ನಿಮ್ಮ ಮಗುವು ಪ್ರತಿದಿನ ಏಕೆ ಓದಬೇಕು ಗೊತ್ತೇ?

 

“ನೀವು ಹೆಚ್ಚೆಚ್ಚು ಓದಿದಂತೆ, ಹೆಚ್ಚೆಚ್ಚು ವಿಷಯಗಳನ್ನು ನೀವು ಕಲಿತುಕೊಳ್ಳುತ್ತೀರಿ. ನೀವು ಹೆಚ್ಚೆಚ್ಚು ವಿಷಯಗಳನ್ನು ಕಲಿತುಕೊಂಡಂತೆ, ಹೆಚ್ಚೆಚ್ಚು ಸ್ಥಳಗಳಿಗೆ ನೀವು ಹೋಗುತ್ತೀರಿ.”

- ಡಾ. ಸ್ಯೂಸ್

ಕತೆ ಕೇಳುವುದು ಅಂದರೆ ಮಕ್ಕಳಿಗೆ ಏಕೆ ತುಂಬಾ ಇಷ್ಟ ಅನ್ನುವುದನ್ನು ಡಾ ಸ್ಯೂಸ್ ತುಂಬಾ ಚೆನ್ನಾಗಿ ವಿವರಿಸುತ್ತಾರೆ. ಮಲಗುವುದಕ್ಕೂ ಮುಂಚಿನ ಸಮಯವಾಗಿರಲಿ, ಆರಾಮವಾಗಿ ಕಾಲ ಕಳೆಯುವ ಭಾನುವಾರದ ಮದ್ಯಾಹ್ನದ ಸಮಯವಾಗಿರಲಿ, ಓದುವುದನ್ನು ಇಷ್ಟಪಡುವ ಮಗುವು ಜೀವಮಾನದುದ್ದಕ್ಕೂ ಯಶಸ್ಸನ್ನು ಪಡೆದುಕೊಳ್ಳುವ ದಾರಿಯಲ್ಲಿ ಇರುತ್ತದೆ – ಏಕೆ ಅಂತ ಕೇಳ್ತೀರಾ, ಮುಂದೆ ಓದಿ:

 

ಕಾರಣ #1

ನಿಮ್ಮ ಮಗು ಎಷ್ಟೇ ವಯಸ್ಸಿನದ್ದಾಗಿರಲಿ, ವಿಜ್ಞಾನ ಮತ್ತು ಗಣಿತದಂಥ, ತರ್ಕವನ್ನು ಉಪಯೋಗಿಸಿ ಮಾಡಬೇಕಿರುವ ಕೆಲಸಗಳನ್ನು ಮಾಡುವ, ಮಿದುಳಿನ ಎಡ ಭಾಗದ ಅನೇಕ ಪ್ರದೇಶಗಳನ್ನು ಓದುವಿಕೆಯು ಜಾಗೃತಗೊಳಿಸುತ್ತದೆ ಒಂದು ದಿನಕ್ಕೆ ಒಂದೇ ಅಧ್ಯಾಯವಾದರೂ ಸರಿ, ನಿಮ್ಮ ಮಗುವಿನ ಮಿದುಳು ಆರೋಗ್ಯದಿಂದ ಇರುವುದನ್ನು ಮತ್ತು ಭಾಷೆ ಬೆಳವಣಿಗೆಯಾಗುವುದನ್ನು ಇದು ಖಚಿತಪಡಿಸುತ್ತದೆ ಬೆಳವಣಿಗೆಯಾಗುವುದನ್ನು ಇದು ಖಚಿತಪಡಿಸುತ್ತದೆ. ನಿಮ್ಮ ಮಗು ಓದುವುದನ್ನು ಇಷ್ಟಪಡುವ ಹಾಗೆ ಮಾಡುವುದಷ್ಟೇ ನೀವು ಮಾಡಬೇಕಾದ ಕೆಲಸವಾಗಿರುತ್ತದೆ!

 

ಕಾರಣ #2

ಕೆಲಸದ ಪ್ರಪಂಚದಲ್ಲಿ ಪ್ರತ್ಯೇಕ ವ್ಯಕ್ತಿಗಳೂ ಶ್ರೇಷ್ಠತೆಯನ್ನು ಗಳಿಸಿಕೊಳ್ಳಬೇಕಿರುವ ಅಗ್ರಣೀಯ ಕೌಶಲ್ಯಗಳಲ್ಲಿ ಸೃಜನಾತ್ಮಕತೆ ಎಂಬುದು ಒಂದಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆಯು ಕೈಗೊಂಡ ಅಧ್ಯಯನವೊಂದು ಹೇಳುತ್ತದೆ. ನಿರಂತರವಾದ ಓದಿನಿಂದಾಗಿ ಹೊರಹೊಮ್ಮುವ ಪರಿಣಾಮಕತೆ ಹಾಗೂ ಸಮಸ್ಯೆ ಪರಿಹರಿಸುವಿಕೆಗಳನ್ನು ಸುಧಾರಿಸುವಲ್ಲಿ ಅರಿವಿನ ವೈವಿಧ್ಯತೆ, ಅಥವಾ ಆಲೋಚನೆಯಲ್ಲಿ ವೈವಿಧ್ಯತೆಯನ್ನು ಮುಂದುವರೆಯುತ್ತಿರುವ ಸಂಶೋಧನೆಯೊಂದು ಅನ್ವೇಷಿಸುತ್ತದೆ.

