ಪಠ್ಯ ಯೋಜನೆಗಳಿಗಾಗಿ ನಿಮ್ಮ 5 ಅಂಶಗಳ ಅವಶ್ಯಕ ಚೆಕ್ಲಿಸ್ಟ್

 

“ದಿನವನ್ನು ನೀವೇ ನಿರ್ವಹಿಸಿ ಅನ್ಯಥಾ ದಿನವೇ ನಿಮ್ಮನ್ನು ನಿರ್ವಹಿಸುತ್ತದೆ.”
- ಜಿಮ್ ರಾನ್

ಇದು ಸ್ವಲ್ಪ ಕಟುವಾದಂತೆನಿಸಿದರೂ ಅದೇ ಸತ್ಯವಾಗಿದೆ. ಶಾಲಾ ದಿನದಲ್ಲಿ ನೀವು ಕಲಿಸುತ್ತಿರುವ ಪ್ರತಿಯೊಂದು ತರಗತಿಗೆ ಕ್ರಿಯಾ ಯೋಜನೆಯನ್ನು ಸಿದ್ಧವಾಗಿಟ್ಟುಕೊಳ್ಳುವ ಮೂಲಕ, ಮರುದಿನಕ್ಕಾಗಿ ಒಂದು ಉತ್ಪಾದಕ ಹಾಗೂ ಆನಂದಿಸಬಹುದಾದ ದಿನಕ್ಕಾಗಿ (ನಿಮಗೆ ಹಾಗೂ ನಿಮ್ಮ ವಿದ್ಯಾರ್ಥಿಗಳು, ಇಬ್ಬರಿಗೂ) ನೀವು ಅವಶ್ಯಕವಾಗಿ ಅಡಿಪಾಯವನ್ನು ಹಾಕುತ್ತಿರುತ್ತೀರಿ.

ಅದಕ್ಕಿಂತಲೂ ಹೆಚ್ಚಾಗಿ, ಸಂಪೂರ್ಣ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಹಾದಿಯಲ್ಲಿರುತ್ತೀರಿ!

ನಿಮ್ಮ ಪಠ್ಯ ಯೋಜನೆಗಳನ್ನು ಸಿದ್ಧಪಡಿಸುವಾಗ ನೀವು ಗಮನದಲ್ಲಿರಿಸಿಕೊಳ್ಳಬೇಕಾದ ಚೆಕ್ಲಿಸ್ಟ್ ಅನ್ನು ಇಲ್ಲಿ ನೀಡಲಾಗಿದೆ:

1. ಪುನರ್ಮನನದೊಂದಿಗೆ ಪ್ರಾರಂಭಿಸಿ

ನೀವು ಹಿಂದಿನ ತರಗತಿಯಿಂದ ಪಾಠವೊಂದನ್ನು ಮುಂದುವರೆಸುತ್ತಿದ್ದಲ್ಲಿ, ನಿಮ್ಮ ವಿದ್ಯಾರ್ಥಿಗಳಿಗೆ ಒಂದು ಶೀಘ್ರ ಪುನರ್ಮನನವನ್ನು ಒದಗಿಸಿ. ಹೊಸ ವಿಷಯವೊಂದನ್ನು ನೀವು ಪ್ರಾರಂಭಿಸುತ್ತಿದ್ದರೂ ಸಹ, ಪ್ರತಿಯೊಂದೂ ಅಧ್ಯಾಯದ ನಡುವಿನ ಸಂಪರ್ಕವನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅನುವಾಗುವಂತೆ ಹಿಂದಿನ ವಿಷಯವನ್ನು ಸಾರಾಂಶೀಕರಿಸುವ ಒಂದು ಕ್ಷಿಪ್ರ ವಿಡಿಯೋ ಅಥವಾ ಇಂಟರಾಕ್ಟಿವ್ ಪ್ರೆಜೆಂಟೇಶನ್ ಅನ್ನು ತೋರಿಸಿ.

2. ರೀಲ್ ಅನ್ನು ರಿಯಲ್ ಆಗಿ ಪರಿವರ್ತಿಸಿ!

ವಿದ್ಯಾರ್ಥಿಗಳಲ್ಲಿ ಸನ್ನಿವೇಶಾತ್ಮಕ ಅರ್ಥೈಸಿಕೊಳ್ಳುವಿಕೆಯನ್ನು ನಿರ್ಮಿಸುವುದಕ್ಕಾಗಿ ತಾವು ಏನನ್ನು ಕಲಿಯಲಿದ್ದಾರೆ ಮತ್ತು ಅದು ವಾಸ್ತವ ಜೀವನಕ್ಕೆ ಹೇಗೆ ಸಂಬಂಧಿಸುತ್ತದೆ ಎಂಬುದನ್ನು ನಿಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳಲಿ. ಇತರ ವಿಷಯಗಳ ಕಡೆಗೆ ಅತ್ಯಂತ ಹೆಚ್ಚು ಗಮನವನ್ನು ನೀಡುವ ವಿದ್ಯಾರ್ಥಿಗಳಿಗೂ ಸಹ ಆ ತರಗತಿಯು ಹೆಚ್ಚು ಸ್ಮರಣೀಯವಾಗಿರುವಂತೆ ನಿಜ-ಜೀವನದ ಘಟನೆಯೊಂದಿಗೆ ನೀವು ಸಂಬಂಧವನ್ನು ಕಲ್ಪಿಸಬಹುದು, ಸಮಾಚಾರ ಅಥವಾ ಚಿಕ್ಕ ಚಲನಚಿತ್ರವನ್ನು ತರಬಹುದು!

