ನಿಮ್ಮ ಮಗುವಿನ ಪ್ರಪ್ರಥಮ PC ಗಾಗಿ 5 ಅವಶ್ಯಕ ಅಂಶಗಳ ನಿಮ್ಮ ಚೆಕ್ಲಿಸ್ಟ್

 

ಕೆಲಸ

ಆನ್ ಲೈನ್ ಬ್ಯಾಂಕಿಂಗ್

ತೆರಿಗೆಗಳನ್ನು ಫೈಲ್ ಮಾಡುವುದು

ಸಾಮಾಜಿಕ ಮಾಧ್ಯಮಗಳು

ಓದು

ಸಂಶೋಧನೆ

PC ಯೊಂದರಿಂದ ಪ್ರತಿನಿತ್ಯ ನಾವು ಅನೇಕ ಉಪಯೋಗಗಳನ್ನು ತೆಗೆದುಕೊಳ್ಳುತ್ತೇವೆ.

ಹಾಗೂ ನಮ್ಮ ಮಕ್ಕಳೂ ಸಹ ಪಡೆದುಕೊಳ್ಳುತ್ತಾರೆ.

ಭವಿಷ್ಯದಲ್ಲಿನ ಕಾರ್ಯಸ್ಥಳಕ್ಕಾಗಿ ತಯಾರಿರಲು ಅವರಿಗೆ ಒಂದು PC ಅವಶ್ಯವಾಗಿ ಬೇಕಾಗುತ್ತದೆ.

ಅವರಿಗಾಗಿ ಸೂಕ್ತವಾದ PC ಯೊಂದನ್ನು ನೀವು ಆಯ್ಕೆ ಮಾಡಿದ ನಂತರ, ಈ ಚೆಕ್ ಲಿಸ್ಟ್ ಅನ್ನು ಗಮನದಲ್ಲಿಸಿಕೊಂಡು ಮುಂದೆ ಸಾಗಿ!

 

1) ಮೂಲ ನಿಯಮಗಳನ್ನು ಸ್ಥಾಪಿಸಿ

ಸ್ಟ್ರಾಂಗ್ ಪಾಸ್ ವರ್ಡ್ ಅನ್ನು ಸೆಟ್ ಮಾಡುವುದು ಮತ್ತದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು, ಬುಕ್ ಮಾರ್ಕ್ ಮಾಡಿದ ವೆಬ್ ಸೈಟ್ ಗಳನ್ನು ಮಾತ್ರ ಆ್ಯಕ್ಸೆಸ್ ಮಾಡುವುದು ಮತ್ತು ಒಂದು ದಿನದಲ್ಲಿ PC ಯನ್ನು ಒಂದು ಅಥವಾ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಬಳಸದಿರುವುದು, ಇಂಥ ಮೂಲ ನಿಯಮಗಳ ಬಗೆಗಿನ ನಿಮ್ಮ ತಾರ್ಕಿಕತೆಯನ್ನು ನಿಮ್ಮ ಮಗುವಿಗೆ ವಿವರಿಸಿದಾಗ ಅದು ಅವುಗಳನ್ನು ಸ್ವಾಗತಿಸುತ್ತದೆ. 

2) ಸ್ವಲ್ಪ ಕಾಳಜಿ ವಹಿಸುವಿಕೆಯು ದೀರ್ಘ ಕಾಲ ಉಪಯೋಗಕ್ಕೆ ಬರುತ್ತದೆ

ಬಿಸಿಬಿಸಿ ಚಹಾವನ್ನು ಕೀಬೋರ್ಡ್ ಮೇಲೆ ನೀವು ಬೀಳಿಸಿ, ನಂತರ ಅದನ್ನು ನೀವು ಹೇಗೆ ದುರಸ್ತಿ ಮಾಡಿಸಬೇಕಾಯಿತು ಎಂಬ ಕತೆಯೊಂದನ್ನು ಸಂಬಂಧಿಸಿ ಹೇಳುವ ಮೂಲಕ PC ಮತ್ತದರ ಆ್ಯಕ್ಸೆಸ್ಸರೀಗಳು ಎಷ್ಟು ಸಂವೇದನಾಶೀಲವಾಗಿವೆ ಎಂಬುದನ್ನು ನಿಮ್ಮ ಮಕ್ಕಳಿಗೆ ತಿಳಿಸಿಕೊಡಿ. ಅದನ್ನು ವೈಯಕ್ತಿಕವಾಗಿಸಿಕೊಳ್ಳುವ ಮೂಲಕ ನಿಮ್ಮ ಮಗುವು PC ಯ ಕಾಳಜಿ ವಹಿಸುವುದನ್ನು ನೆನಪಿಟ್ಟುಕೊಳ್ಳುವ ಸಂಭವನೀಯತೆಯು ಅತ್ಯಧಿಕವಾಗಿರುತ್ತದೆ. 

