ಕಂಠಪಾಟದ ಮೂಲಕ ಕಲಿಯುವುದರ ವಿರುದ್ಧ ನೀವು ಏಕೆ ಧ್ವನಿ ಎತ್ತಬೇಕು

ಕಂಠಪಾಟದ ಮೂಲಕ ಕಲಿಯುವಿಕೆಯು ದೇಶಾದ್ಯಂತದ ಶಾಲೆಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಶಿಕ್ಷಕರು ಮಾತ್ರವಲ್ಲ ಪೋಷಕರೂ ಕೂಡ ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ಮಾಡಲು “ಉರು ಹೊಡೆಯಿರಿ ಉತ್ತೀರ್ಣರಾಗುವಿರಿ” ಎಂದು ಪ್ರೋತ್ಸಾಹಿಸುತ್ತಿದ್ದಾರೆ.

ಆದರೆ, ಇದು ಪರಿಣಾಮಕಾರಿಯೇ?

ನಿಮಗೆ ಅರ್ಥವಾಗಿರಲಿ ಅಥವಾ ಅರ್ಥವಾಗದೇ ಇರಲಿ ಅವುಗಳನ್ನು ಅನೇಕ ಸಾರಿ ಪುನರಾವರ್ತಿಸುವ ಮೂಲಕ ನೆನಪಿನಲ್ಲಿ ಇಟ್ಟುಕೊಳ್ಳುವುದನ್ನು ಕಂಠಪಾಟದ ಮೂಲಕ ಕಲಿಯುವುದು ಎನ್ನುತ್ತಾರೆ ಇದು ಓದದೇ ಇರುವ ಮತ್ತು ಕಡಿಮೆ ಸಮಯ ಇರುವ ವಿದ್ಯಾರ್ಥಿಗಳಿಗೆ ಇರುವ ಮೊದಲ ಆಯ್ಕೆಯಾಗಿರುತ್ತದೆ.[1] ಆದರೆ ಇದರಲ್ಲಿನ ಸಮಸ್ಯೆ ಏನೆಂದರೆ ಆ ವಿಚಾರಗಳು ಒಂದು ದಿನ ಅಥವಾ ಅಲ್ಪ ಅವಧಿಗೆ ಮಾತ್ರ ಜ್ಞಾಪಕದಲ್ಲಿ ಇರುತ್ತದೆ, ಪರೀಕ್ಷೆಯನ್ನು ಬರೆಯುವುದು ಮತ್ತು ಮಾರನೇ ದಿನ ಮರೆತು ಬಿಡುವುದು ಆಗುತ್ತದೆ.

ನೆನಪಿನಲ್ಲಿ ಇಟ್ಟುಕೊಳ್ಳುವುದು ಒಂದು ಅಮೂಲ್ಯವಾದಂತಹ ಕಲೆಯಾಗಿದೆ; ಪಾಸ್‌ವರ್ಡ್‌ಗಳು, ಪಿನ್‌ಗಳು, ಜನ್ಮ ದಿನಾಂಕಗಳು, ಅಕ್ಷರ ಮಾಲೆಗಳು ಮತ್ತು ಸೂತ್ರಗಳಂತಹ ವಿಚಾರಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಬಹಳ ಹೊತ್ತಿನ ವರೆಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯದಲ್ಲಿ ಕಂಠ ಪಾಟ (ಗಿಳಿ ಪಾಟ) ಮಾಡಲಾಗುತ್ತದೆ ಮತ್ತು ನಿಮ್ಮ ಮಗುವಿನ ಸ್ಮರಣ ಶಕ್ತಿಯು (ಸಂಕೇತಾಕ್ಷರಗಳನ್ನು ಉಪಯೋಗಿಸುವುದು) ನ್ಯಾಯ ಒದಗಿಸುವಲ್ಲಿ ವಿಫಲವಾಗುತ್ತದೆ.

ಬದಲಿ ಏನು?[2]

ಪೋಷಕರು ತಮ್ಮ ಮಕ್ಕಳು ಉತ್ತಮ ಸಾಧನೆ ಮಾಡಬೇಕು ಮತ್ತು ಅವರು ತಮ್ಮ ಕಾಲುಗಳ ಮೇಲೆ ನಿಂತುಕೊಳ್ಳಬೇಕು ಎಂಬುದನ್ನು ಇಷ್ಟಪಡುತ್ತಾರೆ ಅದು ಪ್ರವೇಶ ಪರೀಕ್ಷೆಗಳಲ್ಲಿ ಟಾಪರ್ ಆಗಿ ಅತ್ಯುತ್ತಮ ಶಿಕ್ಷಣ ಸಂಸ್ಥೆಯಲ್ಲಿ ಸೀಟ್ ಪಡೆಯುವುದು ಆಗಿರಬಹುದು ಅಥವಾ ಹೊಸ ಯುಗದ ವೃತ್ತಿಯನ್ನು ಪಡೆಯುವುದಾಗಿರಬಹುದು. ಪಿಸಿ ಆಧಾರಿತ ಕಲಿಕೆಯು ಬದಲಿ ವಿಧಾನವಾಗಿದ್ದು ಇದು ಮಗುವಿನಲ್ಲಿ ಅಡಗಿರುವ ಗುಪ್ತ ವಿಚಾರಗಳನ್ನು ಹೊರಹಾಕುತ್ತದೆ.

