ಪ್ರತಿಯೊಬ್ಬ ಶಿಕ್ಷಕರಿಗೂ ಮಾರ್ಗದರ್ಶಕರು ಏಕೆ ಬೇಕಾಗುತ್ತಾರೆ

 

ಪ್ರತಿಯೊಬ್ಬ ಶಿಕ್ಷಕರು ತಮ್ಮ ಗುರಿಗಳನ್ನು ಹೊಂದಿರುತ್ತಾರೆ. ಆ ಗುರಿಯು ಮುಂಬಡ್ತಿಯನ್ನು ಪಡೆಯುವುದಾಗಿರಬಹುದು, ವಿಷಯದಲ್ಲಿ ಪರಿಣತಿಯನ್ನು ಸಾಧಿಸುವುದಾಗಿರಬಹುದು, ವಿದ್ಯಾರ್ಥಿಗಳ ತೊಡಗಿಕೊಳ್ಳುವಿಕೆಯನ್ನು ಹೆಚ್ಚಿಸುವುದಾಗಿರಬಹುದು ಅಥವಾ ಒಂದು ಶಾಲೆಯನ್ನೇ ಸ್ಥಾಪಿಸುವುದಾಗಿರಬಹುದು. ಒಬ್ಬ ಗುರುವಿನ ಮಾರ್ಗದರ್ಶಕತ್ವದೊಂದಿಗೆ, ನೀವು ಸರಿಯಾದ ಹೆಜ್ಜೆಗಳನ್ನು ಇರಿಸುವ ನಿಮ್ಮ ಮಾರ್ಗದಲ್ಲಿರುತ್ತೀರಿ – ಏಕೆ ಎಂಬುದನ್ನು ಇಲ್ಲಿ ನೀಡಲಾಗಿದೆ:

1) ನಮಗೆಲ್ಲರಿಗೂ ಸುಮ್ಮನೇ ಮಾತನಾಡುವುದಕ್ಕಾಗಿಯೇ ಒಬ್ಬ ವ್ಯಕ್ತಿ ಬೇಕು

“ಮಾರ್ಗದರ್ಶಕತ್ವ ಎಂದರೆ ಹೇಳಿದ್ದನ್ನು ಆಯ್ದುಕೊಳ್ಳಲು ಒಂದು ಮಿದುಳು, ಆಲಿಸಲು ಒಂದು ಕಿವಿ ಮತ್ತು ಸರಿಯಾದ ದಿಕ್ಕಿನಲ್ಲಿ ನೀಡುವ ಒಂದು ಒತ್ತು ಆಗಿರುತ್ತದೆ.” – ಜಾನ್ ಸಿ. ಕ್ರಾಸ್ಬಿ [1]

ಕೆಲವೊಮ್ಮೆ, ದೊಡ್ಡ ಸಮಸ್ಯೆಯೊಂದರ ಬಗ್ಗೆ ಸುಮ್ಮನೆ ಮಾತನಾಡಿ ಅದನ್ನು ಹೊರಗೆಡಹುವುದು ಆ ಸಮಸ್ಯೆಯನ್ನು ಪರಿಹರಿಸಬಹುದಾದ ಚಿಕ್ಕ ಚಿಕ್ಕ ಸಮಸ್ಯೆಗಳನ್ನಾಗಿ ಪರಿವರ್ತಿಸುತ್ತದೆ. ಮಾರ್ಗದರ್ಶನ ಮಾಡಬಹುದಾದ ಗುರುವನ್ನು ಹೊಂದಿರುವುದು ಎಂದರೆ ನಿಮ್ಮ ತಪ್ಪುಗಳ ಬಗ್ಗೆ ಮುಜುಗರಕ್ಕೊಳಗಾಗಬಹುದಾದ ಯಾವುದೇ ನಿರ್ಧಾರ ಅಥವಾ ಭಯವಿಲ್ಲದೇ ಒಳ್ಳೆಯದ್ದು ಮತ್ತು ಕೆಟ್ಟದ್ದು, ಎರಡನ್ನೂ ಹಂಚಿಕೊಳ್ಳಬಹುದಾದ ಒಬ್ಬ ವ್ಯಕ್ತಿಯನ್ನು ನೀವು ಹೊಂದಿದ್ದೀರಿ ಎಂದು ಅರ್ಥ.

