ಸುರಕ್ಷಿತ ಪಾಸ್ವರ್ಡ್ಗಳನ್ನು ಇಟ್ಟುಕೊಳ್ಳಲು ನಿಮ್ಮ ಪರಿಪೂರ್ಣ ಮಾರ್ಗದರ್ಶಿ

 

#ಮಹತ್ವದ್ದಾಗಿದೆ ಎನಿಸುವುದನ್ನು ಸಂರಕ್ಷಿಸಿ

ಮನೆಯಲ್ಲಿ ಮತ್ತು ಶಾಲೆಯಲ್ಲಿ PC ಯೊಂದನ್ನು ಬಳಸುವಾಗ ನಿಮಗೆ ಅತ್ಯಾವಶ್ಯಕವಾಗುವ ಮೂರು ಪದಗಳು. ನೀವು ಪ್ರಬಂಧವೊಂದನ್ನು ಬರೆಯುತ್ತಾ ಇರಿ, ಗ್ರುಪ್ ಪ್ರಾಜೆಕ್ಟ್ವೊಂದನ್ನು ಮಾಡುತ್ತಾ ಇರಿ ಅಥವಾ ಕುತೂಹಲಿಗಳಾಗಿ ವಿಷಯವೊಂದರ ಮೇಲೆ ಸಂಶೋಧನೆಯನ್ನು ನಡೆಸುತ್ತಾ ಇರಿ - ನೀವು ಏನೇ ಮಾಡುತ್ತಿರಲಿ ಅದಕ್ಕೆ ಸಂಬಂಧವಿಲ್ಲದಂತೆ, ಸದಾಕಾಲದಲ್ಲಿಯೂ ಪಾಸ್ವರ್ಡ್-ಸಂರಕ್ಷಿತ PC ಯೊಂದನ್ನು ಹೊಂದಿರುವುದು ಅತ್ಯಾವಶ್ಯಕವಾಗಿದೆ.

ನಿಮ್ಮ ಮನೆಯ ಮುಂದಿನ ಬಾಗಿಲನ್ನು ತೆರೆಯಲು ಕೀಲಿಕೈಗಳು ನಿಮ್ಮ ಬಳಿ ಇಲ್ಲದಿರುವುದನ್ನು ಕಲ್ಪಿಸಿಕೊಳ್ಳಿ, ಇದೇ ರೀತಿಯಲ್ಲಿ ನಿಮ್ಮ PC, ನಿಮ್ಮ ಇ-ಮೇಲ್ ಅಕೌಂಟುಗಳು, ಆನ್ಲೈನ್ ಕಲಿಕಾ ಸಂಪನ್ಮೂಲಗಳು ಮತ್ತು ನೀವು ನಿಗದಿತವಾಗಿ ಬಳಸುವ ಸಾಮಾಜಿಕ ಮಾಧ್ಯಮ ವಾಹಿನಿಗಳಿಗೆ ಲಾಗಿನ್ ಆಗಲು ನಿಮಗೆ ಪಾಸ್ವರ್ಡ್ ಬೇಕಾಗುತ್ತದೆ. ಈ ಕೆಳಗಿನ ಮಾರ್ಗದರ್ಶಿ ಸೂತ್ರಗಳನ್ನು ಗಮನದಲ್ಲಿ ಇರಿಸಿಕೊಳ್ಳುವ ಮೂಲಕ, ನಿಮಗೆ ಮಹತ್ವದ್ದಾಗಿದೆ ಎನಿಸುವುದನ್ನು ಸಂರಕ್ಷಿಸಿಕೊಳ್ಳಲು ನೀವು ಸಮರ್ಥರಾಗುತ್ತೀರಿ:

1) ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ ಅನ್ನು ಎನೇಬಲ್ ಮಾಡಿ

ಈ ಪಾಸ್ವರ್ಡ್ ದಿನದಂದಿನ ಧ್ಯೇಯವು #ಲೇಯರ್ಅಪ್ ಎಂಬುದಾಗಿದೆ. ಮೊಬೈಲ್ ಅಥವಾ ಇ-ಮೇಲ್ ಓಟಿಪಿಯೊಂದನ್ನು ಸೇರಿಸುವ ಮೂಲಕ ನಿಮ್ಮ ಖಾತೆಗೆ ನೀವು ಇನ್ನೊಂದು ಸುತ್ತಿನ ಭದ್ರತೆಯನ್ನು ಒದಗಿಸುತ್ತಿರುತ್ತೀರಿ. ಇದು ನಿಮ್ಮ ಲಾಗಿನ್ ಪ್ರಕ್ರಿಯೆಗೆ ಒಂದು ಹೆಚ್ಚುವರಿ ಹೆಜ್ಜೆಯನ್ನು ಸೇರಿಸಿದರೂ ಸಹ, ಐಡೆಂಟಿಟಿ ಥೆಫ್ಟ್ ಹಾಗೂ ಸಾಮಾಜಿಕ ಮಾಧ್ಯಮ ಖಾತೆ ಹೈಜ್ಯಾಕಿಂಗ್ಗಳಂಥ ಸೈಬರ್ ಅಪರಾಧಗಳ ವಿರುದ್ಧ ಶಕ್ತಿಶಾಲಿಯಾದ ಸಂರಕ್ಷಣೆಯನ್ನು ನಿಮಗೆ ಒದಗಿಸುತ್ತದೆ. [1]

2) ಪಾಸ್ವರ್ಡ್ ಹೆಚ್ಚು ಉದ್ದವಿದ್ದಷ್ಟೂ, ಭೇದಿಸಲು ಹೆಚ್ಚು ಕಠಿಣವಾಗಿರುತ್ತದೆ

ನಿಮ್ಮ ಪಾಸ್ವರ್ಡ್ ಅನ್ನು ಒಂದು ಪದ ಹಾಗೂ ಕೆಲವು ಸ್ಪೆಶಲ್ ಕ್ಯಾರಕ್ಟರ್ಗಳ ಸಂಯೋಜನೆಯನ್ನಾಗಿಸುವ ಬದಲು, ಅದನ್ನು ಒಂದು ಉದ್ದನೇಯ ವಾಕ್ಯವನ್ನಾಗಿಸಿ. ಅದು ಒಂದು ಅನುಕ್ರಮವನ್ನು ಅನುಸರಿಸಬಹುದು ಅಥವಾ ಅನುಸರಿಸದೇ ಇರಬಹುದು, ಆದರೆ ಅದನ್ನು ನೀವು ನೆನಪಿಟ್ಟುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ! ಅಲ್ಲದೇ, ನಿಮ್ಮನ್ನು ನೀವು ಇಂಗ್ಲೀಷ್ ಭಾಷೆಗೇ ಸೀಮಿತಗೊಳಿಸಿಕೊಳ್ಳಬೇಡಿ – ಬಲವಾದ ಪಾಸ್ವರ್ಡ್ ಅನ್ನು ಸೃಷ್ಟಿಸಲು ನಿಮ್ಮ ಮಾತೃಭಾಷೆಯನ್ನು ಅಥವಾ ನಿಮಗೆ ಪರಿಚಿತವಾದ ಇತರ ಯಾವುದೇ ಭಾಷೆಯನ್ನು ಬಳಸಿ.

3) ಸ್ಪಷ್ಟವಾಗಿರುವವುಗಳನ್ನು – ಹೆಸರುಗಳು, ಜನ್ಮದಿನಾಂಕಗಳು ಮತ್ತು ನೀವು ವಾಸಿಸುವ ನಗರ ಅಥವಾ ಪಟ್ಟಣಗಳನ್ನು ಬಳಸುವುದನ್ನು ತಪ್ಪಿಸಿ

ಹಾಗೆ ಮಾಡುವುದು ಮೊದಲಿಗೆ ಹೆಚ್ಚು ಸುಲಭವೆನ್ನಿಸಬಹುದು, ಆದರೆ ನಿಮ್ಮ ಪಾಸ್ವರ್ಡ್ ಹೆಚ್ಚು ವಿಶಿಷ್ಟವಾಗಿದ್ದಷ್ಟೂ, ನಿಮಗೆ ಹೆಚ್ಚು ಉತ್ತಮವಾಗಿರುತ್ತದೆ.


