ಡೆಲ್ ಅರಂಭ್‌ಗೆ ವಿಶ್ವ ಸಂಸ್ಥೆಯ(ಯುಎನ್) ಸುಸ್ಥಿರ ಅಭಿವೃದ್ಧಿ ಗುರಿಗಳು ಎಂದರೆ ಅದು ಏನು ಅರ್ಥವನ್ನು ಕೊಡುತ್ತದೆ

 

ಸೆಪ್ಟೆಂಬರ್ 2015 ರಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಸುಸ್ಥಿರ ಅಭಿವೃದ್ಧಿಗಾಗಿ 2030 ಕಾರ್ಯಸೂಚಿಯನ್ನು, ಮುಖ್ಯವಾಗಿ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನಿಟ್ಟುಕೊಂಡು(ಎಸ್ ಡಿಜಿ) ಅಂಗೀಕರಿಸಿತು. ಎಸ್ ಡಿಜಿಗಳು ದೇಶಗಳಿಗೆ ಬಡತನವನ್ನು ಕೊನೆಗೊಳಿಸಲು, ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸಲು, ಅಸಮಾನತೆಯನ್ನು ಕಡಿಮೆ ಮಾಡಲು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಕರೆ ನೀಡುತ್ತವೆ.

ಈ ಎಸ್ ಡಿಜಿಗಳಲ್ಲಿ, ಗುರಿ 4, ದೇಶಗಳು ಅದರ ಪ್ರಜೆಗಳಿಗೆ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮನಾದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಎಲ್ಲರಿಗೂ ಜೀವನಪರ್ಯಂತ ಕಲಿಕೆಯ ಅವಕಾಶಗಳನ್ನು ಒದಗಿಸಿ ಉತ್ತೇಜಿಸಬೇಕು ಎಂದು ಹೇಳುತ್ತದೆ.

 

 

ಇಂದು, ಹವಾಮಾನ ಬದಲಾವಣೆಯಂತಹ ಸಮಸ್ಯೆಗಳು ಕೇಂದ್ರ ಭೂಮಿಕೆಯನ್ನು ತೆಗೆದುಕೊಳ್ಳುತ್ತಿರುವುದರಿಂದ, ನಮ್ಮನ್ನು ಸರಿಯಾದ ಶಿಕ್ಷಣ, ಮೌಲ್ಯಗಳು ಮತ್ತು ನಡವಳಿಕೆಗಳನ್ನು ಒದಗಿಸುವಂತಹ ಶಿಕ್ಷಣದಿಂದ ಸಜ್ಜುಗೊಳಿಸಿಕೊಳ್ಳುವ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಅವಕಾಶವನ್ನು ಪಡೆಯುವುದು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು, ಸ್ವಾವಲಂಬನೆಯನ್ನು ಶಕ್ತಗೊಳಿಸಲು ಮತ್ತು ಉತ್ತಮ ಜೀವನೋಪಾಯವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಪ್ರಸ್ತುತ ಸನ್ನಿವೇಶದಲ್ಲಿ, ಹೊಸ ತಾಂತ್ರಿಕ ಆವಿಷ್ಕಾರಗಳು ಒಂದರ ನಂತರ ಒಂದರಂತೆ ಹೊರಬರುತ್ತಿವೆ. ಇಂತಹ ವಾತಾವರಣದಲ್ಲಿ, ಶಿಕ್ಷಣವು ಆನ್ ಲೈನ್ ಕೋರ್ಸ್ ಗಳು ಮತ್ತು ಸಂವಾದಾತ್ಮಕ ಕಲಿಕೆಯ ಮೂಲಕ ಡಿಜಿಟಲ್ ಪ್ಲಾಟ್ ಫಾರ್ಮ್ ನತ್ತ ಹೆಚ್ಚು ಮುಂದುವರಿಯುತ್ತಿರುವುದರಿಂದ ಮೂಲಭೂತ ಕೌಶಲ್ಯಗಳೊಂದಿಗೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ.  1

ಅಸ್ತಿತ್ವದಲ್ಲಿರುವ ಈ ಡಿಜಿಟಲ್ ವಿಭಜನೆಯನ್ನು ನಿವಾರಿಸುವ ಸಲುವಾಗಿ, ಶಾಲಾ ಶಿಕ್ಷಕರಿಗೆ ಪ್ರಮುಖ ಪಿಸಿ ಕೌಶಲ್ಯಗಳನ್ನು ಒದಗಿಸಲು ಡೆಲ್ ಟೆಕ್ನಾಲಜೀಸ್ ಮತ್ತು ಯುನೆಸ್ಕೋ ಎಂಜಿ ಐ ಇಪಿ ಪರಸ್ಪರ ಕೈಜೋಡಿಸಿವೆ. ಈ ಸಹಭಾಗಿತ್ವದ ಮೂಲಕ, ಮಕ್ಕಳಲ್ಲಿ ಕಲಿಕೆ ಮತ್ತು ಕೌಶಲ್ಯ ವೃದ್ಧಿಯನ್ನು ಉತ್ತೇಜಿಸಲು ಈ ಕಂಪೆನಿಗಳು ಗುಣಮಟ್ಟದ ಶಿಕ್ಷಣ ತರಬೇತಿಯನ್ನು ಶಿಕ್ಷಕರಿಗೆ ಪ್ರಸಾರ ಮಾಡುತ್ತವೆ.