ಪಿಸಿಯನ್ನು ಮಗುವನ್ನು ಯವಾಗಲೂ ಚಟುವಟಿಕೆಯಲ್ಲಿ ಇಡಲು ಮನೆಯಲ್ಲಿ ಮತ್ತು ತರಗತಿ ಕೋಣೆಯಲ್ಲಿ ಎರಡರಲ್ಲಿಯೂ ಸಹ ಉಪಯೋಗಿಸಬಹುದು. ಇದು ಮಕ್ಕಳಿಗೆ ವ್ಯಾಪಕ ಶ್ರೇಣಿಯ ಸಂಪನ್ಮೂಲಗಳನ್ನು ಉಪಯೋಗಿಸುವ ಅವಕಾಶ ಒದಗಿಸುತ್ತದೆ, ಕೋರ್ಸ್ ಕೆಲಸದ ಪುನರಾವಲೋಕನವನ್ನು ಸರಳಗೊಳಿಸುತ್ತದೆ ಮತ್ತು ಅವರಿಗೆ ಒಂದು ವಿಷಯದ ಪ್ರತಿಯೊಂದು ವಿಚಾರವನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಕಂಠಪಾಟ ಮಾಡುವುದರ ಬದಲಿಗೆ ಮಗುವು ಈ ಕಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ಇದು ಕೊನೆಯವರೆಗೂ ಉಳಿಯುವಂತೆ ಮಾಡುತ್ತದೆ ಮತ್ತು ಧನಾತ್ಮಕ ಪ್ರಭಾವವನ್ನು ಬೀರುತ್ತದೆ. ಜೀವನಕ್ಕೆ ಹತ್ತಿರವಾಗಿರುವ ವಿಚಾರಗಳನ್ನು ನೋಡುವುದು ಅಥವಾ ಥಿಯರಿಗಳನ್ನು ಮಾಡುವುದು, ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಯೋಜನೆಗಳನ್ನು ಉತ್ಪತ್ತಿ ಮಾಡುವುದು ಆಳವಾದ ಕಲಿಕೆಯ ಕಟ್ಟಡ ಕಟ್ಟಲು ಬ್ಲಾಕ್‌ಗಳಾಗಿವೆ. ಈ ಧೋರಣೆಯಿಂದ ವಿಷಯದಲ್ಲಿ ಮಕ್ಕಳು ಪರಿಪಕ್ವವಾದರೆ ಅದರ ಪರಿಣಾಮ ಬಹುಪಾಲು ದೊಡ್ಡದಾಗಿರುತ್ತದೆ.

ಕಂಠಪಾಟದ ಮೂಲಕ ಕಲಿಯುವುದರ ಪ್ರಕ್ರಿಯೆಯ ಯೋಚನಾ ಲಹರಿಯಿಂದ ದೂರ ಹೋಗುವುದು ಸುಲಭ ಸಾಧ್ಯವೇನಲ್ಲ, ಆದರೆ ಪಿ ಸಕ್ರಿಯವಾಗಿರುವ ಕಲಿಕೆಯು ಈ ಸ್ಪರ್ಧಾತ್ಮಕ ಯುಗದಲ್ಲಿ ಮುಂದುವರೆಯಲು ಆಫರ್ ಒದಗಿಸುತ್ತದೆ. ಮನೆಯಲ್ಲಿ ಇರುವ ಒಂದು ಪಿಸಿ ಅಥವಾ ಲ್ಯಾಪ್‌ಟಾಪ್ ನಿಮ್ಮ ಮಗುವಿಗೆ ಸ್ವತಂತ್ರವಾಗಿ ಸಂಶೋಧನೆ ನಡೆಸಲು, ಪರಿಣಾಮಕಾರಿಯಾಗಿ ಕಲಿಯಲು ಮತ್ತು ತಂತ್ರಜ್ಞಾನ ಆಧಾರಿತ ಆರ್ಥಿಕತೆಯನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ.

ದಶಕಗಳ ಹಿಂದಿನ ರೂಢಿಯ ವಿರುದ್ಧ ಧ್ವನಿಯನ್ನು ಎತ್ತಿರಿ. ಪಿಸಿ ಸಕ್ರಿಯವಾಗಿರುವ ಕಲಿಕೆಯ ಜೊತೆಗೆ ಭವಿಷ್ಯವನ್ನು ಆರಂಭ್ ಮಾಡಲು ಕಂಠಪಾಟದ ವಿರುದ್ಧದ ಹೋರಾಟವನ್ನು ಬೆಂಬಲಿಸಿ. ನಮ್ಮೊಂದಿಗೆ ಸೇರಿಕೊಳ್ಳಿ ಮತ್ತು ನಿಮ್ಮ ಧ್ವನಿಯನ್ನು ಏರಿಸಿರಿ.[3]