2018 – ಪಿಸಿಯ ವರ್ಷವಾಗಿದೆ, ಏಕೆ?

 
ಪಿಸಿಯನ್ನು ನೀವು ಯಾವುದಕ್ಕಾಗಿ ಬಳಸುತ್ತೀರಿ?

ಕೆಲಸಕ್ಕಾಗಿ
ಆನ್ಲೈನ್ ಬ್ಯಾಂಕಿಂಗ್ಗಾಗಿ
ಆಟಗಳನ್ನು ಆಡಲು
ಚಲನಚಿತ್ರಗಳನ್ನು ನೋಡಲು
ನಿಮ್ಮ ಪುಟಾಣಿಯ ಹೊಮ್ವರ್ಕ್ಗೆ ನೆರವಾಗಲು
ಅಥವಾ ಈ ಮೇಲಿನ ಎಲ್ಲವುಗಳಿಗೂ?

ಬಹುತೇಕವಾಗಿ ಅದು, ಈ ಮೇಲಿನ ಎಲ್ಲವುಗಳಿಗೂ ಮತ್ತು ನಿಮ್ಮ ಮಕ್ಕಳಿಗಾಗಿ ಇನ್ನೂ ಬಹಳ ಹೆಚ್ಚಿನ ಕೆಲಸಗಳಿಗಾಗಿ ಇರುತ್ತದೆ. &lsquoಶಿಕ್ಷಣಕ್ಕಾಗಿ ಪಿಸಿ&rsquo ಜಗತ್ತಿನಿಂದ 2018 ರಲ್ಲಿ ನೀವು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ:

1) ನೀವು ಹೆಚ್ಚು ಮೇಕರ್ಸ್ಪೇಸ್ಗಳನ್ನು ನೋಡುತ್ತೀರಿ

ಮೇಕರಸ್ಪೇಸ್ ಎಂಬುದು ವಿದ್ಯಾರ್ಥಿಗಳು ಪಿಸಿಯ ನೆರವಿನೊಂದಿಗೆ, ತರಹೇವಾರಿ ಸಾಧನಗಳು ಮತ್ತು ಸಾಮಗ್ರಿಗಳನ್ನು ಬಳಸಿಕೊಂಡು ಸೃಷ್ಟಿಸಿ, ಅವಿಷ್ಕರಿಸಿ, ದುರಸ್ತಿ ಮಾಡಿ, ಅನ್ವೇಷಿಸಬಹುದಾದ ಸ್ಥಳವಾಗಿದೆ. ಪ್ರಾಯೋಗಿಕ ಕಲಿಕೆಯು ನಿಮ್ಮ ಮಕ್ಕಳಿಗೆ ಬಹಳಷ್ಟು ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬುದು ವಾಸ್ತವಾಂಶವಾಗಿದೆ ಹಾಗೂ ಇದನ್ನು ಶಾಲೆಗಳೂ ಸಹ ಗಮನಿಸಲಾರಂಭಿಸಿವೆ. ತರಗತಿಯಲ್ಲಿ ಕಲಿಸಿದ ಪರಿಕಲ್ಪನೆಗಳಿಗೆ ಜೀವ ತುಂಬುವಿಕೆಯನ್ನು ಎಲ್ಲ ವಯಸ್ಸಿನ ವಿದ್ಯಾರ್ಥಿಗಳೂ ಅನುಭವಿಸಲು ಅನುವಾಗುವಂತೆ ತಂತ್ರಜ್ಞಾನ ನಿಪುಣ ಶಾಲೆಗಳು ಮೇಕರ್ಸ್ಪೇಸ್ಗಳನ್ನು ಈಗಾಗಲೇ ನಿರ್ಮಿಸಲಾರಂಭಿಸಿವೆ ಅಥವಾ ಪ್ರಸ್ತುತ ಪಿಸಿ ಮೇಕರ್ಸ್ಪೇಸ್ಗಳನ್ನು ಮೇಲ್ದರ್ಜೆಗೇರಿಸಲಾರಂಭಿಸಿವೆ.

