಸ್ಟುಡೆಂಟ್ ಆಗಬಯಸುತ್ತೀರಾ?

 

 

ಪರೀಕ್ಷೆಗಳು ಅಗಾಧವೆನ್ನಿಸಬಹುದು. ಈ ಅಗಾಧ ಒತ್ತಡವು ನಿಮ್ಮ ಅತ್ಯುತ್ತಮ ಆವೃತ್ತಿಯನ್ನು ವ್ಯಕ್ತಪಡಿಸುವ ನಿಮ್ಮ ದಾರಿಗೆ ಅಡ್ಡವಾಗಬಹುದು. ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಕೆಲವು ಸಲಹೆಗಳು ಹಾಗೂ ಎಚ್ಚರಿಕೆಯಿಂದ ಕೂಡಿದ ಯೋಜಿಸುವಿಕೆಯೊಂದಿಗೆ ನಿಮಗೆ ಲಭ್ಯವಿರುವ ಸಮಯದ ಸದುಪಯೋಗವನ್ನು ನೀವು ಪಡೆದುಕೊಳ್ಳಬಹುದು. ಹೇಗೆ ಎಂದು ತಿಳಿದುಕೊಳ್ಳಲು ಮುಂದೆ ಓದಿ:

1. ಮಾಡಬೇಕಿರುವ ಕೆಲಸಗಳ ಪಟ್ಟಿಯು ನಿಮ್ಮ ಸ್ನೇಹಿತನಾಗಿರಲಿ

ನೀವು ಅಭ್ಯಾಸ ಮಾಡಬೇಕಿರುವ ಪ್ರತಿಯೊಂದೂ ವಿಷಯ ಹಾಗೂ ನೀವು ಸಲ್ಲಿಸಬೇಕಿರುವ ಅಸೈನ್ಮೆಂಟ್ಗಳನ್ನು ಪಟ್ಟಿ ಮಾಡುವಿಕೆಯು ವಿಷಯಗಳನ್ನು ಪುನಃ ಮರೆತುಬಿಡುವ ಬಗ್ಗೆ ನೀವು ಎಂದಿಗೂ ಚಿಂತಿಸಬೇಕಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಪೂರ್ಣಗೊಳಿಸಿರುವ ಹಾಗೂ ಅಪೂರ್ಣವಿರುವ ಕೆಲಸಗಳ ಸ್ಪಷ್ಟ ಚಿತ್ರಣವನ್ನು ಪಡೆದುಕೊಳ್ಳುವುದು, ನಿಮ್ಮ ಸಮಯವನ್ನು ನೀವು ಹೇಗೆ ಹೂಡಿಕೆ ಮಾಡುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಹಾಗೂ ಅದರ ಜಾಡನ್ನು ಇರಿಸಲು ನಿಮಗೆ ನೆರವಾಗುತ್ತದೆ.

ನಿಮ್ಮ ಟು-ಡೂ-ಲಿಸ್ಟ್ಗಳನ್ನು ತಯಾರಿಸುವ ಪಿಸಿ ಸಂಪನ್ಮೂಲಗಳು:
Todoist
Google Keep

2. ನೋಟ್ಸ್ ಮಾಡಿಕೊಳ್ಳುವಾಗ ಚುರುಕುತನದಿಂದ ಇರಿ

ನಿಮ್ಮ ನೋಟ್ಸ್ಗಳನ್ನು ನೀವು ಸರಿಯಾಗಿ ಮಾಡಿಕೊಂಡಲ್ಲಿ, ನಿಮ್ಮ ಅರ್ಧ ಕೆಲಸ ಮುಗಿದಂತೆಯೇ. ಅಸೈನ್ಮೆಂಟ್ ಅನ್ನು ಸಲ್ಲಿಸುವ ಅಥವಾ ಪರೀಕ್ಷೆಗಾಗಿ ಸಿದ್ಧತೆ ನಡೆಸುವ ಮೊದಲು ಉಂಟಾಗುವ “ಮಾಹಿತಿಯ ಅತಿಭಾರ” ದ ಭಯವನ್ನು ಗೆಲ್ಲಲು ಇದು ನೆರವಾಗುತ್ತದೆ. ಪಠ್ಯ, ರೇಖಾಚಿತ್ರಗಳು, ವೆಬ್ಪೇಜ್ಗಳು, ವಿಡಿಯೋ ಮತ್ತು ಆಡಿಯೋ ಕ್ಲಿಪ್ಗಳನ್ನೂ ಒಳಗೊಂಡಂತೆ ನಿಮ್ಮ ಎಲ್ಲ ಸಂಪನ್ಮೂಲಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಲೂ ಸಹ ಕೆಲವು ಸಾಧನಗಳು ನಿಮ್ಮನ್ನು ಅನುಮತಿಸುತ್ತವೆ!

