ಓರ್ವ ಉತ್ತಮ ಶಿಕ್ಷಕರನ್ನು ಮಹಾನ್ ಶಿಕ್ಷಕರನ್ನಾಗಿಸುವ ಅಂಶಗಳು ಯಾವವು?

“ಶಿಕ್ಷಕ ವೃತ್ತಿ ಎಂಬುದು ಇತರ ಎಲ್ಲ ವೃತ್ತಿಗಳನ್ನು ರೂಪಿಸುವಂಥ ಒಂದು ವೃತ್ತಿಯಾಗಿದೆ.”

- ಅನಾಮಿಕ. [1]

 

ಓರ್ವ ಶಿಕ್ಷಕರನ್ನು ಮಹಾನ್ ಆಗಿಸುವ ಅಂಶ ಯಾವುದು? ಅದು, ತಮ್ಮ ಮಗುವಿನ ಶೈಕ್ಷಣಿಕ ಸಾಮರ್ಥ್ಯವನ್ನು ನಿರಂತರವಾಗಿ ಹಾಗೂ ಅವರ ಅತ್ಯುತ್ತಮ ಸಾಮರ್ಥ್ಯದವರೆಗೆ ಹೊರತರುವ ಯಾರಾದರೂ ಆಗಿರಬಹುದು ಎಂಬುದಾಗಿ ಒಬ್ಬ ಪಾಲಕರು ಹೇಳುತ್ತಾರೆ. ಮತ್ತೊಂದೆಡೆಗೆ, ಒಬ್ಬ ಮಹಾನ್ ಶಿಕ್ಷಕರು ಎಂದರೆ ದೈನಂದಿನ ಕಲಿಕೆಯಲ್ಲಿ ಮೋಜನ್ನು ತುಂಬಿ, ಪರಿಕಲ್ಪನೆಗಳು ಎಷ್ಟೇ ಸಂಕೀರ್ಣವಾಗಿದ್ದರೂ ಸಹ ಅವುಗಳನ್ನು ತಿಳಿದುಕೊಂಡು, ನೆನಪಿಟ್ಟುಕೊಳ್ಳಲು ತಮಗೆ ನಿಜವಾಗಿಯೂ ನೆರವಾಗುವ ಯಾರಾದರೂ ಆಗಿರಬಹುದು ಎಂದು ಒಬ್ಬ ವಿದ್ಯಾರ್ಥಿ ಹೇಳುತ್ತಾನೆ.

ಹಾಗಾದರೆ, ಓರ್ವ ಉತ್ತಮ ಶಿಕ್ಷಕರನ್ನು ಮಹಾನ್ ಶಿಕ್ಷಕರನ್ನಾಗಿಸುವ ಅಂಶಗಳು ಯಾವವು?

 

1. ಅವರು ಗುರಿಗಳನ್ನು ಇಟ್ಟುಕೊಂಡಿರುತ್ತಾರೆ

ನೀವು ಗುರಿಯೊಂದನ್ನು ನಿಗದಿಪಡಿಸಿದಾಗ, ದೀರ್ಘ-ಕಾಲಿಕ ದೃಷ್ಟಿಯೊಂದನ್ನು ನೀವು ಇಟ್ಟುಕೊಂಡಿರುತ್ತೀರಿ. ಪ್ರೇರೇಪಣೆ ಹಾಗೂ ಕ್ರಿಯೆಗಳು ಸಹಜವಾಗಿ ಅನುಸರಿಸಿಕೊಂಡು ಬರುತ್ತವೆ. ಉನ್ನತ ನಿರೀಕ್ಷೆಗಳನ್ನು ನಿಗದಿಪಡಿಸುವ ಮೂಲಕ, ಒಂದು ಅಂಚನ್ನು ಹಾಗೂ ದಿಶೆಯ ವಾಸ್ತವಿಕ ಸಂವೇದನೆಯೊಂದನ್ನು ನಿಮಗೆ ನೀವು ಒದಗಿಸಿಕೊಳ್ಳುತ್ತಿದ್ದೀರಿ.

