ಒಂದು ಪಾಜಿಟಿವ್ ಡಿಜಿಟಲ್ ಫುಟ್‌ಪ್ರಿಂಟ್ ಅನ್ನು ಸೃಷ್ಟಿಸಲು ನಿಮ್ಮ ಮಾರ್ಗದರ್ಶಿ

 

“ಆನ್ ಲೈನ್ ನಲ್ಲಿ ನೀವು ಯಾವ ವಿಷಯವನ್ನು ಪೋಸ್ಟ್ ಮಾಡುತ್ತೀರೋ ಅದು ನಿಮ್ಮ ಬಗ್ಗೆ ಬಹಳಷ್ಟು ವಿಷಯಗಳನ್ನು ತೆರೆದಿಡುತ್ತದೆ. ಉದ್ದೇಶದೊಂದಿಗೆ ಪೋಸ್ಟ್ ಮಾಡಿ, ಎಚ್ಚರಿಕೆಯಿಂದ ರಿ-ಪೋಸ್ಟ್ ಮಾಡಿ.”

- ಜರ್ಮನಿ ಕೆಂಟ್

 

ಪ್ರತಿಯೊಬ್ಬರೂ ಡಿಜಿಟಲ್ ಫುಟ್ ಪ್ರಿಂಟ್ ಅನ್ನು ಹೊಂದಿರುತ್ತಾರೆ.

ಆನ್ ಲೈನ್ ನಲ್ಲಿ ನೀವು ಏನನ್ನಾದರೂ ಪೋಸ್ಟ್ ಮಾಡಿದಾಗ ಅಥವಾ ಏನನ್ನಾದರೂ ಶೇರ್ ಮಾಡಿದಾಗ, ಶಾಶ್ವತವಾಗಿ ಉಳಿದುಬಿಡುವ ಡಿಜಿಟಲ್ ಫುಟ್ ಪ್ರಿಂಟ್ ಅನ್ನು ಅದು ಸೃಷ್ಟಿಸುತ್ತದೆ. ಹಾಗಾಗಿ, ಒಂದು ಪಾಜಿಟಿವ್ ಆದ ಡಿಜಿಟಲ್ ಫುಟ್ ಪ್ರಿಂಟ್ ಅನ್ನು ಸೃಷ್ಟಿಸುವುದಕ್ಕಾಗಿ ನೀವು ಏನು ಮಾಡಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ:

 

1) ಪಾಸ್ ವರ್ಡ್ ಕೀಪರ್ ಒಂದನ್ನು ಬಳಸಿ

ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರೈವಸಿ ಸೆಟಿಂಗ್ ಗಳು, ನಿಮ್ಮ ಪೋಸ್ಟ್ ಗಳನ್ನು ನಿಮ್ಮ ಸ್ನೇಹಿತರು ಹಾಗೂ ಫಾಲೋವರ್ ಗಳೊಂದಿಗೆ ಮಾತ್ರ ಹಂಚಿಕೊಳ್ಳಬಯಸುತ್ತೀರಾ ಅಥವಾ ಪಬ್ಲಿಕ್ ಆಗಿ ಹಂಚಿಕೊಳ್ಳಬಯಸುತ್ತೀರಾ ಎಂದು ನಿರ್ಧರಿಸಲು ನಿಮ್ಮನ್ನು ಅನುಮತಿಸುತ್ತವೆ. ಯಾವುದೇ ರೀತಿಯ ಹ್ಯಾಕಿಂಗ್ ಅನ್ನು ತಪ್ಪಿಸಲು ಒಂದು ಬಲವಾದ, ನೆನಪಿಟ್ಟುಕೊಳ್ಳಬಹುದಾದ ಪಾಸ್ ವರ್ಡ್ ಅನ್ನು ರಚಿಸಿ.

 

2) ಅತಿಯಾಗಿ ಶೇರ್ ಮಾಡಬೇಡಿ

ಆನ್ ಲೈನ್ ನಲ್ಲಿ ಸಂಗತಿಗಳನ್ನು ಪೋಸ್ಟ್ ಮಾಡುವುದು ಮತ್ತು ಶೇರ್ ಮಾಡುವುದು ಒಂದು ಪಾಜಿಟಿವ್ ಆದ ಡಿಜಿಟಲ್ ಫುಟ್ ಪ್ರಿಂಟ್ ಗಾಗಿ ಅತ್ಯಂತ ಪ್ರಮುಖವಾದ ಹಂತವಾಗಿರುವುದರಿಂದ ಅವುಗಳನ್ನು ಮಾಡುವಾಗ ಎಚ್ಚರ ವಹಿಸಿ. ನಿಮ್ಮ ಆನ್ ಲೈನ್ ಪರ್ಸೊನಾ ಮೇಲೆ ಆಧರಿತವಾಗಿ ಕಮೆಂಟ್ ಗಳಿಗೆ ರಿಯಾಕ್ಟ್ ಮಾಡಿ. ನಿಮಗೆ ಗೊತ್ತಿರದ ವಿಚಾರಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಡಿ. ಆನ್ ಲೈನ್ ನಲ್ಲಿ ನೀವು ಪೋಸ್ಟ್ ಮಾಡುವ ಪ್ರತಿಯೊಂದರ ಬಗ್ಗೆಯೂ ನೀವು ಹೆಮ್ಮೆ ಪಡುವಂತಿರಬೇಕು, ಯಾವುದೇ ವಿಷಯವು ಆನ್ ಲೈನ್ ಆದ ನಂತರ, ಅದು ಅಲ್ಲಿ ಶಾಶ್ವತವಾಗಿ ಇರುತ್ತದೆ ಎಂಬುದನ್ನು ಮರೆಯಬೇಡಿ!

