ನಿಮ್ಮ ಮಕ್ಕಳು ಕಲಿಯಲು ಇಷ್ಟಪಡುವ ವೆಬ್ಸೈಟ್ಗಳು: ವಯಸ್ಸಿಗನುಗುಣವಾದ ಮಾರ್ಗದರ್ಶಿ

 

ನಿಮ್ಮ ಮಗುವಿಗಾಗಿ ನೀವೊಂದು PC ಯನ್ನು ಕೊಂಡುಕೊಂಡಿದ್ದೀರಿ ಹಾಗೂ ಅದರ ನೆರವಿನೊಂದಿಗೆ ನಿಮ್ಮ ಮಗು ಕಲಿಯುವುದನ್ನು ನೋಡಲು ಕಾತರರಾಗಿದ್ದೀರಿ. ಆದರೆ, PC-ಎನೇಬಲ್ಡ್ ಲರ್ನಿಂಗ್ ಪ್ರಕ್ರಿಯೆಯನ್ನು ನೀವು ಹೇಗೆ ಆರಂಭಿಸುತ್ತೀರಿ? ನಿಮ್ಮ ಮಗುವಿಗೆ ಉತ್ತಮ ಆರಂಭವನ್ನು ನೀಡಲು ವಯಸ್ಸಿಗನುಗುಣವಾದ ಮಾರ್ಗದರ್ಶಿಯೊಂದನ್ನು ಇಲ್ಲಿ ನೀಡಲಾಗಿದೆ.

5 – 7 ವರ್ಷಗಳು

ಮೋಜು ಮತ್ತು ಕಲಿಕೆಯ ನಡುವೆ ಸಮತೋಲನವನ್ನು ಪರಿಪೂರ್ಣಗೊಳಿಸುವ ಆಟಗಳೊಂದಿಗೆ ಲರ್ನಿಂಗ್ ಗೇಮ್ಸ್ ಫಾರ್ ಕಿಡ್ಸ್ ಎಂಬುದನ್ನು ಶಾಲೆಯ ನಂತರ ನಿಮ್ಮ ಮಗುವನ್ನು ಹಿಡಿದಿರಿಸಿಕೊಳ್ಳಲು ನೀವು ಬಳಸಬಹುದಾಗಿದೆ. ಅಧ್ಯಯನದೊಂದಿಗೆ ಒಂದು ದೀರ್ಘಾವಧಿ ಮತ್ತು ಸಕಾರಾತ್ಮಕ ಬಾಂಧವ್ಯವನ್ನು ಸೃಷ್ಟಿಸುತ್ತಾ, ಈ ಆಟಗಳು ಶಾಲೆಯ ನಂತರ ಮಕ್ಕಳು ಕಲಿಯುವಿಕೆಯನ್ನು ಕಾಟಾಚಾರಕ್ಕಾಗಿ ಮಾತ್ರ ಮಾಡದೇ ನಿಜವಾಗಿಯೂ ಕಲಿಯಬಯಸುವಂತೆ ಮಾಡುತ್ತವೆ. ಎಲ್ಲ ಆಟಗಳನ್ನು ವರ್ಣಮಾಲೆಯ ಕ್ರಮದಲ್ಲಿ ನೋಡುವ ಆಯ್ಕೆಯೊಂದಿಗೆ ಎಲ್ಲ ಆಟಗಳನ್ನು ವಯಸ್ಸಿಗನುಗುಣವಾಗಿ ವಿಭಜಿಸಲಾಗಿರುವುದು ಇದರ ಅತ್ಯುತ್ತಮ ಭಾಗವಾಗಿದೆ.

8 – 10 ವರ್ಷಗಳು

ಅಪ್ ಟುಟೆನ್ ನ ಸುಲಭ ನ್ಯಾವಿಗೇಶನ್ ಮತ್ತು ವರ್ಣಮಯ ಎನಿಮೇಶನ್ ಗಳು ಈ ವೆಬ್ ಸೈಟ್ ಅನ್ನು, ವಿಶೇಷವಾಗಿ, ಇದರ ಸಂಕ್ಷಿಪ್ತ ಹಾಗೂ ನಿರ್ದಿಷ್ಟ ಅಂಶಗಳ ವಿಡಿಯೋಗಳನ್ನು ವಿದ್ಯಾರ್ಥಿಗಳ ಅಚ್ಚುಮೆಚ್ಚಿನವನ್ನಾಗಿಸುತ್ತವೆ. ವಿಡಿಯೋಗಳಲ್ಲಿ ಬಳಸಲಾದ ಭಾಷೆಯು ಸ್ನೇಹಪರ ಮತ್ತು ಮರುಭರವಸೆದಾಯಕವಾಗಿದ್ದು, ಮಾತನಾಡಿದ ಪರಿಕಲ್ಪನೆಗಳನ್ನು ಹೆಚ್ಚು ಸ್ಮರಣೀಯವನ್ನಾಗಿಸುತ್ತಾ ಹಾಗೂ ಆನಂದಿಸುವಂತೆ ಮಾಡುತ್ತಾ ಮಕ್ಕಳಿಗೆ ತಮ್ಮ ಒಬ್ಬ ಸ್ನೇಹಿತರೇ ಕಲಿಸುತ್ತಿರುವಂತೆ ಭಾಸವಾಗುತ್ತದೆ. ವಿಷಯಗಳನ್ನು ಸರಳೀಕರಿಸುವ ಇಂಟರಾಕ್ಟಿವ್ ಕಲರಿಂಗ್ ಶೀಟ್ ಗಳು ಮತ್ತು ಆಟಗಳ ವಿಭಾಗವೂ ಇದರಲ್ಲಿದೆ.