 

2. ಪ್ರತಿ ತರಗತಿಗೆ ಅವರು ತಯಾರಿ ಮಾಡಿಕೊಳ್ಳುತ್ತಾರೆ

ಕ್ರಿಯಾ ಯೋಜನೆಯೊಂದನ್ನು ಹೊಂದಿಲ್ಲದ ಗುರಿಯನ್ನು ಇಟ್ಟುಕೊಳ್ಳುವುದರ ಸಾಫಲ್ಯತೆ ಏನು? ಅದು ಕೇವಲ ಒಂದು ಹಗಲುಗನಸಾಗಿ ಉಳಿದುಬಿಡುತ್ತದೆ! ಇದಕ್ಕಾಗಿಯೇ, ಕಲಿಸುವಿಕೆಯ ಅತ್ಯಂತ ನಿರ್ಣಾಯಕ ಭಾಗಗಳಲ್ಲಿ ಪಠ್ಯ-ಯೋಜಿಸುವಿಕೆಯೂ ಒಂದಾಗಿರುತ್ತದೆ. ಇದು ಒಂದು ರೀತಿ ನಿಜವಾದ ನಾಟಕ ಪ್ರದರ್ಶನಕ್ಕೂ ಮೊದಲಿನ ಡ್ರೆಸ್ ರಿಹರ್ಸಲ್ ಇದ್ದಂತೆ.

ಒಂದು ಆರಂಭಿಕ ಅಂಶ ನಿಮಗಾಗಿ ಇಲ್ಲಿದೆ: ಪಠ್ಯ ಯೋಜನೆಗಳಿಗಾಗಿ 5 ಅವಶ್ಯಕ ಅಂಶಗಳ ನಿಮ್ಮ ಚೆಕ್ ಲಿಸ್ಟ್

 

3. ಅವರು ಆಲಿಸುತ್ತಾರೆ

ಇದು ಬಹುಸಾಮಾನ್ಯವಾಗಿ ನಾವು ಕಡೆಗಣಿಸಿಬಿಡುವಂಥ ಒಂದು ವಿಚಾರವಾಗಿದೆ. ನಾವು ಬರೀ ಕೇಳಿಸಿಕೊಳ್ಳುತ್ತೇವೆಯೇ ಹೊರತು ವಾಸ್ತವಿಕವಾಗಿ ಆಲಿಸುವುದಿಲ್ಲ. ಸಂವಾದದಲ್ಲಿ ತೊಡಗಿಕೊಳ್ಳುವ ಮೂಲಕ ಹಾಗೂ ತಾವು ಏನನ್ನು ಹೇಳಬೇಕಿದೆ ಹಾಗೂ ತಾವು ಕೇಳಬೇಕಿರುವ ಪ್ರಶ್ನೆಗಳಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುವ ಮೂಲಕ ತಮ್ಮ ವಿದ್ಯಾರ್ಥಿಗಳೊಂದಿಗೆ ಬಾಂಧವ್ಯವನ್ನು ನಿರ್ಮಿಸಿಕೊಳ್ಳುವ ನಿಜವಾದ ಪ್ರಯತ್ನವನ್ನು ಮಾಡುವ ಶಿಕ್ಷಕರು ಹೆಚ್ಚು ಉತ್ತಮ ಪ್ರದರ್ಶನವನ್ನು ತೋರುವ ಹಾಗೂ ಅಭ್ಯಾಸದಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳನ್ನು ಹೊಂದಿರುತ್ತಾರೆ ಎಂದು ವರ್ಷಾನುಗಟ್ಟಲೇ ಮಾಡಿದ ಅಧ್ಯಯನಗಳು ತೋರಿಸಿವೆ. [2]

 