ಮೂಲ: https://securingtomorrow.mcafee.com/author/cybermum-india/

4) ಎಲ್ಲವನ್ನೂ ಮಿಶ್ರಣ ಮಾಡಿ – ಲೆಟರ್ಗಳನ್ನು ಕ್ಯಾಪಿಟಲೈಜ್ ಮಾಡಿ, ಚಿಹ್ನೆಗಳನ್ನು ಸೇರಿಸಿ, ಯಾವುದೋ ಒಂದು ಪದವನ್ನು ಸೇರಿಸಿ

ಯಾವುದನ್ನೋ ಒಂದನ್ನು ಕ್ಯಾಪಿಟಲೈಜ್ ಮಾಡುವುದರೊಂದಿಗೆ @#$% ಪದವು ನಿಮ್ಮ ಪಾಸ್ವರ್ಡ್ ಅನ್ನು ಊಹಿಸುವುದನ್ನು ಕಷ್ಟಕರವಾಗಿಸುತ್ತದೆ. ಈ ಕೆಳಗಿನ ಸಾಮಾನ್ಯ ಪಾಸ್ವರ್ಡ್ಗಳನ್ನು ಬಳಸುವುದನ್ನು ತಪ್ಪಿಸಿ: [2]

1. 123456
2. 123456789
3. password
4. admin
5. 12345678
6. qwerty
7. 1234567
8. 111111
9. photoshop
10. 123123
11. 1234567890
12. 000000
13. abc123
14. 1234
15. adobe1
16. macromedia
17. azerty
18. iloveyou
19. aaaaaa
20. 654321

5) ಯಾವುದೇ ಪಾಸ್ವರ್ಡ್ ಅನ್ನು ಪುನರ್ಬಳಕೆ ಮಾಡಬೇಡಿ

ಕಾಲಕಾಲಕ್ಕೆ ನಾವೆಲ್ಲರೂ ಅನುಭವಿಸುವ ತಪ್ಪಿತಸ್ಥ ಭಾವನೆಯೊಂದು ಏನೆಂದರೆ, ನಾವು ಬಳಸುವ ಪ್ರತಿಯೊಂದು ಖಾತೆಗೂ ಪ್ರತ್ಯೇಕ ಪಾಸ್ವರ್ಡ್ ಅನ್ನು ಹೊಂದಿರುವುದು ಅತ್ಯುತ್ತಮವಾಗಿರುತ್ತದೆ ಎಂಬುದು. ಒಂದು ಸಂಖ್ಯೆ, ಸ್ಪೆಷಲ್ ಕ್ಯಾರಕ್ಟರ್ ಅಥವಾ ಆಹಾರ, ದೇಶಗಳು ಮುಂತಾದವುಗಳಂಥ ಧ್ಯೇಯಗಳು ನೀವು ಸಾಮಾನ್ಯವಾಗಿ ಇರಿಸಿಕೊಳ್ಳಬಹುದಾದ ಅಂಶಗಳಾಗಿವೆ.

ನಿಮ್ಮ PC ಯಿಂದ ಬಹಳಷ್ಟು ಉಪಯುಕ್ತವಾದುದನ್ನು ನೀವು ಪಡೆದುಕೊಂಡಾಗ, ಅಧ್ಯಯನ ಮಾಡುವಿಕೆಯು ಒಂದು ತಂಗಾಳಿಯ ಅನುಭವವನ್ನು ನೀಡುತ್ತದೆ.