ಅಸೈನ್ಮೆಂಟ್ಗಳು ಹಾಗೂ ಪರೀಕ್ಷೆಗಳನ್ನು ಮೌಲ್ಯಮಾಪನ ಮಾಡುವಾಗ ಏನನ್ನು ಗಮನದಲ್ಲಿರಿಸಿಕೊಳ್ಳಬೇಕು

 

 

ಸ್ವಲ್ಪ ಹೆಚ್ಚು ವೇಗವಾಗಿರಬೇಕಿತ್ತು ಎಂದು ಶಿಕ್ಷಕರು ಬಯಸುವಂಥದ್ದೇನಾದರೂ ಇದ್ದಲ್ಲಿ, ಅದು ಉತ್ತರಪತ್ರಿಕೆಗಳ ಮೌಲ್ಯಮಾಪನವಾಗಿರುತ್ತದೆ. ಪ್ರತಿ ಟರ್ಮ್ನಲ್ಲಿನ ಪರೀಕ್ಷೆಗಳು, ಕ್ಲಾಸ್ ಟೆಸ್ಟ್ಗಳು ಹಾಗೂ ರೆಗ್ಯುಲರ್ ಅಸೈನ್ಮೆಂಟ್ಗಳು ಇದ್ದೇ ಇರುತ್ತವಾದ್ದರಿಂದ ಸೂಕ್ತ ಸಾಧನಗಳೊಂದಿಗೆ ನೀವು ಸನ್ನದ್ಧರಾಗಿರಬೇಕಾಗುತ್ತದೆ ಹಾಗೂ ಮೌಲ್ಯಮಾಪನವನ್ನು ಉತ್ಸಾಹದಿಂದ ಕೈಗೊಳ್ಳಲು ತಯಾರಿರಬೇಕಾಗುತ್ತದೆ. ಈ ಮಾರ್ಗದರ್ಶಿಯನ್ನು ಗಮನದಲ್ಲಿರಿಸಿಕೊಳ್ಳಿ, ನಿಮ್ಮ ಮೌಲ್ಯಮಾಪನವು ಹೆಚ್ಚು ಕಾರ್ಯದಕ್ಷತೆಯಿಂದ ಕೂಡಿರುವುದನ್ನು ಆಗ ಗಮನಿಸಿ.

1. ನಿಮ್ಮ ಉತ್ತರ ಪುಸ್ತಿಕೆಯನ್ನು ಸಿದ್ಧವಾಗಿಟ್ಟುಕೊಳ್ಳಿ

ಒಂದು ಸರಳವಾದ ವರ್ಡ್ ಡಾಕ್ ರೂಪದಲ್ಲಾಗಿರಲಿ ಅಥವಾ ಎಕ್ಸೆಲ್ ಶೀಟ್ ರೂಪದಲ್ಲಾಗಿರಲಿ, ಉತ್ತರಗಳಿಗೆ ಸುಲಭ ತಲುಪುವಿಕೆಯನ್ನು ಸುಗಮಗೊಳಿಸುವುದಕ್ಕಾಗಿ ಒಂದು Q&A ನಮೂನೆಯನ್ನು ನಿರ್ವಹಿಸಿ. ಹಾಗೂ, ಸಾಧ್ಯವಾದಷ್ಟು ವೇಗವಾಗಿ ಅಂಕ ನೀಡುವುದಕ್ಕಾಗಿ ನಿಮ್ಮ ಉತ್ತರ ಪುಸ್ತಿಕೆಯನ್ನು ನೀವು ಶೀಘ್ರವಾಗಿ ಉಲ್ಲೇಖಿಸಲು ಅನುವಾಗುವಂತೆ ಉತ್ತರಗಳಿಗೆ ಸಂಭವನೀಯ ಎಲ್ಲ ಪರ್ಯಾಯಗಳನ್ನು ಸಂಗ್ರಹಿಸಿಕೊಳ್ಳಿ.

2. ಪ್ರತಿ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವುದಕ್ಕಿಂತ ಒಂದು ಸಮಯದಲ್ಲಿ ಒಂದು ವಿಭಾಗವನ್ನು ಪೂರ್ಣಗೊಳಿಸಿ

ಈ ವಿಧಾನವು ಮೌಲ್ಯಮಾಪನ ಪ್ರಕ್ರಿಯೆಯನ್ನು ಸರಳೀಕರಿಸಿ, ಅದರ ವೇಗವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ನಿಮ್ಮ ಇಡಿ ತರಗತಿಯ ದುರ್ಬಲ ವಿಷಯಗಳನ್ನು ಗುರುತಿಸಲು ನೀವು ಸಮರ್ಥರಾಗುತ್ತೀರಿ. ಒಂದು ಬಾರಿಗೆ ಒಂದೇ ವಿಭಾಗವನ್ನು ಮೌಲ್ಯಮಾಪನ ಮಾಡುವುದರಿಂದ, ಅದರೊಳಕ್ಕೆ ಹೋಗಲು ನಿಮಗೆ ಒಂದು ಲಯವನ್ನು ಸೃಷ್ಟಿಸುತ್ತಾ ಮೌಲ್ಯಮಾಪನವನ್ನು ನೀವು ಪರಿಣಾಮಕಾರಿಯಾಗಿ ಬ್ಯಾಚ್ಗಳಲ್ಲಿ ಮಾಡುತ್ತಿರುತ್ತೀರಿ.

