ನಿಮ್ಮ ಮಗುವನ್ನು ಮೇಕರ್‌ಸ್ಪೇಸ್ ಸೇರಲು ನೀವು ಏಕೆ ಉತ್ತೇಜನ ನೀಡಬೇಕು

“ನಾವು ಮಕ್ಕಳಿಗೆ ಪ್ರಯೋಗವನ್ನು ಮಾಡಲು, ರಿಸ್ಕ್ ತೆಗೆದುಕೊಳ್ಳಲು ಮತ್ತು ತಮ್ಮದೇ ಆದ ಯೋಜನೆಗಳನ್ನು ಜಾರಿಗೊಳಿಸಲು ಅವಕಾಶ ಮಾಡಿಕೊಡಲು ನಾವು ಅವರಲ್ಲಿ ನಂಬಿಕೆಯನ್ನು ಮೂಡಿಸಲು ಅವರಿಗೆ ಸಂಪೂರ್ಣ ಅನುಮತಿಯನ್ನು ಒದಗಿಸುತ್ತೇವೆ. ಅವರು ಉತ್ತಮ ಯೋಜನೆಗಳನ್ನು ಹೊಂದಿರುವ ಮತ್ತು ತಮ್ಮ ಯೋಜನೆಗಳನ್ನು ನೈಜತೆಗೆ ಅಳವಡಿಸುವಂತಹ ವಿದ್ಯಾರ್ಥಿಗಳಾಗಿ ಮೂಡಿಬರಲು ಪ್ರಾರಂಭಿಸುತ್ತಾರೆ”

ಸಿಲ್ವಿಯ ಮಾರ್ಟಿನೇಜ್ ಮತ್ತು ಗ್ಯಾರಿ ಸ್ಟ್ಯಾಗರ್[1]

ಇದರ ಪರಿಣಾಮ ಮಾನವನ ಮೂಲ ಬದ್ಧತೆಯನ್ನು ಉಂಟುಮಾಡುತ್ತದೆ. ಮೇಕರ್‌ಸ್ಪೇಸ್ ಎನ್ನುವುದು ವಿದ್ಯಾರ್ಥಿಗಳು ವಿವಿಧ ಸಲಕರಣೆಗಳ ಮತ್ತು ವಸ್ತುಗಳ ಮೂಲಕ ರಚನೆ, ಸಂಯೋಜನೆ, ಸಂಶೋಧನೆ ಮತ್ತು ಪ್ರಯೋಗಗಳನ್ನು ಮಾಡುವ ಸ್ಥಳವಾಗಿದೆ. ಪೋಷಕರಾಗಿ ನೀವು ನಿಮ್ಮ ಮಗುವಿಗೆ ಅತ್ಯಂತ ಹೆಚ್ಚಿನ ಪ್ರಭಾವವನ್ನು ಬೀರುತ್ತೀರಿ ಮತ್ತು ಮೇಕರ್‌ಸ್ಪೇಸ್ ಚಟುವಟಿಕೆಗಳಲ್ಲಿ ತಲ್ಲೀನವಾಗುವುದರಿಂದ ನಿಮ್ಮ ಮಗುವು ಅದ್ಭುತಗಳನ್ನು ಮಾಡಲಿದೆ.[2]

1. ಪ್ರಯೋಗಾತ್ಮಕ ಕಲಿಕೆ

ಪ್ರಯೋಗಾತ್ಮಕ ಕಲಿಕೆಯು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಬೇಕಾದ ಸ್ಪರ್ಧಾತ್ಮಕತೆಯನ್ನು ಕಲಿಸಿಕೊಡುತ್ತದೆ. [3] ಥಿಯರಿಯ ಜ್ಞಾನವನ್ನು ಪ್ರಯೋಗಾತ್ಮಕವಾಗಿ ಕಲಿಯುವುದರಿಂದ ವೈಯಕ್ತಿಕ ಭಾವನೆಯನ್ನು ಹೆಚ್ಚಿಸುವುದಲ್ಲದೇ ಅವರನ್ನು ಉತ್ತಮವಾದ ಕೆಲಸಗಳನ್ನು ಮಾಡಲು ಉತ್ತೇಜನವನ್ನು ನೀಡುತ್ತದೆ.

