ಪಿಸಿಯೇ ನಿಮ್ಮ ಮಗುವಿನ ಕಲಿಕೆಯ ಮೊದಲ ಗ್ಯಾಡ್ಜೆಟ್ ಏಕೆ ಆಗಿರಬೇಕು?

 

ಹೆತ್ತವರು ಹಾಗೂ ಶಿಕ್ಷಕರು ಮಕ್ಕಳಿಗೆ ಅತ್ಯಂತ ಮಹತ್ವದ ಮೆಂಟರುಗಳಾಗಿರುತ್ತಾರೆ.

ಹೆತ್ತವರು ಹಾಗೂ ಶಿಕ್ಷಕರು ಮಕ್ಕಳಿಗೆ ಅತ್ಯಂತ ಮಹತ್ವದ ಮೆಂಟರುಗಳಾಗಿರುತ್ತಾರೆ. ಮಕ್ಕಳು ಹೆಚ್ಚಿನ ವೇಳೆ ಸತ್ಯಾಂಶಗಳನ್ನು ತಿಳಿಯಲು ಹಾಗೂ ಪ್ರಶ್ನೆಗಳು ಮುಕ್ತಾಯಗೊಳ್ಳುವವರೆಗೆ ತಮ್ಮ ಪಾಲಕರಿಂದ ಉತ್ತರಗಳನ್ನು ಕೇಳಲು ಬಯಸುತ್ತಾರೆ [1]. ಮೆಂಟರುಗಳು ತಮ್ಮದೇ ಹಿನ್ನೆಡೆಗೆ ಅವಲಂಬನೆ ಹೊಂದಿರಬಹುದು. ಉದಾಹರಣೆಗೆ ಹೆತ್ತವರು ಎಲ್ಲವನ್ನೂ ತಿಳಿದಿರುವುದಿಲ್ಲ, ಅದೇ ಸಂದರ್ಭದಲ್ಲಿ ಶಿಕ್ಷಕರು ಯಾವಾಗಲೂ ಲಭ್ಯವಿರುವುದಿಲ್ಲ. ಹೆಚ್ಚಿನದಾಗಿ ಮಕ್ಕಳಲ್ಲಿರುವ ಪ್ರತಿಕ್ರಿಯೆಯ ವ್ಯವಸ್ಥೆಯು ಅತ್ಯಧಿಕ ಆಯ್ಕೆಯದ್ದಾಗಿರಬಹುದು, ಅವರಲ್ಲಿ ಹೆಚ್ಚಿನವರು ಪರಿಣಾಮಕಾರಿಯಾಗಿ ವೀಶ್ಯೂವಲ್‌ಗಳು, ಆಡಿಯೋ ಹಾಗೂ ಬಣ್ಣಗಳಿಗೆ ಪ್ರತಿಕ್ರಿಯೆಗಳನ್ನು ತ್ವರಿತವಾಗಿ ನೀಡುತ್ತಾರೆ [2]. ಇದು ನಮ್ಮ ಮಗುವಿನ ಕಲಿಕೆಯ ಸಾಧ್ಯತೆಯನ್ನು ಸ್ಥಳೀಯವಾಗಿಯೇ ಗರಿಷ್ಠಗೊಳಿಸುವುದಕ್ಕೆ ಅವಕಾಶ ನೀಡುತ್ತದೆ. ಇಲ್ಲಿಯೇ ಕಂಪ್ಯೂಟರ್ ಪ್ರಯೋಜನ ಒದಗಿಸುತ್ತದೆ.

“ ಹೆತ್ತವರಿಗೆ ಎಲ್ಲವೂ ತಿಳಿದಿರುವುದಿಲ್ಲ, ಅದೇ ಸಮಯದಲ್ಲಿ ಶಿಕ್ಷಕರು ಎಲ್ಲ ಸಮಯದಲ್ಲಿಯೂ ಲಭ್ಯವಿರುವುದಿಲ್ಲ”.

ಮಕ್ಕಳಿಗೆ ಕುತೂಹಲವಿರುತ್ತದೆ ಮತ್ತು ಎಲ್ಲವನ್ನೂ ತಿಳಿಯುವ ಕಾತುರತೆ ಇರುತ್ತದೆ. ಅವರು ಜಗತ್ತನ್ನು ತಿಳಿಯಲು ಹಾಗೂ ಇರುವ ಅಂತ್ಯವಿಲ್ಲದ ಸಾಧ್ಯತೆಗಳ ಕುರಿತು ಅರಿಯಲು ಬಯಸುತ್ತಾರೆ. ಕಂಪ್ಯೂಟರ್ ಮೂಲಕ ಮಗುವು ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಅನೇಕ ಶೈಕ್ಷಣಿಕ ಸಂಪನ್ಮೂಲಗಳನ್ನು ಆಕ್ಸೆಸ್ ಮಾಡಬಹುದು.

