ಸ್ಕ್ರೀನ್ ಟೈಮ್ ಬಗ್ಗೆ ಪೋಷಕರು ಏಕೆ ಭಯಪಡಬಾರದು

 

ಟಿವಿ
ಸ್ಮಾರ್ಟ್ಫೋನ್ಗಳು
ಟ್ಯಾಬ್ಲೆಟ್ಗಳು
ಶಾಲೆಯಲ್ಲಿನ PC
ಮತ್ತು ಮನೆಯಲ್ಲಿನ PC ...

“ಸ್ಕ್ರೀನ್ ಟೈ,ಮ್” ಎಲ್ಲ ಕಡೆಗಳಲ್ಲಿಯೂ ಇದೆ ಮತ್ತು ನಿಮ್ಮ ಮಗುವಿನ ನಿತ್ಯಕ್ರಮದ ಭಾಗವಷ್ಟೇ ಅಲ್ಲದೇ, ನಿಮ್ಮ ಪ್ರತಿದಿನದ ಜೀವನದ ಭಾಗವೂ ಆಗಿದೆ!

ಹಾಗಿದ್ದ ಮೇಲೆ ಸ್ಕ್ರೀನ್ ಟೈಮ್ ಬಗ್ಗೆ ಭಯವೇಕೇ?

ಒಬ್ಬ ಡಿಜಿಟಲ್ ಪೇರೆಂಟಿಂಗ್ ವೃತ್ತಿಪರರಾಗಿ, ತಮ್ಮ ಸಹಪಾಠಿಗಳಿಗೆ ಸರಿಸಮಾನರಾಗಿ ಇರಲು ಹಾಗೂ ಭವಿಷ್ಯವನ್ನು ಎದುರಿಸುವಲ್ಲಿ ಸಿದ್ದತೆಯಿಂದಿರುವುದಕ್ಕಾಗಿ ನಿಮ್ಮ ಮಕ್ಕಳಿಗೆ ನೆರವಾಗಲು PC ಗಳನ್ನು ಮುಕ್ತ ಬಾಹುಗಳಿಂದ ಸ್ವಾಗತಿಸುವುದು ಅತ್ಯುತ್ತಮವಾಗಿರುತ್ತದೆ. ಸ್ಕ್ರೀನ್ ಟೈಮ್ ಬಗ್ಗೆ ನೀವು ಏಕೆ ಭಯಪಡಬಾರದು ಎಂಬ ಬಗ್ಗೆ ಮೂರು ಕಾರಣಗಳನ್ನು ಇಲ್ಲಿ ನೀಡಲಾಗಿದೆ:

1) ಪಠ್ಯಪುಸ್ತಕಗಳು ಜೀವ ತಳೆಯಬಹುದು

ವಿಷಯ ಅಥವಾ ನಿಮ್ಮ ಮಗುವಿನ ವಯಸ್ಸಿಗೆ ಸಂಬಂಧವಿಲ್ಲದಂತೆ, PC ಯೊಂದಿಗೆ ಪಠ್ಯಪುಸ್ತಕಗಳು ಅಕ್ಷರಶಃ ಜೀವ ತಳೆಯುತ್ತವೆ. ವಿಷಯಗಳನ್ನು ವಾಸ್ತವಿಕ-ಜೀವನಕ್ಕೆ ಸಂಪರ್ಕಿಸಲು ಹಾಗೂ ವಿಷಯಗಳನ್ನು ಹೆಚ್ಚು ಕಾಲ ನೆನಪಿಟ್ಟುಕೊಳ್ಳಲು ಅದು ನೆರವಾಗುತ್ತದೆ. ಹವಾಮಾನ ಬದಲಾವಣೆಯ ಬಗೆಗಿನ ಒಂದು ಶಾರ್ಟ್ ಫಿಲ್ಮ್ ಅನ್ನು ವೀಕ್ಷಿಸುವುದು ಪಠ್ಯಪುಸ್ತಕದಲ್ಲಿ ವ್ಯಾಖ್ಯಾನವನ್ನು ಗಟ್ಟಿಯಾಗಿ ಓದುವುದಕ್ಕಿಂತ ಹೆಚ್ಚು ಪರಿಣಾಮ ಬೀರುವಂತಿರುತ್ತದೆ ಮತ್ತು ದೃಶ್ಯಾತ್ಮಕವಾಗಿ ಹೆಚ್ಚು ಮನದಟ್ಟುವಂತಿರುತ್ತದೆ. ನಿಮ್ಮ ಮಕ್ಕಳಲ್ಲಿ ವ್ಯತ್ಯಾಸವನ್ನು ನೋಡಲು ಅದನ್ನು ಒಂದು ಬಾರಿ ಪ್ರಯತ್ನಿಸಿ ನೋಡಿ.

