ನೀವು ಯಾವ ರೀತಿಯ ವಿದ್ಯಾರ್ಥಿಯಾಗಿದ್ದೀರಿ?

 

ನೀವು ಸಾಮಾಜಿಕವಾಗಿ ಒಬ್ಬ ಅಚ್ಚುಮೆಚ್ಚಿನ ವ್ಯಕ್ತಿಯಾಗಿರಬಹುದು, ತರಗತಿಯಲ್ಲಿನ ಜಾಣ ವಿದ್ಯಾರ್ಥಿಯಾಗಿರಬಹುದು ಅಥವಾ ಎರಡೂ ಆಗಿರಬಹುದು, ನೀವು ಏನಾಗಿದ್ದೀರಿ ಎಂಬುದನ್ನು ಕಂಡುಕೊಳ್ಳಲು ಮುಂದೆ ಓದಿ!

1) ಸಾಮಾಜಿಕ ನೆಚ್ಚಿನ ವ್ಯಕ್ತಿ

ಕೆಲವು ನಿಷ್ಠಾವಂತ ಹಿಂಬಾಲಕರು ಹಾಗೂ ಹೋಲಿಕೆ ಮಾಡಲು ಸ್ವಲ್ಪ ಕಷ್ಟವೆನಿಸಬಹುದಾದ ಚೈತನ್ಯದ ಚಿಲುಮೆಯೊಂದಿಗೆ ನೀವು ಒಬ್ಬ ಜನ್ಮಜಾತ ನಾಯಕರಾಗಿರಬಹುದು. ಪ್ರತಿಯೊಬ್ಬರ ಬಾಯಲ್ಲಿಯೂ ನಿಮ್ಮ ಹೆಸರು ನಲಿದಾಡುತ್ತಿರುತ್ತದೆ...

2) ಸಂಕೋಚದ ಮುದ್ದೆ

ನೀವು, ತೀವ್ರ ಅವಶ್ಯಕತೆಯುಂಟಾದಾಗ ಮಾತ್ರ ಮಾತನಾಡಲು ಬಾಯಿ ತೆರೆಯುವ ಒಬ್ಬ ವ್ಯಕ್ತಿಯಾಗಿರಬಹುದು ಅಥವಾ ನಿಮ್ಮ ಬಗ್ಗೆ ನಿಮ್ಮ ಸಹಪಾಠಿಗಳು ಏನು ಯೋಚಿಸುತ್ತಾರೆ ಎಂಬ ಬಗ್ಗೆ ಸ್ವಲ್ಪ ಭಯಬೀತರಾಗುವಂಥವರಾಗಿರಬಹುದು – ತೊಂದರೆಯಿಲ್ಲ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಕಡೆಯಿಂದಲೇ ಆರಂಭಿಸಿರುತ್ತಾರೆ.

3) ಜಾಣ ವಿದ್ಯಾರ್ಥಿ

ನೀವು ಏನು ಎಂಬುದು ನಿಮಗೆ ತಿಳಿದಿದೆ.
ನಿಮ್ಮ ನೋಟ್ಸ್ಗಳು ಸದಾ ಬೇಡಿಕೆಯಲ್ಲಿರುತ್ತವೆ.

4) ಸಮರ್ಥ ಮತ್ತು ಮೌನಿ

ನೀವು ಸಂಕೋಚದ ಮುದ್ದೆ ಮತ್ತು ಜಾಣ ವಿದ್ಯಾರ್ಥಿಯ ಸಂಯೋಜನೆಯಾಗಿದ್ದೀರಿ – ನೀವು ಪ್ರತಿಯೊಂದರಲ್ಲಿಯೂ ಅಗ್ರ ಶ್ರೇಯಾಂಕದಲ್ಲಿರುವುದನ್ನು ಕಂಡು ಜನರಿಗೆ ಸಾಮಾನ್ಯವಾಗಿ ಆಶ್ಚರ್ಯವಾಗುತ್ತದೆ.

5) ಪ್ರಶ್ನೆಗಳ ರಾಜ

ನೀವು ಅತ್ಯಂತ ರಾಂಡಮ್ ಆದ ಅಥವಾ ವಿವರ-ನಿರ್ದಿಷ್ಟವಾದ ಪ್ರಶ್ನೆಗಳನ್ನು ಕೇಳುತ್ತೀರಿ ಹಾಗೂ ಪ್ರಶ್ನೆಗಳನ್ನು ಕೇಳಲು ಸಂಕೋಚಪಡುವುದಿಲ್ಲವಾದ್ದರಿಂದ ಶಿಕ್ಷಕರು ನಿಮ್ಮೊಂದಿಗೆ ಪ್ರೀತಿ/ದ್ವೇಷದ ಸಂಬಂಧವನ್ನು ಹೊಂದಿದ್ದಾರೆ.

ಹಾಗಾದರೆ ನೀವು ಇವುಗಳಲ್ಲಿ ಯಾರಾಗಿದ್ದೀರಿ?

ವಿದ್ಯಾರ್ಥಿಯಾಗಿರುವುದರ ಅತ್ಯುತ್ತಮ ಭಾಗವೆಂದರೆ ಸರಿಯಾದ ಮನಸ್ಥಿತಿಯನ್ನು ಮತ್ತು ಸಂಪನ್ಮೂಲಗಳಿಗೆ ಪ್ರವೇಶಾವಕಾಶವನ್ನು ನೀವು ಹೊಂದಿರುವಾಗ ನೀವು ನಿರಂತರವಾಗಿ ವಿಕಸನಗೊಳ್ಳಬಹುದು ಹಾಗೂ ನೀವು ಅಧ್ಯಯನ ಮಾಡುತ್ತಿರುವ ವಿಷಯಗಳ ಮೇಲಿನ ನಿಮ್ಮ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳಬಹುದು. ಶಾಲೆ ಮತ್ತು ಮನೆಯಲ್ಲಿ PC ಯೊಂದಕ್ಕೆ ಪ್ರವೇಶಾವಕಾಶ, ಮನಸ್ಸಿನಲ್ಲಿ ಒಂದು ಆಲೋಚನೆ ಮತ್ತು ಸ್ಪೂರ್ತಿಯೊಂದಿಗೆ – ಈ ಶೈಕಕ್ಷಣಿಕ ವರ್ಷವನ್ನು ನಿಮ್ಮ ಹಿಂದೆಂದಿಗಿನದ್ದಕ್ಕಿಂತಲೂ ಅತ್ಯುತ್ತಮವನ್ನಾಗಿಸಿಕೊಳ್ಳುವ ಸಾಮರ್ಥ್ಯವನ್ನು ನೀವು ಹೊಂದಿರುತ್ತೀರಿ!