2) ಭವಿಷ್ಯದಲ್ಲಿ ಎಲ್ಲವೂ ಕ್ಲೌಡ್ ಸ್ಟೋರೇಜ್ ಮೇಲೆಯೇ ನಡೆಯಲಿದೆ

ಕ್ಲೌಡ್ ಸ್ಟೋರೇಜ್ ಎಂಬುದು, ನಿಮ್ಮ ಮಗು ಅಂತರ್ಜಾಲ, ಪಿಸಿ ಮತ್ತು ಇ-ಮೇಲ್ ಐಡಿಗೆ ಪ್ರವೇಶಾವಕಾಶವನ್ನು ಹೊಂದಿರುವವರೆಗೆ ನಿಮ್ಮ ಡೇಟಾವನ್ನು ಎಲ್ಲಿಂದಲಾದರೂ 24/7 ತಲುಪಬಹುದಾದ ಆನ್ಲೈನ್ ಹಬ್ ಆಗಿದೆ. ಉಚಿತ ಬಳಕೆ ಮತ್ತು ವಿಶ್ವಸಾರ್ಹತೆಯನ್ನು ಹೊಂದಿರುವ Dropbox [1], Google Drive [2], One Drive [3] - ದಂಥ ಬಹಳಷ್ಟು ಆಯ್ಕೆಗಳಿವೆ. ಎಲ್ಲ ಕಲಿಕಾ ಸಾಮಗ್ರಿಗಳನ್ನು ಒಂದೇ ಸ್ಥಳದಲ್ಲಿ ಇರಿಸುವುದಷ್ಟೇ ಅಲ್ಲದೇ, ಕ್ಲೌಡ್ ಸ್ಟೋರೇಜ್ನ ಬಳಕೆಯು ಯಾವುದೇ ರೀತಿಯ ಡೇಟಾವನ್ನು ಕಳೆದುಕೊಳ್ಳದಿರುವುದನ್ನು ಖಚಿತಪಡಿಸುತ್ತದೆ ಹಾಗೂ ಈ ಮೂಲಕ ನಿಮ್ಮ ಮಗುವಿನ ಪರಿಶ್ರಮದ ಕೆಲಸವನ್ನು ಸುರಕ್ಷಿತವಾಗಿರಿಸುತ್ತದೆ.

3) ಭವಿಷ್ಯದಲ್ಲಿ ಕಲಿಕೆಯನ್ನು ಆಟಗಳ ಮೂಲಕವೇ ಒದಗಿಸಲಾಗುತ್ತದೆ

ತರಗತಿಗಳ ಮೇಲಿದ್ದ ಗಮನವು ಉರು ಹೊಡೆದು ಕಲಿಯುವಿಕೆಗಿಂತ ಪ್ರಾಯೋಗಿಕ ಕಲಿಕೆಗೆ ಸ್ಥಾನಪಲ್ಲಟವನ್ನು ಹೊಂದುವುದರೊಂದಿಗೆ, ತರಗತಿಯಲ್ಲಿ ಅವರಿಗೆ ಕಲಿಸಿದ ಪರಿಕಲ್ಪನೆಗಳ ಕಲಿಯುವಿಕೆ ಮತ್ತು ಆಚರಣೆಗಾಗಿ ಆಟಗಳು ಮಕ್ಕಳಿಗೆ ಒಂದು ದಕ್ಷ ಮತ್ತು ಆನಂದಿಸಬಹುದಾದ ಮಾರ್ಗಗಳಾಗಿವೆ. ಆಟಗಳು ಎಲ್ಲಾ ವಯಸ್ಸಿನ ಮಕ್ಕಳಿಗೆ ಮನರಂಜನೆ ಮತ್ತು ಶಿಕ್ಷಣವನ್ನು ಸಮತೋಲನಗೊಳಿಸುತ್ತವೆ ಎಂಬುದು ಆಟಗಳಲ್ಲಿನ ಅತ್ಯುತ್ತಮ ಭಾಗವಾಗಿದೆ. ಕೆಲವು ಉದಾಹರಣೆಗಳು ಇವುಗಳನ್ನು ಒಳಗೊಳ್ಳುತ್ತವೆ: ಇಂಗ್ಲೀಷ್ ಶಬ್ದಭಂಡಾರವನ್ನು ಹೆಚ್ಚಿಸಲು alphabet bingo [4], ಗಣಿತಕ್ಕಾಗಿ Less Than or Greater Than [5], ಮತ್ತು ಭೌಗೋಳಿಕ ವಿಜ್ಞಾನಕ್ಕಾಗಿ ಶಾಸ್ತ್ರೀಯ Capitals of the World [6]. ಪಿಸಿ ಕಡೆಗೆ ನೀವು ಹೆಚ್ಚು ನೋಡಿದಂತೆಲ್ಲಾ, ನಿಮಗೆ ಬಹಳಷ್ಟು ವಿಷಯಗಳು ಕಾಣಿಸಿಕೊಳ್ಳುತ್ತವೆ!

PC-enabled learning ಅನ್ನು ಒಂದು ರೂಢಿಯನ್ನಾಗಿಸುವ ಮೂಲಕ ಮಕ್ಕಳನ್ನು ಆತ್ಮವಿಶ್ವಾಸದಿಂದಿರುವಂತೆ ಮಾಡುವುದು ಮತ್ತು ಭವಿಷ್ಯಕ್ಕಾಗಿ ಅವರನ್ನು ತಯಾರಿರುವಂತೆ ಮಾಡುವುದು 2018 ರ ಅತ್ಯಂತ ದೊಡ್ಡ ನಿಲುವಾಗಿದೆ.