4. ತಮ್ಮ ಕಲಿಸುವಿಕೆಯನ್ನು ವಾಸ್ತವಿಕ ಜೀವನದೊಂದಿಗೆ ಅವರು ಸಂಪರ್ಕಿಸುತ್ತಾರೆ

ಪರ್ಸನಲ್ ಕಂಪ್ಯೂಟರ್ ಪ್ರಮುಖ ಪಾತ್ರವನ್ನು ವಹಿಸುವುದು ಇಲ್ಲಿಯೇ. ಇಂಟರ&zwj್ಯಾಕ್ಟಿವ್ ಆದ ಹಾಗೂ ಪ್ರಸ್ತುತಿಗಳು, ವಿಡಿಯೋಗಳು, ಇನ್ಫೋಗ್ರಾಫಿಕ್ ಗಳು, ಶೈಕ್ಷಣಿಕ ಸಾಮಗ್ರಿಯ ಗೇಮ್ ಗಳು ಮತ್ತು ಇನ್ನೂ ಮುಂತಾದಂಥ ಸಿದ್ಧವಾಗಿ-ಲಭ್ಯವಿರುವ ಶೈಕ್ಷಣಿಕ ಸಂಪನ್ಮೂಲಗಳ ಕೃಪೆಯಿಂದಾಗಿ ಒಂದು ಪರ್ಸನಲ್ ಕಂಪ್ಯೂಟರ್ ಕಲಿಕೆಗೆ ಅಕ್ಷರಶಃ ಜೀವವನ್ನು ತುಂಬುತ್ತದೆ.


5. ಅವರು ಜೀವಮಾನವಿಡೀ ಕಲಿಯುತ್ತಲೇ ಇರುತ್ತಾರೆ

ನಿಮ್ಮ ಶಿಕ್ಷಕ ವೃತ್ತಿಯ ಯಾವುದೇ ಹಂತದಲ್ಲಿ ನೀವಿದ್ದರೂ ಸಹ, ವಿಷಯದ ಬಗ್ಗೆ ಓದಿ ತಿಳಿದುಕೊಳ್ಳುವುದನ್ನು ಹಾಗೂ ಅಪ್-ಟು-ಡೇಟ್ ಆಗಿರುವುದನ್ನು ನೀವು ಮುಂದುವರೆಸಲೇಬೇಕು. ವಾಸ್ತವದಲ್ಲಿ, ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆ ವಿಷಯದ ಮೇಲಿನ ಒಂದು ವಿಭಿನ್ನವಾದ ಗ್ರಹಿಕೆಯನ್ನು ನಿಮಗೆ ನೀಡುವುದಕ್ಕಾಗಿ ನಿಮ್ಮ ವಿಷಯದ ಸುತ್ತಮುತ್ತಲಿನವುಗಳನ್ನು ಅಥವಾ ಸಂಪೂರ್ಣವಾಗಿ ಭಿನ್ನವಾದ ಬೇರೇನೋ ಒಂದನ್ನು ನೀವು ಓದಬಹುದು. ನೀವು ಬೌದ್ಧಿಕವಾಗಿ ಉತ್ತೇಜಿತರಾದ ಭಾವನೆಯನ್ನು ಅನುಭವಿಸುವುದಷ್ಟೇ ಅಲ್ಲದೇ, ನಿಮ್ಮ ಮಾರ್ಗದಲ್ಲಿ ಒದಗಿದ ಅವಕಾಶಗಳನ್ನು ಪ್ರಶಂಸಿಸಲೂ ಸಹ ನಿಮಗೆ ಸಾಧ್ಯವಾಗುತ್ತದೆ.

ಇದೆಲ್ಲವೂ #DigitalLearning ಗೆ ಸಂಬಂಧಿಸಿದುದಾಗಿದ್ದು, ನಿಮ್ಮ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಲಿಕೆಯನ್ನು ಒದಗಿಸುವುದಕ್ಕಾಗಿ, ಪರ್ಸನಲ್ ಕಂಪ್ಯೂಟರ್ ಗಳನ್ನೂ ಒಳಗೊಂಡಂತೆ, ತಂತ್ರಜ್ಞಾನದ ಸದುಪಯೋಗವನ್ನು ನೀವು ಇಲ್ಲಿ ಮಾಡಿಕೊಳ್ಳುತ್ತಿರುತ್ತೀರಿ.