3. ಸಮೂಹ ಚಟುವಟಿಕೆಯನ್ನು ಒಳಗೊಳ್ಳಿ

ಅಭ್ಯಾಸದಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳಿಂದ ಭರ್ತಿಯಾಗಿರುವ ತರಗತಿಯನ್ನು ಪ್ರತಿಯೊಬ್ಬ ಶಿಕ್ಷಕರು ಬಯಸುತ್ತಾರೆ ಆದರೆ ಅದನ್ನು ವಾಸ್ತವರೂಪಕ್ಕಿಳಿಸುವುದು ಕಷ್ಟಕರವಾದ ಕೆಲಸ. ಇಂಥ ಸಂದರ್ಭದಲ್ಲಿಯೇ ಸಮೂಹ ಚಟುವಟಿಕೆಗಳು ಉಪಯೋಗಕ್ಕೆ ಬರುತ್ತವೆ. ಐವರು ವಿದ್ಯಾರ್ಥಿಗಳ ಚಿಕ್ಕ ಸಮೂಹದಲ್ಲಿ PC ಯಲ್ಲಿನ 10-ನಿಮಿಷದ ಚಟುವಟಿಕೆಯೂ ಸಹ ತರಗತಿಯಲ್ಲಿ ಶಕ್ತಿಯನ್ನು ಸಂಚಯಿಸುತ್ತದೆ,

4. ಪಾಠವನ್ನು ಸೃಷ್ಟಿಸುವ ಸಾಧನಗಳನ್ನು ಬಳಸಿ

ನಿಮ್ಮ ಪಾಠವನ್ನು ಇಂಟರಾಕ್ಟಿವ್ ಆಗಿಸುವಲ್ಲಿ Oppia [1] ಮತ್ತು Common Curriculum [2] ಗಳಂಥ ಆನ್ಲೈನ್ ಸಾಧನಗಳು ನಿಮಗೆ ನೆರವಾಗುತ್ತವೆ. ಪಠ್ಯಪುಸ್ತಕದ ಮಾರ್ಗದರ್ಶನ ಮಾಡಲ್ಪಟ್ಟ ವಿಧಾನ ಹಾಗೂ PC ಯ ಇಂಟರಾಕ್ಟಿವ್ ಅಂಶ - ಎರಡೂ ಪ್ರಪಂಚಗಳ ಅತ್ಯುತ್ತಮವಾದ ವಿಷಯಗಳನ್ನು ನೀವು ಹೊಂದುವಂತೆ ರಸಪ್ರಶ್ನೆಗಳು, ಬಹು-ಆಯ್ಕೆಯ ಪ್ರಶ್ನೆಗಳು, ಕತೆಗಳು ಮತ್ತು ಇನ್ನೂ ಹತ್ತು-ಹಲವಾರು ವಿಷಯಗಳನ್ನು ಒಳಗೊಳ್ಳಿ.

5. ಮನೆಗೆಲಸದ ಬಗೆಗಿನ ವಿಷಯವನ್ನು ಮರೆಯಬೇಡಿ!

ಕೆಲವೊಮ್ಮೆ, ನೀಡಲಾದ ಮನೆಗೆಲಸವು ವಿಷಯಕ್ಕೆ ಸ್ವಲ್ಪವೂ ಸಂಬಂಧಿಸಿರುವುದಿಲ್ಲ – ಕಲಿಸಲಾದ ಪ್ರತಿಯೊಂದೂ ವಿಷಯವನ್ನು ನಿಮ್ಮ ವಿದ್ಯಾರ್ಥಿಗಳು ಗ್ರಹಿಸಲು ಅನುವಾಗುವಂತೆ, ನೀವು ನೀಡುತ್ತಿರುವ ಮನೆಗೆಲಸ ಅಥವಾ ಓದು, ಇಂದಿನ ಪಾಠಕ್ಕೆ ಸಂಬಂಧಿಸಿರುವಂತೆ ನೋಡಿಕೊಳ್ಳಿ. ಅದೇ ರೀತಿಯಾಗಿ, ಪರಿಧಿಯಾಚೆಗೆ ನೀವು ಹೆಚ್ಚು ಹೆಚ್ಚು ಹೋದಂತೆ, ಮನೆಗೆಲಸದ ಪ್ರಭಾವವು ಹೆಚ್ಚಾಗುತ್ತಾ ಹೋಗುತ್ತದೆ!

ನಿಮ್ಮ ವಿದ್ಯಾರ್ಥಿಗಳಿಗಾಗಿ ಪರಿಣಾಮಕಾರಿ ಪಠ್ಯ ಯೋಜನೆಯನ್ನು ತಯಾರಿಸಲು ನಿಮಗೆ ಬೇಕಾಗುವ ಪ್ರೇರೇಪಣೆಗಾಗಿ, ಒಬ್ಬ ಮಹಾನ್ ಶಿಕ್ಷಕರ ಕೈಗಳಲ್ಲಿನ ತಂತ್ರಜ್ಞಾನವು ಸಮಾಜವನ್ನು ಹೇಗೆ ರೂಪಾಂತರಗೊಳಿಸಬಲ್ಲದು ಎಂಬ ಬಗ್ಗೆ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಗೌರಿಯವರು ಹೇಳುವುದನ್ನು ಕೇಳಿ.