 

3) ನೀವೇ ಸರ್ಚ್ ಮಾಡಿ

ನಿಮ್ಮ ಹೆಸರಿನಲ್ಲಿ ಸರಳವಾದ ಸರ್ಚ್ ಒಂದನ್ನು ಮಾಡಿ, ನಿಮ್ಮ ಬಗ್ಗೆ ಏನು ಕಂಡುಕೊಳ್ಳುತ್ತೀರಿ ಎಂಬುದನ್ನು ನೋಡಿ. ನೀವು ಕಂಡುಕೊಳ್ಳುವುದನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು. ಜನರು ನೋಡಬಾರದು ಎಂದು ನೀವು ಬಯಸುವಂಥದ್ದೇನನ್ನಾದರೂ ನೀವು ನೋಡಿದಲ್ಲಿ, ಅದಕ್ಕನುಗುಣವಾದ ಅವಶ್ಯಕ ಕ್ರಮಗಳನ್ನು ಕೈಗೊಂಡು, ಅವುಗಳನ್ನು ತೆಗೆದುಹಾಕಿ. ಯಾವುದಾದರೂ ನಕಲಿ ಅಕೌಂಟ್ ಗಳಿವೆಯೇ ಎಂಬುದನ್ನೂ ಸಹ ಇದು ನಿಮಗೆ ತಿಳಿಸುತ್ತದೆ...

 

4) ಹಳೆಯ ಅಕೌಂಟ್ ಗಳನ್ನು ಡಿಲೀಟ್ ಮಾಡಿ

ಹಳೆಯ ಖಾತೆಗಳನ್ನು ಡಿಆ್ಯಕ್ಟಿವೇಟ್ ಹಾಗೂ ಡಿಲೀಟ್ ಮಾಡದೇ ಇರುವುದರಿಂದಾಗಿ ಉಂಟಾಗುವ ನೆಗೆಟಿವ್ ಫುಟ್ ಪ್ರಿಂಟ್ ಗಳ ಬಗ್ಗೆ ಬಹಳಷ್ಟನ್ನು ನಾವು ಕೇಳುತ್ತೇವೆ. ಸಾಮಾಜಿಕ ನೆಟ್ ವರ್ಕಿಂಗ್ ಪ್ರೊಫೈಲ್ ಒಂದನ್ನು ಬಳಸುವುದನ್ನು ನೀವು ನಿಲ್ಲಿಸಿದಾಗ, ಆ ಅಕೌಂಟ್ ಗಳನ್ನು ಡಿಆ್ಯಕ್ಟಿವೇಟ್ ಅಥವಾ ಡಿಲೀಟ್ ಮಾಡುವುದನ್ನು ಮರೆಯಬೇಡಿ, ಇದು ಆ ಅಕೌಂಟ್ ಹ್ಯಾಕ್ ಆಗುವ ಅಪಾಯವನ್ನು ಕಡಿಮೆ ಮಾಡುತ್ತಾ, ಆ ನಿರ್ದಿಷ್ಟ ಕಂಟೆಂಟ್ ಲೈವ್ ಹಾಗೂ ಸರ್ಚೇಬಲ್ ಆಗಿರದಂತೆ ಮಾಡುತ್ತದೆ.

 

ನಿಮ್ಮ ಆನ್ ಲೈನ್ ಐಡೆಂಟಿಟಿಯು ನಿಮ್ಮ ಜೀವನದ ಬಹಳಷ್ಟು ಸಂಗತಿಗಳ ಮೇಲೆ ಪ್ರಭಾವವನ್ನು ಬೀರಬಲ್ಲದ್ದಾದ್ದರಿಂದ, ಒಂದು ಪಾಜಿಟಿವ್ ಆದ ಡಿಜಿಟಲ್ ಫುಟ್ ಪ್ರಿಂಟ್ ಅನ್ನು ಹೊಂದಿರುವುದು ಒಳ್ಳೆಯ ವಿಚಾರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ನೀವು ಓರ್ವ ಪ್ರಭಾವಶಾಲಿಯಾದ ವ್ಯಕ್ತಿಯಾಗಿರುತ್ತೀರಿ. ಹಾಗಾಗಿ ಜ್ವಾಜಲ್ಯಮಾನವಾದ ಭವಿಷ್ಯಕ್ಕಾಗಿ ನಿಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ, ಅವರನ್ನು ಪ್ರೇರೇಪಿಸಿ ಹಾಗೂ ಪ್ರಭಾವವೊಂದನ್ನು ಸೃಷ್ಟಿಸಿ.