ಹೆಚ್ಚಿನದಾಗಿ ಕಂಪ್ಯೂಟರ್ ನಿಮ್ಮ ಮಗುವಿನಲ್ಲಿ ಅರಿವಿನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಯತ್ನಿಸುತ್ತದೆ. 1993 ರ ಒಂದು ಅಧ್ಯಯನವು ಕಿಂಡರ್‌‌ಗಾರ್ಟನ್‌ ಗೆ ಹೋಗುವ ಮಕ್ಕಳು ತಮ್ಮ 90% ಸಮಯವನ್ನು ಕಂಪ್ಯೂಟರಿನಲ್ಲಿಯೇ ಕಳೆಯುತ್ತಿದ್ದಾರೆ ಎನ್ನುವುದನ್ನು ಕಂಡುಕೊಂಡಿರುತ್ತದೆ.

ವೀಶ್ಯೂವಲ್‌ಗಳು ಹಾಗೂ ಬಣ್ಣಗಳನ್ನು ಬಳಸುವ ಇಂಟರಾಕ್ಟಿವ್ ಪಾಠಗಳು ಮಾಹಿತಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವ ಹಾಗೂ ಉಳಿಸಿಕೊಳ್ಳುವ ಸಾಮರ್ಥ್ಯಗಳನ್ನು ವಿಸ್ತರಿಸುತ್ತವೆ. ಸೈಕಾಲೊಜಿ ಟುಡೆ ಯಲ್ಲಿ ನೀಡಿರುವ ಪುರಾವೆಯಂತೆ ಶೈಕ್ಷಣಿಕ ಕಾರ್ಯಕ್ರಮಗಳು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸಬಹುದು, ಮೋಜಿನ ಕಲ್ಪನೆಯನ್ನು ಆಧರಿಸಿದ ಆಟಗಳು ಮಕ್ಕಳಿಗೆ ಪರಿಣಾಮಕಾರಿಯಾಗಿ ಗ್ರಹಿಸಲು ಹಾಗೂ ತಿಳುವಳಿಕೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ.  

 

ಡಗ್ಲಾಸ್ ಎಚ್ ಕ್ಲೆಮೆಂಟ್ಸ್ ಅವರು ಪ್ರಕಟಿಸಿದ “ದಿ ಎಫೆಕ್ಟಿವ್ ಯೂಸ್ ಆಫ್ ಕಂಪ್ಯೂಟರ್ಸ್ ವಿತ್ ಯಂಗ್ ಚಿಲ್ಡ್ರನ್” ಎನ್ನುವ ಲೇಖನದಲ್ಲಿ ಕಂಪ್ಯೂಟರಿನ ಬಳಕೆಯ ಪ್ರಯೋಜನಗಳನ್ನು ವಿವರಿಸಲಾಗಿದೆ. ಇದರಲ್ಲಿ ಅವರು “ಹೊಸ ರೀತಿಯಲ್ಲಿ ಮಕ್ಕಳು ಸಮಸ್ಯೆಗಳನ್ನು ಪರಿಹರಿಸುವುದು, ಚಿತ್ರ ಬಿಡಿಸುವುದು ಮತ್ತು ರೇಖಾಗಣಿತವನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಂಪ್ಯೂಟರ್ ಬಳಸುವಂತೆ ಮಾಡುವುದರಿಂದ ಅವರು ಗಣಿತೀಯವಾಗಿ ಹಾಗೂ ವೈಜ್ಞಾನಿಕವಾಗಿ ಕಲಿಯಲು ಹಾಗೂ ಬೆಳವಣಿಗೆ ಸಾಧಿಸಲು ನೆರವಾಗಬಹುದು.