ಗುರುತಿಸಲ್ಪಟ್ಟ ಶಿಕ್ಷಕರಿಗೆ ತರಬೇತಿ ನೀಡಲು ಡೆಲ್ ಅರಂಭ್ ಮತ್ತು ಯುನೆಸ್ಕೋ ಎಂಜಿ ಐ ಇಪಿಯ ‘ಫ್ರೇಮರ್ ಸ್ಪೇಸ್’ ಪ್ಲಾಟ್ ಫಾರ್ಮ್ ಸಹಕರಿಸುತ್ತದೆ, ಹೀಗೆ, ಶಾಂತಿಯುತ ಮತ್ತು ಸುಸ್ಥಿರ ಸಮಾಜಗಳನ್ನು ನಿರ್ಮಿಸುವ ಶಿಕ್ಷಣದ ಎಸ್ ಡಿಜಿ 4.7 ಕಡೆಗೆ ಕೆಲಸ ಮಾಡುತ್ತದೆ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ) ಮೂಲಕ ಡೆಲ್ ಅರಂಭ್ ಒದಗಿಸುವ ಸ್ಪ್ರಿಂಗ್ ಬೋರ್ಡ್ ನಿಂದ ಶಿಕ್ಷಕರ ಡಿಜಿಟಲ್ ಕಲಿಕೆಯ ಪ್ರಯಾಣವನ್ನು ಪ್ರಾರಂಭಿಸಲಾಗುತ್ತದೆ. ಏತನ್ಮಧ್ಯೆ, ಫ್ರೇಮರ್ ಸ್ಪೇಸ್ ಶಿಕ್ಷಕರಿಗೆ ಸಮೃದ್ಧ ವಿಷಯ ರಚನಾ ಸಾಮರ್ಥ್ಯಗಳನ್ನು ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಒಂದು ವಿಶ್ಲೇಷಣಾತ್ಮಕ ಒಳನೋಟವನ್ನು ಒದಗಿಸುತ್ತದೆ.

ಎ ಐ-ಚಾಲಿತ ಡಿಜಿಟಲ್ ಪ್ಲಾಟ್ ಫಾರ್ಮ್ ನ ಫ್ರೇಮರ್ ಸ್ಪೇಸ್, ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕೆಯ ಯೋಜನೆಗಳನ್ನು ಕಲ್ಪಿಸಲು, ಕಾರ್ಯಗತಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಇದು ಶಿಕ್ಷಕರಿಗೆ ಐಸಿಟಿ ಮತ್ತು ಮುಂಚೂಣಿಯಲ್ಲಿರುವ ತಂತ್ರಜ್ಞಾನಗಳ ಬಗ್ಗೆ ಜ್ಞಾನವನ್ನು ನೀಡುತ್ತದೆ, ಇದರಿಂದ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಬಹುದು.

ಈ ಪ್ರಸರಣವು ಮೂರು ಹಂತಗಳಲ್ಲಿರುತ್ತದೆ: ಫ್ರೇಮರ್ ಸ್ಪೇಸ್ ಅನ್ನು ಬಳಸುವುದು ಹೇಗೆಂದು ಶಿಕ್ಷಕರಿಗೆ ತರಬೇತಿ ನೀಡುವುದು, 200 ಗಂಟೆಗಳ ತರಬೇತಿಯನ್ನು ಪಡೆದ ಶಿಕ್ಷಕರಿಗೆ ಜಂಟಿ ಪ್ರಮಾಣ ಪತ್ರವನ್ನು ಒದಗಿಸುವುದು ಮತ್ತು ಕಲಿಕೆಯ ಫಲಿತಾಂಶಗಳ ಮೇಲೆ ಆದ ಪರಿಣಾಮವನ್ನು ನಿರ್ಣಯಿಸುವುದು.

ಈ ಸಹಭಾಗಿತ್ವದ ಮೂಲಕ, ಶಿಕ್ಷಣದ ಎಸ್ ಡಿಜಿ ಸಾಧಿಸುವಲ್ಲಿ ಮಹತ್ವದ ಹೆಜ್ಜೆಯನ್ನಿಡುತ್ತಿದ್ದೇವೆ ಎಂದು ನಾವು ಭಾವಿಸುತ್ತೇವೆ ಮತ್ತು ಇತರರಿಗೆ ಡಿಜಿಟಲ್ ಶಿಕ್ಷಣವನ್ನು ನೀಡುವುದನ್ನು ಮುಂದುವರಿಸುವ ಶಿಕ್ಷಕರ ಒಂದು ಗುಂಪನ್ನು ಸೃಷ್ಟಿಸುವ ಭರವಸೆ ಇದೆ.