2) ನಮಗೆ ಇನ್ನೊಬ್ಬರ ಅಭಿಪ್ರಾಯ ಬೇಕಾಗಿರುತ್ತದೆ

ನಿಮ್ಮ ಬಳಿ ಪರಿಧಿಯಾಚೆಗಿನ ಮನೆಗೆಲಸದ ವಿಚಾರಗಳು, ವಿಡಿಯೋ ಕ್ಲಿಪ್ಗಳು ಮತ್ತು ಗೇಮ್ಗಳ ಲಿಸ್ಟ್ ಇದೆ, ಆದರೆ ಅವುಗಳಿಗೆ ನಿಮ್ಮ ತರಗತಿಯು ಹೇಗೆ ಪ್ರತಿಕ್ರಿಯೆಸುತ್ತದೆ ಎಂಬ ಬಗ್ಗೆ ನಿಮಗೆ ಖಚಿತತೆ ಇಲ್ಲದಿದ್ದಾಗ – ನಿಮ್ಮ ನಿರ್ದಿಷ್ಟ ತರಗತಿಗೆ ಯಾವುದು ಕೆಲಸ ಮಾಡುತ್ತದೆ, ಯಾವುದು ಮಾಡುವುದಿಲ್ಲ ಎಂಬುದನ್ನು ಕಂಡುಕೊಳ್ಳುವಲ್ಲಿ ಒಬ್ಬ ಗುರು ನಿಮಗೆ ನೆರವಾಗಬಲ್ಲರು. ನಿಮ್ಮ ತರಗತಿಗೆ ಆತ್ಮವಿಶ್ವಾಸದಿಂದ ಕಲಿಸುವುದಕ್ಕೆ ಮತ್ತು ಭವಿಷ್ಯದಲ್ಲಿ ಹೆಚ್ಚು ಇಂಟರಾಕ್ಟಿವ್ ಆದ ಕಲಿಕಾ ವಿಧಾನಗಳನ್ನು ಪ್ರಯತ್ನಿಸಲು ಇದು ನೆರವಾಗುತ್ತದೆ.

3) ನಮಗೆ ಆಗಾಗ್ಗೆ ಸ್ವಲ್ಪ ಮುಂದೆ ತಳ್ಳುವಿಕೆಯ ಅಗತ್ಯವಿರುತ್ತದೆ

ಇತರ ಯಾವುದೇ ವೃತ್ತಿಗಳಂತೆ, ತಮ್ಮನ್ನು ತಾವು ನಿರಂತರವಾಗಿ ಮೇಲ್ದರ್ಜೆಗೇರಿಸಿಕೊಳ್ಳುವುದು ಮತ್ತು ಹೊಸ ವಿಷಯಗಳನ್ನು ಕಲಿಯುತ್ತಿರುವುದು ಶಿಕ್ಷಕರಿಗೆ ಪ್ರಮುಖವಾಗಿರುತ್ತದೆ. ನಿಮ್ಮನ್ನು ನೀವು ಅಪ್ಡೇಟ್ ಮಾಡಿ ಇರಿಸಿಕೊಳ್ಳಬೇಕಾದ ಇತ್ತೀಚಿನ ಸಾಧನಗಳು ಮತ್ತು ಸಂಪನ್ಮೂಲಗಳಿಂದ ಒಬ್ಬ ಗುರುವು ನಿಮ್ಮನ್ನು ಆಗಾಗ್ಗೆ ಅಪ್ಡೇಟ್ ಮಾಡಿ ಇರಿಸಬಲ್ಲರು. ನಿಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಲು ಅಥವಾ ನೀವು ಓದಿದ ಪರಿಕಲ್ಪನೆಗಳ ಬಗೆಗಿನ ಸ್ಪಷ್ಟತೆಗಾಗಿಯೂ ಸಹ ನೀವು ಅವರ ಬಳಿ ಹೋಗಬಹುದು.