10 – 12 ವರ್ಷಗಳು

ಈ ವಯಸ್ಸಿನಲ್ಲಿ ಮಕ್ಕಳು, ಶಾಲೆಯಲ್ಲಿ ಕಲಿಸಿದುದನ್ನು ಇನ್ನೂ ಹೆಚ್ಚು ಆಳವಾಗಿ ಅಗೆಯಲು ಅವರನ್ನು ಕುತೂಹಲಿಗಳನ್ನಾಗಿಸುವ ಶಬ್ದಭಂಡಾರ ಮತ್ತು ಅಂಕಗಣಿತಗಳಂಥ ಮೂಲಭೂತ ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದಿರುತ್ತಾರೆ. ಇಲ್ಲಿಯೇ ವಂಡರ್ ಪೋಲೀಸ್ ಚಿತ್ರಣದಲ್ಲಿ ಬರುವುದು. ತಾವು ತಿಳಿದುಕೊಳ್ಳಬಯಸುವ ಪದವೊಂದನ್ನು ನಿಮ್ಮ ಮಕ್ಕಳು ಇದರಲ್ಲಿ ಹುಡುಕಬಹುದು ಅಥವಾ ಹೊಸದನ್ನು ಕಲಿಯಲು ಅಥವಾ ವಾಸ್ತವಿಕ ಜಗತ್ತಿನಲ್ಲಿ ಪ್ರಮುಖ ವಿಷಯಗಳ ಅನ್ವಕತೆಯನ್ನು ಗ್ರಹಿಸಲು ವೆಬ್ ಸೈಟಿನಲ್ಲಿನ ವೈಶಿಷ್ಟ್ಯಗಳೇನೇನು ಎಂಬುದನ್ನು ಅನ್ವೇಷಿಸಲು ಸಮಯವನ್ನು ಮೀಸಲಿರಿಸಬಹುದು. 

12 ವರ್ಷಗಳು ಮತ್ತು ಮೇಲ್ಪಟ್ಟು

ರಿವಿಜನ್ ಮಾಡುವುದಕ್ಕಾಗಿ ತಮ್ಮ ಬ್ರೌಜರ್ ನಲ್ಲಿ ಮಕ್ಕಳು ಬುಕ್ ಮಾರ್ಕ್ ಮಾಡಬೇಕಿರುವ ಒಂದು ವೆಬ್ ಸೈಟ್ ಎಂದರೆ ಬ್ರೇನ್ ಸ್ಕೇಪ್, ಇದರಲ್ಲಿ ಪರಿಣಿತರಿಂದ ಮಾಡಲಾದ ವಿಷಯ-ನಿರ್ದಿಷ್ಟ ಫ್ಲ್ಯಾಶ್ ಕಾರ್ಡ್ ಗಳಿದ್ದು, ವಿಷಯವನ್ನು ಹೆಚ್ಚು ಉತ್ತಮವಾಗಿ ಹಿಡಿದಿರಿಸಿಕೊಳ್ಳಲು ನೆರವಾಗುತ್ತವೆ. ತಮ್ಮ ಸ್ಥಾನವೇನು ಹಾಗೂ ತಾವು ಎಲ್ಲಿ ಸುಧಾರಣೆ ಮಾಡಬೇಕಿದೆ ಎಂಬುದನ್ನು ನೋಡಲು ನಿಮ್ಮ ಮಕ್ಕಳು ಪರೀಕ್ಷೆಗೂ ಮೊದಲು ತಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಬಹುದು. ಅದಕ್ಕಿಂತಲೂ ಹೆಚ್ಚಾಗಿ, ಸರಿಯಾದ ಉತ್ತರಗಳನ್ನು ಪಡೆದುಕೊಳ್ಳುವುದರಿಂದ ಸಿಗುವ ಆತ್ಮವಿಶ್ವಾಸದ ವೃದ್ಧಿಯು ನಿಮ್ಮ ಮಗುವಿನ ಪರೀಕ್ಷಾ ಭಯವನ್ನು ಖಂಡಿತವಾಗಿ ದೂರ ಮಾಡುತ್ತದೆ.

ಸ್ವಲ್ಪ ಅನ್ವೇಷಣೆಯೊಂದಿಗೆ ನಿಮ್ಮ ಮಕ್ಕಳಿಗಾಗಿ ಬಹಳಷ್ಟನ್ನು ನೀವು ಕಂಡುಕೊಳ್ಳುತ್ತೀರಿ. ನಿಮ್ಮ ಮಗುವಿಗಾಗಿ ಅತ್ಯುತ್ತಮವಾದುದನ್ನು ನೀವು ಕಂಡುಕೊಳ್ಳುವಂತೆ ಕೇವಲ ಒಂದು ಚೆಕ್ ಲಿಸ್ಟ್ ಅನ್ನು ಗಮನದಲ್ಲಿರಿಸಿಕೊಳ್ಳಿ. :)