2. ಪ್ರಶ್ನೆ ಮಾಡುವ ಅವಕಾಶ

ಯಾವಾಗಲೂ, ವಿದ್ಯಾರ್ಥಿಗಳು ತರಗತಿಯಲ್ಲಿ ಪ್ರಶ್ನೆಗಳನ್ನು ಕೇಳಲು ಹಿಂಜರಿಯುತ್ತಾರೆ. ಮೇಕರ್‌ಸ್ಪೇಸ್‌ನಲ್ಲಿ ವಿದ್ಯಾರ್ಥಿಗಳು ಪರಸ್ಪರ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾರೆ ಅಥವಾ ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಮಗುವು ಈ ಹಿಂದೆ ಬಿಡಿಸಲಾರದ ಸಮಸ್ಯೆಗಳ ಪರಿಹಾರವನ್ನು ಸಂಶೋಧಿಸುವಂತಹ ಸ್ವಾವಲಂಬಿಯಾಗುವುದನ್ನು ಕಲಿಯುತ್ತದೆ.[4]

3. ಸ್ಪರ್ದಾತ್ಮಕ ಮತ್ತು ರಚನಾತ್ಮಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ

ಯಾವುದೇ ರೀತಿಯ ಮಾರ್ಗದರ್ಶನವಿಲ್ಲದೆಯೇ ಅಥವಾ ಹಂತ ಹಂತದ ಸೂಚನೆಗಳನ್ನು ನೀಡದೆಯೇ ನಿಮ್ಮ ಮಗುವು ವಿಜ್ಞಾನ, ಇಂಜಿನಿಯರಿಂಗ್ ಮತ್ತು ತಾರ್ಕಿಕ ವಿಷಯಗಳಲ್ಲಿ ಆಳವಾಗಿ ತಲ್ಲೀನವಗುವ ಮೂಲಕ ಆನ್‌ಲೈನ್‌ನಲ್ಲಿ ಸಂಶೋಧನೆ ಮಾಡುವುದು, ಪ್ರಯೋಗ ಮಾಡುವುದು ಮತ್ತು ಆವಿಷ್ಕಾರಗಳಾನ್ನು ಮಾಡುವುದರ ಲಾಭವನ್ನು ಪಡೆಯುತ್ತದೆ. ಇದರಿಂದ ಸ್ಪರ್ದಾತ್ಮಕ ಮತ್ತು ರಚನಾತ್ಮಕ ಅಭಿವೃದ್ಧಿಯಾಗುತ್ತದೆ ಏಕೆಂದರೆ ವಿದ್ಯಾರ್ಥಿಗಳು ಕಲ್ಪಿಸಿಕೊಳ್ಳಲು ಉತ್ತೇಜಿತರಾಗುತ್ತಾರೆ.[5]

4. ಸ್ವಯಂ-ಅರಿವು

ಸ್ವಯಂ-ಅರಿವು ಎನ್ನುವುದು ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮತ್ತು ದುರ್ಬಲ ಅಂಶಗಳ ಮೇಲೆ ಕೆಲಸ ಮಾಡಲು ಅತ್ಯಂತ ಪ್ರಮುಖವಾಗಿದೆ; ಮೇಕರ್‌ಸ್ಪೇಸಸ್ ಪಿ ಸಕ್ರಿಯವಾದ ಕಲಿಕೆಯೊಂದಿಗೆ ಸಂಯೋಜಿತವಾದ ಕಲಿಕೆಯು ಕಲಿಕೆಯೊಂದಿಗೆ ನಿಮ್ಮ ಮಗುವಿಗೆ ರಚನಾತ್ಮಕ, ಆತ್ಮವಿಶ್ವಾಸ ಮತ್ತು ಸ್ಥಿರತೆಯನ್ನು ಒದಗಿಸುತ್ತದೆ. ನಿಮ್ಮ ಮಗುವು ಸ್ವತಃ ಸಾಮರ್ಥ್ಯಗಳನ್ನು ಮತ್ತು ದುರ್ಬಲತೆಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅವರು ಕಲಿತಿರುವುದನ್ನು ಹೇಗೆ ಮತ್ತು ಏನು ಎಂಬುದರ ಬಗ್ಗೆ ಸಕ್ರಿಯವಾಗಿ ಅರ್ಥೈಸಿಕೊಳ್ಳುತ್ತಾರೆ.

5. ಅಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ

ಶೈಕ್ಷಣಿಕ ಅವಧಿಯು ಹೆಚ್ಚು ಅಧಿಕಾರಯುತ ಭಾವನೆಯನ್ನು ಮೂಡಿಸುತ್ತದೆ ಮತ್ತು ಮಕ್ಕಳು ಅಭ್ಯಾಸ ಮಾಡಲು ಹಾತೊರೆಯುತ್ತಿರುತ್ತಾರೆ, ಮೇಕರ್‌ಸ್ಪೇಸಸ್ ಅವರ ಸಾಮರ್ಥ್ಯವನ್ನು ಹೊರಗೆಳೆಯಲು ಮತ್ತು ರೋಮಾಂಚನಕಾರಿಯಾದ ಕಲಿಕೆಯನ್ನು ಒದಗಿಸುತ್ತದೆ. ಮಕ್ಕಳು ಹೊಸ ವಿಷಯಗಳನ್ನು ಕಲಿಯಲು ಮತ್ತು ಅವುಗಳನ್ನು ತಮ್ಮ ಪ್ರಾಜೆಕ್ಟ್ ಗಳಲ್ಲಿ ಅಳವಡಿಸಿಕೊಳ್ಳುವತ್ತ ಮುನ್ನಡೆಯಲ್ಲು ಪ್ರಾರಂಭಿಸುತ್ತಾರೆ.[6]

ದಿನದ ಕೊನೆಯಲ್ಲಿ ಬೋರ್ ಆಗಿರುವ ಪ್ರತಿಕ್ರಿಯೆಯನ್ನು ತೋರಿಸುವ ಬದಲಾಗಿ ನಿಮ್ಮ ಮಗುವು “ಈ ದಿನ ಶಾಲೆ ಹೇಗಿತ್ತು?” ಎಂಬ ನಿಮ್ಮ ಪ್ರಶ್ನೆಗೆ ನಗುವ ಜೊತೆಗೆ ವಿವರವಾದ ಉತ್ತರವನ್ನು ನೀಡುತ್ತದೆ.

ಮೇಲಿನ ಎಲ್ಲವುಗಳನ್ನು ಮೀರಿ, ಮೇಕರ್‌ಸ್ಪೇಸ್‌ನಲ್ಲಿ ಕಳೆದಿರುವ ಸಮಯಕ್ಕೆ ನಿಮ್ಮ ಮಗುವು “ಮೇಕರ್ ಮೈಂಡ್‌ಸೆಟ್” ನಿರ್ಮಾಣವಾಗುವಂತೆ ಮಾಡುತ್ತದೆ. ಈ ಮೈಂಡ್‌ಸೆಟ್ ಅತ್ಯಂತ ಪ್ರಮುಖವಾಗಿದ್ದು ಇದು ಥಿಯರಿಯ ಜ್ಞಾನವನ್ನು ನೈಜ ವಿಶ್ವದಲ್ಲಿ ಹೇಗೆ ಉಪಯೋಗಿಸಿಕೊಳ್ಳಬೇಕೆಂಬುದನ್ನು ಕಲಿಸಲು ಸಹಾಯ ಮಾಡುತ್ತದೆ.[7]

ನೀವು ನಿಮ್ಮ ಮಗುವನ್ನು ಮೇಕರ್‌ಸ್ಪೇಸ್‌ನಲ್ಲಿ ನೋಂದಾಯಿಸಲು ಪ್ರಭಾವಿತರಾಗಿದ್ದರೆ, ನಿಮ್ಮ ಅನುಭವವನ್ನು #DellAarambh ಉಪಯೋಗಿಸಿ ಟ್ವೀಟ್ ಮಾಡಿರಿ.