2) ಆಟದ ಸಮಯ ಕೇವಲ ಆಟವಾಡುವ ಸಮಯವಲ್ಲ

ಶಾಲೆಗೆ ಪ್ರಯಾಣಿಸಿ, ದಿನದುದ್ದಕ್ಕೂ ತರಗತಿಗಳು, ಟ್ಯೂಷನ್ಗಳು, ಪಠ್ಯೇತರ ಚಟುವಟಿಕೆಗಳು, ಕ್ರೀಡೆಗಳಿಗೆ ಹಾಜರಾಗುವಿಕೆ ಮುಂತಾದವುಗಳ ದೀರ್ಘಾವಧಿಯ ದಿನದ ನಂತರ – ಮಾರನೇ ದಿನವನ್ನೆದುರಿಸಲು ನಿಮ್ಮ ಮಗುವು ವಿಶ್ರಮಿಸಬೇಕಾದ ಅಗತ್ಯತೆ ಇರುತ್ತದೆ. ಒಂದು ಗಂಟೆಯ ಆಟವು ನಿಮ್ಮ ಮಗುವನ್ನು ಒತ್ತಡಮುಕ್ತವನ್ನಾಗಿಸಲು ಅತ್ಯಂತ ಪರಿಪೂರ್ಣವಾಗಿರುತ್ತದೆ. ಅಲ್ಲದೇ, ಅವರ ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ವೃದ್ಧಿಸಲು ಅವರಿಗೆ ನೆರವಾಗುತ್ತದೆ. ಅದು ಸನ್ನಿವೇಶ ಆಧರಿತ ಆಟವಾಗಿರಲಿ ಅಥವಾ ಕಲಿಕಾ ಆಟವಾಗಿರಲಿ, ನಿಮ್ಮ ಮಗು ಆನಂದಿಸುತ್ತಿರುವಂತೆಯೇ ಹೊಸ ವಿಷಯಗಳನ್ನೂ ಸಹ ಕಲಿಯುತ್ತಿರುತ್ತದೆ.

3) ಅದು ಫ್ಯಾಮಿಲಿ ಟೈಮ್ ಸಹ ಆಗಬಹುದು!

PC ಯಲ್ಲಿ ಕೆಲಸ ಮಾಡುವುದು ನಿಮ್ಮ ಮಗುವು ಒಂದೇ ಕುಳಿತುಕೊಂಡು ಮಾಡಬೇಕಾದ ಕೆಲಸವಾಗಬೇಕಿಲ್ಲ, ಸಂಪೂರ್ಣ ಕುಟುಂಬವು ಒಟ್ಟಿಗೆ ಕುಳಿತುಕೊಂಡು ಮಾಡಬಹುದಾದ ಚಟುವಟಿಕೆಗಳೂ ಇವೆ. ಒಂದು ವಿಡಿಯೊವನ್ನು ವೀಕ್ಷಿಸುವುದು ಮತ್ತು ಅದರ ಬಗ್ಗೆ ಮಾತನಾಡುವುದು, PC ಸಮಯವನ್ನು ಫ್ಯಾಮಿಲಿ ಟೈಮ್ ಆಗಿ ಪರಿವರ್ತಿಸಬಲ್ಲದು! PC ಯನ್ನು ಅನ್ವೇಷಿಸಲು ಸಮಯ ತೆಗೆದುಕೊಳ್ಳುವುದು ಮತ್ತು ನಿಮ್ಮ ಕುಟುಂಬಕ್ಕೆ ಯಾವುದು ಅತ್ಯಂತ ಸೂಕ್ತವಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೋಡುವುದಷ್ಟೇ ನೀವು ಮಾಡಬೇಕಿರುವ ಕೆಲಸವಾಗಿರುತ್ತದೆ – ಪ್ರತಿ ವಯೋಮಾನದ ಸಮೂಹಕ್ಕಾಗಿ ಏನಾದರೊಂದು ವಿಷಯವಿದ್ದೇ ಇರುತ್ತದೆ.

PC ಯಲ್ಲಿ ಕೆಲಸ ಮಾಡುವಾಗ, ವಿಶೇಷವಾಗಿ ಪೋಷಕರಿಂದ ಅವಲೋಕಿಸದೇ ಇದ್ದಲ್ಲಿ, ಮಕ್ಕಳು ಸುಲಭವಾಗಿ ಕೊಚ್ಚಿಹೋಗಬಹುದಾದ ಸಾಧ್ಯತೆ ಇರುತ್ತದೆ. PC ಸಮಯವು ಉತ್ಪಾದಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಕಲಿಕಾ ಸಂಪನ್ಮೂಲವೊಂದನ್ನು ಆಯ್ಕೆ ಮಾಡುವ ಮೊದಲು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ ಮತ್ತು ನಿಮ್ಮ ಮಕ್ಕಳು ನಾಳಿನ ತಂತ್ರಜ್ಞಾನ ನಿಪುಣರಾಗಿ ಬೆಳೆಯುವುದನ್ನು ವೀಕ್ಷಿಸಿ.