3. ಕರಪತ್ರದ ರೂಪದಲ್ಲಿ ಒಟ್ಟಾರೆ ಅನಿಸಿಕೆಯನ್ನು ಒದಗಿಸಿ

ಎಲ್ಲ ದುರ್ಬಲ ವಿಷಯಗಳ ಪಟ್ಟಿಯನ್ನು ನೀವು ಸಿದ್ಧಪಡಿಸಿದ ನಂತರ, ಬಳಸಲು ಸುಲಭವಿರುವ ಪಿಸಿ ಸಂಪನ್ಮೂಲಗಳೊಂದಿಗೆ ಕರಪತ್ರದ ರೂಪದಲ್ಲಿ ಒಟ್ಟಾರೆ ಅನಿಸಿಕೆಯನ್ನು ಒದಗಿಸಿ.ನಿಖರವಾಗಿ ತಾವು ಎಲ್ಲಿ ತಪ್ಪುತ್ತಿದ್ದಾರೆ ಹಾಗೂ ತಾವು ಯಾವುದರಲ್ಲಿ ಉತ್ತಮರಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ವಿದ್ಯಾರ್ಥಿಗಳಿಗೆ ಈ ಅನಿಸಿಕೆಯು ನೆರವಾಗುವುದರಿಂದ ಕ್ಲಾಸ್ ಟೆಸ್ಟ್ಗಳು, ಪ್ರಿಲಿಮ್ಸ್ ಹಾಗೂ ಅಸೈನ್ಮೆಂಟ್ಗಳಿಗೆ ಇದು ತುಂಬಾ ಉಪಯುಕ್ತವಾಗಿರುತ್ತದೆ.

4. ಪಿಸಿ ಗ್ರೇಡಿಂಗ್ ಟೂಲ್ಗಳನ್ನು ಬಳಸಿ

ಪರೀಕ್ಷೆಗಳು ಹಾಗೂ ಅಸೈನ್ಮೆಂಟುಗಳನ್ನು ಆನ್ಲೈನ್ನಲ್ಲಿ ಗ್ರೇಡ್ ಮಾಡಲು ಹಾಗೂ ಮಾಪನ ಮಾಡಬಹುದಾದ ಕಲಿಕಾ ಗುರಿಗಳನ್ನು ನಿಗದಿಪಡಿಸಲು Jumpro ನ ಕ್ಲಾಸ್ರೂಮ್ ಎಡಿಶನ್ಗೆ ಸೈನ್ ಅಪ್ ಮಾಡಿ (ಇದು ವೈಯಕ್ತಿಕ ಶಿಕ್ಷಕರಿಗೆ ಉಚಿತವಾಗಿರುತ್ತದೆ). ಈ ಸಾಧನವನ್ನು ಬಳಸುವುದನ್ನು ರೂಢಿಸಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದಾದರೂ, ಪ್ರತಿಯೊಂದೂ ವಿಷಯವು ಒಂದೇ ಸ್ಥಳದಲ್ಲಿ ಇರುವುದರಿಂದ ಪ್ರಯತ್ನಿಸುವುದು ಯೋಗ್ಯವಾಗಿರುತ್ತದೆ.

5. ಪಿಸಿ ಪರೀಕ್ಷೆಗಳು ಹಾಗೂ ಅಸೈನ್ಮೆಂಟ್ಗಳೊಂದಿಗೆ ಪ್ರಯೋಗ ಮಾಡಿ

ತಕ್ಷಣದ ಫಲಿತಾಂಶಗಳನ್ನು ಒದಗಿಸಲು Google Classroom ಬಳಸಿಕೊಂಡು ಅಥವಾ ನಿಮ್ಮದೇ ಆದ Wikispace classroom ಸೃಷ್ಟಿಸಿಕೊಂಡು ಪಿಸಿಯಲ್ಲಿಯೇ ಪರೀಕ್ಷೆಯನ್ನು ನಿರ್ವಹಿಸಿ ಅಥವಾ ಅಸೈನ್ಮೆಂಟ್ ಅನ್ನು ಒದಗಿಸಿ.

ಸಂಪನ್ಮೂಲಗಳಿಗೆ ಹೆಚ್ಚು ಪ್ರವೇಶಾವಕಾಶವನ್ನು ನೀಡುತ್ತಾ, ವಿದ್ಯಾರ್ಥಿಗಳು ಪ್ರತಿ ಬಾರಿಯೂ ನಿಮ್ಮ ತರಗತಿಯನ್ನು ಎದುರು ನೋಡುವಂತೆ ಮಾಡುವ ಪಠ್ಯ ಯೋಜನೆಗಳನ್ನು ಸೃಷ್ಟಿಸಲು ನಿಮ್ಮನ್ನು ಸಶಕ್ತಗೊಳಿಸುತ್ತಾ ನೀವು ಕಲಿಸುವ ವಿಧಾನವನ್ನು ಪಿಸಿಯೊಂದು ಅಕ್ಷರಶಃ ಬದಲಾಯಿಸಿಬಿಡಬಲ್ಲದು!