ನೋಟ್ಸ್ ತೆಗೆದುಕೊಳ್ಳುವುದಕ್ಕಾಗಿ ಪಿಸಿ ಸಂಪನ್ಮೂಲಗಳು:
Evernote
One Note

3. ನಿಮ್ಮ ಗುರಿಗಳನ್ನು ನಿಮ್ಮ ಕಣ್ಣೆದುರಿಗೆ ಸ್ಪಷ್ಟವಾಗಿ ಇರಿಸಿಕೊಳ್ಳಿ

ಮೂಡ್ ಬೋರ್ಡ್ಗಳು, ನಿಮ್ಮ ಕನಸುಗಳನ್ನು ನನಸಾಗಿಸಲು ಆ ಹೆಚ್ಚುವರಿ ಹೆಜ್ಜೆಯನ್ನು ಇರಿಸುವಂತೆ ನಿಮ್ಮಲ್ಲಿ ಸ್ಫೂರ್ತಿಯನ್ನು ತುಂಬುವ ಪ್ರತಿಯೊಂದನ್ನೂ ಒಳಗೊಂಡಂತೆ ನಿಮ್ಮ ಗುರಿಗಳ ಚಿತ್ರಾತ್ಮಕ ಪ್ರತಿನಿಧಿಸುವಿಕೆಗಳಾಗಿರುತ್ತವೆ. ನಿಮ್ಮ ಗುರಿಗಳನ್ನು (ಶೈಕ್ಷಣಿಕ ಮತ್ತು ಅನ್ಯಥಾ, ಎರಡೂ) ದೃಶ್ಯೀಕರಿಸಿಕೊಳ್ಳುವಿಕೆಯು ನೀವು ಮಾಡುವುದರಲ್ಲೆಲ್ಲಾ ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡುವಂತೆ ಪ್ರೇರೇಪಿತ ಭಾವನೆಯನ್ನು ನೀವು ಹೊಂದಲು ನಿಮಗೆ ನೆರವಾಗುತ್ತದೆ.

ನಿಮ್ಮ ಮೂಡ್ ಬೋರ್ಡ್ ಸೃಷ್ಟಿಸುವುದಕ್ಕಾಗಿ ಪಿಸಿ ಸಂಪನ್ಮೂಲಗಳು:
Go Moodboard
Canva

4. ನಿಮ್ಮ “ಗಂಟೆಗಳನ್ನು” ಕಂಡುಕೊಳ್ಳಿ

ವ್ಯಯಿಸಿದ ಸಮಯದ ಬಗ್ಗೆ ಸಮಯದ ಜಾಡು ಹಿಡಿಯುವ ವೆಬ್ಸೈಟ್ಗಳು ಸ್ಪಷ್ಟತೆಯನ್ನು ಒದಗಿಸುತ್ತವೆ, ಸಮಯವನ್ನು ಕಬಳಿಸುವ ಚಟಿವಟಿಕೆಗಳ ಜಾಡು ಹಿಡಿದು, ಹೆಚ್ಚು ಉತ್ತಮವಾಗಿ ಆದ್ಯತೀಕರಿಸಲು ನಿಮಗೆ ನೆರವಾಗುತ್ತವೆ. ಹಾಗಾಗಿ, ನೀವು ರಾತ್ರಿ ಇಡೀ ಓದುವವರಾಗಿರಲಿ ಅಥವಾ ಬೆಳಗಿನ ಜಾವದಲ್ಲಿ ಎದ್ದು ಓದುವವರಾಗಿರಲಿ, ನೀವು ಯಾವಾಗ ಹೆಚ್ಚು ಏಕಾಗ್ರತೆಯನ್ನು ಹೊಂದಿರುತ್ತೀರಿ ಎಂಬುದನ್ನು ಕಂಡುಕೊಳ್ಳಿ, ಹಾಗೂ ಅದಕ್ಕನುಗುಣವಾಗಿ ನಿಮ್ಮ ಅಭ್ಯಾಸದ ವೇಳಾಪಟ್ಟಿಯನ್ನು ಯೋಜಿಸಿಕೊಳ್ಳಿ.

ನಿಮಗೆ ನೆರವಾಗುವ ಪಿಸಿ ಸಂಪನ್ಮೂಲಗಳು:
Toggl
Time Camp

5. ನಿಮ್ಮ ಸುತ್ತಲೂ ನಿಮ್ಮಷ್ಟೇ ಪ್ರೇರೇಪಿತರಾದ ಜನರನ್ನು ಇಟ್ಟುಕೊಳ್ಳಿ

ಅವಿರತ ಪ್ರಯತ್ನ ಎಂಬುದು ಸಾಂಕ್ರಾಮಿಕವಾಗಿರುತ್ತದೆ. ಅಭ್ಯಾಸ ಮಾಡುವುದರೆಡೆಗೆ ಸಕಾರಾತ್ಮಕ ಹೊರನೋಟವನ್ನು ಹೊಂದಿರುವ ಹಾಗೂ ನಿರಂತರವಾಗಿ ಸಿದ್ಧತೆಯನ್ನು ಮಾಡುವ ಜೊತೆಗಾರರನ್ನು ಹೊಂದಿರುವಿಕೆಯು, ನೀವೂ ಸಹ ಅವರನ್ನು ಹಿಂಬಾಲಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ.

ತರಗತಿಯಲ್ಲಿ ಉತ್ಪಾದಕರಾಗಿರುವುದಲ್ಲದೇ, ಮನೆಯಲ್ಲಿ ಉತ್ಪಾದಕತೆಯಿಂದ ಕೂಡಿರುವುದೂ ಸಹ ಪ್ರಮುಖವಾಗಿರುತ್ತದೆ. ಮಾಡುವುದಕ್ಕಾಗಿ ನಿಮಗೆ ಹೋಮ್ವರ್ಕ್ಗಳು ಇದ್ದೇ ಇರುತ್ತವೆ, ಹೋಮ್ವರ್ಕ್ಗಳನ್ನು ಪರಿಣಾಮಕಾರಿಯಾಗಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಈ ಏಳೂ ಪಿಸಿ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಿ, ನೀವು ಅದನ್ನು ಆನಂದಿಸಲೂಬಹುದು!