4) ನಮಗೆ ಪ್ರೇರೇಪಣೆಯ ಅಗತ್ಯವಿರುತ್ತದೆ

ನಿಮಗೆ ಒಂದು ಬಾರಿ ತಳ್ಳುವಿಕೆ ದೊರೆತ ಮೇಲೆ, ನಿಮಗೆ ಬೇಕಾಗುವುದು ಒಂದು ಧೃಢವಾದ ಪ್ರೇರೇಪಣೆ. ನಿಮ್ಮ ಕೌಶಲ್ಯಗಳನ್ನು ಹೆಚ್ಚು ಉತ್ತಮಗೊಳಿಸಿಕೊಳ್ಳಲು ಹಾಗೂ ನಿಮ್ಮ ಭವಿತವ್ಯದ ಏಣಿಯನ್ನು ಏರಿ ಮುಂದುವರೆಯಲು ನಿಮ್ಮನ್ನು ಸಶಕ್ತಗೊಳಿಸುತ್ತಾ ನಿಮ್ಮ PC ಎದುರಿಗೆ ಕುಳಿತುಕೊಂಡು, ವಾರಾಂತ್ಯದ ದಿನಗಳಲ್ಲಿ ಅಥವಾ ಬಿಡುವಿನ ವಾರದ ದಿನಗಳಲ್ಲಿ ಒಂದು ಕೋರ್ಸ್ ತೆಗೆದುಕೊಳ್ಳಲು, ನಿಮ್ಮ ಗುರುವು ಒಂದು EdX ಕೋರ್ಸ್ ಅನ್ನು ಅತ್ಯುತ್ತಮವಾಗಿ ತೇರ್ಗಡೆಯಾಗುವುದನ್ನು ನೋಡುವುದು ನಿಮಗೆ ಅಗತ್ಯವಾಗಿರುವ ಪ್ರೇರೇಪಣೆಯಾಗಿರುತ್ತದೆ. [2]

ನಿಮ್ಮ ಗುರುವು ಇನ್ನೊಬ್ಬ ಶಿಕ್ಷಕರಾಗಿರಬಹುದು, ನಿಮ್ಮ ಹಿರಿಯ ಸಹೋದ್ಯೋಗಿಯಾಗಿರಬಹುದು ಅಥವಾ ಒಬ್ಬ ನಿಯೋಜಿತ ಮಾರ್ಗದರ್ಶಕರಾಗಿರಬಹುದು, ಪ್ರತಿಯೊಂದು ಭೇಟಿಯೂ ನಿಮ್ಮ ಗುರಿಗಳನ್ನು ತಲುಪಲು ನೆರವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ದೊಡ್ಡ ಗುರಿಗಳನ್ನು ಸಾಧಿಸುವ ಅತ್ಯುತ್ತಮವಾದ ಮಾರ್ಗವೆಂದರೆ, ಪ್ರತಿ ವಾರ ಒಂದು ಇಂಟರಾಕ್ಟಿವ್ ಚಟುವಟಿಕೆಯೊಂದಿಗೆ ಕಲಿಸುವುದು ಹಾಗೂ ನಿಧಾನವಾಗಿ ಅದರ ಆವರ್ತನವನ್ನು ಹೆಚ್ಚಿಸುವಿಕೆಗಳಂಥ ಚಿಕ್ಕ ಚಿಕ್ಕ ಹೆಜ್ಜೆಗಳನ್ನು ಇರಿಸುವುದು. ಚಿಕ್ಕ ಹೆಜ್ಜೆಗಳ ಮೇಲಿನ ಸ್ಪಷ್ಟತೆಗಾಗಿ, ನಿಮಗಾಗಿ ಒಬ್ಬ ಗುರುವನ್ನು ವಹಿಸಿಕೊಂಡು, ಆ ಭೇಟಿಗಳನ್ನು ನಿಗದಿಪಡಿಸಿ!