3) PC ಯ ಕಠಿಣತಮ ವಿಷಯಗಳನ್ನು ಒಟ್ಟಾಗಿ ಜಯಿಸಿ

PC ಯೊಂದನ್ನು ಹೇಗೆ ಬಳಸುವುದು ಎಂಬುದು ನಿಮಗೆ ಈಗಾಗಲೇ ತಿಳಿದಿದ್ದರೂ ಸಹ, ಮೂಲ ವಿಷಯಗಳನ್ನು ಒಟ್ಟಿಗೆ ಗ್ರಹಿಸುವ ಕೌಟುಂಬಿಕ ಸಮಯವನ್ನು ನಿಮ್ಮ ಮಗುವು ನಿಜವಾಗಿಯೂ ಆನಂದಿಸುತ್ತದೆ. ಮೌಸ್ ಅನ್ನು ಬಲಬದಿಗೆ ಸರಿಸುವುದರಿಂದ ಹಿಡಿದು ಒಂದಿಡೀ ವಾಕ್ಯವನ್ನು ಒಂದೇ ಬಾರಿಗೆ ಟೈಪ್ ಮಾಡುವವರೆಗಿನ ಗ್ರಹಿಸಲಾದ ಚಿಕ್ಕ ಚಿಕ್ಕ ವಿಷಯಗಳು ಗಮನಾರ್ಹ ಪ್ರಭಾವವನ್ನು ಹೊಂದಿರುತ್ತವೆ.

4) PC ಸಂಪನ್ಮೂಲಗಳ ಒಂದು ಪಟ್ಟಿಯನ್ನು ಸಂಪಾದಿಸಿ

ಶಿಕ್ಷಕರು, ಇತರ ಪೋಷಕರಿಂದ ಶಿಫಾರಸು ಮಾಡಲಾಗಿರುವ ಮತ್ತು ಉತ್ತಮ ಆನ್ ಲೈನ್ ರಿವ್ಯೂಗಳನ್ನು ಹೊಂದಿರುವ PC ಸಂಪನ್ಮೂಲಗಳನ್ನು ಪರಿಶೀಲಿಸಲು ಸ್ವಲ್ಪ ಸಮಯವನ್ನು ಮೀಸಲಿರಿಸಿ. ನಂತರ, ನಿಮ್ಮ ಮಗುವು ಬಳಸುವ ಬ್ರೌಜರ್ ನಲ್ಲಿ ಅವುಗಳನ್ನು ಬುಕ್ ಮಾರ್ಕ್ ಮಾಡಿ, ಅದಕ್ಕನುಗುಣವಾಗಿ ಡೆಸ್ಕ್ ಟಾಪ್ ನಲ್ಲಿ ಶಾರ್ಟ್ ಕಟ್ ಗಳನ್ನು ಕ್ರಿಯೇಟ್ ಮಾಡಿ.

5) ಮನರಂಜನೆಯನ್ನೂ ಸಹ ಪರಿಗಣಿಸುವುದನ್ನು ಮರೆಯಬೇಡಿ

ಮನರಂಜನೆಯನ್ನು ನೀವು ನಿರ್ಲಕ್ಷಿಸಲಾಗದು. ಅದು ವೈರಲ್ ಆಗಿರುವ ಇತ್ತೀಚಿನ ಮೇಮ್ ಆಗಿರಲಿ ಅಥವಾ ಸುಂದರವಾದ ಬೆಕ್ಕಿನ ವಿಡಿಯೋ ಆಗಿರಲಿ, ನಿಮ್ಮ ಮಗುವು ಅದನ್ನು ನೋಡಲು ಬಯಸುತ್ತದೆ. ಅವರಿಗಾಗಿ ಉದ್ದೇಶಿಸದ ಏನನ್ನೂ ಅವರು ನೋಡದಿರುವುದನ್ನು ಖಚಿತಪಡಿಸಿಕೊಳ್ಳಲು, ಪೆರೆಂಟಲ್ ಕಂಟ್ರೋಲ್ ಗಳನ್ನು ಬಳಸಿ ಹಾಗೂ PC ಯನ್ನು ಲಿವಿಂಗ್ ರೂಮ್ ನಂಥ ಕಾಮನ್ ಏರಿಯಾದಲ್ಲಿ ಇರಿಸಿ.

ಹೊಸ ವಿಷಯಗಳನ್ನು ಕಲಿತುಕೊಳ್ಳಲು, ಮನೆಗೆಲಸವನ್ನು ಮಾಡಲು ಮತ್ತು ಹಲವಾರು ವಿಷಯಗಳನ್ನು ಓದಲು ಸಂಪೂರ್ಣ ಕುಟುಂಬವು ಒಟ್ಟಾಗಿ ಕುಳಿತುಕೊಳ್ಳಬಹುದು. PC ಯನ್ನು ಕನಿಷ್ಟ ಪಕ್ಷ ನಿಮ್ಮ ಮಗುವಿನ ಕಲಿಕಾ ಸಾಮರ್ಥ್ಯವನ್ನು ಹೊರತರಲು ಬಳಸಬಹುದು