ಅನೇಕ ಹೆತ್ತವರು ಟ್ಯಾಬ್ಲೆಟ್ ಗಳು ಹಾಗೂ ಇತರ ಮೊಬೈಲ್ ಸಾಧನಗಳತ್ತ ಮಕ್ಕಳನ್ನು ಸೆಳೆಯುತ್ತಿದ್ದರೂ ಇವು ಪಿಸಿಯು ಒದಗಿಸುವಷ್ಟು ಮೈಮರೆಸುವ ಅಥವಾ ಅನುಕೂಲಕರ ವಾತಾವರಣ ನೀಡುವುದಿಲ್ಲ. ಅದೇ ವೇಳೆ ಚಿಕ್ಕ ಮಕ್ಕಳಿಗೆ ಮೊಬೈಲ್ ಸಾಧನಗಳು ಅತ್ಯುತ್ತಮವಾಗಿದ್ದರೂ, ಮಕ್ಕಳು ಭಾಷೆಯನ್ನು ಅರ್ಥಮಾಡಿಕೊಂಡು ವಾಕ್ಯ ರಚನೆಯನ್ನು ಮಾಡುವಷ್ಟು ಬರೆಯುವ ಹಾಗೂ ಶಾಬ್ದಿಕ ಸಾಮರ್ಥ್ಯ ಬೆಳೆಸಿಕೊಂಡ ನಂತರ, ಅವರಿಗೆ ಪಿಸಿಯನ್ನು ಪರಿಚಯಿಸುವುದು ಮಕ್ಕಳ ಕಲಿಕೆಯನ್ನು ಓದು ಹಾಗೂ ಬರಹದ ಮೂಲಕ ಉತ್ತೇಜಿಸಲು ನೆರವಾಗುವುದು.

ಪಿಸಿಯ ಅತ್ಯಂತ ಮಹತ್ವದ ಉಪಯೋಗವೆಂದರೆ ಪಿಸಿಯು ನಿಮ್ಮ ಮಗುವಿನ ಪ್ರಾಥಮಿಕ ಸಾಧನವಾಗಿದ್ದು ತಂತ್ರಜ್ಞಾನದ ಉನ್ನತಿಯ ದಿನಗಳಲ್ಲಿ ಸುಧಾರಣೆಯ ಮೂಲಭೂತ ಅಥವಾ ಅತ್ಯಗತ್ಯವಾದ ಸಾಧನವಾಗಿದೆ.  ಇದು ಹೊಸ ಶತಮಾನದಲ್ಲಿ ಮಾಡಿರುವ ಸುಧಾರಣೆಗಳ ಮುಂಚೂಣಿಯಲ್ಲಿದೆ ಮತ್ತು ನಿಮ್ಮ ಮಗುವು ಅಂತಿಮವಾಗಿ ಬಳಸುವ ಯಾವುದೇ ಭವಿಷ್ಯದ ಸಾಧನಕ್ಕೆ ದೃಢವಾದ ಅಡಿಪಾಯವನ್ನು ಒದಗಿಸುತ್ತದೆ.

ಸಂಪೂರ್ಣ ಗರಿಷ್ಠಗೊಳಿಸಿದ ಸಂದರ್ಭದಲ್ಲಿ, ಪರಿಣಾಮಕಾರಿ ಕಂಪ್ಯೂಟರ್ ಬಳಕೆಯು ನಿಮ್ಮ ಮಗುವಿನ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಮೊದಲ ಹೆಜ್ಜೆಯಾಗಬಹುದು. ಇದೋ ಇಲ್ಲಿ ತನ್ನ ಹೊಸ ಪಿಸಿಯ ನೆರವಿನಿಂದ ಪಠ್ಯ ಚಟುವಟಿಕೆಗಳಲ್ಲಿ ಸಮಗ್ರವಾದ ಸ್ಪಷ್ಟತೆ ಹೊಂದಿರುವ ನಾಸಿಕ್‌ನ ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿರುವ ಶುಭಂನ ಉದಾಹರಣೆ ನೀಡಲಾಗಿದೆ.

ಪಿಸಿಯು ಕೇವಲ ಬಹು-ಆಯಾಮದ ಪ್ರಯೋಜನಗಳನ್ನು ನೀಡುವುದಷ್ಟೇ ಅಲ್ಲದೇ, ಇದು ಶಿಕ್ಷಕರು ಅಥವಾ ಹೆತ್ತವರಿಂದ ಸಾಧಿಸುವುದಕ್ಕೆ ಸುಲಭವಾಗಿ ಸಾಧ್ಯವಿಲ್ಲದ ಕಾಲ್ಪನಿಕ ಹಾಗೂ ನೈಜ ಜಗತ್ತಿನ ನಡುವಿನ ಅಂತರವನ್ನು ಕಡಿಮೆಗೊಳಿಸಬಹುದು. ನಿಮ್ಮ ಮಗುವಿಗೆ ಪಿಸಿಯನ್ನು ಒದಗಿಸುವುದು ದೀರ್ಘಕಾಲಿಕವಾಗಿ ಪ್ರಯೋಜನ ನೀಡುವ ನಿರ್ಧಾರವಾಗಬಹುದು.