ನಿಮ್ಮ ವಿದ್ಯಾರ್ಥಿಗಳನ್ನು ನೀವು ಪ್ರೇರೇಪಿಸಬಲ್ಲಿರಿ – ಹೇಗೆ ಎಂಬುದು ಇಲ್ಲಿದೆ

 

ಪ್ರೇರೇಪಣೆ ಎಂಬುದು ಎಲ್ಲರಿಗೂ ಅಷ್ಟೊಂದು ಸುಲಭವಾಗಿ ಆಗುವಂತಹುದ್ದಲ್ಲ. ಕೆಲವರಿಗೆ, ಅದು “ಅಂತರ್-ನಿರ್ಮಿತ” ವಾಗಿದ್ದರೆ, ಬಹುಪಾಲು ವಿದ್ಯಾರ್ಥಿಗಳಿಗೆ ಅವರನ್ನು ಕಾಲಕಾಲಕ್ಕೆ ಒಂದು ರೀತಿಯಲ್ಲಿ ಮುಂದೆ ತಳ್ಳಬೇಕಾಗುತ್ತದೆ. ಅದು ತರಗತಿಯಲ್ಲಿ ಸದಾ ಮುಂದೆ ಇರುವುದಾಗಿರಲಿ, ಒಂದು ಚಾಂಪಿಯನ್ಶಿಪ್ ಅನ್ನು ಗೆಲ್ಲುವುದಾಗಿರಲಿ, ಅಥವಾ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಹೆಚ್ಚು ಜ್ಞಾನವನ್ನು ಗಳಿಸಿಕೊಳ್ಳುವುದಾಗಿರಲಿ - ಈ ತಳ್ಳುವಿಕೆಯು ಮಗುವಿನದ್ದೇ ಆದ ಸ್ವಂತದ ಗುರಿಗಳೊಂದಿಗೆ ಸಹಮತಲ್ಲಿದ್ದಾಗ ಅದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಒಬ್ಬ ಶಿಕ್ಷಕರಾಗಿ, ನಿಮ್ಮ ತರಗತಿಯ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ನೀವು ಏನೆಲ್ಲವನ್ನು ಮಾಡಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ:

1. ನನಗೆ ಅಂಕಗಳನ್ನು ತೋರಿಸಿ!

ಕಾರ್ಯಸ್ಥಳದಲ್ಲಿ ಅಪ್ರೈಜಲ್ಗಳು ಮತ್ತು ಬಡ್ತಿಗಳಿಂದ ವಯಸ್ಕರು ಪ್ರೋತ್ಸಾಹಿಸಲ್ಪಡುವ ರೀತಿಯಲ್ಲಿಯೇ, ಅಂಕಗಳು ಮತ್ತು ಗ್ರೇಡ್ಗಳಿಂದ ಮಕ್ಕಳೂ ಸಹ ಆಂತರಿಕವಾಗಿ ಉತ್ತೇಜಿಸಲ್ಪಡುತ್ತಾರೆ. ನಿಜವಾದ ಪರೀಕ್ಷೆಗಳಿಗಾಗಿ ನಿಮ್ಮ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಸನ್ನದ್ಧಗೊಳಿಸುವುದಕ್ಕಾಗಿ ನಿಮ್ಮ ವಿದ್ಯಾರ್ಥಿಗಳು ತಮ್ಮನ್ನು ತಾವು ನಿರಂತರವಾಗಿ ಸಂಪೂರ್ಣವಾಗಿ ಮೀಸಲಿರಿಸುವಂತೆ ಮಾಡಲು, ಎಷ್ಟು ಸಾಧ್ಯವೋ ಅಷ್ಟು ಅಣುಕು ಪರೀಕ್ಷೆಗಳನ್ನು ನಿರ್ವಹಿಸಿ!

2. ಸುಧಾರಣೆಯನ್ನು ಗುರುತಿಸಿ

ನಿಮ್ಮ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಸುಧಾರಿಸಲು ಅತ್ಯಂತ ಚಿಕ್ಕದಾದ ಜಿಗಿತವನ್ನೂ ಸಹ ಗುರುತಿಸಬೇಕು. ಉದಾಹರಣೆಗಾಗಿ, ಇಂಗ್ಲಿಷ್ ಶಬ್ದಭಂಡಾರ ತರಗತಿ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿಯು 6/10 ನಿಂದ 8.5/10 ನಷ್ಟು ಹೆಚ್ಚಳವನ್ನು ತೋರಿಸಿದ್ದಲ್ಲಿ, ಅದನ್ನು ಮೌಖಿಕವಾಗಿ ಹಾಗೂ ಪರೀಕ್ಷೆಯ ಮೇಲೆಯೇ “ಬಹಳ ಉತ್ತಮ” ಅಥವಾ ಒಂದು ಸ್ಟಾರ್ ಸ್ಟಿಕ್ಕರ್ನ ಜೊತೆಯಲ್ಲಿ ಅಭಿನಂದಿಸಬೇಕು – ಇದೆಲ್ಲವೂ ಹೊಗಳುವಿಕೆ ಮತ್ತು ಹುರಿದುಂಬಿಸುವಿಕೆಯ ನಿಮ್ಮ ವೈಯಕ್ತಿಕ ಶೈಲಿಯ ಮೇಲೆ ಆಧರಿತವಾಗಿರುತ್ತದೆ.