 

ಕಾರಣ #3

“ಜೀವನವನ್ನು, ಇಂಪ್ರೆಸ್ ಮಾಡಲು ಅಲ್ಲ, ಎಕ್ಸ್ ಪ್ರೆಸ್ ಮಾಡುವುದಕ್ಕಾಗಿ ಜೀವಿಸಿರಿ.”

- ಅನಾಮಿಕ

ತಮ್ಮನ್ನು ತಾವು ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸುವುದಕ್ಕಾಗಿ ಸಮೃದ್ಧ ಶಬ್ದಭಂಡಾರದ ಪದಗಳನ್ನು ನಿಮ್ಮ ಮಕ್ಕಳು ಬಳಸಿಕೊಳ್ಳಬೇಕು ಎಂದು ನೀವು ಬಯಸಿದಲ್ಲಿ, ಅವರನ್ನು ಓದಲು ತೊಡಗಿಸಿ. ಒಂದು ಪುಸ್ತಕವು ಮೂಲಭೂತವಾಗಿ ಅದರ ಲೇಖಕರ ಆಲೋಚನೆಗಳ ಅಭಿವ್ಯಕ್ತಿಯೇ ಆಗಿರುವುದರಿಂದ – ತನ್ನನ್ನು ತಾನು ವ್ಯಕ್ತಪಡಿಸುವುದನ್ನು ಓರ್ವ ಮಗುವು ಕಲಿಯಲು ಅದು ನೀಲಿನಕಾಶೆಯಾಗಿರುತ್ತದೆ.

 

ಕಾರಣ #4

ನಿಮ್ಮ ಮಗುವು ಸ್ಫೂರ್ತಿಯನ್ನು ಪಡೆದುಕೊಳ್ಳಲಿ ಎಂದು ನೀವು ಬಯಸಿದಲ್ಲಿ, ಓದುವಿಕೆಯೊಂದೇ ಮಾರ್ಗವಾಗಿರುತ್ತದೆ. ಪುಸ್ತಕದಲ್ಲಿನ ಪಾತ್ರಗಳು ಸವಾಲುಗಳೊಂದಿಗೆ ನೇರವಾಗಿ ಕಾದಾಡುವುದನ್ನು ಅವರು ನೋಡುವುದರಿಂದ, ಜೀವನದ ಹಲವಾರು ಸವಾಲುಗಳಿಂದ ಓಡಿ ಹೋಗುವ ಬದಲು ಅವುಗಳನ್ನು ಸ್ವೀಕರಿಸಿ, ಎದುರಿಸಲು ಅವರು ಸಮರ್ಥರಾಗುತ್ತಾರೆ.

ಹಾಗಿದ್ದಲ್ಲಿ, ನಿಮ್ಮ ಮಗುವು ಪರ್ಸನಲ್ ಕಂಪ್ಯೂಟರ್ ನಲ್ಲಿ ಪುಸ್ತಕಗಳನ್ನು ಓದಬೇಕೆಂದು ನೀವು ಬಯಸುತ್ತೀರಾ?

ಸರಿ, ಆನ್ ಲೈನ್ ನಲ್ಲಿ ಓದಲು ಅನುವು ಮಾಡಿಕೊಡುವ ಕೆಲವು ಅದ್ಭುತವಾದ ವೆಬ್ ಸೈಟ್ ಗಳನ್ನು ಇಲ್ಲಿ ನೀಡಲಾಗಿದೆ:-

 

ನಿಮ್ಮ ಮಗುವಿಗೆ ಓದುವಿಕೆಯೂ ಸಹ ಅಧ್ಯಯನದಿಂದ ವಿರಾಮವನ್ನು ನೀಡುವ ಒಂದು ಅದ್ಭುತವಾದ ವಿಚಾರವಾಗಿರುತ್ತದೆ ಎಂಬುದನ್ನು ನಾವು ಮರೆಯಬಾರದು. ಪರೀಕ್ಷಾ ಸಮಯಗಳಲ್ಲಿ ಮನಸ್ಸನ್ನು ಪ್ರಫುಲ್ಲತೆಯಿಂದ ಇರಿಸುವುದಕ್ಕಾಗಿ, ನಿಗದಿತ ಮಧ್ಯಂತರಗಳಲ್ಲಿ ವಿದ್ಯಾರ್ಥಿಗಳು ಸ್ಟಡಿ ಬ್ರೇಕ್ ಗಳನ್ನು ತೆಗೆದುಕೊಳ್ಳಬೇಕು ಹಾಗೂ ಅದನ್ನು ಮಾಡಲು ಓದುವಿಕೆಗಿಂತ ಹೆಚ್ಚು ಉತ್ತಮವಾದ ಸಂಗತಿ ಇನ್ಯಾವುದಿದೆ!