3. ಸಕ್ರಿಯ ಕಲಿಕೆಯೇ ಮುಂದುವರೆಯಬೇಕಾದ ಮಾರ್ಗ

ಸಾಮಾನ್ಯವಾಗಿ, ತರಗತಿಯಲ್ಲಿ ಬಹುಪಾಲು ಮಾತನಾಡುವಿಕೆಯು ಶಿಕ್ಷಕರದ್ದೇ ಆಗಿರುತ್ತದೆ. Super Teacher Worksheets [1] ಗಳಂಥ ಶಿಕ್ಷಣಾತ್ಮಕ ಸಂಪನ್ಮೂಲಗಳಿಂದ ಒಂದು ಅಥವಾ ಎರಡು ಇಂಟರಾಕ್ಟಿವ್ ವಿಡಿಯೊಗಳು, ಸಮೂಹ ಚರ್ಚೆಗಳು ಮತ್ತು ಸಮಸ್ಯೆ-ಪರಿಹರಿಸುವಿಕೆಯ ವರ್ಕ್ಶೀಟ್ಗಳೊಂದಿಗೆ ಪಾಠದ ಚಟುವಟಿಕೆಗಳನ್ನು ಹೆಚ್ಚು ಸಂಭಾಷಣಾಯುಕ್ತ ಸ್ವರೂಪದ್ದವುಗಳನ್ನಾಗಿಸುವ ಮೂಲಕ ಈ ರೂಢಿಯನ್ನು ತಲೆಕೆಳಗಾಗಿಸಿ.

4. ಸಾಮರ್ಥ್ಯಗಳನ್ನು ವೃದ್ಧಿಸಿ

ನಿಮ್ಮ ವಿದ್ಯಾರ್ಥಿ ಟ್ರಿಗನಾಮೆಟ್ರಿ ವಿಷಯದಲ್ಲಿ ಹೆಚ್ಚು ಪ್ರತಿಭಾವಂತನಾಗಿದ್ದಲ್ಲಿ ಹಾಗೂ ನಿಜವಾದ ಆಸಕ್ತಿಯನ್ನು ಹೊಂದಿದ್ದಲ್ಲಿ, ಆ ವಿದ್ಯಾರ್ಥಿಯನ್ನು 100 Problems Challenge [2] ಗೆ ಪರಿಚಯಿಸಿ ಹಾಗೂ ಈ ಆಸಕ್ತಿಯು ಒಂದು ಬಹುವಾಗಿ-ಇಷ್ಟಪಡುವ ಒಂದು ಭಾವೋದ್ವೇಗವಾಗಿ ಪರಿವರ್ತನೆಗೊಳ್ಳುವುದನ್ನು ಅವಲೋಕಿಸಿ. ಅದೇ ರೀತಿಯಾಗಿ, ನಿಮ್ಮ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳಬಹುದಾದ ಹಲವಾರು PC ಸಂಪನ್ಮೂಲಗಳಿವೆ. ನಿಮ್ಮ ವಿದ್ಯಾರ್ಥಿಗೆ ಆಸಕ್ತಿಕರವಾದ ವಿಷಯ ಯಾವುದು ಎಂಬುದನ್ನು ಕಂಡುಕೊಳ್ಳಲು ಒಂದು ಆಳವಾದ ಸಂಭಾಷಣೆಯನ್ನು ಮಾಡುವುದು ಹಾಗೂ ಅದನ್ನು ಮುಂದುವರೆಸಿಕೊಂಡು ಹೋಗಲು PC ಸಂಪನ್ಮೂಲವನ್ನು ಹುಡುಕುವುದಷ್ಟೇ ನೀವು ಮಾಡಬೇಕಿರುವ ಕೆಲಸವಾಗಿರುತ್ತದೆ.

ನೀವು ಒಬ್ಬ ನುರಿತ ಶಿಕ್ಷಕರಾಗಿರಿ ಅಥವಾ ಈಗಷ್ಟೇ ವೃತ್ತಿಯನ್ನು ಆರಂಭಿಸಿದವರಾಗಿರಿ, ನಿಮ್ಮ ವಿಷಯ ಪರಿಣತಿ ಹಾಗೂ ತರಗತಿಯಲ್ಲಿ ನೀವು ತುಂಬುವ ಉತ್ಸಾಹವಷ್ಟೇ ಅಲ್ಲದೇ, PC ಯು ಒಂದು ಅವಶ್ಯಕ ಶಿಕ್ಷಣಾತ್ಮಕ ಸಾಧನವಾಗಿದೆ. ಅದು ನಿಮ್ಮ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ನಿಮಗೂ ಸಹ ಒಂದು ಕಲಿಕಾ ಸಾಧನವಾಗಿದೆ!